Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ವಿದ್ಯಾವಂತರಲ್ಲೇ ಮೌಢ್ಯಾಚರಣೆ ಹೆಚ್ಚಳ – ಬಸವರಾಜು ಕಳವಳ

    4 days ago

    ಪ್ರಸ್ತುತ ೨೧ನೇ ಶತಮಾನದ ವಿದ್ಯಾವಂತ ಸಮುದಾಯದಲ್ಲಿಯೇ ಮೌಢ್ಯಾಚರಣೆ ಮತ್ತು ಮೂಡನಂಬಿಕೆಗಳು ಹೆಚ್ಚಾಗಿವೆ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಜಿಲ್ಲಾ ಘಟಕ ಗೌರವಾಧ್ಯಕ್ಷ ಬಸವರಾಜು ಹೇಳಿದರು. ಮಂಡ್ಯ ನಗರದ ಕಲ್ಲುಕಟ್ಟಡ ಬಾಲಕಿಯರ ಪಿಯು ಕಾಲೇಜು ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಜಿಲ್ಲಾ ಘಟಕ, ಬಾಲಕಿಯರ ಸರ್ಕಾರಿ ಪಿಯು ಕಾಲೇಜು ಕಲ್ಲುಕಟ್ಟಡ ಮತ್ತು ಜಗದೀಶ್‌ಚಂದ್ರಬೋಸ್ ಇಕೋ-ಸಂಸ್ಥೆ ಪ್ರೌಢಶಾಲಾ ವಿಭಾಗ ಇವರ ಸಹಯೋಗದಲ್ಲಿ ರಾಷ್ಟ್ರಕವಿ ಕುವೆಂಪು-ಅಕ್ಷರದವ್ವ ಸಾವಿತ್ರಿಬಾಯಿಫುಲೆ-ಸ್ವಾಮಿ ವಿವೇಕಾನಂದ ಅವರ ಜನ್ಮದಿನಾಚರಣೆ- ರಾಷ್ಟ್ರೀಯ ಯುವ ದಿನ […]

    The post ವಿದ್ಯಾವಂತರಲ್ಲೇ ಮೌಢ್ಯಾಚರಣೆ ಹೆಚ್ಚಳ – ಬಸವರಾಜು ಕಳವಳ appeared first on nudikarnataka.



    ಪ್ರಸ್ತುತ ೨೧ನೇ ಶತಮಾನದ ವಿದ್ಯಾವಂತ ಸಮುದಾಯದಲ್ಲಿಯೇ ಮೌಢ್ಯಾಚರಣೆ ಮತ್ತು ಮೂಡನಂಬಿಕೆಗಳು ಹೆಚ್ಚಾಗಿವೆ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಜಿಲ್ಲಾ ಘಟಕ ಗೌರವಾಧ್ಯಕ್ಷ ಬಸವರಾಜು ಹೇಳಿದರು.

    ಮಂಡ್ಯ ನಗರದ ಕಲ್ಲುಕಟ್ಟಡ ಬಾಲಕಿಯರ ಪಿಯು ಕಾಲೇಜು ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಜಿಲ್ಲಾ ಘಟಕ, ಬಾಲಕಿಯರ ಸರ್ಕಾರಿ ಪಿಯು ಕಾಲೇಜು ಕಲ್ಲುಕಟ್ಟಡ ಮತ್ತು ಜಗದೀಶ್‌ಚಂದ್ರಬೋಸ್ ಇಕೋ-ಸಂಸ್ಥೆ ಪ್ರೌಢಶಾಲಾ ವಿಭಾಗ ಇವರ ಸಹಯೋಗದಲ್ಲಿ ರಾಷ್ಟ್ರಕವಿ ಕುವೆಂಪು-ಅಕ್ಷರದವ್ವ ಸಾವಿತ್ರಿಬಾಯಿಫುಲೆ-ಸ್ವಾಮಿ ವಿವೇಕಾನಂದ ಅವರ ಜನ್ಮದಿನಾಚರಣೆ- ರಾಷ್ಟ್ರೀಯ ಯುವ ದಿನ ಅಂಗವಾಗಿ ವೈಜ್ಞಾನಿಕ, ವೈಚಾರಿಕ ಅರಿವು ಮತ್ತು ಪವಾಡ ರಹಸ್ಯ ಬಯಲು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

    ರಾಷ್ಟ್ರಕವಿ ಕುವೆಂಪು-ಅಕ್ಷರದವ್ವ ಸಾವಿತ್ರಿಬಾಯಿಫುಲೆ-ಸ್ವಾಮಿ ವಿವೇಕಾನಂದ ಅವರು ವೈಜ್ಞಾನಿಕ ಚಿಂತನೆಯನ್ನು ಜಗತ್ತಿಗೆ ನೀಡಿದ್ದಾರೆ, ವಿಜ್ಞಾನ-ತಂತ್ರಜ್ಞಾನ, ಯಂತ್ರಜ್ಞಾನದ ಕಾಲಘಟ್ಟದಲ್ಲಿರುವ ವಿದ್ಯಾವಂತ ಮಹಿಳೆಯರು ಹೆಚ್ಚಾಗಿ ಮಂತ್ರ-ತಂತ್ರ, ಮೂಢನಂಬಿಕೆ, ಮೌಢ್ಯಾಚರಣೆಗೆ ಬಲಿಯಾಗುತ್ತಿದ್ದಾರೆ, ಮಾನಸಿಕವಾಗಿ ಕುಗ್ಗುತ್ತಿದ್ದಾರೆ ಎಂದು ನುಡಿದರು.

    ಇಂದಿನ ವಿದ್ಯಾರ್ಥಿನಿಯರು ನೀವು ವಿಜ್ಞಾನ-ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ, ಪ್ರಶ್ನೆಕೇಳುವ ಧೈರ್ಯ, ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಪುಸ್ತಕ ಓದಿ, ಆತ್ಮವಿಶ್ವಾಸದಿಂದ ಮೌಢ್ಯಾಚರಣೆ, ಮೂಡನಂಭಿಕೆ ಬಿಟ್ಟು ಜೀವನ ಕಟ್ಟಿಕೊಳ್ಳಿ ಎಂದು ಸಲಹೆ ನೀಡಿದರು.

    ಪವಾಡ ರಹಸ್ಯ ಬಯಲು ತಜ್ಞ ನಂಜರಾಜು, ಅತ್ಯುತ್ತಮ ಪೌಷ್ಠಿಕಾಹಾರ ಮೊಟ್ಟೆಯನ್ನು ತಿನ್ನದೆ, ಅಮವಾಸ್ಯೆ, ಹುಣ್ಣಿಮೆಗಳಲ್ಲಿ ಮೂರುಕೂಡುವ ರಸ್ತೆಗೆ ಒಡೆಯುತ್ತಾರೆ, ಮಾಟ-ಮಂತ್ರವಾಗಿದೆ ಎಂದು ಕೆಮಿಕಲ್‌ಬಳಸಿ ಹಣ ವಂಚಿಸುತ್ತಾರೆ, ಯಾಮಾರುವವರಿರುವವರೆಗೂ ಯಾಮಾರಿಸುವವರು ಇರುತ್ತಾರೆ ಎಂದು ಎಚ್ಚರಿಸಿದರು.

    ವೈಜ್ಞಾನಿಕ ವಿಚಾರವಾದಿ ಜಯಪ್ರಕಾಶ್, ವಿಜ್ಞಾನ ನಮ್ಮ ಬದುಕು, ಏಕಾಗ್ರತೆ ಮತ್ತ ಸಮಯ-ಸಂಯಮದಿಂದ ಓದಿದವ ಪ್ರಥಮಸ್ಥಾನ ಪಡೆಯುತ್ತಾನೆ, ಮನೋಬಲ, ಮನೋಧೈರ್ಯ ಮುಖ್ಯ, ಗುರುವಿನ ಮಾರ್ಗದರ್ಶನ ಗುರಿ ತಲುಪಲು ಪರಿಶ್ರಮಮುಖ್ಯ ಎಂದು ಕಿವಿಮಾತೇಳಿದರು.

    ಇದೇ ಸಂದರ್ಭದಲ್ಲಿ ಪವಾಡರಹಸ್ಯ ಬಯಲುತಜ್ಞ ನಂಜರಾಜು ಮತ್ತು ವೈಜ್ಞಾನಿಕ ವಿಚಾರವಾದಿ ಜಯಪ್ರಕಾಶ್ ಪ್ರಾಯೋಗಿಕವಾಗಿ ವಿದ್ಯಾರ್ಥಿನಿಯರಿಗೆ ವೈಜ್ಞಾನಿಕ ಮತ್ತು ವಿಜ್ಞಾನ ಸಂವಾದದೊಂದಿಗೆ ಪವಾಡರಹಸ್ಯ ಬಯಲು ಮಾಡಿ ಗಮನ ಸೆಳೆದರು.

    ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ತಮ್ಮೇಗೌಡ, ಉಪನ್ಯಾಸಕರಾದ ಚಂದ್ರುಲಿAಗು, ಕುಸುಮಾ, ಸುಜಾತ, ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಶಿವಲಿಂಗಯ್ಯ, ಕಾರ್ಯದರ್ಶಿ ಕೆಂಪರಾಜು, ಪದಾಧಿಕಾರಿಗಳಾದ ಅನುಪಮಾ, ವಸಂತಮ್ಮ, ದುಂಡಲಿಂಗರಾಜು, ಮಹೇಂದ್ರ, ಜಯರಾಂ, ವೆಂಕಟಾಚಲಯ್ಯ, ಶಿವರಾಜ್‌ಮರಳಿಗ ಹಾಗೂ ಶಿಕ್ಷಕವೃಂದ ಮತ್ತಿತರರಿದ್ದರು.

    The post ವಿದ್ಯಾವಂತರಲ್ಲೇ ಮೌಢ್ಯಾಚರಣೆ ಹೆಚ್ಚಳ – ಬಸವರಾಜು ಕಳವಳ appeared first on nudikarnataka.

    Click here to Read More
    Previous Article
    ಆಧ್ಯಾತ್ಮಿಕ ಸತ್ವವನ್ನು ಸಾಮಾಜಿಕ ಸತ್ಯದೊಂದಿಗೆ ಕಸಿ ಮಾಡಿದ ಸ್ವಾಮಿ ವಿವೇಕನಾಂದ
    Next Article
    ಐ.ಎ.ಎಸ್ ಮತ್ತು ಕೆ.ಎ.ಎಸ್ ಪರೀಕ್ಷೆಗಳಿಗೆೆ ತರಬೇತಿ

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment