ಜಂತುಹುಳು ರಹಿತ ಮಕ್ಕಳೇ ಆರೋಗ್ಯವಂತ ಮಕ್ಕಳು : ಆರ್.ಸಿ.ಹೆಚ್.‌ಡಾ.ರೇಣುಕಾರಾಧ್ಯ

2 months ago

39

0

ದಾವಣಗೆರೆ:ಜಂತುಹುಳು ರಹಿತ ಮಕ್ಕಳೇ ದೇಶದ ಆರೋಗ್ಯವಂತ ಮಕ್ಕಳು. ಜಂತುಹುಳು ನಿವಾರಣಾ ಮಾತ್ರೆಯನ್ನು ನೀರು ಹಾಗೂ ಆಹಾರ ಸೇವನೆಯ ನಂತರ ಸರಿಯಾಗಿ ಚೀಪಿ ನುಂಗಬೇಕು ಎಂದು ಆರ್.ಸಿ.ಹೆಚ್.‌ ಡಾ.ರೇಣುಕಾರಾಧ್ಯ ಅವರು ತಿಳಿಸಿದರು.  ಸೋಮವಾರ ನಗರದ ಮುದ್ದೇಗೌಡ್ರ ಮಲ್ಲಮ್ಮ ಮುರಿಗೆಪ್ಪ ಬಾಲಿಕಾ ಪ್ರೌಢಶಾಲೆಯಲ್ಲಿ  ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮವನ್ನು  ಉದ್ಪಾಟಿಸಿ ಮಾತನಾಡಿದರು. ಪ್ರತಿಯೊಬ್ಬರೂ ಊಟಕ್ಕೂ ಮುನ್ನ ಮತ್ತು ಶೌಚಾಲಯ ಬಳಕೆಯ ನಂತರ ಕೈ ಕಾಲುಗಳನ್ನು ಸಾಬೂನಿನಿಂದ ಸ್ವಚ್ಛವಾಗಿ ತೊಳೆಯಬೇಕು. ವಾರಕ್ಕೊಮ್ಮೆ ಉಗುರುಗಳನ್ನು ಕತ್ತರಿಸುವುದು, ಶುದ್ಧ ಕುಡಿಯುವ ನೀರನ್ನು ಬಳಸುವುದು ಹಾಗೂ ಆಹಾರ ಪದಾರ್ಥಗಳನ್ನು ಸದಾ ಮುಚ್ಚಿಡುವುದು ಅತ್ಯಗತ್ಯ  ಎಂದು ತಿಳಿಸಿದರು. ತರಕಾರಿ ಮತ್ತು ಹಣ್ಣುಗಳನ್ನು ಬಳಸುವ ಮುನ್ನ ಶುದ್ಧ ನೀರಿನಿಂದ ತೊಳೆಯಬೇಕು. ಬರಿಗಾಲಿನಲ್ಲಿ ನಡೆಯದೆ ಕಡ್ಡಾಯವಾಗಿ ಚಪ್ಪಲಿ ಧರಿಸಬೇಕು. ಮನೆ ಹಾಗೂ ಶಾಲೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಮಕ್ಕಳಲ್ಲಿ ಜಂತುಹುಳು ಭಾದೆಯನ್ನು ಸಂಪೂರ್ಣವಾಗಿ ತಡೆಗಟ್ಟಬಹುದು ಎಂದರು. Read also : ಕ್ಯಾರಿ ಬ್ಯಾಗ್‌ಗೆ ಹೆಚ್ಚುವರಿ ಶುಲ್ಕ ವಿಧಿಸಿದ ಜುಡಿಯೊ ಮಳಿಗೆಗೆ ₹30,000 ದಂಡ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
Click here to Read More
Previous Article
ಪ್ರೀತಿಯ ಬಗೆಗೆ ಒಂದಷ್ಟು……..
Next Article
ಕ್ಯಾರಿ ಬ್ಯಾಗ್‌ಗೆ ಹೆಚ್ಚುವರಿ ಶುಲ್ಕ ವಿಧಿಸಿದ ಜುಡಿಯೊ ಮಳಿಗೆಗೆ ₹30,000 ದಂಡ

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment