ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸಿಬ್ಬಂದಿ ಕೊರತೆ ಉಂಟಾಗದಂತೆ ಕ್ರಮ : ಡಿಸಿ

7 months ago

73

0

ದಾವಣಗೆರೆ, ಮಾ.18 : ಪ್ರಸ್ತುತ ಎಸ್.ಎಸ್.ಎಲ್.ಸಿ  ಪರೀಕ್ಷೆಗಳು ನಡೆಯುತ್ತಿವೆ,  ಏಪ್ರಿಲ್ 1 ರಿಂದ  ಜನಗಣತಿ (Census)  ಕಾರ್ಯ ಆರಂಭವಾಗಲಿದೆ  ಮತ್ತು ಪಿಯುಸಿ  ಮೌಲ್ಯಮಾಪನ  ಕಾರ್ಯವೂ ನಡೆಯಬೇಕಿದೆ  ಈ ಎಲ್ಲಾ ಕಾರಣಗಳಿಂದ ಸಿಬ್ಬಂದಿ ಕೊರತೆ ಇದೆ  ಆದಾಗ್ಯೂ ಉಪಚುನಾವಣೆಗೆ ಸಿಬ್ಬಂದಿ ಕೊರತೆ  ಉಂಟಾಗದಂತೆ ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ  ಹಾಗೂ ಜಿಲ್ಲಾ  ಚುನಾವಣಾಧಿಕಾರಿ  ಗಂಗಾಧರ ಸ್ವಾಮಿ ಜಿ.ಎಂ ಅವರು ತಿಳಿಸಿದರು. ಬುಧವಾರ  ಪತ್ರಿಕಾಗೋಷ್ಠಿಯಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ  ಚುನಾವಣಾಗೆ ಸಿಬ್ಬಂದಿಗಳ  ನಿಯೋಜನೆ ಮತ್ತು ತರಬೇತಿ ಕುರಿತು ಮಾಹಿತಿ ನೀಡಿದರು. ಮಾರ್ಚ್ 19 ದಾವಣಗೆರೆಯ ತುಂಗಭದ್ರಾ ಸಭಾಂಗಣದಲ್ಲಿ ಪಿಯುಸಿ ಉಪನ್ಯಾಸಕರಿಗೆ ಚುನಾವಣಾ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲಾ ಉಪನ್ಯಾಸಕರು ಮತ್ತು ಸಿಬ್ಬಂದಿಗಳು ಈ ತರಬೇತಿಗೆ ಕಡ್ಡಾಯವಾಗಿ ಹಾಜರಾಗಬೇಕು. ಸಣ್ಣ ಪುಟ್ಟ ಕಾರಣಗಳನ್ನು ನೀಡಿ ಅಥವಾ ಚುನಾವಣೆ ಕರ್ತವ್ಯದಿಂದ ನುಣುಚಿಕೊಳ್ಳಲು ಪ್ರಯತ್ನಿಸಿದರೆ ಶಿಸ್ತು ಕ್ರಮ ಜರುಗಿಸಲಾಗುವುದು ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಮತ್ತು ವಿಶೇಷ ಚೇತನರಿಗೆ ಮಾತ್ರ ನಿಯಮಾನುಸಾರ ವಿನಾಯಿತಿ ನೀಡಲಾಗುವುದು ಎಂದರು. ಮುಂಬರುವ ಚುನಾವಣೆಗೆ ಸಂಬಂಧಿಸಿದಂತೆ ಇವಿಎಂ (EVM) ಯಂತ್ರಗಳ ಮೊದಲ ಹಂತದ ರ‍್ಯಾಂಡಮೈಸೇಶನ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗ ನೇಮಿಸಿದ ಇಂಜಿನಿಯರ್‌ಗಳು ಇವಿಎಂ ಯಂತ್ರಗಳ  ತಪಾಸಣೆ ನಡೆಸಿ  ಪ್ರಮಾಣೀಕರಿಸಿದ್ದಾರೆ.  ಎಲ್ಲಾ ಪ್ರಕ್ರಿಯೆಗಳನ್ನು  ವಿವಿಧ ರಾಜಕೀಯ  ಪಕ್ಷಗಳ ಪ್ರತಿನಿಧಿಗಳ  ಸಮ್ಮುಖದಲ್ಲಿ ಪಾರದರ್ಶಕವಾಗಿ ನಡೆಸಲಾಗಿದೆ ಎಂದರು. ಯಂತ್ರಗಳ ವಿವರ: 284 ಮತಗಟ್ಟೆಗಳಿಗಾಗಿ  ತಲಾ 570 ಬಿಯು  (BU), ಸಿಯು (CU) ಮತ್ತು   ವಿವಿಪ್ಯಾಟ್ (VVPAT)  ಯಂತ್ರಗಳನ್ನು  ಸಿದ್ಧಪಡಿಸಲಾಗಿದೆ.  ಇದರಲ್ಲಿ ತರಬೇತಿಗಾಗಿ  10% ಯಂತ್ರಗಳನ್ನು […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
Click here to Read More
Previous Article
ನವೋದಯ ಪ್ರವೇಶ ಪರೀಕ್ಷೆ: ಜಿಗಳಿಯ ಗುರುಧ್ಯಾನ ವಿದ್ಯಾಸಂಸ್ಥೆಯ 13 ವಿದ್ಯಾರ್ಥಿಗಳು ಆಯ್ಕೆ
Next Article
ಮೃತ ಮೂವರು ರಿಸರ್ವ್ ಸಬ್ ಇನ್ಸ್‌ಪೆಕ್ಟರ್‌ ಗಳ ಕುಟುಂಬಕ್ಕೆ ಪರಿಹಾರ ಘೋಷಿಸಿದ ಸಿಎಂ

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment