Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಥಯಮಿನ್ ಕೊರತೆಯಿಂದ ಉಂಟಾಗುವ ಶಿಶು ಮರಣ ತಡೆಗಟ್ಟಿ : ಸಿಇಓ ನಂದಿನಿ

    2 weeks ago

    ಪ್ರಸವೋತ್ತರ ತಾಯಂದಿರು ಹಾಗೂ ಶಿಶುಗಳಿಗೆ ನಿಯಮಿತವಾಗಿ ಥಯಮಿನ್ ಪೂರಕಗಳನ್ನು ನೀಡುವುದು, ಥಯಮಿನ್ ಸಮೃದ್ಧ ಆಹಾರಗಳ ಬಳಕೆಯ ಕುರಿತು ಜಾಗೃತಿ ಅಭಿಯಾನ ನಡೆಸುವುದು ಮತ್ತು ಥಯಮಿನ್ ಕೊರತೆಯನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಚಿಕಿತ್ಸೆ ನೀಡುವ ಕುರಿತು ಅಗತ್ಯ ಮಾಹಿತಿ, ಶಿಕ್ಷಣ ಮತ್ತು ಸಂವಹನ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕೆಂದು ಜಿ.ಪಂ. ಸಿಇಓ ನಂದಿನಿ ಕೆ.ಆರ್ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸಲಹೆ ನೀಡಿದರು. ಮಂಡ್ಯ ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ಆರೋಗ್ಯ ಸಂಘದ ಸಭೆಯಲ್ಲಿ ಮಾತನಾಡಿದ ಅವರು […]

    The post ಥಯಮಿನ್ ಕೊರತೆಯಿಂದ ಉಂಟಾಗುವ ಶಿಶು ಮರಣ ತಡೆಗಟ್ಟಿ : ಸಿಇಓ ನಂದಿನಿ appeared first on nudikarnataka.



    ಪ್ರಸವೋತ್ತರ ತಾಯಂದಿರು ಹಾಗೂ ಶಿಶುಗಳಿಗೆ ನಿಯಮಿತವಾಗಿ ಥಯಮಿನ್ ಪೂರಕಗಳನ್ನು ನೀಡುವುದು, ಥಯಮಿನ್ ಸಮೃದ್ಧ ಆಹಾರಗಳ ಬಳಕೆಯ ಕುರಿತು ಜಾಗೃತಿ ಅಭಿಯಾನ ನಡೆಸುವುದು ಮತ್ತು ಥಯಮಿನ್ ಕೊರತೆಯನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಚಿಕಿತ್ಸೆ ನೀಡುವ ಕುರಿತು ಅಗತ್ಯ ಮಾಹಿತಿ, ಶಿಕ್ಷಣ ಮತ್ತು ಸಂವಹನ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕೆಂದು ಜಿ.ಪಂ. ಸಿಇಓ ನಂದಿನಿ ಕೆ.ಆರ್ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸಲಹೆ ನೀಡಿದರು.
    ಮಂಡ್ಯ ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ಆರೋಗ್ಯ ಸಂಘದ ಸಭೆಯಲ್ಲಿ ಮಾತನಾಡಿದ ಅವರು ಶಿಶುಗಳಲ್ಲಿ ಥಯಮಿನ್ (ವಿಟಮಿನ್ B₁) ಕೊರತೆಯಿಂದ ಉಂಟಾಗುವ ಸಾವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
    SAM & MAM ಮಕ್ಕಳನ್ನು ಗುರುತಿಸಿ ವರ್ಗೀಕರಿಸಲು ಸೂಚನೆ: ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯಲ್ಲಿನ ಅಪೌಷ್ಠಿಕ ಮಕ್ಕಳನ್ನು ಗುರುತಿಸಲು ಒಟ್ಟಾಗಿ ಕಾರ್ಯನಿರ್ವಹಿಸಿ, 0-6 ವರ್ಷದೊಳಗಿನ ಎಲ್ಲಾ ಮಕ್ಕಳನ್ನು ಆಗಿಂದಾಗ್ಗೆ ತಪಾಸಣೆಗೆ ಒಳಪಡಿಸಿ, SAM & MAM ಎಂದು ವರ್ಗೀಕರಿಸಿ ಮಾಹಿತಿಯನ್ನು ಸಿದ್ದಪಡಿಸಿಕೊಳ್ಳಬೇಕು ಎಂದು  ಸೂಚಿಸಿದರು.
    ವೈದ್ಯಕೀಯ ಕಾರಣ ಅಥವಾ ವೈದ್ಯಕೀಯವಲ್ಲದ ಕಾರಣ ಇರುವಂತ ಎಲ್ಲಾ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ  ಮಕ್ಕಳನ್ನು ಜಿಲ್ಲಾ ಡಿ.ಇ.ಐ.ಸಿ ಕೇಂದ್ರ, ಮಂಡ್ಯ ಮುಖಾಂತರ ಕಡ್ಡಾಯವಾಗಿ ಎನ್ ಆರ್ ಸಿ ಗೆ ದಾಖಲಾತಿ ಮಾಡಿಸಲು ಕ್ರಮವಹಿಸಬೇಕು ಹಾಗೂ ತೀವ್ರ ಅಪೌಷ್ಟಿಕತೆ (MAM) ಮಕ್ಕಳಲ್ಲಿ ಅಥವಾ ಮಧ್ಯಮ ಅಪೌಷ್ಠಿಕತೆ (Moderate)  ಹೊಂದಿರುವ ಮಕ್ಕಳನ್ನು ಕಡ್ಡಾಯವಾಗಿ ಎನ್ ಆರ್ ಸಿ ಗೆ ದಾಖಲಾತಿ ಮಾಡಿಸಬೇಕು ಎಂದು ತಿಳಿಸಿದರು.
    ನಿರಂತರವಾಗಿ ತೂಕ ಮತ್ತು ಎತ್ತರವನ್ನು ಪರಿಶೀಲನೆ ಮಾಡುವುದು, ಪೂರಕ ಪೌಷ್ಠಿಕ ಆಹಾರವನ್ನು ಓದಗಿಸುವುದು, ಸಾಂಕ್ರಾಮಿಕ ಖಾಯಿಲೆಗಳಿಗೆ ತುತ್ತಾಗದಂತೆ ಎಚ್ಚರಿಕೆ ವಹಿಸುವುದು, ನಿಗಧಿತ ಸಮಯಕ್ಕೆ ಸರಿಯಾಗಿ ಲಸಿಕೆಗಳನ್ನು ಒದಗಿಸುವುದು, ಆಹಾರದಲ್ಲಿ ನಿಯಮಿತವಾಗಿ ವಿಟಮಿನ್, ಐರನ್, ಜಿಂಕ್ ಮತ್ತು ಅಗತ್ಯ ಪೋಷಕಾಂಶಗಳು ಲಭ್ಯವಿರುವಂತೆ ಮಾಡುವುದರಿಂದ ಮಧ್ಯಮ ಮಟ್ಟದ ಅಪೌಷ್ಠಿಕತೆ (MAM) ಯಿಂದ ತೀವ್ರ ಅಪೌಷ್ಠಿಕತೆ (SAM) ಯೆಡೆಗೆ ಹೋಗುವುದನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದರು.
    ಈ ಸಂದರ್ಭದಲ್ಲಿ ಡಿಹೆಚ್ಓ ಮೋಹನ್, ಜಿಲ್ಲಾ ಕುಷ್ಠ ರೋಗ ನಿಯಂತ್ರಣಾಧಿಕಾರಿ ಡಾ. ಸೋಮಶೇಖರ್, ಆರ್.ಸಿ.ಹೆಚ್. ಡಾ. ಅಶ್ವಥ್, ಟಿಹೆಚ್ಓ ಡಾ. ನಾರಾಯಣ್, ತಾಲ್ಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಆದಿತ್ಯ, ಹಾಗೂ ಸಿಡಿಪಿಓ ಕೃಷ್ಣಮೂರ್ತಿ ಸೇರಿದಂತೆ ಇತರರು ಹಾಜರಿದ್ದರು.

    The post ಥಯಮಿನ್ ಕೊರತೆಯಿಂದ ಉಂಟಾಗುವ ಶಿಶು ಮರಣ ತಡೆಗಟ್ಟಿ : ಸಿಇಓ ನಂದಿನಿ appeared first on nudikarnataka.

    Click here to Read More
    Previous Article
    ಜ.9 ರಂದು ರಾಷ್ಟೀಯ ಗ್ರಾಹಕರ ದಿನ ಆಚರಣೆ : ಡಾ.ಹೆಚ್. ಕೃಷ್ಣ
    Next Article
    ಬಳ್ಳಾರಿ ಫೈರಿಂಗ್: ಅಧಿಕಾರ ಸ್ವೀಕರಿಸಿದ ಮರುದಿನವೇ ಎಸ್ಪಿ ಅಮಾನತು

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment