ನಮ್ಮ ಮೆಟ್ರೋ ನೇರಳೆ ಮಾರ್ಗದ ಸೇವೆಯಲ್ಲಿ ವ್ಯತ್ಯಯ: ಪ್ರಯಾಣಿಕರು ಪರದಾಟ

5 months ago

47

0

ಹೊಸದಿಗಂತ ಡಿಜಿಟಲ್ ಡೆಸ್ಕ್: ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ತಾಂತ್ರಿಕ ಕಾರಣಗಳಿಂದಾಗಿ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿದೆ. 15 ನಿಮಿಷಗಳಿಂದ ರೈಲುಗಳು ನಿಂತಲ್ಲೇ ನಿಂತಿದ್ದು, ಸಾವಿರಾರು ಪ್ರಯಾಣಿಕರು ಪರದಾಡಿದರು. ವಿದ್ಯುತ್ ವ್ಯತ್ಯಯದಿಂದ ನೇರಳೆ ಮಾರ್ಗದ ಕುಂದಲಹಳ್ಳಿ ಸ್ಟೇಷನ್​ನಲ್ಲಿ ಮೆಟ್ರೋ ರೈಲುಗಳ ಸಂಚಾರ ಸ್ಥಗಿತಗೊಂಡಿದ್ದು, ಇದರಿಂದ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಬೆಂಗಳೂರು ಮೆಟ್ರೋ ರೈಲು ನಿಗಮ, ವಿದ್ಯುತ್ ಪೂರೈಕೆಯಲ್ಲಿನ ತಾಂತ್ರಿಕ ದೋಷದಿಂದಾಗಿ ಸಂಚಾರಕ್ಕೆ ಸಮಸ್ಯೆಯಾಗಿದ್ದು, ಶೀಘ್ರದಲ್ಲೇ ಸಮಸ್ಯೆಯನ್ನು ಸರಿಪಡಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ತಿಳಿಸಿದೆ. The post ನಮ್ಮ ಮೆಟ್ರೋ ನೇರಳೆ ಮಾರ್ಗದ ಸೇವೆಯಲ್ಲಿ ವ್ಯತ್ಯಯ: ಪ್ರಯಾಣಿಕರು ಪರದಾಟ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಬಿಸಿಲ ಬೇಗೆಗೆ ಹೈರಾಣಾದ ಬೆಳಗಾವಿ ವಾಹನ ಸವಾರರು: ಟ್ರಾಫಿಕ್ ಸಿಗ್ನಲ್ ಗಳಿಗೆ ನೆರಳು ಛಾವಣಿ ಅಳವಡಿಕೆ!
Next Article
ಬುಧವಾರದ ರಾಶಿ ಭವಿಷ್ಯ 06 ಮೇ 2026

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment