Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ನಿಟ್ಟೆ: ಪ್ರಾಯೋಗಿಕ ಕಂಪ್ಯೂಟರ್ ನೆಟ್‌ವರ್ಕಿಂಗ್ ಎಫ್‌ಡಿಪಿ

    1 week ago

    ನಿಟ್ಟೆ, ಜ.6: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಅಡ್ವಾನ್ಸ್‌ಡ್ ಕಮ್ಯುನಿಕೇಶನ್ ಟೆಕ್ನಾಲಜಿ ವಿಭಾಗವು ಪ್ರಾಯೋಗಿಕ ಕಂಪ್ಯೂಟರ್ ನೆಟ್‌ವರ್ಕಿಂಗ್ ಮತ್ತು GNS3 ಆಧಾರಿತ ನೆಟ್‌ವರ್ಕ್ ಸಿಮ್ಯುಲೇಷನ್ ವಿಷಯದ ಮೇಲೆ ಮೂರು ದಿನಗಳ ಫ್ಯಾಕಲ್ಟಿ ಡೆವಲಪ್ಮೆಂಟ್ ಪ್ರೋಗ್ರಾಂ (ಎಫ್‌ಡಿಪಿ)ನ್ನು ಆಯೋಜಿಸಿತು. ಈ ಎಫ್‌ಡಿಪಿಯ ಉದ್ದೇಶ ಕಂಪ್ಯೂಟರ್ ನೆಟ್‌ವರ್ಕಿಂಗ್, ರೌಟಿಂಗ್ ಮತ್ತು ಸ್ವಿಚಿಂಗ್, ನೆಟ್‌ವರ್ಕ್ ಸೇವೆಗಳು ಹಾಗೂ ಕೈಗಾರಿಕಾ ಅವಶ್ಯಕತೆಗಳಿಗೆ ತಕ್ಕ ಸಾಧನಗಳ ಮೂಲಕ ಸಿಮ್ಯುಲೇಷನ್ ವಿಷಯಗಳಲ್ಲಿ ಅಧ್ಯಾಪಕರ ತಾತ್ವಿಕ ಅರಿವು ಮತ್ತು ಪ್ರಾಯೋಗಿಕ ಕೌಶಲ್ಯಗಳನ್ನು ಬಲಪಡಿಸುವುದಾಗಿತ್ತು. ಬೆಂಗಳೂರಿನ […]

    The post ನಿಟ್ಟೆ: ಪ್ರಾಯೋಗಿಕ ಕಂಪ್ಯೂಟರ್ ನೆಟ್‌ವರ್ಕಿಂಗ್ ಎಫ್‌ಡಿಪಿ appeared first on Namma Udupi Bulletin.



    ನಿಟ್ಟೆ, ಜ.6: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಅಡ್ವಾನ್ಸ್‌ಡ್ ಕಮ್ಯುನಿಕೇಶನ್ ಟೆಕ್ನಾಲಜಿ ವಿಭಾಗವು ಪ್ರಾಯೋಗಿಕ ಕಂಪ್ಯೂಟರ್ ನೆಟ್‌ವರ್ಕಿಂಗ್ ಮತ್ತು GNS3 ಆಧಾರಿತ ನೆಟ್‌ವರ್ಕ್ ಸಿಮ್ಯುಲೇಷನ್ ವಿಷಯದ ಮೇಲೆ ಮೂರು ದಿನಗಳ ಫ್ಯಾಕಲ್ಟಿ ಡೆವಲಪ್ಮೆಂಟ್ ಪ್ರೋಗ್ರಾಂ (ಎಫ್‌ಡಿಪಿ)ನ್ನು ಆಯೋಜಿಸಿತು. ಈ ಎಫ್‌ಡಿಪಿಯ ಉದ್ದೇಶ ಕಂಪ್ಯೂಟರ್ ನೆಟ್‌ವರ್ಕಿಂಗ್, ರೌಟಿಂಗ್ ಮತ್ತು ಸ್ವಿಚಿಂಗ್, ನೆಟ್‌ವರ್ಕ್ ಸೇವೆಗಳು ಹಾಗೂ ಕೈಗಾರಿಕಾ ಅವಶ್ಯಕತೆಗಳಿಗೆ ತಕ್ಕ ಸಾಧನಗಳ ಮೂಲಕ ಸಿಮ್ಯುಲೇಷನ್ ವಿಷಯಗಳಲ್ಲಿ ಅಧ್ಯಾಪಕರ ತಾತ್ವಿಕ ಅರಿವು ಮತ್ತು ಪ್ರಾಯೋಗಿಕ ಕೌಶಲ್ಯಗಳನ್ನು ಬಲಪಡಿಸುವುದಾಗಿತ್ತು.

    ಬೆಂಗಳೂರಿನ ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಹಾಯಕ ಪ್ರಾಧ್ಯಾಪಕ ಡಾ. ಮಂಜುನಾಥ್ ಎಂ. ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನೆಟ್‌ವರ್ಕಿಂಗ್ ಶಿಕ್ಷಣದಲ್ಲಿ ಪ್ರಾಯೋಗಿಕ ಅನುಭವದ ಹೆಚ್ಚುತ್ತಿರುವ ಮಹತ್ವವನ್ನು ಹೇಳಿದರಲ್ಲದೆ, ನೆಟ್‌ವರ್ಕ್ ಸಿಮ್ಯುಲೇಷನ್, ವರ್ಚುವಲೈಸೇಶನ್ ಹಾಗೂ ಸುರಕ್ಷಿತ ಸಂವಹನ ವ್ಯವಸ್ಥೆಗಳಂತಹ ಉದಯೋನ್ಮುಖ ತಂತ್ರಜ್ಞಾನಗಳ ಕುರಿತು ಅಧ್ಯಾಪಕರು ಸದಾ ತಿಳುವಳಿಕೆ ಹೆಚ್ಚಿಸಿಕೊಂಡಿರಬೇಕೆಂದು ತಿಳಿಸಿದರು. ಇಂದಿನ ಕೈಗಾರಿಕಾ ಅಗತ್ಯಗಳಿಗೆ ಅನುಗುಣವಾಗಿ ಎಫ್‌ಡಿಪಿಯನ್ನು ರೂಪಿಸಿರುವ ಅಡ್ವಾನ್ಸ್‌ಡ್ ಕಮ್ಯುನಿಕೇಶನ್ ಟೆಕ್ನಾಲಜಿ ವಿಭಾಗದ ಮುಂದಾಳತ್ವವನ್ನು ಅವರು ಪ್ರಶಂಸಿಸಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಲುಂಕರ್ ಅವರು ಅಧ್ಯಾಪಕರ ಬೋಧನಾ ಪರಿಣಾಮಕಾರಿತ್ವ ಮತ್ತು ಸಂಶೋಧನಾ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಫ್ಯಾಕಲ್ಟಿ ಡೆವಲಪ್ಮೆಂಟ್ ಕಾರ್ಯಕ್ರಮಗಳ ಪಾತ್ರವನ್ನು ವಿವರಿಸಿದರು. ಹೊಸ ತಂತ್ರಜ್ಞಾನಾಧಾರಿತ ಸಾಧನಗಳ ಮೂಲಕ ನೀಡಲಾಗುವ ಪ್ರಾಯೋಗಿಕ ತರಬೇತಿ, ಕೈಗಾರಿಕಾ ಅವಶ್ಯಕತೆಗಳಿಗೆ ತಕ್ಕ ಪ್ರಯೋಗಾಲಯ ಪಠ್ಯಕ್ರಮಗಳನ್ನು ರೂಪಿಸಿ ಬೋಧಿಸಲು ಭಾಗವಹಿಸುವವರಿಗೆ ಮಹತ್ತರವಾಗಿ ಸಹಕಾರಿಯಾಗುತ್ತದೆ ಎಂದರು.

    ಬೆಂಗಳೂರಿನ ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ‌ಯ ಸಂಶೋಧನಾ ವಿದ್ಯಾರ್ಥಿಯಾದ ರಮೇಶ್ ಸಿ. ಎನ್. ಅವರೂ ಸಹ ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮದಲ್ಲಿ ಪರಿಚಯಿಸಲ್ಪಟ್ಟರು. ವೇದಿಕೆಯಲ್ಲಿ ಉಪಪ್ರಾಂಶುಪಾಲರಾದ ಡಾ. ನಾಗೇಶ್ ಪ್ರಭು ಉಪಸ್ಥಿತರಿದ್ದರು. ಎಫ್‌ಡಿಪಿಯಲ್ಲಿ ಆಧುನಿಕ ನೆಟ್‌ವರ್ಕಿಂಗ್ ಸಾಧನಗಳು ಮತ್ತು ತಂತ್ರಜ್ಞಾನಗಳ ಕುರಿತು ಪ್ರಾಯೋಗಿಕ ಅಧಿವೇಶನಗಳು, ನೇರ ಪ್ರದರ್ಶನಗಳು ಹಾಗೂ ಮಾರ್ಗದರ್ಶಿತ ಪ್ರಯೋಗಾಲಯ ಅಭ್ಯಾಸಗಳು ನಡೆದವು.

    ಕಾರ್ಯಕ್ರಮದ ಆರಂಭದಲ್ಲಿ ಡಾ. ದುರ್ಗಾ ಪ್ರಸಾದ್, ವಿಭಾಗ ಮುಖ್ಯಸ್ಥರು, ಅಡ್ವಾನ್ಸ್‌ಡ್ ಕಮ್ಯುನಿಕೇಶನ್ ಟೆಕ್ನಾಲಜಿ ವಿಭಾಗ ಮತ್ತು ಎಫ್‌ಡಿಪಿಯ ಕನ್ವೀನರ್ ಸ್ವಾಗತಿಸಿ ಕಾರ್ಯಕ್ರಮದ ಉದ್ದೇಶಗಳು, ರಚನೆ ಹಾಗೂ ನಿರೀಕ್ಷಿತ ಫಲಿತಾಂಶಗಳ ಬಗ್ಗೆ ವಿವರಿಸಿದರು. ಎಸಿಟಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಪರ್ವೀಜ್ ಶರೀಫ್ ಬಿ. ಜಿ. ಅತಿಥಿಗಳನ್ನು ಪರಿಚಯಿಸಿದರು. ಎಸಿಟಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಎಫ್‌ಡಿಪಿಯ ಸಂಯೋಜಕ ಡಾ. ಮದನ್ ವಂದಿಸಿದರು. ಎಸಿಟಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಮತ್ತು ಎಫ್‌ಡಿಪಿಯ ಇನ್ನೋರ್ವ ಸಂಯೋಜಕ ಡಾ. ರೋಷನ್ ಕಾರ್ಯಕ್ರಮ ನಿರೂಪಿಸಿದರು.

    The post ನಿಟ್ಟೆ: ಪ್ರಾಯೋಗಿಕ ಕಂಪ್ಯೂಟರ್ ನೆಟ್‌ವರ್ಕಿಂಗ್ ಎಫ್‌ಡಿಪಿ appeared first on Namma Udupi Bulletin.

    Click here to Read More
    Previous Article
    IT ಇಲಾಖೆಯವರು ಹೆಚ್ ಡಿಕೆ ಜೇಬಲ್ಲೇ ಇದ್ದಾರಲ್ಲಾ- ಡಿಸಿಎಂ ಡಿಕೆ ಶಿವಕುಮಾರ್ ಟಾಂಗ್
    Next Article
    ಮುಖ್ಯಮಂತ್ರಿಯಾಗಿ ದಾಖಲೆ ಬರೆದ ಸಿದ್ದರಾಮಯ್ಯ : ಅಭಿಮಾನಿಗಳಿಂದ ಸಂಭ್ರಮ

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment