ಕೈಮಗ್ಗ ನೇಕಾರರಿಗೆ ಮುದ್ರಾ ಯೋಜನೆಯಡಿ ಸಾಲ ಸೌಲಭ್ಯ: ಅರ್ಜಿ ಆಹ್ವಾನ

5 months ago

47

0

ದಾವಣಗೆರೆ : ಜಿಲ್ಲೆಯ ಕೈಮಗ್ಗ ಮತ್ತು ಜವಳಿ ಇಲಾಖೆಯ ವತಿಯಿಂದ 2026-27ನೇ ಸಾಲಿಗೆ ಕೈಮಗ್ಗ ನೇಕಾರಿಕೆಯಲ್ಲಿ  ತೊಡಗಿರುವ ನೇಕಾರರಿಗೆ ಮುದ್ರಾ   ಯೋಜನೆಯಡಿ ಸಾಲ ಸೌಲಭ್ಯ  ನೀಡಲು ಗುರಿ ನಿಗದಿಪಡಿಸಲಾಗಿದೆ. Read also : ಜಗಳೂರು ಯೋಜನಾ ಪ್ರದೇಶದಲ್ಲಿ ವಿನ್ಯಾಸ ಅನುಮೋದನೆಗೆ ಭೂ ಪರಿವರ್ತನೆ ಆದೇಶದ ಅಗತ್ಯವಿಲ್ಲ ಕೈಮಗ್ಗ ನೇಕಾರಿಕೆ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ಆಸಕ್ತ ನೇಕಾರರು ಈ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. ನಿಗದಿತ ಅರ್ಜಿ ನಮೂನೆಗಳನ್ನು ಉಪ ನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್, ರಾಮಾಂಜನೇಯ ಪ್ಲಾಜಾ, ಕಾಲೇಜ್ ರಸ್ತೆ, ನಿಟ್ಟುವಳ್ಳಿ, ದಾವಣಗೆರೆ-577004 ಇಲ್ಲಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ 08192-262362 ಅನ್ನು ಸಂಪರ್ಕಿಸುವಂತೆ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
Click here to Read More
Previous Article
ಸಿಪೆಟ್ ಸಂಸ್ಥೆಯಲ್ಲಿ ವಿವಿಧ ಡಿಪ್ಲೊಮಾ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
Next Article
ಟಿವಿಕೆಗೆ 120 ಶಾಸಕರ ಬಲ: ರಾಜ್ಯಪಾಲರಿಗೆ ಪತ್ರ ಬರೆದ ವಿಜಯ್

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment