ದಾವಣಗೆರೆ:ರಂಗಶಿಕ್ಷಣ ಡಿಪ್ಲೊಮೊ ಕೋರ್ಸ್‌ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

4 months ago

57

0

ದಾವಣಗೆರೆ, ಮೇ.20  : ಮೈಸೂರಿನ ರಂಗಾಯಣದ ‘ಭಾರತೀಯ ರಂಗಶಿಕ್ಷಣ ಕೇಂದ್ರ’ವು 2026-27ನೇ ಸಾಲಿನ ಒಂದು ವರ್ಷದ (ಹತ್ತು ತಿಂಗಳ) ರಂಗಶಿಕ್ಷಣ ಡಿಪ್ಲೊಮೊ ಕೋರ್ಸ್‌ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಮಾನ್ಯತೆ ಪಡೆದ ಈ ಕೋರ್ಸ್‌ಗೆ ಕನಿಷ್ಠ ದ್ವಿತೀಯ  ಪಿಯುಸಿ ತೇರ್ಗಡೆಯಾಗಿದ್ದು,  ರಂಗ ಭೂಮಿಯ ಪ್ರಾಥಮಿಕ  ಅನುಭವ  ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು 18 ರಿಂದ 28 ವರ್ಷಗಳ ವಯೋಮಿತಿ ನಿಗದಿಪಡಿಸಲಾಗಿದ್ದು,ಗರಿಷ್ಠ 15 ರಿಂದ  20 ವಿದ್ಯಾರ್ಥಿ ಗಳಿಗೆ  ಮಾತ್ರ ಪ್ರವೇಶಾವಕಾಶವಿರುತ್ತದೆ. ಆಯ್ಕೆಯಾದ  ಅಭ್ಯರ್ಥಿಗಳಿಗೆ  ಕೋರ್ಸಿನ  ಅವಧಿಯಲ್ಲಿ  ಊಟ, ವಸತಿ ಹಾಗೂ ಪಠ್ಯ ಸಾಮಗ್ರಿಗಳ ವೆಚ್ಚಗಳನ್ನು ನಿಯಮಾನುಸಾರ ವಿದ್ಯಾರ್ಥಿ ವೇತನದಲ್ಲಿ ಭರಿಸಲಾಗುವುದು. ಸಾಮಾನ್ಯ ವರ್ಗಕ್ಕೆ ರೂ.300/- ಹಾಗೂ ಪ.ಜಾ/ಪ.ವರ್ಗ/ಪ್ರವರ್ಗ-1ರ ಅಭ್ಯರ್ಥಿಗಳಿಗೆ ರೂ.200/ ಅರ್ಜಿ ಶುಲ್ಕವಿದ್ದು, ರಂಗಾಯಣದ ವೆಬ್‌ಸೈಟ್‌ http://rangayanamysore.karnataka.gov.in ಮೂಲಕ ಅರ್ಜಿ ಡೌನ್‌ಲೋಡ್ ಮಾಡಿಕೊಳ್ಳಬಹುದು. […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
Click here to Read More
Previous Article
ಮುಂಗಾರು ಕವಿಗೋಷ್ಠಿ ಮತ್ತು ಮಹಿಳಾ ಸಮಾನತೆ
Next Article
ದಾವಣಗೆರೆ:ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment