We use cookies to ensure you get the best experience on our website. By continuing to use our site, you accept our use of cookies,
Privacy Policy,
and
Terms of Service.
ABS Mandatory for Two-Wheelers Shimoga | ಇನ್ನುಮುಂದೆ ತಯಾರಾಗುವ ಎಲ್ಲಾ ದ್ವಿಚಕ್ರ ವಾಹನಗಳಿಗೆ ಆ್ಯಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರಕಟಿಸಿದ್ದಾರೆ. ಈ ಹಿಂದೆ 125 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯದ ವಾಹನಗಳಿಗೆ ಮಾತ್ರ ಸೀಮಿತವಾಗಿದ್ದ ಈ ನಿಯಮವನ್ನು ಈಗ ಎಲ್ಲಾ ದ್ವಿಚಕ್ರ ವಾಹನಗಳಿಗೂ ವಿಸ್ತರಿಸಲಾಗಿದೆ. ಇದರೊಂದಿಗೆ, ಹೊಸ ವಾಹನ ಖರೀದಿಸುವ ಗ್ರಾಹಕರಿಗೆ ಬಿಐಎಸ್ ಪ್ರಮಾಣೀಕೃತ ಎರಡು ಹೆಲ್ಮೆಟ್‌ಗಳನ್ನು ನೀಡುವುದನ್ನು ಸಹ ಕಡ್ಡಾಯಗೊಳಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಶಿವಮೊಗ್ಗ: ಬಾಗಿಲು […]
ABS Mandatory for Two-Wheelers Shimoga | ಇನ್ನುಮುಂದೆ ತಯಾರಾಗುವ ಎಲ್ಲಾ ದ್ವಿಚಕ್ರ ವಾಹನಗಳಿಗೆ ಆ್ಯಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರಕಟಿಸಿದ್ದಾರೆ. ಈ ಹಿಂದೆ 125 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯದ ವಾಹನಗಳಿಗೆ ಮಾತ್ರ ಸೀಮಿತವಾಗಿದ್ದ ಈ ನಿಯಮವನ್ನು ಈಗ ಎಲ್ಲಾ ದ್ವಿಚಕ್ರ ವಾಹನಗಳಿಗೂ ವಿಸ್ತರಿಸಲಾಗಿದೆ. ಇದರೊಂದಿಗೆ, ಹೊಸ ವಾಹನ ಖರೀದಿಸುವ ಗ್ರಾಹಕರಿಗೆ ಬಿಐಎಸ್ ಪ್ರಮಾಣೀಕೃತ ಎರಡು ಹೆಲ್ಮೆಟ್‌ಗಳನ್ನು ನೀಡುವುದನ್ನು ಸಹ ಕಡ್ಡಾಯಗೊಳಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಜನವರಿ 1, 2026ರಿಂದಲೇ ಈ ರೂಲ್ ಅಪ್ಲೆ ಆಗಲಿದೆ ಅಂತಾ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ. 2019 ರಿಂದ 2023ರ ಅವಧಿಯಲ್ಲಿ ಸಂಭವಿಸಿದ ದ್ವಿಚಕ್ರ ವಾಹನ ಅಪಘಾತಗಳಲ್ಲಿ ದೇಶಾದ್ಯಂತ ಒಟ್ಟು 3.35 ಲಕ್ಷ ಮಂದಿ ಜೀವ ಕಳೆದುಕೊಂಡಿದ್ದಾರೆ. ಕಳೆದ 2023ರಲ್ಲಿ 77,539 ಸವಾರರು ಮೃತಪಟ್ಟಿದ್ದು, ಈ ಪೈಕಿ ಶೇ.50 ರಷ್ಟು ಮಂದಿ ಹೆಲ್ಮೆಟ್ ಧರಿಸಿರಲಿಲ್ಲ ಎಂಬುದು ವರದಿಯಾಗಿದೆ. ದೇಶದ ಒಟ್ಟು ರಸ್ತೆ ಅಪಘಾತಗಳಲ್ಲಿ ದ್ವಿಚಕ್ರ ವಾಹನಗಳ ಪಾಲು 2014ರಲ್ಲಿ ಶೇ.30 ರಷ್ಟಿದ್ದರೆ, 2023ರ ವೇಳೆಗೆ ಅದು ಶೇ.45ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಚಾಲಕರ ಸುರಕ್ಷತೆಗಾಗಿ ಖಚಿತಪಡಿಸಲು ವಾಹನಗಳ ತಂತ್ರಜ್ಞಾನದಲ್ಲಿ ಸುಧಾರಣೆ ಹಾಗೂ ಕಡ್ಡಾಯ ಹೆಲ್ಮೆಟ್ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ಗಡ್ಕರಿ ತಿಳಿಸಿದ್ದಾರೆ.
ದ್ವಿಚಕ್ರ ವಾಹನಗಳಿಗೆ ಎಬಿಎಸ್ ಮತ್ತು 2 ಹೆಲ್ಮೆಟ್ ಕಡ್ಡಾಯ: ಸಚಿವ ನಿತಿನ್ ಗಡ್ಕರಿ | ABS Mandatory for Two-Wheelers
ಏನಿದು ಎಬಿಎಸ್
ಎಬಿಎಸ್ ಎಂದರೆ ವಾಹನಗಳ ಬ್ರೇಕಿಂಗ್ ವ್ಯವಸ್ಥೆಯಲ್ಲಿ ಬಳಸುವ ಒಂದು ಅತ್ಯಾಧುನಿಕ ಸುರಕ್ಷತಾ ತಂತ್ರಜ್ಞಾ. ವೇಗವಾಗಿ ಹೋಗುತ್ತಿರುವಾಗ ಹಠಾತ್ ಬ್ರೇಕ್ ಹಾಕಿದ ಸಂದರ್ಬದಲ್ಲಿ ವೆಹಿಕಲ್ನ ವೀಲ್ಗಳು ಲಾಕ್ ಆಗುತ್ತವೆ. ಆಗ ಟಯರ್ಗಳು ಸ್ಕಿಡ್ ಆಗಿ ಗಾಡಿ ಪಲ್ಟಿಯಾಗುತ್ತವೆ. ಆದರೆ ಎಬಿಎಸ್ ಅಳವಡಿಸಿದ ವಾಹನಗಳಲ್ಲಿ, ಬ್ರೇಕ್ ಹಾಕಿದಾಗ ಈ ಸಿಸ್ಟಮ್ ಚಕ್ರಗಳು ಸಂಪೂರ್ಣವಾಗಿ ನಿಲ್ಲದಂತೆ ಸೆಕೆಂಡಿಗೆ ಹಲವು ಬಾರಿ ಬ್ರೇಕ್ ಅನ್ನು ಬಿಟ್ಟು ಬಿಟ್ಟು ಹಿಡಿಯುತ್ತದೆ. ಇದರಿಂದ ವೀಲ್ಹ್ ಲಾಕ್ ಆಗುವುದಿಲ್ಲ ಮತ್ತು ಚಾಲಕನಿಗೆ ವಾಹನವನ್ನು ತಿರುಗಿಸಲುಅವಕಾಶ ಸಿಗುತ್ತದೆ, ಇದರಿಂದ ಅಪಘಾತಗಳನ್ನು ತಪ್ಪಿಸಬಹುದು.
ದ್ವಿಚಕ್ರ ವಾಹನಗಳಿಗೆ ಎಬಿಎಸ್ ಮತ್ತು 2 ಹೆಲ್ಮೆಟ್ ಕಡ್ಡಾಯ: ಸಚಿವ ನಿತಿನ್ ಗಡ್ಕರಿ | ABS Mandatory for Two-Wheelers