Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಮದ್ದೂರು | ಮಾಂಗಲ್ಯ ಸರ ಅಪಹರಿಸಲು ಯತ್ನಿಸಿದವರಿಗೆ ಸಾರ್ವಜನಿಕರಿಂದ ಧರ್ಮದೇಟು

    1 week ago

    ವರದಿ: ಪ್ರಭು ವಿ ಎಸ್ ವಿಳಾಸ ಕೇಳುವ ನೆಪದಲ್ಲಿ ಮಹಿಳೆಯೋರ್ವರಿಂದ ಮಾಂಗಲ್ಯ ಅಪಹರಣಕ್ಕೆ ಯತ್ನಿಸಿ ಸಾರ್ವಜನಿಕರಿಗೆ ಸಿಕ್ಕಿಬಿದ್ದ ಯುವಕರಿಬ್ಬರನ್ನು ಪೋಲೀಸರಿಗೆ ಒಪ್ಪಿಸಿದ ಪ್ರಕರಣ ಗುರುವಾರ ಬೆಳಿಗ್ಗೆ ಮದ್ದೂರು ತಾಲೂಕಿನ ಬೆಸಗರಹಳ್ಳಿ ಪೋಲೀಸ್ ಠಾಣೆ ವ್ಯಾಪ್ತಿಯ ದೇಶಹಳ್ಳಿ ಗ್ರಾಮದಲ್ಲಿ ಜರುಗಿದೆ. ಬೆಂಗಳೂರು ಆರ್.ಆರ್.ನಗರದ ನಿವಾಸಿಗಳಾದ ವಿನಯ್‌ಕುಮಾರ್(30) ಹಾಗೂ ಮತ್ತೋರ್ವ ವಿನಯ್‌ಕುಮಾರ್(28) ಪೋಲೀಸರು ವಶಕ್ಕೆ ಪಡೆದಿರುವ ಆರೋಪಿಗಳಾಗಿದ್ದಾರೆ. ಮದ್ದೂರು ತಾಲೂಕಿನ ದೇಶಹಳ್ಳಿ ಗ್ರಾಮದ ಶ್ರೀಧರ್ ರವರ ಪತ್ನಿ ಪುಷ್ಪಲತಾ ತಮ್ಮ ಗ್ರಾಮದಿಂದ ಮದ್ದೂರು ಪಟ್ಟಣಕ್ಕೆ ತೆರಳುತ್ತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ […]

    The post ಮದ್ದೂರು | ಮಾಂಗಲ್ಯ ಸರ ಅಪಹರಿಸಲು ಯತ್ನಿಸಿದವರಿಗೆ ಸಾರ್ವಜನಿಕರಿಂದ ಧರ್ಮದೇಟು appeared first on nudikarnataka.



    ವರದಿ: ಪ್ರಭು ವಿ ಎಸ್

    ವಿಳಾಸ ಕೇಳುವ ನೆಪದಲ್ಲಿ ಮಹಿಳೆಯೋರ್ವರಿಂದ ಮಾಂಗಲ್ಯ ಅಪಹರಣಕ್ಕೆ ಯತ್ನಿಸಿ ಸಾರ್ವಜನಿಕರಿಗೆ
    ಸಿಕ್ಕಿಬಿದ್ದ ಯುವಕರಿಬ್ಬರನ್ನು ಪೋಲೀಸರಿಗೆ ಒಪ್ಪಿಸಿದ ಪ್ರಕರಣ ಗುರುವಾರ ಬೆಳಿಗ್ಗೆ ಮದ್ದೂರು ತಾಲೂಕಿನ ಬೆಸಗರಹಳ್ಳಿ ಪೋಲೀಸ್ ಠಾಣೆ ವ್ಯಾಪ್ತಿಯ ದೇಶಹಳ್ಳಿ ಗ್ರಾಮದಲ್ಲಿ ಜರುಗಿದೆ.

    ಬೆಂಗಳೂರು ಆರ್.ಆರ್.ನಗರದ ನಿವಾಸಿಗಳಾದ ವಿನಯ್‌ಕುಮಾರ್(30) ಹಾಗೂ ಮತ್ತೋರ್ವ
    ವಿನಯ್‌ಕುಮಾರ್(28) ಪೋಲೀಸರು ವಶಕ್ಕೆ ಪಡೆದಿರುವ ಆರೋಪಿಗಳಾಗಿದ್ದಾರೆ.

    ಮದ್ದೂರು ತಾಲೂಕಿನ ದೇಶಹಳ್ಳಿ ಗ್ರಾಮದ ಶ್ರೀಧರ್ ರವರ ಪತ್ನಿ ಪುಷ್ಪಲತಾ ತಮ್ಮ ಗ್ರಾಮದಿಂದ ಮದ್ದೂರು ಪಟ್ಟಣಕ್ಕೆ ತೆರಳುತ್ತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತ ಯುವಕರು ವಿಳಾಸ ಕೇಳುವ ನೆಪದಲ್ಲಿ ಮಾಂಗಲ್ಯ ಸರ ಕಸಿಯಲು ಯತ್ನಿಸಿದ್ದಾರೆ.

    ಈ ವೇಳೆ ಭಯಬೀತರಾದ ಪುಷ್ಪಲತಾ ಅವರು ಚೀರಾಟಕ್ಕೆ ಮುಂದಾಗಿ ಅಕ್ಕಪಕ್ಕದಲ್ಲಿದ್ದ ಸಾರ್ವಜನಿಕರು ಧಾವಿಸಿ ಬಂದು ಆರೋಪಿ ಯುವಕರನ್ನು ಹಿಡಿದು ಥಳಿಸಿ ಬಳಿಕ ಪೋಲೀಸರಿಗೆ ಒಪ್ಪಿಸಿದ್ದಾರೆ.

    ಸ್ಥಳಕ್ಕಾಗಮಿಸಿದ ಬೆಸಗರಹಳ್ಳಿ ಪೋಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
    ಘಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ, ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ಗಂಗಾಧರಸ್ವಾಮಿ, ಮಳವಳ್ಳಿ ವಿಭಾಗದ ಡಿ.ವೈ.ಎಸ್.ಪಿ ಯಶವಂತ್ ಹಾಗೂ ಗ್ರಾಮಾಂತರ ವೃತ್ತ ನಿರೀಕ್ಷಕ ನಾರಾಯಣಿ ಘಟನೆ ಸಂಬಂಧ ಮಹಿಳೆಯಿಂದ ಮಾಹಿತಿ ಸಂಗ್ರಹಿಸಿದ್ದು ಈ ಸಂಬಂಧ ಬೆಸಗರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    The post ಮದ್ದೂರು | ಮಾಂಗಲ್ಯ ಸರ ಅಪಹರಿಸಲು ಯತ್ನಿಸಿದವರಿಗೆ ಸಾರ್ವಜನಿಕರಿಂದ ಧರ್ಮದೇಟು appeared first on nudikarnataka.

    Click here to Read More
    Previous Article
    ಮೊಬೈಲ್ ಕ್ಯಾಂಟೀನ್ ತೆರೆಯಲು 5 ಲಕ್ಷ ರೂ. ಸಹಾಯಧನ : ಡಾ.ಕುಮಾರ
    Next Article
    ಮಂಡ್ಯ | ಈ ಬಾರಿ ಗಣರಾಜ್ಯೋತ್ಸವ ಅರ್ಥಪೂರ್ಣ ಆಚರಣೆ : 30 ತಂಡಗಳಿಂದ ಪಥ ಸಂಚಲನ

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment