ಕೊಳ್ಳೇಗಾಲ, ಜ.೦೪,೨೦೨೬: ತಾಲ್ಲೂಕಿನ ಚಿಕ್ಕಲ್ಲೂರಿನ ಶ್ರೀ ಮಂಟೇಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಧೂಪ ಹಾಕಿ, ಜಾಗಟೆ ಬಾರಿಸುವ ಮೂಲಕ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಡಾ. ಎಚ್.ಸಿ.ಮಹಾದೇವಪ್ಪ. 12ನೇ ಶತಮಾನದ ಬಸವಣ್ಣನವರ ಸಾಮಾಜಿಕ ಚಳುವಳಿಯ ಹೊರಣ ಈ ಪ್ರದೇಶದಲ್ಲಿನ ನೀಲಗಾರರ ಪರಂಪರೆಯಲ್ಲಿ ಅಡಗಿದೆ. ಮಂಟೇಸ್ವಾಮಿ, ರಾಚಪ್ಪಾಜಿ ಸಿದ್ಧಾಪ್ಪಾಜಿ, ದೊಡ್ಡಮ್ಮತಾಯಿ, ಚನ್ನಾಜಮ್ಮ ಅವರು ವಚನ ಸಾಹಿತ್ಯ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿ ಬದಲಾವಣೆಗೆ ಶ್ರಮಿಸಿದ್ದಾರೆ. ಈ ನಿಟ್ಟಿನಲ್ಲಿ ಅವರು ಆರಂಭಿಸಿದ ಚಳುವಳಿಯ ಕಿಡಿ ಹಾರದಂತೆ ನಾವು […]
The post ಚಿಕ್ಕಲ್ಲೂರು ಜಾತ್ರೆ : ಧೂಪ ಹಾಕಿ, ಜಾಗಟೆ ಬಾರಿಸಿ ಸಾರ್ವಜನಿಕರ ಅಹವಾಲು ಸ್ವೀಕಾರಕ್ಕೆ ಸಚಿವ ಡಾ.ಮಹಾದೇವಪ್ಪ ಚಾಲನೆ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.
ಕೊಳ್ಳೇಗಾಲ, ಜ.೦೪,೨೦೨೬: ತಾಲ್ಲೂಕಿನ ಚಿಕ್ಕಲ್ಲೂರಿನ ಶ್ರೀ ಮಂಟೇಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಧೂಪ ಹಾಕಿ, ಜಾಗಟೆ ಬಾರಿಸುವ ಮೂಲಕ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಡಾ. ಎಚ್.ಸಿ.ಮಹಾದೇವಪ್ಪ.
12ನೇ ಶತಮಾನದ ಬಸವಣ್ಣನವರ ಸಾಮಾಜಿಕ ಚಳುವಳಿಯ ಹೊರಣ ಈ ಪ್ರದೇಶದಲ್ಲಿನ ನೀಲಗಾರರ ಪರಂಪರೆಯಲ್ಲಿ ಅಡಗಿದೆ. ಮಂಟೇಸ್ವಾಮಿ, ರಾಚಪ್ಪಾಜಿ ಸಿದ್ಧಾಪ್ಪಾಜಿ, ದೊಡ್ಡಮ್ಮತಾಯಿ, ಚನ್ನಾಜಮ್ಮ ಅವರು ವಚನ ಸಾಹಿತ್ಯ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿ ಬದಲಾವಣೆಗೆ ಶ್ರಮಿಸಿದ್ದಾರೆ. ಈ ನಿಟ್ಟಿನಲ್ಲಿ ಅವರು ಆರಂಭಿಸಿದ ಚಳುವಳಿಯ ಕಿಡಿ ಹಾರದಂತೆ ನಾವು ನೋಡಿಕೊಳ್ಳಬೇಕು ಎಂದರು.

ವಚನಕಾರರು ಮನುಕುಲದ ಉದ್ಧಾರಕ್ಕೆ ಮಾಡಿದ ತ್ಯಾಗದ ಫಲವನ್ನು ತಳ ಸಮುದಾಯಗಳು ಅನುಭವಿಸಬೇಕು. ನಮ್ಮ ನಡೆ, ನುಡಿ, ಆಚಾರ ವಿಚಾಗಳ ಸಾಂಸ್ಕೃತಿಕ ಬದುಕೇ ಧರ್ಮ. ಹಾಗಾಗಿ ಧರ್ಮಕ್ಕೆ ಯಾವುದೇ ಹೊಸ ವ್ಯಾಖ್ಯಾನವಿಲ್ಲ. ತಳ ಸಮುದಾಯಗಳು ಒಗ್ಗಾಟ್ಟಾಗಿ ಸಹೋದರರಂತೆ ಸೌಹಾರ್ದವಾಗಿ ಬದುಕುವ ಮೂಲಕ ವಚನಕಾರರ ಸಂದೇಶವನ್ನು ಕಾರ್ಯರೂಪಕ್ಕೆ ತರಬೇಕು ಎಂದು ಸಚಿವ ಮಹಾದೇವಪ್ಪ ಕರೆ ನೀಡಿದರು.
ಆಹಾರ ಹಕ್ಕು ವೈಯಕ್ತಿಕವಾದದ್ದು, ಅದು ನಮ್ಮ ಮೂಲಭೂತ ಹಕ್ಕು. ಆಹಾರ ಸೇವನೆ ಅವರವರ ವಿವೇಚನೆಗೆ ಬಿಟ್ಟಿದ್ದು. ಯಾರ ಭಾವನೆಗೂ ಧಕ್ಕೆಯಾಗದಂತೆ ನ್ಯಾಯಾಲಯದ ಆದೇಶದ ಅನ್ವಯ ಇಲ್ಲಿ ಪಂಕ್ತಿಭೋಜನ ನಡೆಸುವಂತೆ ಕುರಿತು ಜಿಲ್ಲಾಧಿಕಾರಿಗೆ ತಿಳಿಸಿದ್ದೇನೆ. ಸಹಪಂಕ್ತಿಭೋಜನದ ಮೂಲಕ ಜಾತಿ ನಿರ್ಮೂಲನೆಯಾಗಬೇಕು ಎಂಬ ಆಶಯ ಈ ಕ್ಷೇತ್ರದಲ್ಲಿದೆ. ಸಂವಿಧಾನದ ಆಶಯವನ್ನೇ ಅನುಷ್ಠಾನ ಮಾಡಲಾಗುತ್ತಿದೆ ಎಂದರು.

ಐತಿಹಾಸಿಕ ಸಂಗತಿಗಳನ್ನು ರಕ್ಷೆಣೆ ಮಾಡಲು ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಪ್ರಾಧಿಕಾರ ರಚಿಸುವಂತೆ ಪ್ರಗತಿಪರ ಚಿಂತಕರು ಕೋರಿದ್ದಾರೆ. ಈ ಬಗ್ಗೆ ಚಿಂತನೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಮಾಜಿ ಶಾಸಕ ನರೇಂದ್ರ, ಮಂಟೇಸ್ವಾಮಿ ಪರಂಪರೆ ರಕ್ಷಣಾ ಸಮಿತಿಯ ಉಗ್ರನರಸಿಂಹಗೌಡ, ಪಾಪು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೇಶ್, ಬರಹಗಾರ ಶಂಕನಪುರ ಮಹದೇವು, ಮುಖಂಡರಾದ ಕಿಣಕಳ್ಳಿ ರಾಚಪ್ಪ, ಶಿವಕುಮಾರ್, ಮಹದೇವನಾಯಕ, ಪುಟ್ಟರಾಜು, ನಾಗರಾಜು, ರಾಜಶೇಖರ್ ಸೇರಿದಂತೆ ಹಲವರಿದ್ದರು.
key words: Chikkalur Fair, Minister Dr.H.C Mahadevappa, initiates, acceptance of public petitions, by lighting incense.

SUMMARY:
Chikkalur Fair: Minister Dr.H.C Mahadevappa initiates acceptance of public petitions by lighting incense.

The legacy of Basavanna’s social movement of the 12th century lies in the legacy of the Neelgaras in this region. Manteswamy, Rachappaji, Siddappaji, Doddammatai, Channajamma have worked hard to create awareness in the society through Vachana literature and bring about change. In this regard, he said, we should ensure that the spark of the movement they started does not go out.
The post ಚಿಕ್ಕಲ್ಲೂರು ಜಾತ್ರೆ : ಧೂಪ ಹಾಕಿ, ಜಾಗಟೆ ಬಾರಿಸಿ ಸಾರ್ವಜನಿಕರ ಅಹವಾಲು ಸ್ವೀಕಾರಕ್ಕೆ ಸಚಿವ ಡಾ.ಮಹಾದೇವಪ್ಪ ಚಾಲನೆ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.
Previous Article
ಮಂಗಳ ಕಲಾ ಸಾಹಿತ್ಯ ವೇದಿಕೆ ಪರ್ಕಳ: ಸ್ವರ್ಗ ಉಚಿತ ಆಶ್ರಮಕ್ಕೆ ದಿನಬಳಕೆ ವಸ್ತುಗಳ ಕೊಡುಗೆ
Next Article
ಪಾಂಬೂರು: ಶೈಕ್ಷಣಿಕ ಪರಿಕರಗಳ ವಿತರಣೆ, ಸಾಧಕರಿಗೆ ಗೌರವಾರ್ಪಣೆ