Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಸಾವಯವ, ಸಿರಿಧಾನ್ಯ ಕೃಷಿ ಬಗ್ಗೆಯೂ ಗಮನಹರಿಸಿ : ಚಲುವರಾಯಸ್ವಾಮಿ

    1 week ago

    ವ್ಯವಸಾಯ ಮಾಡುವವರನ್ನು ಕರ್ನಾಟಕದಲ್ಲಿ ಒಕ್ಕಲಿಗ ಎಂದು ಕರೆಯಲಾಗುತ್ತದೆ ಎಂದು ಕೃಷಿ ಸಚಿವ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚಲುವರಾಯಸ್ವಾಮಿ  ಹೇಳಿದರು. ಬೆಂಗಳೂರಿನಲ್ಲಿ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಉದ್ಯಮಿ ಒಕ್ಕಲಿಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಒಕ್ಕಲಿಗ ಎಂಬ ಪದವೇ ಹೃದಯಕ್ಕೆ ಹತ್ತಿರವಾದದ್ದು, ಜೀವ ಹಾಗೂ ಜೀವನದ ಸಂಕೇತ ಶ್ರೇಷ್ಠ ಜೀವನದ ಸಂಸ್ಕೃತಿಯ ಪ್ರತೀಕ, ಜಗತ್ತಿಗೆ ಅನ್ನ ನೀಡುವ, ಕೃಷಿಯನ್ನೇ ಬದುಕಾಗಿಸಿಕೊಂಡಿರುವ ಎಲ್ಲರನ್ನೂ ಒಕ್ಕಲಿಗೆ ఎంದೇ ಗುರುತಿಸಲಾಗುತ್ತಿದೆಯಾದರೂ ಕಾಲಾಂತರದಲ್ಲಿ ಒಕ್ಕಲಿಗ ಎಂಬುದು ಜಾತಿಯಾಗಿಯೂ ಪ್ರತ್ಯೇಕವಾಗಿ ಗುರುತಿಸಲ್ಪಟ್ಟಿದೆ […]

    The post ಸಾವಯವ, ಸಿರಿಧಾನ್ಯ ಕೃಷಿ ಬಗ್ಗೆಯೂ ಗಮನಹರಿಸಿ : ಚಲುವರಾಯಸ್ವಾಮಿ appeared first on nudikarnataka.



    ವ್ಯವಸಾಯ ಮಾಡುವವರನ್ನು ಕರ್ನಾಟಕದಲ್ಲಿ ಒಕ್ಕಲಿಗ ಎಂದು ಕರೆಯಲಾಗುತ್ತದೆ ಎಂದು ಕೃಷಿ ಸಚಿವ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚಲುವರಾಯಸ್ವಾಮಿ  ಹೇಳಿದರು.

    ಬೆಂಗಳೂರಿನಲ್ಲಿ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಉದ್ಯಮಿ ಒಕ್ಕಲಿಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಒಕ್ಕಲಿಗ ಎಂಬ ಪದವೇ ಹೃದಯಕ್ಕೆ ಹತ್ತಿರವಾದದ್ದು, ಜೀವ ಹಾಗೂ ಜೀವನದ ಸಂಕೇತ ಶ್ರೇಷ್ಠ ಜೀವನದ ಸಂಸ್ಕೃತಿಯ ಪ್ರತೀಕ, ಜಗತ್ತಿಗೆ ಅನ್ನ ನೀಡುವ, ಕೃಷಿಯನ್ನೇ ಬದುಕಾಗಿಸಿಕೊಂಡಿರುವ ಎಲ್ಲರನ್ನೂ ಒಕ್ಕಲಿಗೆ ఎంದೇ ಗುರುತಿಸಲಾಗುತ್ತಿದೆಯಾದರೂ ಕಾಲಾಂತರದಲ್ಲಿ ಒಕ್ಕಲಿಗ ಎಂಬುದು ಜಾತಿಯಾಗಿಯೂ ಪ್ರತ್ಯೇಕವಾಗಿ ಗುರುತಿಸಲ್ಪಟ್ಟಿದೆ ಎಂದು ಹೇಳಿದರು.

    ಮಧ್ಯಮ ಪಾಂಡವ ಅರ್ಜುನ ಆದಿಚುಂಚನಗಿರಿಯ ಕಾಲಭೈರವನಿಂದ ಜೋಗಿ ದೀಕ್ಷೆ ಪಡೆದು ದೇಶಾದಾದ್ಯಂತ ಯಾತ್ರೆ ಮಾಡಿ, ಕೃಷಿಕ ಜನರನ್ನು ಒಕ್ಕಲಿಗರನ್ನಾಗಿಸಿದ ಎಂದೂ ಪ್ರತೀತಿ ಇದೆ. ದಕ್ಷಿಣ ಕರ್ನಾಟಕದ ಬಹು ಸಂಖ್ಯಾತ ಕೃಷಿಕರು ಒಕ್ಕಲಿಗ ಗೌಡರಾಗಿದ್ದಾರೆ. ಒಕ್ಕಲಿಗರು ದಕ್ಷಿಣ ಕರ್ನಾಟಕದ ಮೂಲ ನಿವಾಸಿಗಳೆಂದು ಗುರುತಿಸಲಾಗಿದೆ. 1800 ವರ್ಷಗಳಿಗಿಂತಲೂ ಇಲ್ಲಿ ನೆಲೆಸಿ ಕೃಷಿ ಕಸಬು ಮಾಡುತ್ತಿದ್ದಾರೆಂದು ಐತಿಹ್ಯಗಳಿಂದ ತಿಳಿದು ಬಂದಿದೆ ಎಂದರು.

    ಒಕ್ಕಲಿಗರು ಕೇವಲ ಕೃಷಿಗೆ ಸೀಮಿತವಾಗಿಲ್ಲ. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಒಕ್ಕಲಿಗರ ಮಕ್ಕಳು ಮಾಡಿದ ಕಸುಬಿಲ್ಲ. ಎಲ್ಲಾ ಕೆಲಸದಲ್ಲೂ ನೈಪುಣ್ಯತೆ ಸಾಧಿಸಿ ಸೈ ಎನಿಸಿಕೊಂಡಿದ್ದಾರೆ. ಕಲೆ, ಸಾಹಿತ್ಯ, ಶಿಕ್ಷಣ, ಉದ್ಯಮ ಎಲ್ಲಾ ಕ್ಷೇತ್ರದಲ್ಲೂ ಅಗ್ರಮಾನ್ಯ ಸಾಧಕರಿದ್ದಾರೆ. ದೇಶದ ಮತ್ತು ರಾಜ್ಯದ ಚುಕ್ಕಾಣಿ ಹಿಡಿದು ಸಮರ್ಥ ಆಡಳಿತ ನಡೆಸಿ ದೇಶ ಹಾಗೂ ರಾಜ್ಯದ ಸರ್ವಾಂಗೀಣ ಪ್ರಗತಿಗೆ ಕೊಡುಗೆ ನೀಡ ಉಳುವ ಕೈ ಆಳಲೂ ಸೈ ಎಂದು ಸಾಬೀತುಪಡಿಸಿದ್ದಾರೆ ಎಂದು ತಿಳಿಸಿದರು.

    ಇಂತಹ ಸಾಧಕರೆಲ್ಲರನ್ನೂ ಸೇರಿಸಿ ಸಮುದಾಯದ ಮಾದರಿಗಳನ್ನು ತೋರಿಸಿ ಯುವ ಪೀಳಿಗೆಗೆ ಉತ್ಸಾಹ ತುಂಬಿ ಮಾರ್ಗದರ್ಶನ ನೀಡುವ ಉದ್ದೇಶದಿಂದ ಫಸ್ಟ್ ಸರ್ಕಲ್ ಸೊಸೈಟಿ (First Circle Society) ಪ್ರಾರಂಭವಾಗಿರುವುದು ಅತ್ಯಂತ ಸಂತೋಷ ಹಾಗೂ ಹೆಮ್ಮೆಯ ವಿಚಾರ, ಪರಸ್ಪರ ಒಗ್ಗೂಡುವಿಕೆ ಜೊತೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಉದ್ಯಮಶೀಲತೆ, ಉದ್ಯೋಗಾವಕಾಶಗಳು ಮತ್ತು ಉತ್ತಮ ನಡವಳಿಕೆಗಳನ್ನು ಪರಿಚಯಿಸುತ್ತಾ ಸಮುದಾಯದ ಉದ್ಯಮವನ್ನು ಉದ್ಯಮಿಗಳನ್ನು ಬೆಳೆಸುವ ಪ್ರಯತ್ನ ಮಾಡುತ್ತಿರುವುದು ಅಭಿನಂದನೀಯ ಎಂದು ಅಭಿಪ್ರಾಯಪಟ್ಟರು.

    ಎಲ್ಲಾ ಸಂಘಟಕರನ್ನು ಮನಪೂರ್ವಕವಾಗಿ ಅಭಿನಂಧಿಸುತ್ತ ದಕ್ಷಿಣ ಕರ್ನಾಟಕ ಎಲ್ಲಾ ಜಿಲ್ಲೆಗಳಲ್ಲೂ ಇದರ ಶಾಖೆ ಹೊಂದುವ ಗುರಿ ಹೊಂದಲಾಗಿದೆ. ಇದರಿಂದ ಒಕ್ಕಲಿಗರ ಸಮುದಾಯದ ಸಾವಿರಾರು ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಿಕೊಡಬಲ್ಲದು. ಇದು ಫಸ್ಟ್ ಸರ್ಕಲ್ ಸದಸ್ಯರು ಈಗಾಗಲೇ ಪರಸ್ಪರ ಸಂಬಂಧಗಳ ಮೂಲಕ 2500 ಕೋಟಿಗೂ ಹೆಚ್ಚು ಅಧಿಕ ವಹಿವಾಟು ನಡೆಸಿರಿವುದು ಸಾಧನೆಯೇ ಸರಿ ಎಂದು ಹೇಳಿದರು.

    ಒಕ್ಕಲಿಗ To ಒಕ್ಕಲಿಗ ಎಂಬ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಒಕ್ಕಲಿಗೆ ಉತ್ಪಾದಕರಿಗೆ ಅವಕಾಶಗಳನ್ನು ಸೃಷ್ಟಿಸಿ, ಆತ್ಮವಿಶ್ವಾಸ ತುಂಬುವುದರಲ್ಲಿ ಅನುಮಾನವಿಲ್ಲ. ಇದಕ್ಕೆ ನಮ್ಮೆಲ್ಲರ ಪ್ರೋತ್ಸಾಹ ಸಹಕಾರ ಸದಾ ಇರಲಿದೆ. 3 ದಿನಗಳ ಈ ಕಾರ್ಯಕ್ರಮಕ್ಕೆ ನೂರಾರು ಜನರು ಗಣ್ಯರು, ಸಾಧಕರನ್ನು ಅಹ್ವಾನಿಸಿದ್ದೀರಿ, ಅವರು ಆಯಾಯ ಕ್ಷೇತ್ರಗಳ ಬಗ್ಗೆ ಮಾತನಾಡಿದ್ದಾರೆ. ನಾನು ಕೃಷಿ ಸಚಿವನಾಗಿ ಕೃಷಿಗೆ ಪೂರಕವಾದ ವ್ಯಾಪಾರ, ವಹಿವಾಟು, ಉದ್ಯಮಗಳ ಬಗ್ಗೆ ಬೆಳಕು ಚೆಲ್ಲಲು ಬಯಸುತ್ತೇನೆ ಎಂದು ಹೇಳಿದರು.

    ಕೃಷಿ ಯಾಂತ್ರೀಕರಣ ಯೋಜನೆಗೆ ರೂ.1250 ಕೋಟಿ ಸಹಾಯಧನ ಯಂತ್ರೋಪಕರಣಗಳಿಗೆ ವಿತರಿಸಲಾಗಿದ್ದು, 3ಲಕ್ಷಕ್ಕೂ ಅಧಿಕ ರೈತರ ಇದರ ಉಪಯೋಗಪಡೆದುಕೊಂಡಿದ್ದಾರೆ. ಕಳೆದ ಎರಡೂವರೆ ವರ್ಷಗಳಲ್ಲಿ 6 ಲಕ್ಷ ರೈತರಿಗೆ ರೂಪಾಯಿ 132398 ಸಹಾಯಧನದಲ್ಲಿ ಸೂಕ್ಷ್ಮ ನೀರಾವರಿ ಘಟಕಗಳನ್ನು ನೀಡಲಾಗಿದೆ.ಎರಡೂವರೆ ವರ್ಷಗಳಲ್ಲಿ 36 ಲಕ್ಷ ರೈತರಿಗೆ 5000 ಕೋಟಿ ಬೆಳೆವಿಮೆ ನೀಡಲಾಗಿದೆ ಎಂದರು.

    ನಮ್ಮ ಸರ್ಕಾರ ಜಾರಿಗೆ ತಂದ ನೂತನ ಯೋಜನೆಯಡಿ ಇದುವರೆಗೆ ಹೈಟೆಕ್ ಹಾರ್ವೆಸ್ಟರ್ ಹಬ್‌ಗೆ 127ಕೋಟಿ ವೆಚ್ಚ ಸಹಾಯಧನದಲ್ಲಿ 340 ಹೈಟೆಕ್ ಹಾರ್ವೆಸ್ಟರ್ ಹಬ್ ವಿತರಿಸಲಾಗಿದೆ. ಪಿ.ಎಂ.ಎಫ್.ಎಂ.ಇ ಯೋಜನೆಯಡಿ 5000 ಮಾದರಿ ಉದ್ದಿಮೆದಾರರಿಗೆ 206 ಕೋಟಿ ವೆಚ್ಚದಲ್ಲಿ ಸಹಾಯಧನ ನೀಡಲಾಗುತ್ತದೆ ಎಂದು ಹೇಳಿದರು.

    ಇದು ಅವಕಾಶಗಳ ಜಗತ್ತು, ಸಾಧಿಸುವ ಮನಸ್ಸಿದ್ದರೆ ಹಾಗೂ ಪರಿಶ್ರಮವಿದ್ದರೆ ಏನೂ ಬೇಕಾದರೂ ಸಾಧಿಸಲು ಅವಕಾಶವಿದೆ. ಸಸಿ ಮಡಿಗಳಿಂದ ಹಿಡಿದು ಔಷಧಿಗಳನ್ನು ಉತ್ಪಾದನೆ ಮಾಡಿ ಮಾರಾಟ ಮಾಡುವವರೆವಿಗೂ ಕೃಷಿ ಕ್ಷೇತ್ರದಲ್ಲಿ ಅವಕಾಶಗಳಿದೆ. ಕೇವಲ ಬೇಸಾಯದ ಬಗ್ಗೆ ಗಮನ ಹರಿಸಿದರೆ ಉತ್ಪಾದನೆಯಲ್ಲಿ ಗುಣಮಟ್ಟ ಕಾಯ್ದು ಕೊಳ್ಳುವಿಕೆ ಹಾಗೂ ಮೌಲ್ಯವರ್ಧೆನೆಗೂ ಗಮನ ಹರಿಸಿದರೆ ಹೆಚ್ಚಿನ ಲಾಭಗಳಿಸಲೂ ಅವಕಾಶವಿದೆ ಎಂದು ಹೇಳಿದರು.

    ಒಂದೇ ಬಗೆಯ ಬೆಳೆಗೆ ಜೋತು ಬೀಳದೆ ಸಮಗ್ರ ಬೇಸಾಯ, ಸಾವಯವ, ಕೃಷಿ ಹಾಗೂ ಸಿರಿಧಾನ್ಯ ಕೃಷಿ ಬಗ್ಗೆಯೂ ಗಮನ ಹರಿಸಿದರೆ ವರ್ಷವಿಡೀ ಆದಾಯ ಮತ್ತು ಆರ್ಥಿಕ ಸಬಲೀಕರಣ ಸಾಧ್ಯವಾಗಬಹುದು. ಹೈನುಗಾರಿಕೆ, ಕುಕ್ಕುಟೋದ್ಯಮ, ಕುರಿ, ಹಂದಿ ಹಾಗೂ ಮೀನು ಸಾಕಾಣಿಕೆಗಳು ಕೂಡ ಕೃಷಿಯ ಜೊತೆಗೆ ಉಪಕಸುಬುಗಳಾಗಿ ರೂಡಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.

    The post ಸಾವಯವ, ಸಿರಿಧಾನ್ಯ ಕೃಷಿ ಬಗ್ಗೆಯೂ ಗಮನಹರಿಸಿ : ಚಲುವರಾಯಸ್ವಾಮಿ appeared first on nudikarnataka.

    Click here to Read More
    Previous Article
    ಜವಳಿ ಮಾರುಕಟ್ಟೆ ಸಂಕೀರ್ಣದ ನಿರ್ಮಾಣ ಸ್ಥಳೀಯ ನೇಕಾರರಿಗೆ ಸಹಕಾರಿ- ಸಚಿವ ಕೆ.ಹೆಚ್ ಮುನಿಯಪ್ಪ
    Next Article
    ಅಕ್ಕ ಪಡೆಗೆ ಸಚಿವ ಕೆ.ಹೆಚ್ ಮುನಿಯಪ್ಪ ಚಾಲನೆ

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment