Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಜ.13 ರಿಂದ ಮೆಕ್ಕೆಜೋಳ ನೋಂದಣಿ ಮತ್ತು ಖರೀದಿ ಕೇಂದ್ರ ಆರಂಭ

    2 days ago

    ದಾವಣಗೆರೆ ಜ.13 : 2025-26 ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತ ಬಂಧುಗಳು ಬೆಳೆದ ಉತ್ತಮ ಗುಣಮಟ್ಟದ (ಎಫ್.ಎ.ಕ್ಯೂ) ಮೆಕ್ಕೆಜೋಳವನ್ನು ಡಿಸ್ಪಲರಿಗಳಿಂದ ಹಾಗೂ ಕುಕ್ಕ ಟ ಆಹಾರ ಉತ್ಪದನಾ ಘಟಕಗಳಿಂದ ಬರುವ ಬೇಡಿಕೆಯನುಸಾರ ನೋಂದಾಯಿತ ರೈತರಿಂದ, ಬೆಳೆಯ ಗುಟ್ಟಮಟ್ಟವನ್ನು ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಪರಿಶೀಲಿಸಿದ ನಂತರ ರೈತರಿಂದ ಮೆಕ್ಕೆಜೋಳ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದ್ದಾರೆ. ಮೆಕ್ಕೆಜೋಳವನ್ನು ಜನವರಿ 13 ರಿಂದ ಖರೀದಿಸಲು ಪ್ರಾರಂಭಿಸಲಾಗಿದೆ, ರೈತರು ಪ್ರಾಥಮಿಕ ಕೃಷಿ ಷತ್ತಿನ […]

    ದಾವಣಗೆರೆ ಜ.13 : 2025-26 ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತ ಬಂಧುಗಳು ಬೆಳೆದ ಉತ್ತಮ ಗುಣಮಟ್ಟದ (ಎಫ್.ಎ.ಕ್ಯೂ) ಮೆಕ್ಕೆಜೋಳವನ್ನು ಡಿಸ್ಪಲರಿಗಳಿಂದ ಹಾಗೂ ಕುಕ್ಕ ಟ ಆಹಾರ ಉತ್ಪದನಾ ಘಟಕಗಳಿಂದ ಬರುವ ಬೇಡಿಕೆಯನುಸಾರ ನೋಂದಾಯಿತ ರೈತರಿಂದ, ಬೆಳೆಯ ಗುಟ್ಟಮಟ್ಟವನ್ನು ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಪರಿಶೀಲಿಸಿದ ನಂತರ ರೈತರಿಂದ ಮೆಕ್ಕೆಜೋಳ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದ್ದಾರೆ.

    ಮೆಕ್ಕೆಜೋಳವನ್ನು ಜನವರಿ 13 ರಿಂದ ಖರೀದಿಸಲು ಪ್ರಾರಂಭಿಸಲಾಗಿದೆ, ರೈತರು ಪ್ರಾಥಮಿಕ ಕೃಷಿ ಷತ್ತಿನ ಸಹಕಾರ ಸಂಘ , ಅವರಗೆರೆ ಮೊ.ಸಂ. 7090052888 ಇಲ್ಲಿ ನೊಂದಾಯಿಸಕೊಳ್ಳಬಹುದು, ಎಪಿಎಂಸಿ ಆವರಣ ದಾವಣಗೆರೆ ಇಲ್ಲಿ ಖರೀದಿಸಲಾಗುವುದು.

    seem1 dinamaana ads

    ಪ್ರಸ್ತುತ ಕುಕ್ಕಟ ಆಹಾರ ಉತ್ಪಾದನಾ ಘಟಕ ಇವರ ಬೇಡಿಕೆ 335 ಮೆಟ್ರಿಕ್ ಟನ್‌ಗೆ ಸೀಮಿತಗೊಳಿಸಲಾಗಿದೆ. ಸದರಿ ಬೇಡಿಕೆ ಪೂರೈಸುವವವರೆಗೆ ಮೆಕ್ಕೆಜೋಳವನ್ನು ಖರೀದಿಸಲಾಗುತ್ತದೆ. ಮೊದಲು ಬಂದ ರೈತರಿಗೆ ಆದ್ಯತೆ ನೀಡಿ ಸದರಿ ರೈತರಿಂದ ಮೆಕ್ಕೆಜೋಳವನ್ನು ಖರೀದಿಸಲಾಗುವುದು.

    ರೈತರಿಂದ ಪ್ರತಿ ಎಕರೆಗೆ 12 ಕ್ವಿಂಟಾಲ್ ಗಳಂತೆ ಗರಿಷ್ಠ 50 ಕ್ವಿಂಟಾಲ್ ಮೆಕ್ಕೆಜೋಳವನ್ನು ಖರೀದಿಸಲಾಗುವುದು. ಹಾಗೂ ನಂತರದ ಅವಧಿಯಲ್ಲಿ ಡಿಸ್ಟಲರಿಗಳಿಂದ ಹಾಗೂ ಕುಕ್ಕಟ ಆಹಾರ ಉತ್ಪಾದನಾ ಘಟಕಗಳಿಂದ ಬೇಡಿಕೆ ಬಂದಲ್ಲಿ ಅದರಂತೆ ಮೆಕ್ಕೆಜೋಳವನ್ನು ಖರೀದಿಸಲಾಗುವುದು, ರೈತರು ಫ್ರೂಟ್ಸ್ ಗುರುತಿನ ಸಂಖ್ಯೆಯೊಂದಿಗೆ ಎನ್.ಇ.ಎಂ.ಎಲ್ ತಂತ್ರಾಂಶದ ಮೂಲಕ ನೋಂದಣಿಯನ್ನು ಬಯೋಮೆಟ್ರಿಕ್ ಸಾಧನದ ಮೂಲಕ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.

    Read also : ಯುವಜನರಲ್ಲಿ ಆರೋಗ್ಯ ಅರಿವು, ಸಾಮಾಜಿಕ ಹೊಣೆಗಾರಿಕೆ ಅವಶ್ಯ : ಡಾ.ಬಿ.ಡಿ.ಮುರುಳಿಧರ

    ಫ್ರೂಟ್ಸ್ ದತ್ತಾಂಶದಲ್ಲಿ ರೈತರು ನೀಡಿರುವ ಬ್ಯಾಂಕ್ ಖಾತೆ ಸಂಖ್ಯೆ ಮುಖಾಂತರ ನೇರವಾಗಿ ಖಾತೆಗೆ ಹಣ ಸಂದಾಯ ಮಾಡಲಾಗುವುದು. ಆದ್ದರಿಂದ ರೈತರು ಫ್ರೂಟ್ಸ್ ದತ್ತಾಂಶದಲ್ಲಿ ದಾಖಲಿಸಿರುವ ತಮ್ಮ ಬ್ಯಾಂಕ್ ಖಾತೆಯನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಣೆಯಾಗಿರುವುದನ್ನು ಹಾಗೂ ಎಲ್ಲಾ ದಾಖಲೆಗಳಲ್ಲಿಯೂ ಒಂದೇ ಹೆಸರು ನಮೂದಾಗಿರುವ ಬಗ್ಗೆ ಮತ್ತು ಎನ್.ಸಿ,ಪಿ.ಐ ಮ್ಯಾಪಿಂಗ್ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು.

    ಮಾರಾಟಕ್ಕೆ ಬಂದ ಸಮಯದಲ್ಲಿ ಆಧಾರ್ ಕಾರ್ಡ್, ಪಹಣಿ ಮತ್ತು ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಗಳನ್ನು ಕಡ್ಡಾಯವಾಗಿ ನೋಂದಣಾಧಿಕಾರಿಗಳಿಗೆ ನೀಡತಕ್ಕದ್ದು. ರೈತರು ತರುವ ಮೆಕ್ಕೆಜೋಳದ ಉತ್ಪನ್ನದಲ್ಲಿ ತೇವಾಂಶ ಶೇ.12 ಹಾಗೂ ಇತರೆ ಪದಾರ್ಥಗಳು ಶೇ.4.5 ಮಾತ್ರ ಇರತಕ್ಕದ್ದು.

    ಖರೀದಿಗೆ ಸಂಬಂಧಿಸಿದ ಯಾವುದೇ ದೂರುಗಳನ್ನು ತಹಶೀಲ್ದಾರರು, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ನಿಯಮಿತದ ಅಧಿಕಾರಿಗಳ ಗಮನಕ್ಕೆ ತರಬಹುದು.

    ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 7090052888 ಹಾಗೂ 9449864439 ಸಂಪರ್ಕಿಸಲು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    job news dinamaana ads
    Click here to Read More
    Previous Article
    ಕಾವ್ಯ ಬಗ್ಗೆ ಅಚ್ಚರಿ ಹೇಳಿಕೆ! ರಾಶಿಕಾ ಶೆಟ್ಟಿ ಪ್ರಕಾರ ಮನೆಯಲ್ಲಿ ಯಾಱರು ಹೆಂಗೆಂಗೆ..?
    Next Article
    ಶೋಷಿತ ಸಮಾಜದ ಪ್ರತಿಭೆಗಳಿಗೆ ಸರಕಾರ, ಸಮಾಜದ ಪ್ರೋತ್ಸಾಹ ಅಗತ್ಯ: ಡಾ.ವಿಜಯ ಬಲ್ಲಾಳ್

    Related ತಾಜಾ ಸುದ್ದಿ Updates:

    Are you sure? You want to delete this comment..! Remove Cancel

    Comments (0)

      Leave a comment