ಕರ್ನಾಟಕದಲ್ಲಿ ತಂಬಾಕು ಬೆಳೆಯುತ್ತಿರುವ ಬೆಳೆಗಾರರ ರಕ್ಷಣೆ ಕೇಂದ್ರ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸುವಂತೆ ಆಗ್ರಹಿಸಿ ಮಂಡ್ಯದಲ್ಲಿ ಕರ್ನಾಟಕ ರಾಜ್ಯ ರೈತಸಂಘ ಜಿಲ್ಲಾ ಘಟಕದ ವತಿಯಿಂದ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದರು ಸೋಮವಾರ ಪ್ರತಿಭಟನೆ ನಡೆಸಲಾಯಿತು. ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ನೇತೃತ್ವದಲ್ಲಿ ಹೋರಾಟ ನಡೆಸಿದ ರೈತಸಂಘದ ಕಾರ್ಯಕರ್ತರು, ಕರ್ನಾಟಕ ತಂಬಾಕು ಉತ್ಪಾದನೆಯ ಅಂಕಿ-ಅಂಶಗಳನ್ನು ಪರಿಶೀಲಿಸಿ ನೋಡಿದಾಗ ಕಳೆದ 5 ವರ್ಷಗಳಲ್ಲಿ ತಂಬಾಕು ಉತ್ಪಾದನೆ ಪ್ರಮಾಣ ಅತ್ಯಂತ ಕಡಿಮೆಯಾಗಿದ್ದು ಈ ಸಂದರ್ಭದಲ್ಲೂ 100 ಮಿಲಿಯನ್ ಕೆ.ಜಿ. ದಾಟಿರುವುದಿಲ್ಲ. 2023-2024 ಮತ್ತು […]
The post ತಂಬಾಕು ಬೆಳೆಗಾರರ ರಕ್ಷಣೆಗೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಲಿ : ರೈತಸಂಘದ ಆಗ್ರಹ appeared first on nudikarnataka.
ಕರ್ನಾಟಕದಲ್ಲಿ ತಂಬಾಕು ಬೆಳೆಯುತ್ತಿರುವ ಬೆಳೆಗಾರರ ರಕ್ಷಣೆ ಕೇಂದ್ರ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸುವಂತೆ ಆಗ್ರಹಿಸಿ ಮಂಡ್ಯದಲ್ಲಿ ಕರ್ನಾಟಕ ರಾಜ್ಯ ರೈತಸಂಘ ಜಿಲ್ಲಾ ಘಟಕದ ವತಿಯಿಂದ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ನೇತೃತ್ವದಲ್ಲಿ ಹೋರಾಟ ನಡೆಸಿದ ರೈತಸಂಘದ ಕಾರ್ಯಕರ್ತರು, ಕರ್ನಾಟಕ ತಂಬಾಕು ಉತ್ಪಾದನೆಯ ಅಂಕಿ-ಅಂಶಗಳನ್ನು ಪರಿಶೀಲಿಸಿ ನೋಡಿದಾಗ ಕಳೆದ 5 ವರ್ಷಗಳಲ್ಲಿ ತಂಬಾಕು ಉತ್ಪಾದನೆ ಪ್ರಮಾಣ ಅತ್ಯಂತ ಕಡಿಮೆಯಾಗಿದ್ದು ಈ ಸಂದರ್ಭದಲ್ಲೂ 100 ಮಿಲಿಯನ್ ಕೆ.ಜಿ. ದಾಟಿರುವುದಿಲ್ಲ. 2023-2024 ಮತ್ತು 2024-2025ನೇ ಬೆಳೆ ಸಾಲುಗಳಲ್ಲಿ ಕ್ರಮವಾಗಿ 88 ಮಿಲಿಯನ್ ಕೆ.ಜಿ. ಮತ್ತು 84 ಮಿಲಿಯನ್ ಕೆ.ಜಿ. ಗಳಿತ್ತು. ಪ್ರಸ್ತುತ ವರ್ಷ ಕೇವಲ 80 ಮಿಲಿಯನ್ ಕೆ.ಜಿಗೆ ಅಂದಾಜು ಮಾಡಲಾಗಿದ್ದು 20 ಮಿಲಿಯನ್ ಕೆ.ಜಿ. ತಂಬಾಕು ಮಂಡಳಿಯು ನಿಗದಿ ಪಡಿಸುವ ಬೆಳೆಯ ಪ್ರಮಾಣ ಕಡಿಮೆ ಇದೆ ಎಂದರು.
2025-26 ನೇ ಸಾಲಿನಲ್ಲಿ ತಂಬಾಕು ಮಂಡಳಿಯು ತಂಬಾಕು ಬೆಳೆಗಾರರಿಗೆ ಗರಿಷ್ಠ 100 ಮಿಲಿಯನ್ ಕೆ.ಜಿ. ತಂಬಾಕು ಬೆಳೆಯಲು ಅನುಮತಿ ನೀಡಿತ್ತು. ಆದರೆ ಮೇ, ಜೂನ್ ಮತ್ತು ಜುಲೈ ತಿಂಗಳಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ತಂಬಾಕು ಉತ್ಪಾದನೆಗೆ ಹಿನ್ನೆಡೆ ಉಂಟಾಯಿತು. ಪರಿಣಾಮವಾಗಿ ಈಗ ಕೇವಲ 80 ರಿಂದ 85 ಮಿಲಿಯನ್ ಕೆ.ಜಿ. ತಂಬಾಕನ್ನು ಉತ್ಪಾದಿಸುವ ಆಶಾಭಾವನೆ ಹೊಂದಿದೆ. ಕರ್ನಾಟಕ ತಂಬಾಕು ಬೆಳೆಗಾರರಲ್ಲಿ ಹೆಚ್ಚಿನವರು ಸಣ್ಣ ರೈತರು ಮತ್ತು ಮಧ್ಯಮ ವರ್ಗದ ಬೆಳೆಗಾರರಾಗಿರುತ್ತಾರೆ. ಮತ್ತು ಇವರು 2 ರಿಂದ 3 ಹೆಕ್ಟೇರ್‌ಗಿಂತ ಕಡಿಮೆ ಜಮೀನು ಹೊಂದಿದವರಾಗಿರುತ್ತಾರೆ. ಮೈಸೂರು ವಲಯದಲ್ಲಿ ಹುಣಸೂರು, ಪಿರಿಯಾಪಟ್ಟಣ, ರಾಮನಾಥಪುರ ಮತ್ತು ಹೆಚ್.ಡಿ.ಕೋಟೆ ಹಾಗೂ ಮೂರು ಮುಖ್ಯ ಜಿಲ್ಲೆಗಳಾದ ಮೈಸೂರು, ಹಾಸನ ಮತ್ತು ಚಾಮರಾಜನಗರಗಳಲ್ಲಿ ತಂಬಾಕು ಬೆಳೆಯಲಾಗುತ್ತದೆ. ಈ ಭಾಗದಲ್ಲಿ 40,000 ಕ್ಕೂ ಹೆಚ್ಚಿನ ನೊಂದಾಯಿತ ತಂಬಾಕು ಬೆಳೆಗಾರರು ಅಂದಾಜು 50,000 ಬ್ಯಾರನ್‌ಗಳನ್ನು ಹೊಂದಿದ್ದು ಸುಮಾರು 65,000 ಹೆಕ್ಟೇರ್ ಪ್ರದೇಶದಲ್ಲಿ ತಂಬಾಕು ಬೆಳೆಯುತ್ತಿದ್ದಾರೆ. ಈ ವಲಯದಲ್ಲಿ ತಂಬಾಕು ಬೆಳೆ ಮಾತ್ರವೇ ದೀರ್ಘಕಾಲದಿಂದ ಮುಂದುವರೆದುಕೊಂಡು ಬಂದಿರುವ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಜೊತೆಗೆ ಪಂಪುಸೆಟ್ ಹಾಗೂ ಮಳೆ ಆಧಾರಿತ ಹವಾಮಾನದಲ್ಲಿ ಬೆಳೆಯಲಾಗುತ್ತಿದೆ. ತಂಬಾಕು ಬೆಳೆಗೆ ಸರಿಸಮಾನವಾದ ಆದಾಯ ತರುವ ಬೇರೆ ಯಾವುದೇ ಬೆಳೆಗಳಿಲ್ಲ ಒಟ್ಟಾರೆ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಮೇಲೆ ಈ ಅಂಶಗಳು ಪರಿಣಾಮ ಬೀರುತ್ತವೆ ಎಂದು ತಿಳಿಸಿದರು.
ಕರ್ನಾಟಕ ತಂಬಾಕನ್ನು ಖರೀದಿಸುವ ಕಂಪನಿಗಳು ತುಂಬಾ ಕಡಿಮೆ ಸರಬರಾಜು ಮಾಡುತ್ತಿವೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕರ್ನಾಟಕ ತಂಬಾಕಿಗೆ ಉತ್ತಮ ಭವಿಷ್ಯ ಮತ್ತು ಬೇಡಿಕೆ ಇರುವುದರಿಂದ ಕಂಪನಿಗಳು ಕರ್ನಾಟಕ ತಂಬಾಕನ್ನು ಹೆಚ್ಚಿನ ಬೆಲೆಗೆ ಖರೀದಿಸಬೇಕು. ಕರ್ನಾಟಕ ತಂಬಾಕಿಗೆ ವಿಶೇಷವಾದ ಬೇಡಿಕೆ ಇರಲು ಕಾರಣ ಅದರಲ್ಲಿ ಇರುವ ಉತ್ತಮ ರೀತಿಯ ಹಾಗೂ ಆದರ್ಶ ಆಯಿಲ್ ನಿಕೋಟಿನ್ ಅಂಶ ಹಾಗೂ ಅತ್ಯಲ್ಪ ಕಡಿಮೆ ಕ್ಲೋರೈಡ್ ಅಂಶವಾಗಿದೆ.
2022-2023, 2023-2024 ಮತ್ತು 2024-2025ನೇ ಸಾಲುಗಳಲ್ಲಿ ಆಂಧ್ರಪ್ರದೇಶದ ತಂಬಾಕು ಉತ್ಪಾದನೆ ಪ್ರಮಾಣ ಕ್ರಮವಾಗಿ 181 ಮಿಲಿಯನ್ ಕೆ.ಜಿ, 215 ಮಿಲಿಯನ್ ಕೆ.ಜಿ, 240 ಮಿಲಿಯನ್ ಕೆ.ಜಿ ಗಳಾಗಿದ್ದು, ತಂಬಾಕು ಮಂಡಳಿಯು ನಿಗದಿ ಪಡಿಸಿದ್ದು, ಅದರಂತೆ ಬೆಳೆಗಿಂತ ಹೆಚ್ಚು ಉತ್ಪಾದನೆ ಕಂಡು ಬಂದಿದೆ. ಆದ್ದರಿಂದ ತಂಬಾಕು ನಿಯಮಗಳಲ್ಲಿ ಪ್ರಮುಖವಾದ ಬದಲಾವಣೆ ತರುವುದು ಅತಿಮುಖ್ಯವಾಗಿದೆ. ತಂಬಾಕು ಮಂಡಳಿಯು ರೈತರ ಹಿತವನ್ನು ಕಾಪಾಡಲು ಬೆಳೆ ನಿಯಂತ್ರಣದ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಹಾಗೂ ಅಧಿಕ ಉತ್ಪಾದಕ ತಂಬಾಕಿಗೆ ವೈಜ್ಞಾನಿಕ ರೀತಿಯಲ್ಲಿ ದಂಡವನ್ನು ವಿಧಿಸಬೇಕಾಗಿದೆ ಎಂದು ಆಗ್ರಹಿಸಿದರು.
ಆಂಧ್ರಪ್ರದೇಶದ ಅಧಿಕ ಉತ್ಪಾದನೆ ಈ ಸಾಲಿನಲ್ಲಿ ಅಂದರೆ 2024-25 ರಲ್ಲಿ 74 ಮಿಲಿಯನ್ ಕೆಜಿಯಾಗಿದ್ದು, ಇದು ಕರ್ನಾಟಕದ ಉತ್ಪಾದನೆಗಿಂತ ಕೇವಲ 6-8 ಮಿಲಿಯನ್ ಕೆಜಿಯಷ್ಟೇ ಕಡಿಮೆ ಇದೆ. ತಂಬಾಕು ಖರೀದಿಸುವ ಕಂಪೆನಿಗಳು ಆಂಧ್ರಪ್ರದೇಶದ ಒಟ್ಟು ಉತ್ಪಾದನೆಗೆ ಸರಾಸರಿ ಬೆಲೆಯನ್ನು ಕರ್ನಾಟಕದ ರೈತರಿಗೆ ತಿಳಿಸಿ, ಕಡಿಮೆ ದರ ನೀಡುತ್ತಿರುವುದು ದುರಂತವಾಗಿದೆ. ಆಂಧ್ರಪ್ರದೇಶದ ರಾಜಮಂಡ್ರಿ ಪ್ರದೇಶದಲ್ಲಿನ ಎನ್.ಎಲ್.ಎಸ್. ತಂಬಾಕಿಗೆ ಹೆಚ್ಚು ದರವನ್ನು ಪಾವತಿಸಿ, ಗರಿಷ್ಟ ಬೆಲೆ ರೂ: 455/- ಹಾಗೂ ಒಂಗೋಲ್ ಪ್ರದೇಶದ ತಂಬಾಕಿಗೆ ಗರಿಷ್ಠ ಬೆಲೆ ರೂ:357/- ನೀಡಿ ಅಧಿಕ ಪ್ರಮಾಣ ತಂಬಾಕು ಖರೀದಿಸಲಾಗಿದೆ. ಆದರೆ 2025-26 ನೇ ಪ್ರಸಕ್ತ ಸಾಲಿನಲ್ಲಿ ಕೇವಲ ರೂ:320/- ಗರಿಷ್ಠ ಬೆಲೆಯಷ್ಟೇ ನಿಗದಿ ಪಡಿಸಿ, ಬೆಲೆ ಹೆಚ್ಚಿಸುವಲ್ಲಿ ಆಸಕ್ತಿ ತೋರುತ್ತಿಲ್ಲ. ಇದರಿಂದ ಕರ್ನಾಟಕದ ರೈತರಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ಪ್ರಸ್ತುತ ತಂಬಾಕು ಹರಾಜಿನಲ್ಲಿ ಕರ್ನಾಟಕದ ಬೆಳೆಗಾರರಿಗೆ ಉತ್ತಮ ವೈಜ್ಞಾನಿಕ ಬೆಲೆಯನ್ನು ನಿಗದಿ ಪಡಿಸಬೇಕೆಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಕಚೇರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆ ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್. ಕೆಂಪೂಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎಸ್. ಲಿಂಗಪ್ಪಾಜಿ, ಕೋಶಾಧ್ಯಕ್ಷ ಎಸ್.ಕೆ. ರವಿಕುಮಾರ್, ಎಸ್.ಬಿ.ಕೃಷ್ಣೇಗೌಡ, ಯೋಗಣ್ಣ, ರಮೇಶ್, ಪ್ರದೀಪ್ ಗೌಡ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
The post ತಂಬಾಕು ಬೆಳೆಗಾರರ ರಕ್ಷಣೆಗೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಲಿ : ರೈತಸಂಘದ ಆಗ್ರಹ appeared first on nudikarnataka.
Previous Article
ಇರಾಕ್, ಅಮೇರಿಕಾದಿಂದ ಭದ್ರತೆ ಕರೆಸಿಕೊಳ್ಳಾದಾದ್ರೆ ನೀವೇನ್ ದನ ಕಾಯೋಕೆ ಇದ್ದೀರಾ- ಕೇಂದ್ರ ಸಚಿವ HDK ಕಿಡಿ
Next Article
ಬಳ್ಳಾರಿ ಗಲಾಟೆ ಕೇಸ್ : ಸಿಐಡಿ, ನ್ಯಾಯಾಂಗ ತನಿಖೆ ಬಗ್ಗೆ ನಾಳೆ ತೀರ್ಮಾನ-ಸಿಎಂ ಸಿದ್ದರಾಮಯ್ಯ