Filters

Channels
Topics
Other Filters

ಬೆಟ್ಟ ಹತ್ತುವುದರಿಂದ ದೈಹಿಕ ಕ್ಷಮತೆ ವೃದ್ಧಿ : ಮನುಜಶ್ರೀ

ಮಂಡ್ಯ : ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಶ್ರೀರಂಗಪಟ್ಟಣ ದಸರಾ–2026ರ ಅಂಗವಾಗಿ ಆಯೋಜಿಸಿದ್ದ ಬೆಟ್ಟ ಹತ್ತುವ ಚಾರಣ ಕಾರ್ಯಕ್ರಮ ಯಶಸ್ವಿಗೊಂಡಿತು ಎಂದು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಮನುಜಶ್ರೀ ಅವರು ತಿಳಿಸಿದರು. ಶ್ರೀರಂಗಪಟ್ಟಣದಲ್ಲಿ ಇಂದು ಆಯೋಜಿಸಿದ್ದ ಚಾರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದಿನ ಜೀವನಶೈಲಿಯಲ್ಲಿ ದೈಹಿಕ ಚಟುವಟಿಕೆಗಳ ಕೊರತೆ ಹಾಗೂ ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತಿವೆ. […] The post ಬೆಟ್ಟ ಹತ್ತುವುದರಿಂದ ದೈಹಿಕ ಕ್ಷಮತೆ ವೃದ್ಧಿ : ಮನುಜಶ್ರೀ appeared first on nudikarnataka.

ರಾಯಚೂರಿನಲ್ಲಿ ಈರುಳ್ಳಿ ಲಾರಿ ಪಲ್ಟಿ: 15 ನಿಮಿಷದಲ್ಲೇ ಈರುಳ್ಳಿ ಹೊತ್ತೊಯ್ದ ಜನ

ರಾಯಚೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾಗುವುದು ಮಾನವೀಯ ಕರ್ತವ್ಯ. ಆದರೆ, ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಬಳಿ ನಡೆದ ಘಟನೆಯೊಂದು ಸಾರ್ವಜನಿಕರ ವರ್ತನೆಯ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಈರುಳ್ಳಿ ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗುಂಡಿಗೆ ಉರುಳಿಬಿದ್ದಿದೆ. ಅಪಘಾತದಲ್ಲಿ ಚಾಲಕ ಮತ್ತು ಕ್ಲೀನರ್ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಆದರೆ, ಗಾಯಾಳುಗಳಿಗೆ ನೆರವಾಗುವ ಬದಲು ಲಾರಿಯಲ್ಲಿದ್ದ ಈರುಳ್ಳಿ ಚೀಲಗಳನ್ನು ಹೊತ್ತೊಯ್ಯಲು ಜನರು ಮುಗಿಬಿದ್ದಿದ್ದಾರೆ. ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ […] Source

KPCC  ಮಹಿಳಾ ಘಟಕದ ಅಧ್ಯಕ್ಷೆ ಸ್ಥಾನಕ್ಕೆ ಸೌಮ್ಯಾ ರೆಡ್ಡಿ ರಾಜೀನಾಮೆ

ಬೆಂಗಳೂರು,ಅಕ್ಟೋಬರ್,17,2026 (www.justkannada.in):  ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್  ಘಟಕದ ಅಧ್ಯಕ್ಷೆ ಸ್ಥಾನಕ್ಕೆ ಸೌಮ್ಯಾ ರೆಡ್ಡಿ ರಾಜೀನಾಮೆ ಸಲ್ಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜೀನಾಮೆ ಪತ್ರ ರವಾನಿಸಿರುವ ಸೌಮ್ಯರೆಡ್ಡಿ, ತಮ್ಮ ಹುದ್ದೆಯನ್ನು ತ್ಯಜಿಸುತ್ತಿರುವುದಾಗಿ ಘೋಷಿಸಿದ್ದಾರೆ . ಇದೇ ವೇಳೆ, ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಒಬ್ಬರೇ ಒಬ್ಬ ಮಹಿಳಾ ಸಚಿವರೂ ಇಲ್ಲದಿರುವ ಬಗ್ಗೆ ಪತ್ರದ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. 20-08-2026ರಂದೇ ಈ ಸಂಬಂಧ ಸೌಮ್ಯರೆಡ್ಡಿ ಅವರು ಪತ್ರ ಬರೆದಿದ್ದು  ನಾನು ಈ […]

ಶಿವಮೊಗ್ಗ : ಕಾಂಗ್ರೆಸ್​ ಪಕ್ಷದ ಬದುಕೇ ಸ್ಟಿಂಗ್​ ಆಪರೇಷನ್​​​ನಲ್ಲಿ ಅಡಕವಾಗಿದೆ, ಎಸ್​ ಎನ್​ ಚನ್ನಬಸಪ್ಪ

 ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಅಂದಿನ ಫೋನ್ ಕದ್ದಾಲಿಕೆ ಪ್ರಕರಣ ಬದಲಾದ ಕಾಲಮಾನದಲ್ಲಿ ಈಗ ಸ್ಟಿಂಗ್ ಆಪರೇಷನ್ ಆಗಿ ಬದಲಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಇದು ಸರ್ವೇ ... ಕ್ಲಿಕ್ ಮಾಡಿ

ಸ್ಟಿಂಗ್ ಆಪರೇಷನ್: ನ್ಯಾಯಾಧೀಶರ ಸಮ್ಮುಖದಲ್ಲಿ SIT ತನಿಖೆ ಮಾಡಲಿ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ, ಅಕ್ಟೋಬರ್,17,2026 (www.justkannada.in): ರಾಜ್ಯ ರಾಜಕಾರಣದಲ್ಲಿ ಸ್ಟಿಂಗ್ ಆಪರೇಷನ್  ವಿಚಾರದ ಚರ್ಚೆ ಮಾತುಗಳು ಮುಂದುವರೆದಿದ್ದು ಈ ಸಂಬಂಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,  ಸಾರ್ವಜನಿಕ ಜೀವನದಲ್ಲಿರುವವರು ನೈತಿಕತೆ ಕಾಪಾಡಿಕೊಳ್ಳಬೇಕು. ಸ್ಟಿಂಗ್  ಯಾರು ಮಾಡಿದ್ದಾರೆ ಎಂದು ಚರ್ಚೆಯಾಗುತ್ತಿದೆ.  ನ್ಯಾಯಾಧೀಶರ ಸಮ್ಮುಖದಲ್ಲಿ ಎಸ್ ಐಟಿ ತನಿಖೆ ಮಾಡಲಿ ಎಂದು ಆಗ್ರಹಿಸಿದರು. ಕೆಪಿಎಸ್ ಸಿ ಹಗರಣದಲ್ಲಿ ಅನೇಕ ಸಚಿವರು ಸಿಲಕುತ್ತಾರೆ ಈ ತನಿಖೆ ನಡೆದರೆ ಸರ್ಕಾರ ಪತನವಾಗಬಹುದು ಎಂದು ಪ್ರಹ್ಲಾದ್ […]

ಶಿವಮೊಗ್ಗ : ಹಾವುಗಳ ಸಂತಾನೋತ್ಪತ್ತಿ ಆರಂಭಕ್ಕೂ ಮುನ್ನವೇ ಎದುರಾದ ತೊಡಕು? ಉರಗ ತಜ್ಞರ ನೆರವಿಲ್ಲದೆ ಹಾವುಗಳ ಸಂರಕ್ಷಣೆ ಸಾಧ್ಯವೇ ?

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಮಲೆನಾಡು ಭಾಗಗಳಲ್ಲಿ ಮನೆಗೊಂದು ಹಾವು ಕಾಣಿಸಿಕೊಳ್ಳುವುದು ಸಾಮಾನ್ಯ. ಅಂಗಳಕ್ಕೆ ಕಾಲು ಇಡುವುದಿರಲಿ, ಹಗ್ಗ ಬಿದ್ದಿರುವುದನ್ನು ಕಂಡರೂ ಹಾವು ಎಂದೇ ... ಕ್ಲಿಕ್ ಮಾಡಿ

ಟೀಂ ಇಂಡಿಯಾ ಮಾಜಿ ನಾಯಕನ ದುಬೈ ಡೀಲ್‌: ಐಷಾರಾಮಿ ಮನೆ ಖರೀದಿಸಿ ಸುದ್ದಿಯಾದ ಸೂರ್ಯಕುಮಾರ್‌ ಯಾದವ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಟೀಂ ಇಂಡಿಯಾದ ಟಿ20 ವಿಶ್ವಕಪ್‌ ವಿಜೇತ ನಾಯಕ ಸೂರ್ಯಕುಮಾರ್‌ ಯಾದವ್‌ ಇದೀಗ ದುಬೈನಲ್ಲಿ ಐಷಾರಾಮಿ ಆಸ್ತಿ ಖರೀದಿಸುವ ಮೂಲಕ ಸುದ್ದಿಯಾಗಿದ್ದಾರೆ. ಪತ್ನಿ ದೇವಿಶಾ ಶೆಟ್ಟಿ ಅವರೊಂದಿಗೆ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಅವರು, ದುಬೈನ ಜೀವನಶೈಲಿ, ಸುರಕ್ಷತೆ ಮತ್ತು ಆಧುನಿಕ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಾರುಖ್‌ ಖಾನ್‌ ಜೊತೆಗಿನ ವಿಶೇಷ ಸಂಪರ್ಕ ಸೂರ್ಯಕುಮಾರ್‌ ಖರೀದಿಸಿರುವ ಆಸ್ತಿಯ ಹೆಸರು ‘ಶಾರುಖ್‌ಝ್‌ ರೆಸಿಡೆನ್ಸಸ್‌’ (Shahrukhz Residences). ಬಾಲಿವುಡ್‌ ನಟ ಶಾರುಖ್‌ […] The post ಟೀಂ ಇಂಡಿಯಾ ಮಾಜಿ ನಾಯಕನ ದುಬೈ ಡೀಲ್‌: ಐಷಾರಾಮಿ ಮನೆ ಖರೀದಿಸಿ ಸುದ್ದಿಯಾದ ಸೂರ್ಯಕುಮಾರ್‌ ಯಾದವ್ appeared first on ONLINE.

ಕಬ್ಬು ಬೆಳಗಾರರ ಜೊತೆ ಮಾತನಾಡಲು ಬೆಳಗಾವಿಗೆ- ಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಅಕ್ಟೋಬರ್,17,2026 (www.justkannada.in):  ಕಬ್ಬಿಗೆ ಎಂಎಸ್ ಪಿ ನಿಗದಿಗೆ ಆಗ್ರಹಿಸಿ ಬೆಳಗಾವಿ, ಕಲ್ಬುರ್ಗಿ ಸೇರಿ ರಾಜ್ಯದ ಹಲವು ಭಾಗಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ  ಬೆಳಗಾವಿಯಲ್ಲಿ ರೈತರ ಜೊತೆ ಸಭೆಗೆ ಸಿಎಂ ಡಿಕೆ ಶಿವಕುಮಾರ್ ತೆರಳುತ್ತಿದ್ದಾರೆ. ಈ ಕುರಿತು ಮಾತನಾಡಿರುವ ಸಿಎಂ ಡಿಕೆ ಶಿವಕುಮಾರ್,  ಕಬ್ಬು ಬೆಳೆಗಾರರ ಜೊತೆ ಮಾತನಾಡಲು ಬೆಳಗಾವಿಗೆ ಹೋಗುತ್ತಿದ್ದೇನೆ.  ರೈತರ ಪಾಪ ಬಹಳ ಶ್ರಮ ಪಡುತ್ತಿದ್ದಾರೆ  . ಅವರ ಪರಿಸ್ಥಿತಿ ನಮಗೆ ಅರ್ಥ ಆಗುತ್ತದೆ. ಬೇಕಾದಷ್ಟು ಸಮಸ್ಯೆ ಇದೆ ಎಂದರು. ಕಬ್ಬುಬೆಳಗಾರರ ಜೊತೆ […]

ಐಎಎಸ್ ಅಧಿಕಾರಿ ಸಿ.ಶಿಖಾ ಅವರಿಗೆ ನಿಂದನೆ, ಕರ್ತವ್ಯಕ್ಕೆ ಅಡ್ಡಿ ಆರೋಪ: ಕೆ.ಮರೀಗೌಡ ವಿರುದ್ಧದ ಪ್ರಕರಣದ ವಿಚಾರಣೆ ನ.28ಕ್ಕೆ ಮುಂದೂಡಿಕೆ

  ಮೈಸೂರು, ಅ.೧೭,೨೦೨೬: ಈ ಹಿಂದಿನ ಮೈಸೂರು ಜಿಲ್ಲಾಧಿಕಾರಿ, ಐಎಎಸ್‌ ಅಧಿಕಾರಿ ಸಿ.ಶಿಖಾ ಅವರೊಂದಿಗೆ ಅನುಚಿತವಾಗಿ ವರ್ತಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಮುಖಂಡ ಕೆ.ಮರೀಗೌಡ ವಿರುದ್ಧದ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ನವೆಂಬರ್ 28ಕ್ಕೆ ಮುಂದೂಡಿದೆ. ನಗರದ ಮೂರನೇ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ದೂರುದಾರರಾದ ಐಎಎಸ್ ಅಧಿಕಾರಿ ಸಿ.ಶಿಖಾ ಅವರು ವಿಚಾರಣೆಗೆ ಖುದ್ದು ಹಾಜರಾಗದ ಹಿನ್ನೆಲೆಯಲ್ಲಿ ಮುಂದಿನ ದಿನಾಂಕ ನಿಗದಿಯಾಗಿದೆ. ವಿಚಾರಣೆಗೆ ಹಾಜರಾಗಲು ಸಾಧ್ಯವಾಗದ ಶಿಖಾ: ಪ್ರಸ್ತುತ […]

ನೂಡಲ್ಸ್ ಸೇವಿಸಿದ ಒಂದೇ ಕುಟುಂಬದ ಐವರು ನಿಗೂಢ ಸಾವು

ಗ್ರೇಟರ್ ನೋಯ್ಡಾ: ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಒಂದೇ ಕುಟುಂಬದ ಐವರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಆಘಾತಕಾರಿ ಘಟನೆ ನಡೆದಿದೆ. ಮೃತಪಟ್ಟವರಲ್ಲಿ ದಂಪತಿ ಹಾಗೂ ಅವರ ಮೂವರು ಮಕ್ಕಳಿದ್ದಾರೆ. ಕುಟುಂಬದ ಸದಸ್ಯರು ಸಾವಿಗೂ ಮುನ್ನ ಚಹಾ ಮತ್ತು ನೂಡಲ್ಸ್ ಸೇವಿಸಿದ್ದರು ಎನ್ನಲಾಗಿದ್ದು, ಆಹಾರ ವಿಷಪ್ರಾಶನದ ಸಾಧ್ಯತೆಯ ಬಗ್ಗೆ ಶಂಕೆ ವ್ಯಕ್ತವಾಗಿದೆ. ಆದರೆ, ನೂಡಲ್ಸ್ ಅಥವಾ ಇತರ ಆಹಾರ ಪದಾರ್ಥಗಳ ಸೇವನೆಯೇ ಸಾವಿಗೆ ಕಾರಣ ಎಂಬುದು ಇನ್ನೂ ದೃಢಪಟ್ಟಿಲ್ಲ. ಗ್ರೇಟರ್ ನೋಯ್ಡಾದ ನಂಗ್ಲಾ ಶ್ರೀಗೋಪಾಲ್ ಗ್ರಾಮದ ರಬೂಪುರ ಪೊಲೀಸ್ ಠಾಣೆ […] Source

ಬಲೂನ್‌ ಮಾರುವ ಬಾಲಕಿಯ ಅತ್ಯಾಚಾ*ರ, ಕೊ*ಲೆ ಪ್ರಕರಣ: ಕಾಮುಕನಿಗೆ ಗಲ್ಲು ಶಿಕ್ಷೆ ವಿಧಿಸಿದ ನ್ಯಾಯಾಲಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ದಸರಾ ವಸ್ತುಪ್ರದರ್ಶನದ ಬಳಿ ಗುಡಾರ ಹಾಕಿಕೊಂಡು ಬಲೂನ್ ಮಾರಾಟ ಮಾಡುತ್ತಿದ್ದ ಕುಟುಂಬದ 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಅಪರಾಧಿ ಕಾರ್ತಿಕ್‌ಗೆ ಮೈಸೂರಿನ ತ್ವರಿತ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಈ ತೀರ್ಪು ಕಳೆದ ವರ್ಷ ನಡೆದಿದ್ದ ಪ್ರಕರಣದ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ದಸರಾ ಪ್ರದರ್ಶನದ ಬಳಿ ನಡೆದಿದ್ದ ಕೃತ್ಯ ಕಲಬುರಗಿಯಿಂದ ವ್ಯಾಪಾರಕ್ಕಾಗಿ ಮೈಸೂರಿಗೆ ಬಂದಿದ್ದ ಕುಟುಂಬವೊಂದು ದಸರಾ ಪ್ರದರ್ಶನದ ಮೈದಾನದ ಸಮೀಪ ಗುಡಾರ ಹಾಕಿಕೊಂಡು ವಾಸಿಸುತ್ತಿತ್ತು. […] The post ಬಲೂನ್‌ ಮಾರುವ ಬಾಲಕಿಯ ಅತ್ಯಾಚಾ*ರ, ಕೊ*ಲೆ ಪ್ರಕರಣ: ಕಾಮುಕನಿಗೆ ಗಲ್ಲು ಶಿಕ್ಷೆ ವಿಧಿಸಿದ ನ್ಯಾಯಾಲಯ appeared first on ONLINE.

ತೀರ್ಥಹಳ್ಳಿ : ಹಳ್ಳದ ಮೇಲೋಂದು ರಸ್ತೆ! ರಸ್ತೆಯೊಳಗೊಂದು ಸುರಂಗ! ಬಸವಾನಿ ರೋಡಲ್ಲಿ ನೋಡಲು ಸಿಗುತ್ತಿದೆ ಸಾವಿನ ಗ್ಯಾರಂಟಿ 

ಮಲೆನಾಡು ಟುಡೆ ಸುದ್ದಿ / ತೀರ್ಥಹಳ್ಳಿ / ಸರ್ಕಾರಿ ಕೆಲಸ ದೇವರ ಕೆಲಸವೇನೋ ಸರಿಯೇ! ಆದರೆ ಅದೇ ಸರ್ಕಾರಿ ಕೆಲಸವನ್ನ ದೇವರು ಸಹ ಮೆಚ್ಚೋದಿಲ್ಲ! ಇದಕ್ಕೆ ಈ ... ಕ್ಲಿಕ್ ಮಾಡಿ