Filters

Channels
Topics
Other Filters

Zodiac Aura Color: ನಿಮ್ಮ ರಾಶಿಯ ಪ್ರಭಾವಳಿ ಬಣ್ಣ ಯಾವುದು? ನಿಮ್ಮ ವ್ಯಕ್ತಿತ್ವದ ಗುಟ್ಟು ತಿಳಿಯಿರಿ!

Zodiac Aura Color: ನಿಮ್ಮ ರಾಶಿಯ ಪ್ರಭಾವಳಿ ಬಣ್ಣ ಯಾವುದು? ನಿಮ್ಮ ವ್ಯಕ್ತಿತ್ವದ ಗುಟ್ಟು ತಿಳಿಯಿರಿ!. Zodiac Aura Colors: What Your Sign Reveals About Your Personality All 12 Signs Explained.

ಸಾಲದ ವಿಚಾರವಾಗಿ ಮನನೊಂದಿದ್ದ ಯುವ ರೈತ ಕೃಷಿ ಹೊಂಡದಲ್ಲಿ ಶವವಾಗಿ ಪತ್ತೆ

ಹೊಸದಿಗಂತ ವರದಿ ಬನವಾಸಿ: ಕೃಷಿ ಸಾಲದ ವಿಚಾರವಾಗಿ ಚಿಂತಿತರಾಗಿದ್ದ 27 ವರ್ಷದ ಯುವ ರೈತನೊಬ್ಬ ಕೃಷಿ ಹೊಂಡದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಸಮೀಪದ ಬದನಗೋಡ ಗ್ರಾಮದಲ್ಲಿ ನಡೆದಿದೆ. ಮೃತನನ್ನು ರಂಗಾಪುರ-ಬದನಗೋಡ ಗ್ರಾಮದ ಚಂದನ ಕುಬೇರ ಕ್ಯಾತಣ್ಣನವರ (27) ಎಂದು ಗುರುತಿಸಲಾಗಿದೆ. ಈ ಕುರಿತು ಮೃತನ ತಂದೆ ಕುಬೇರ ಅರ್ಜುನಪ್ಪ ಕ್ಯಾತಣ್ಣನವರ ಅವರು ಬನವಾಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಪ್ರಕಾರ, ಕುಬೇರ ಅವರ ಹೆಸರಿನಲ್ಲಿ ರಂಗಾಪುರ ಗ್ರಾಮದ ಸರ್ವೆ ನಂ. 256ರಲ್ಲಿ ಒಂದು ಎಕರೆ […] The post ಸಾಲದ ವಿಚಾರವಾಗಿ ಮನನೊಂದಿದ್ದ ಯುವ ರೈತ ಕೃಷಿ ಹೊಂಡದಲ್ಲಿ ಶವವಾಗಿ ಪತ್ತೆ appeared first on ONLINE.

ಶಿವಮೊಗ್ಗ: ಮನೆಯಲ್ಲೇ ನೇಣು ಬಿಗಿದುಕೊಂಡು ಯುವ ಇಂಜಿನಿಯರ್ ಆತ್ಮಹ*ತ್ಯೆ

ಹೊಸದಿಗಂತ ವರದಿ ಶಿವಮೊಗ್ಗ: ಅವಿವಾಹಿತ ಇಂಜಿನಿಯರ್ ನೇಣು ಬಿಗಿದುಕೊಂಡು ಮನೆಯಲ್ಲಿ ಮೃತಪಟ್ಟ ಘಟನೆ  ಭಾನುವಾರ ಮಧ್ಯಾಹ್ನ ಶಿಕಾರಿಪುರ ಪಟ್ಟಣದ ಚನ್ನಕೇಶವ ನಗರದಲ್ಲಿ ನಡೆದಿದೆ.     ಮೃತನನ್ನು ಅನ್ವಿತ್ ಸಾಗರ್ (27) ಎಂದು ಗುರುತಿಸಲಾಗಿದ್ದು, ಪಟ್ಟಣದ ಪ್ರತಿಷ್ಠಿತ ಶಿವ ಸಹಕಾರಿ ಬ್ಯಾಂಕಿನ ನಿರ್ದೇಶಕ ಎಲ್. ಗಣಪತಿರವರ ಪುತ್ರನಾಗಿದ್ದಾನೆ. ಶನಿವಾರ ಪೋಷಕರ ಜೊತೆ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ವಾಪಸ್ ಆಗಿದ್ದ ಅನ್ವಿತ್ ಭಾನುವಾರ ಮಧ್ಯಾಹ್ನ ಏಕಾಏಕಿ ಪಟ್ಟಣದ ಚನ್ನಕೇಶವ ನಗರದಲ್ಲಿರುವ ಸ್ವಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.     ಮೃತ ಅನ್ವಿತ್ […] The post ಶಿವಮೊಗ್ಗ: ಮನೆಯಲ್ಲೇ ನೇಣು ಬಿಗಿದುಕೊಂಡು ಯುವ ಇಂಜಿನಿಯರ್ ಆತ್ಮಹ*ತ್ಯೆ appeared first on ONLINE.

ಪಡಿತರ ಚೀಟಿದಾರರೇ ಗಮನಿಸಿ: ಸರ್ಕಾರದಿಂದ ಮಹತ್ವದ ಆದೇಶ, ಇ-ಕೆವೈಸಿ ಅವಧಿ ಮತ್ತೆ ವಿಸ್ತರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ರಾಜ್ಯದ ಲಕ್ಷಾಂತರ ಪಡಿತರ ಚೀಟಿ ಗ್ರಾಹಕರಿಗೆ ಆಹಾರ ಇಲಾಖೆಯು ಸಿಹಿ ಸುದ್ದಿ ನೀಡಿದೆ. ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಇದ್ದ ಕೊನೆಯ ದಿನಾಂಕವನ್ನು ನವೆಂಬರ್ 10, 2026ರ ವರೆಗೆ ವಿಸ್ತರಿಸಿ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಈ ಮೊದಲು ಅಕ್ಟೋಬರ್ 20 ಕೊನೆಯ ದಿನವಾಗಿತ್ತು. ಆದರೆ ತಾಂತ್ರಿಕ ದೋಷ ಹಾಗೂ ಸಾರ್ವಜನಿಕರ ಪರದಾಟವನ್ನು ಗಮನಿಸಿ ಈ ಗಡುವನ್ನು ವಿಸ್ತರಿಸಲಾಗಿದೆ. ಸರ್ವರ ಮತ್ತು ಆ್ಯಪ್ ಸಮಸ್ಯೆಗೆ ಸಿಕ್ತು ಮುಕ್ತಿ ಪಡಿತರ ಚೀಟಿಗೆ ಇ-ಕೆವೈಸಿ ಕಡ್ಡಾಯ ಮಾಡಿದಾಗಿನಿಂದ […] The post ಪಡಿತರ ಚೀಟಿದಾರರೇ ಗಮನಿಸಿ: ಸರ್ಕಾರದಿಂದ ಮಹತ್ವದ ಆದೇಶ, ಇ-ಕೆವೈಸಿ ಅವಧಿ ಮತ್ತೆ ವಿಸ್ತರಣೆ appeared first on ONLINE.

ಅಪ್ರಾಪ್ತ ವಯಸ್ಕ ಬಾಲಕಿಯೊಂದಿಗೆ ಅಸಭ್ಯ ವರ್ತನೆ, ದೈಹಿಕ ಸಂಪರ್ಕಕ್ಕೆ ಒತ್ತಾಯ: ಕಾಮುಕನ ವಿರುದ್ಧ ಕೇಸ್

ಹೊಸದಿಗಂತ ವರದಿ ಮುಂಡಗೋಡ:   ಅಪ್ರಾಪ್ತ ವಯಸ್ಕ ಬಾಲಕಿಯನ್ನು ಪುಸಲಾಯಿಸಿ ಮೂರು ದಿನಗಳ ಕಾಲ ವಿವಿಧೆಡೆ ಕರೆದೊಯ್ದು, ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿ ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ ಆರೋಪದಡಿ ಯುವಕನ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಾಲೂಕಿನ ಮಜ್ಜಿಗೇರಿ ಗ್ರಾಮದ ಭರತೇಶ ನೂಲ್ವಿ (25) ಎಂಬಾತನ ವಿರುದ್ಧ ಬಾಲಕಿಯ ಪಾಲಕರು ದೂರು ನೀಡಿದ್ದಾರೆ. ಆರೋಪಿಯು ಕಳೆದ ಒಂದು ವರ್ಷದಿಂದ ಬಾಲಕಿಯ ಹಿಂದೆ ಬಿದ್ದು, ಪ್ರೀತಿಸುವುದಾಗಿ ನಂಬಿಸಿ ಅ.8ರಂದು ಆಕೆಯನ್ನು ಕರೆದೊಯ್ದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದನ್ನೂ […] The post ಅಪ್ರಾಪ್ತ ವಯಸ್ಕ ಬಾಲಕಿಯೊಂದಿಗೆ ಅಸಭ್ಯ ವರ್ತನೆ, ದೈಹಿಕ ಸಂಪರ್ಕಕ್ಕೆ ಒತ್ತಾಯ: ಕಾಮುಕನ ವಿರುದ್ಧ ಕೇಸ್ appeared first on ONLINE.

Vidura Niti: ವಿದುರ ನೀತಿ ಹೇಳುವ ಜೀವನ ಪಾಠ! ನಿಮ್ಮ ಉತ್ತಮ ಭವಿಷ್ಯಕ್ಕಾಗಿ ಈ 5 ಸೂತ್ರ ಪಾಲಿಸಿ

Vidura Niti: Discover 5 valuable life lessons from Vidura Niti in the Mahabharata. Learn why you should be careful about sharing your weaknesses, financial details, plans and dreams. ವಿದುರ ನೀತಿ ಹೇಳುವ ಜೀವನದ 5 ಮಹತ್ವದ ಪಾಠಗಳನ್ನು ತಿಳಿಯಿರಿ. ನಿಮ್ಮ ದೌರ್ಬಲ್ಯ, ಹಣಕಾಸು, ಕನಸು ಮತ್ತು ವೈಯಕ್ತಿಕ ವಿಚಾರಗಳನ್ನು ಗೌಪ್ಯವಾಗಿಟ್ಟುಕೊಂಡು ಭವಿಷ್ಯವನ್ನು ಕಾಪಾಡಿಕೊಳ್ಳುವುದು ಹೇಗೆ?

ಅಪ್ರಾಪ್ತ ವಯಸ್ಕ ಬಾಲಕಿ ಮೇಲಿನ ದೌರ್ಜನ್ಯ ಕೇಸ್: ಆರೋಪಿಗೆ 23 ವರ್ಷ ಜೈಲು, 55 ಸಾವಿರ ರೂ ದಂಡ

ಹೊಸದಿಗಂತ ವರದಿ ಕಲಘಟಗಿ : ತಾಲೂಕಿನ ಸೂಳಿಕಟ್ಟಿ ಗ್ರಾಮ ವ್ಯಾಪ್ತಿಯ ಸಚ್ಚಿದಾನಂದ ನಗರದ ಆರೋಪಿಯೊಬ್ಬನಿಗೆ ಬಾಲಕಿಯ ಮೇಲೆ 2023ರ ಆಗಸ್ಟ್ ತಿಂಗಳಲ್ಲಿ ಜರುಗಿದ್ದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು ಆರೋಪಿತನಿಗೆ 23 ವರ್ಷ ಜೈಲು ಶಿಕ್ಷೆ ಹಾಗೂ 55 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದೆ. ಬಾಲಕಿ ತಂದೆ ನೀಡಿದ ದೂರಿನನ್ವಯ ಕಲಘಟಗಿ ಸಿಪಿಐ ಶ್ರೀಶೈಲ ಕೌಜಲಗಿ ಅವರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. 2024ರ […] The post ಅಪ್ರಾಪ್ತ ವಯಸ್ಕ ಬಾಲಕಿ ಮೇಲಿನ ದೌರ್ಜನ್ಯ ಕೇಸ್: ಆರೋಪಿಗೆ 23 ವರ್ಷ ಜೈಲು, 55 ಸಾವಿರ ರೂ ದಂಡ appeared first on ONLINE.

ಬೈಕ್ ಸರ್ವಿಸ್ ಮಾಡಿಸಿ ಮನೆಗೆ ಮರಳುತ್ತಿದ್ದಾಗ ಅಪಘಾತ: ಯುವಕ ಸ್ಥಳದಲ್ಲೇ ಸಾ*ವು

ಹೊಸದಿಗಂತ ವರದಿ ಯಲ್ಲಾಪುರ: ತಾಲೂಕಿನ ಬಿಸಗೋಡ ಗ್ರಾಮದ ಯುವಕನೋರ್ವ ಶಿರಸಿಯಲ್ಲಿ ಬೈಕ್ ಸರ್ವೀಸ್ ಮುಗಿಸಿಕೊಂಡು ತಡರಾತ್ರಿ ಸ್ವಗ್ರಾಮಕ್ಕೆ ಮರಳುತ್ತಿದ್ದಾಗ ಭೀಕರ ಬೈಕ್ ಅಪಘಾತ ಸಂಭವಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ತಾಲೂಕಿನ ಬಿಸಗೋಡ ಗ್ರಾಮದ ಕೆಳಗಿನಪಾಲ ನಿವಾಸಿಯಾದ ವಿವೇಕ ದತ್ತಾತ್ರೇಯ ಭಟ್ಟ (25) ಮೃತಪಟ್ಟ ದುರ್ದೈವಿ ಯುವಕ.  ಯುವಕ ವಿವೇಕ ಭಟ್ಟ ತಮ್ಮ ಬೈಕ್ ಅನ್ನು ಸರ್ವಿಸಿಂಗ್‌ಗಾಗಿ ಶಿರಸಿಯ ಶೋರೂಮ್‌ಗೆ ನೀಡಿದ್ದರು. ಅಕ್ಟೋಬರ್ 17 ರಂದು ಶನಿವಾರ ಸಂಜೆ ಬೈಕ್ ತರಲೆಂದು ಅವರು ಬಸ್ ಹತ್ತಿ ಶಿರಸಿಗೆ ತೆರಳಿದ್ದರು. ಬೈಕ್ […] The post ಬೈಕ್ ಸರ್ವಿಸ್ ಮಾಡಿಸಿ ಮನೆಗೆ ಮರಳುತ್ತಿದ್ದಾಗ ಅಪಘಾತ: ಯುವಕ ಸ್ಥಳದಲ್ಲೇ ಸಾ*ವು appeared first on ONLINE.

ಮಾಹಿತಿ ಹಕ್ಕು ಅರ್ಜಿ ಸಲ್ಲಿಕೆ ಇನ್ಮುಂದೆ ಮತ್ತಷ್ಟು ಸುಲಭ: ‘ಸಕಾಲ’ ಸೇವೆಗೆ ಭೌತಿಕ ಆರ್‌ಟಿಐ ಅರ್ಜಿಗಳ ಸೇರ್ಪಡೆ, ಗ್ರಾಮ ಒನ್‌ನಲ್ಲೂ ಲಭ್ಯ

ಸುದ್ದಿದಿನ,​ಬೆಂಗಳೂರು: ನಾಗರಿಕರಿಗೆ ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯನ್ನು ಇನ್ನಷ್ಟು ಸುಲಭವಾಗಿ ಬಳಸಲು ಹಾಗೂ ವ್ಯವಸ್ಥೆಯಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ಕರ್ನಾಟಕ ಸರ್ಕಾರವು ಮಾನ್ಯ ಮುಖ್ಯಮಂತ್ರಿಯವರ ಅನುಮೋದನೆಯೊಂದಿಗೆ ಎರಡು ಪ್ರಮುಖ ಹಾಗೂ ನೂತನ ನಿರ್ಧಾರಗಳನ್ನು ಕೈಗೊಂಡಿದೆ. ಭೌತಿಕ ಆರ್‌ಟಿಐ ಅರ್ಜಿಗಳ ದಾಖಲಾತಿ ಈಗ ‘ಸಕಾಲ’ ಸೇವೆ ​ಅಂಚೆ ಅಥವಾ ಖುದ್ದಾಗಿ ಸಲ್ಲಿಸುವ ಭೌತಿಕ (ಕಾಗದದ ರೂಪದ) ಆರ್‌ಟಿಐ ಅರ್ಜಿಗಳನ್ನು ಸ್ವೀಕರಿಸಿದ ಸಾರ್ವಜನಿಕ ಪ್ರಾಧಿಕಾರವು 2 ದಿನಗಳ ಒಳಗಾಗಿ ಆರ್‌ಟಿಐ ಆನ್‌ಲೈನ್ ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ದಾಖಲಿಸಬೇಕು. ​ಇದನ್ನು ಕರ್ನಾಟಕ ಸಕಾಲ […]

ಸಿದ್ದರಾಮಯ್ಯ ಪರ ಬಿಎಸ್‌ವೈ ಬ್ಯಾಟಿಂಗ್: ಸ್ಟಿಂಗ್ ಆಪರೇಷನ್ ರಾಜಕೀಯದ ವಿರುದ್ಧ ಮಾಜಿ ಸಿಎಂ ಆಕ್ರೋಶ

ಹೊಸದಿಗಂತ ವರದಿ ದಾವಣಗೆರೆ: ಬಹುಮತದೊಂದಿಗೆ ಸುಸೂತ್ರವಾಗಿ ಆಡಳಿತ ನಡೆಸುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ವ್ಯವಸ್ಥಿತ ಪಿತೂರಿ ನಡೆಸಿ ಕೆಳಗಿಳಿಸಿದ್ದು, ಇದೀಗ ಅವರ ವಿರುದ್ಧವೇ ಸ್ಟಿಂಗ್ ಆಪರೇಷನ್ ನಡೆಸಿರುವುದರ ಹಿಂದಿನ ಉದ್ದೇಶವೇನು? ಎಂಬುದು ರಾಜ್ಯದ ಜನರಿಗೆ ಗೊತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಉತ್ತಮ ಆಡಳಿತ ನೀಡುತ್ತಿದ್ದರು. ಆದರೂ ಅವರನ್ನು ವ್ಯವಸ್ಥಿತವಾಗಿ ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನ ನಡೆಯಿತು. ಭವಿಷ್ಯದಲ್ಲಿ ಅವರು ಮತ್ತೆ ರಾಜಕೀಯವಾಗಿ ಪ್ರಬಲರಾಗಬಹುದು ಎಂಬ ಕಾರಣಕ್ಕೆ ಸ್ಟಿಂಗ್ […] The post ಸಿದ್ದರಾಮಯ್ಯ ಪರ ಬಿಎಸ್‌ವೈ ಬ್ಯಾಟಿಂಗ್: ಸ್ಟಿಂಗ್ ಆಪರೇಷನ್ ರಾಜಕೀಯದ ವಿರುದ್ಧ ಮಾಜಿ ಸಿಎಂ ಆಕ್ರೋಶ appeared first on ONLINE.

ಏಷ್ಯನ್ ಪ್ಯಾರಾ ಗೇಮ್ಸ್ 2026: ಭಾರತೀಯ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಜಪಾನ್‌ನ ಐಚಿ-ನಗೋಯಾದಲ್ಲಿ ಅದ್ಧೂರಿಯಾಗಿ ಚಾಲನೆ ಪಡೆದುಕೊಂಡಿರುವ 2026ರ ಏಷ್ಯನ್ ಪ್ಯಾರಾ ಗೇಮ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿರುವ ಭಾರತೀಯ ಕ್ರೀಡಾಪಟುಗಳ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಶುಭ ಹಾರೈಸಿದ್ದಾರೆ. ಕ್ರೀಡಾಪಟುಗಳ ಉತ್ಸಾಹ ಮತ್ತು ಛಲವು ದೇಶದ ಕೋಟ್ಯಂತರ ಜನರಿಗೆ ಪ್ರೇರಣೆಯಾಗಿದೆ ಎಂದು ಅವರು ಶ್ಲಾಘಿಸಿದ್ದಾರೆ. ಭಾನುವಾರ ಜಪಾನ್‌ನ ನಗೋಯಾದ ಪಲೋಮಾ ಮಿಜುಹೊ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ಆಟಗಾರ ಪ್ರಮೋದ್ ಭಗತ್ ಮತ್ತು ಓಟಗಾರ್ತಿ ಸಿಮ್ರಾನ್ ಶರ್ಮಾ ಅವರು ರಾಷ್ಟ್ರಧ್ವಜವನ್ನು […] The post ಏಷ್ಯನ್ ಪ್ಯಾರಾ ಗೇಮ್ಸ್ 2026: ಭಾರತೀಯ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಕೆ appeared first on ONLINE.

ನವರಾತ್ರ ನಮಸ್ಯಾ | ಶಿವ-ವಿಷ್ಣುವಿನ ಹೆಸರಿನಲ್ಲಿ ಜಗಳ ಸಲ್ಲ: ರಾಘವೇಶ್ವರ ಶ್ರೀ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಮೋಹವೆಂಬುದು ದೇವಿಯ ಮಾಯೆಯಾಗಿದ್ದು, ಮಾಯೆಯು ಎಲ್ಲವನ್ನೂ ಮರೆಸಿಬಿಡುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು. ಶ್ರೀಗಳು ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಶಾಖೆಯಲ್ಲಿ ನಡೆಯುತ್ತಿರುವ ‘ನವರಾತ್ರ ನಮಸ್ಯಾ’ ಕಾರ್ಯಕ್ರಮದಲ್ಲಿ ಭಾನುವಾರ ಲಲಿತೋಪಾಖ್ಯಾನ ಕುರಿತು ಪ್ರವಚನವನ್ನು ಅನುಗ್ರಹಿಸಿದರು. ಸಮುದ್ರ ಮಂಥನವಾಗಿ ಅಮೃತ ಬರುವ ಮೊದಲು ವಿಷವೂ ಬರಬಹುದು. ಅದನ್ನು ಸ್ವೀಕರಿಸಲು ನಂಜುಂಡನಾದ ಶಿವ ಬೇಕು. ಅಮೃತ ಬಂದಾಗ ಅದು ಅಸುರರಿಗೆ ಸಿಗದಿರಲು‌ ಮಹಾವಿಷ್ಣುವೂ ಬೇಕು. ದೇವರೂ ರಾಕ್ಷಸರು […] The post ನವರಾತ್ರ ನಮಸ್ಯಾ | ಶಿವ-ವಿಷ್ಣುವಿನ ಹೆಸರಿನಲ್ಲಿ ಜಗಳ ಸಲ್ಲ: ರಾಘವೇಶ್ವರ ಶ್ರೀ appeared first on ONLINE.

ಆರೆಸ್ಸೆಸ್ 101ನೇ ವರ್ಷಾಚರಣೆ: ಇಂದು ಬೆಳಗಾವಿಯಲ್ಲಿ ವಿಜಯದಶಮಿ ನಿಮಿತ್ತ ಭವ್ಯ ಪಥಸಂಚಲನ

ಹೊಸದಿಗಂತ ವರದಿ ಬೆಳಗಾವಿ:  ರಾಷ್ಟ್ರೀಯ ಸ್ವಯಂಸೇವಕ ಸಂಘದ 101ನೇ ವರ್ಷಾಚರಣೆ ಹಾಗೂ ವಿಜಯದಶಮಿ ನಿಮಿತ್ತ ಬೆಳಗಾವಿ ತಾಲೂಕು ಗ್ರಾಮಾಂತರ ವಿಭಾಗದ ವತಿಯಿಂದ ಭಾನುವಾರ ಹಿಂಡಲಗಾದ ಕಲ್ಲಮೇಶ್ವರ ದೇವಸ್ಥಾನದ ಆವರಣದಲ್ಲಿ ಭವ್ಯ ಪಥಸಂಚಲನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಂಗವಾಗಿ ಭಾರತ ಮಾತೆ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಡಾ. ಕೇಶವ ಬಲಿರಾಮ ಹೆಡಗೇವಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಧ್ವಜಾರೋಹಣ ನೆರವೇರಿಸುವ ಮೂಲಕ ಕರ್ನಲ್ ಮೋಹನ್ ನಾಯಕ ಹಾಗೂ ರಾಮಚಂದ್ರ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ […] The post ಆರೆಸ್ಸೆಸ್ 101ನೇ ವರ್ಷಾಚರಣೆ: ಇಂದು ಬೆಳಗಾವಿಯಲ್ಲಿ ವಿಜಯದಶಮಿ ನಿಮಿತ್ತ ಭವ್ಯ ಪಥಸಂಚಲನ appeared first on ONLINE.

ಅಂಕೋಲಾದಲ್ಲಿ ಕಡವೆ ಕೊಂ*ದು ಮಾಂಸ ಮಾಡುತ್ತಿದ್ದವರ ಮೇಲೆ ಅರಣ್ಯ ಇಲಾಖೆ ದಾಳಿ: ಓರ್ವ ಅರೆಸ್ಟ್‌

ಹೊಸದಿಗಂತ ವರದಿ ಅಂಕೋಲಾ: ವನ್ಯಜೀವಿ ಕಡವೆಯನ್ನು ಕೊಂದು ಅಡಿಕೆ ತೋಟವೊಂದರಲ್ಲಿ ಮಾಂಸ ಮಾಡಿ ಚೀಲದಲ್ಲಿ ತುಂಬುತ್ತಿರುವ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ದಾಳಿ ನಡೆಸಿ ಕಡವೆ ಮಾಂಸ ವಶಕ್ಕೆ ಪಡೆದುಕೊಂಡ ಘಟನೆ ತಾಲೂಕಿನ ರಾಮನಗುಳಿ ವಲಯ ಅರಣ್ಯ ವ್ಯಾಪ್ತಿಯ ಕಲ್ಲೇಶ್ವರ ಗ್ರಾಮದಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದ್ದು ಐದು ಜನರು ತಲೆಮರೆಸಿಕೊಂಡಿದ್ದಾರೆ. ಆರೋಪಿತ ಚೆನ್ನೆಮನೆ ಕಲ್ಲೇಶ್ವರ ನಿವಾಸಿ ನಾರಾಯಣ ಗುರಕ್ಯಾ ಸಿದ್ಧಿ(60)ಎಂಬಾತನನ್ನು ದಸ್ತಗಿರಿ ಮಾಡಲಾಗಿದ್ದು, ಇನ್ನುಳಿದ ಆರೋಪಿಗಳಾದ ಕನಕನಹಳ್ಳಿ ನಿವಾಸಿ ಗಣೇಶ ರಾಮು ರಾಠೋಡ(27)ಕಲ್ಲೇಶ್ವರ ನಿವಾಸಿಗಳಾದ […] The post ಅಂಕೋಲಾದಲ್ಲಿ ಕಡವೆ ಕೊಂ*ದು ಮಾಂಸ ಮಾಡುತ್ತಿದ್ದವರ ಮೇಲೆ ಅರಣ್ಯ ಇಲಾಖೆ ದಾಳಿ: ಓರ್ವ ಅರೆಸ್ಟ್‌ appeared first on ONLINE.

ನೋಯ್ಡಾದ ಒಂದೇ ಕುಟುಂಬದ 5 ಮಂದಿ ಸಾವಿನ ಕೇಸ್‌ಗೆ ಬಿಗ್ ಟ್ವಿಸ್ಟ್: ಡೆತ್‌ನೋಟ್ ಆಡಿಯೋದಲ್ಲಿ ಬಯಲಾಯ್ತು ರಹಸ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಶನಿವಾರ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಗ್ರೇಟರ್ ನೋಯ್ಡಾದ ಒಂದೇ ಕುಟುಂಬದ ಐವರ ನಿಗೂಢ ಸಾವಿನ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆರಂಭದಲ್ಲಿ ಇದು ಕೇವಲ ಆಹಾರ ಫುಡ್ ಪಾಯ್ಸನ್‌ನಿಂದ ಸಂಭವಿಸಿದ ಸಾವು ಎನ್ನಲಾಗಿತ್ತು. ಆದರೆ, ಮೃತನ ಮೊಬೈಲ್‌ನಲ್ಲಿ ಸಿಕ್ಕಿರುವ ಆಘಾತಕಾರಿ ವಾಯ್ಸ್ ನೋಟ್‌ನಿಂದ ಈಗ ಇಡೀ ಕಥೆಯನ್ನೇ ಬದಲಾಯಿಸಿದ್ದು, ಇದು ಸಾಮೂಹಿಕ ಆತ್ಮಹತ್ಯೆ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ರಬುಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಗ್ಲಾ ಶ್ರೀ ಪದಮ್ ಗ್ರಾಮದ ಮಹೇಶ್ […] The post ನೋಯ್ಡಾದ ಒಂದೇ ಕುಟುಂಬದ 5 ಮಂದಿ ಸಾವಿನ ಕೇಸ್‌ಗೆ ಬಿಗ್ ಟ್ವಿಸ್ಟ್: ಡೆತ್‌ನೋಟ್ ಆಡಿಯೋದಲ್ಲಿ ಬಯಲಾಯ್ತು ರಹಸ್ಯ appeared first on ONLINE.