Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ದುರುಪಯೋಗ ತಡೆಗೆ ವಿಬಿ- ಜಿ ರಾಮ್ ಜಿ ಯೋಜನೆ ಜಾರಿ : ಯದುವೀರ್

    6 days ago

    ನರೇಗಾ ಯೋಜನೆಯ ಅವ್ಯವಹಾರ, ದುರುಪಯೋಗಗಳನ್ನು ತಡೆಯುವ ಉದ್ದೇಶದಿಂದ ವಿಬಿ- ಜಿ ರಾಮ್ ಜಿ ಯೋಜನೆಯಾಗಿ ಸ್ವರೂಪ ಬದಲಿಸಲಾಗಿದೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ತಿಳಿಸಿದರು. ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನರೇಗಾ ಯೋಜನೆಯ ಲೋಪದೋಷಗಳನ್ನು ಸರಿಪಡಿಸಿ ಹೊಸದಾಗಿ ವಿಬಿ ಜಿ ರಾಮ್ ಜಿ ಕಾಯ್ದೆ ಜಾರಿಗೆ ತರಲಾಗಿದೆ. ಮನರೆಗಾದಲ್ಲಿನ ಭ್ರಷ್ಟಾಚಾರವನ್ನು ತಡೆಗಟ್ಟಲು ಪಾರದರ್ಶಕತೆ ಕಾಯ್ದುಕೊಳ್ಳಲು ಹಾಗೂ ರಾಜ್ಯ ಸರಕಾರಗಳ ಸಹಭಾಗಿತ್ವದೊಂದಿಗೆ ಯೋಜನೆ ಮುಂದುವರೆಸಲು ಸ್ವರೂಪ ಬದಲಿಗೆ ಹೊಸದಾಗಿ ವಿಬಿಜಿ ರಾಮ್ ಜಿ ಕಾಯ್ದೆಯನ್ನು ಜಾರಿಗೆ ತರಲಾಗಿದೆ […]

    The post ದುರುಪಯೋಗ ತಡೆಗೆ ವಿಬಿ- ಜಿ ರಾಮ್ ಜಿ ಯೋಜನೆ ಜಾರಿ : ಯದುವೀರ್ appeared first on nudikarnataka.



    ನರೇಗಾ ಯೋಜನೆಯ ಅವ್ಯವಹಾರ, ದುರುಪಯೋಗಗಳನ್ನು ತಡೆಯುವ ಉದ್ದೇಶದಿಂದ ವಿಬಿ- ಜಿ ರಾಮ್ ಜಿ ಯೋಜನೆಯಾಗಿ ಸ್ವರೂಪ ಬದಲಿಸಲಾಗಿದೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ತಿಳಿಸಿದರು.

    ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನರೇಗಾ ಯೋಜನೆಯ ಲೋಪದೋಷಗಳನ್ನು ಸರಿಪಡಿಸಿ ಹೊಸದಾಗಿ ವಿಬಿ ಜಿ ರಾಮ್ ಜಿ ಕಾಯ್ದೆ ಜಾರಿಗೆ ತರಲಾಗಿದೆ. ಮನರೆಗಾದಲ್ಲಿನ ಭ್ರಷ್ಟಾಚಾರವನ್ನು ತಡೆಗಟ್ಟಲು ಪಾರದರ್ಶಕತೆ ಕಾಯ್ದುಕೊಳ್ಳಲು ಹಾಗೂ ರಾಜ್ಯ ಸರಕಾರಗಳ ಸಹಭಾಗಿತ್ವದೊಂದಿಗೆ ಯೋಜನೆ ಮುಂದುವರೆಸಲು ಸ್ವರೂಪ ಬದಲಿಗೆ ಹೊಸದಾಗಿ ವಿಬಿಜಿ ರಾಮ್ ಜಿ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದು ಸಮರ್ಥಿಸಿಕೊಂಡರು.

    ನಕಲಿ ಜಾಬ್ ಕಾರ್ಡ್‌ಗಳು, ಕೃತಕ ಪಲಾನುಭವಿಗಳು, ಕಲ್ಪಿತ ಮಾಸ್ಟರ್ ರೋಲ್‌ಗಳು, ಕಾರ್ಮಿಕರಿಗೆ ಭಾಗಶಃ ವೇತನ ಪಾವತಿಯಂತಹ ಅನೇಕ ಹಗರಣಗಳು ನಡೆದಿವೆ. ಇದರಿಂದ ಪಶ್ಚಿಮ ಬಂಗಳ, ಪಂಜಾಬ್, ತೆಲಂಗಾಣ ರಾಜ್ಯಗಳಲ್ಲಿ ಸಾವಿರಾರು ಕೋಟಿ ರೂ ಹಣ ದುರ್ಬಳಕೆಯಾಗಿರುವುದು ಬಹಿರಂಗಗೊಂಡಿವೆ ಎಂದು ಹೇಳಿದರು.
    ಮನರೇಗಾ ಕಾಮಗಾರಿಗಳು ಕೃಷಿ ಋತುವಿನಲ್ಲಿ ಮುಂದುವರೆದ ಕಾರಣದಿಂದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕಾರ್ಮಿಕರ ಕೊರತೆ ಸೃಷ್ಠಿಸುತ್ತಿದೆ. ಇದರಿಂದ ಕೃಷಿಯ ವೆಚ್ಚವು ದುಬಾರಿಯಾಗಿತ್ತು. ಕಾನೂನಿನಲ್ಲಿ ನಿರುದ್ಯೋಗ ಭತ್ಯೆ, ವಿಳಂಬದ ವೇತನ ಪಾವತಿಗೆ ಪರಿಹಾರ ಒದಿಗಸಲಾಗಿತ್ತು ಆದರೆ ಅವುಗಳ ಪಾವತಿ ವಿರಳ ಮತ್ತು ನಿಬಂಧನೆಗಳು ಸಾಂಕೇತವಾಗಿ ಮಾತ್ರ ಇದ್ದವು ಎಂದು ತಿಳಿಸಿದರು.

    ಈ ಯೋಜನೆಯಲ್ಲಿ ಎಐ ತಂತ್ರಜ್ಞಾನ ಬಳಸಲಾಗುತ್ತಿದೆ. ಜಿಯೋ-ಟ್ಯಾಗಿಂಗ್, ಉಪಗ್ರಹ ಚಿತ್ರಣ, ನೈಜ-ಸಮಯದ ಟ್ಯಾಗಿಂಗ್‌ಗೆ ಮೊಬೈಲ್ ಅಪ್ಲಿಕೇಶನ್, ಎಐ ಆಧಾರಿತ ವಂಚನೆ ಪತ್ತೆ ಮತ್ತು ವಿಶ್ಲೇಷಣೆ, ಕಾಲ ಮಿತಿಯಲ್ಲಿ ವೇತನ ಪಾವತಿ, ಧನಸಹಾಯದ ಚೌಕಟ್ಟು ಮತ್ತು ಹಣಕಾಸಿನ ಶಿಸ್ತು ಸೇರಿದಂತೆ ಹಲವು ವಿಭಾಗಗಳಲ್ಲಿ ಭ್ರಷ್ಟಾಚಾರ ಮತ್ತು ಹಣ ದುರುಪಯೋಗ ನಿಯಂತ್ರಿಸುತ್ತದೆ ಎಂದು ವಿವರಿಸಿದರು.

    ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಇಂದ್ರೇಶ್, ಮುಖಂಡರಾದ ಇಂಡುವಾಳು ಸಚ್ಚಿದಾನಂದ, ಅಶೋಕ್, ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಮಾಧ್ಯಮ ವಕ್ತಾರ ನಾಗಾನಂದ ಇದ್ದರು.

    The post ದುರುಪಯೋಗ ತಡೆಗೆ ವಿಬಿ- ಜಿ ರಾಮ್ ಜಿ ಯೋಜನೆ ಜಾರಿ : ಯದುವೀರ್ appeared first on nudikarnataka.

    Click here to Read More
    Previous Article
    ರಾಜ್ಯಕ್ಕೆ ಎಷ್ಟೇ ಅನ್ಯಾಯವಾದ್ರೂ ಬಿಜೆಪಿಯಿಂದ ಕೇಂದ್ರದ ಸಮರ್ಥನೆ ಮಹಾ ಅಪರಾಧ- ಸಿಎಂ ಸಿದ್ದರಾಮಯ್ಯ
    Next Article
    ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಿದ್ರೆ ಮಾತ್ರ ಸುಖಿರಾಜ್ಯ ಸಾಧ್ಯ- ಸಿಎಂ ಸಿದ್ದರಾಮಯ್ಯ

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment