ಅಖಿಲ ಭಾರತ ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆ : ಅರ್ಜಿ ಆಹ್ವಾನ

19 hours ago

1

0

ದಾವಣಗೆರೆ : ಭಾರತ ಸರ್ಕಾರದ ರಕ್ಷಣೆ ಸಚಿವಾಲಯ ಮತ್ತು ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಕೊಡಗಿನ ಕೂಡಿಗೆಯಲ್ಲಿರುವ ಸೈನಿಕ ಶಾಲೆಯಲ್ಲಿ 2027-28ನೇ ಶೈಕ್ಷಣಿಕ ಸಾಲಿಗಾಗಿ 6ನೇ ಮತ್ತು 9ನೇ ತರಗತಿಗಳ ಪ್ರವೇಶಾತಿಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸಲಿರುವ ಅಖಿಲ ಭಾರತ ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸೈನಿಕ ಶಾಲೆಯು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಗೆ ಸಂಯೋಜಿತಗೊಂಡಿದ್ದು, ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ, ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ಸಜ್ಜುಗೊಳಿಸಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಭಾರತೀಯ ನೌಕಾ ಅಕಾಡೆಮಿ ಮತ್ತು ಇತರ ಸೇನಾ ಸಂಸ್ಥೆಗಳಲ್ಲಿ ಉನ್ನತ ಅಧಿಕಾರಿಗಳಾಗಿ ಸೇರ್ಪಡೆಗೊಳಿಸುವ ಪ್ರಮುಖ ಉದ್ದೇಶವನ್ನು ಹೊಂದಿದೆ. ಕರ್ನಾಟಕ ಮೂಲದ ಅರ್ಹ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರ ಮತ್ತು ಕೇಂದ್ರ ರಕ್ಷಣಾ ಸಚಿವಾಲಯದಿಂದ ವಿದ್ಯಾರ್ಥಿವೇತನದ ಸೌಲಭ್ಯವೂ ದೊರೆಯಲಿದೆ. ಬಾಲಕರೊಂದಿಗೆ ಬಾಲಕಿಯರಿಗೂ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ. Read also : ದಾವಣಗೆರೆ ರಂಗಾಯಣದ ಸಂಪತ್ತಿಗೆ ಸವಾಲ್ : ಸಾಣೇಹಳ್ಳಿ ಶ್ರೀಗಳ ಶ್ಲಾಘನೆ    ಅರ್ಜಿಗಳನ್ನು  ಡಿಸೆಂಬರ್‌ 2 [...]
Click here to Read More
Previous Article
ಜನರ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳಿಗೆ ಕಾಲಮಿತಿ : ಶಾಸಕ ರವಿಕುಮಾರ್
Next Article
ದಾವಣಗೆರೆ ರಂಗಾಯಣದ ಸಂಪತ್ತಿಗೆ ಸವಾಲ್ : ಸಾಣೇಹಳ್ಳಿ ಶ್ರೀಗಳ ಶ್ಲಾಘನೆ   

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment