Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯುವುದೆ ಸಂಶೋಧನೆ : ಪ್ರೊ.ಕೆ.ಶಿವಚಿತ್ತಪ್ಪ

    4 days ago

    ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯುವುದೆ ಸಂಶೋಧನೆ ಹಾಗಾಗಿ ಅಧ್ಯಾಪನ ಮತ್ತು ಅಧ್ಯಯನ ಸಂಶೋಧನೆಗೆ ಬಹಳ ಮುಖ್ಯವಾಗಿದೆ ಎಂದು ಮಂಡ್ಯ ವಿಶ್ವವಿದ್ಯಾಲಯ ಉಪ ಕುಲಪತಿಗಳಾದ ಪ್ರೊ.ಕೆ. ಶಿವಚಿತ್ತಪ್ಪ ಹೇಳಿದರು. ಮಂಡ್ಯ ಮಹಿಳಾ ಸರ್ಕಾರಿ ಕಾಲೇಜು (ಸ್ವಾಯತ್ತ ) ಸ್ನಾತಕ, ಸ್ನಾತಕೋತ್ತರ ಕನ್ನಡ ವಿಭಾಗ ಮತ್ತು ಸಂಶೋಧನಾ ಕೇಂದ್ರ ರೂಸಾ 2.0 ಯೋಜನೆಯಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ “ಕನ್ನಡ ಸಾಹಿತ್ಯ ಸಂಶೋಧನೆಯ ಹೊಸ ಸಾಧ್ಯತೆಗಳು ಮತ್ತು ಸವಾಲುಗಳು” ಕುರಿತು ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಗುರುವು ಎಂದರೆ […]

    The post ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯುವುದೆ ಸಂಶೋಧನೆ : ಪ್ರೊ.ಕೆ.ಶಿವಚಿತ್ತಪ್ಪ appeared first on nudikarnataka.



    ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯುವುದೆ ಸಂಶೋಧನೆ ಹಾಗಾಗಿ ಅಧ್ಯಾಪನ ಮತ್ತು ಅಧ್ಯಯನ ಸಂಶೋಧನೆಗೆ ಬಹಳ ಮುಖ್ಯವಾಗಿದೆ ಎಂದು ಮಂಡ್ಯ ವಿಶ್ವವಿದ್ಯಾಲಯ ಉಪ ಕುಲಪತಿಗಳಾದ ಪ್ರೊ.ಕೆ. ಶಿವಚಿತ್ತಪ್ಪ ಹೇಳಿದರು.

    ಮಂಡ್ಯ ಮಹಿಳಾ ಸರ್ಕಾರಿ ಕಾಲೇಜು (ಸ್ವಾಯತ್ತ ) ಸ್ನಾತಕ, ಸ್ನಾತಕೋತ್ತರ ಕನ್ನಡ ವಿಭಾಗ ಮತ್ತು ಸಂಶೋಧನಾ ಕೇಂದ್ರ ರೂಸಾ 2.0 ಯೋಜನೆಯಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ “ಕನ್ನಡ ಸಾಹಿತ್ಯ ಸಂಶೋಧನೆಯ ಹೊಸ ಸಾಧ್ಯತೆಗಳು ಮತ್ತು ಸವಾಲುಗಳು” ಕುರಿತು ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ಗುರುವು ಎಂದರೆ ಗುಹೆಯಲ್ಲಿರುವ ಅಂಧಕಾರವನ್ನ ಹೋಗಲಾಡಿಸುವವನೆ ಗುರು. ಅಜ್ಞಾನದಿಂದ ಜ್ಞಾನದ ಬೆಳಕು ಚೆಲ್ಲುವವನು ಎಂದು ಅರ್ಥೈಸಿಕೊಳ್ಳಬಹುದು. ಹಾಗೆಯೇ ಎಲ್ಲೋ ಇರುವ ಸತ್ಯವನ್ನು ಹೊರ ತೆಗೆಯುವುದೆ ಸಂಶೋಧನೆ. ಸಾಮಾಜಿಕ ವಿಜ್ಞಾನದ ಸಂಶೋಧನೆಗೂ ಕನ್ನಡ ಸಾಹಿತ್ಯದ ಸಂಶೋಧನೆಗೆ ಬಹಳ ವ್ಯತ್ಯಾಸವಿದೆ ಆದರೆ ಅಂತಿಮ ಗುರಿ ಸಂಶೋಧನೆ ಎಂದು ಹೇಳಿದರು.

    ಈಗಾಗಲೇ ಹಲವಾರು ಜ್ಞಾನಿಗಳು ವಿಜ್ಞಾನಿಗಳ ಶೋಧನೆ ಮಾಡಿರುವ ವಿಷಯದ ಕುರಿತು ಅಧ್ಯಯನ ಮಾಡುವುದೇ ಸಂಶೋಧನೆ ಅಸ್ಥಿತ್ವದಲ್ಲಿರುವ ಜ್ಞಾನದ ಹೊಸತನವನ್ನು ಹುಡುಕುವುದು ಎಂದು ಅರ್ಥೈಸಿಕೊಳ್ಳಬಹುದು. ಸಂಶೋಧನೆಯಲ್ಲಿ ಪ್ರಶ್ನೆಗಳಿಲ್ಲದೆ ಉತ್ತರ ಹುಡುಕುವುದು ಸಾಧ್ಯವಿಲ್ಲ. ಕನ್ನಡ ಸಾಹಿತ್ಯವನ್ನು ಅವಲೋಕಿಸಿದಾಗ ಮಾತ್ರ ಯಾವ ವಿಷಯದ ಮೇಲೆ ಸಂಶೋಧನೆ ಮಾಡಬಹುದು ಎಂದು ತಿಳಿಯುತ್ತದೆ ಎಂದು ಹೇಳಿದರು.

    ಯಾವುದೇ ವಿಷಯವಾಗಲಿ ವಿಷಯವನ್ನು ಅವಲೋಕಿಸದೆ ಸೂಕ್ತ ಸಂಶೋಧನಾ ವಿಷಯ ದೊರೆಯುವುದಿಲ್ಲ. ಕನ್ನಡ ಸಾಹಿತ್ಯ ಸಂಶೋಧನೆ ಮಾಡುವಲ್ಲಿ ಸಾಹಿತ್ಯಗಳ ಜವಾಬ್ದಾರಿ ದೊಡ್ಡದಿದೆ. ಮಂಡ್ಯ ವಿಶ್ವವಿದ್ಯಾಲಯದಲ್ಲಿ ಹೆಚ್ಚು ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸುವ ಕೆಲಸವಾಗಬೇಕಿದೆ. ಈಗಾಗಲೇ 5 ಸಂಶೋಧನೆ ಕೇಂದ್ರಗಳನ್ನು ಜಿಲ್ಲೆಯಲ್ಲಿ ಸ್ಥಾಪಿಸಲಾಗಿದೆ. ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ಬೆರೆಲ್ಲೋ ಹೋಗಿ ಸಂಶೋಧನೆ ಮಾಡುವ ಬದಲು ಇಲ್ಲಿಯೇ ಸಂಶೋಧನೆ ಮಾಡಬೇಕು ಎಂಬ ಉದ್ದೇಶದಿಂದ ಇಷ್ಟೆಲ್ಲಾ ಮಾಡಲಾಗುತ್ತಿದೆ ಎಂದರು.

    ಸಂಶೋಧನೆ ಯಾವಾಗಲೂ ಸಕಾರಾತ್ಮಕವಾಗಿರಲಿ. ಸಮಾಜಕ್ಕೆ ಸಂಶೋಧಕರ ಅಗತ್ಯವಿದೆ. ನೀವು ಮಾಡುವ ಸಂಶೋಧನೆ ಯಾವಾಗಲೂ ಗುಣಮಟ್ಟದಿಂದ ಕೂಡಿರಲಿ ಎಂದು ಹೇಳಿದರು.

    ಮಹಿಳಾ ಸರ್ಕಾರಿ ಕಾಲೇಜಿನ (ಸ್ವಾಯತ್ತ ) ಪ್ರಾಂಶುಪಾಲರಾದ ಪ್ರೊ. ಗುರುರಾಜ್ ಪ್ರಭು ಕೆ ಅವರು ಮಾತನಾಡಿ ಸಂಶೋಧಕರಿಗೂ ಹಾಗೂ ಅಧ್ಯಾಪಕರಿಗೆ ಇಂತಹ ಕಾರ್ಯಕ್ರಮಗಳು ಅತಿ ಮುಖ್ಯವಾಗಿದೆ. ಸಂಶೋಧನೆ ಮನುಷ್ಯ ಮತ್ತು ವಸ್ತು ವಿಷಯಗಳ ನಡುವಿನ ನಿರಂತರವಾದ ಪ್ರಕ್ರಿಯೆ. ಸಂಶೋಧನೆ ಪ್ರತಿ ತಲೆಮಾರಿಗೂ ಅಗತ್ಯವಾಗಿದೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ವಿ. ಶಿವಕೀರ್ತಿ, ರೂಸ ಸಂಯೋಜಕರಾದ ಪ್ರೊ.ಕೆ.ಎಂ ಮಂಗಳಮ್ಮ ಸೇರಿದಂತೆ ಪ್ರೊ.ಕೆ.ವಿ. ಜ್ಯೋತಿ,ಕೆ.ಪಿ ರವಿಕಿರಣ್, ವರದರಾಜ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

    The post ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯುವುದೆ ಸಂಶೋಧನೆ : ಪ್ರೊ.ಕೆ.ಶಿವಚಿತ್ತಪ್ಪ appeared first on nudikarnataka.

    Click here to Read More
    Previous Article
    ರಾಜಕೀಯ ಉದ್ದೇಶದ ಬಿಜೆಪಿಯ ಪಾದಯಾತ್ರೆ ಹಾಸ್ಯಾಸ್ಪದ: ಸಚಿವ ಹೆಚ್.ಸಿ ಮಹದೇವಪ್ಪ
    Next Article
    ಸ್ವಾಮಿ ವಿವೇಕಾನಂದರ ಆದರ್ಶ- ಚಿಂತನೆ ಅಳವಡಿಸಿಕೊಳ್ಳಬೇಕು : ಡಾ.ಕುಮಾರ

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment