ಹಿಂದೂ ಧರ್ಮದ ಭಗವದ್ಗೀತೆ, ಮುಸ್ಲಿಂ ಧರ್ಮದ ಕುರಾನ್ , ಕ್ರೈಸ್ತ ಧರ್ಮದ ಬೈಬಲ್ ಸೇರಿದಂತೆ ಎಲ್ಲಾ ಧರ್ಮಗಳ ಸಾರವು ಒಂದೇ ಆಗಿದ್ದು ಭಗವಂತನ ಸಾಕ್ಷಾತ್ಕಾರವನ್ನು ಹೊಂದುವುದೇ ಆಗಿದೆ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ, ವಿಶ್ವಕ್ಕೆ ಶಾಂತಿಯ ಸಂದೇಶವನ್ನು ನೀಡುವ ನಮ್ಮ ಭಾರತೀಯ ಸಂಸ್ಕೃತಿಯು ಮಾದರಿಯಾಗಿದೆ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು. ಮಂಡ್ಯ ತಾಲೂಕಿನ ತಗ್ಗಹಳ್ಳಿ ಗ್ರಾಮ ಪಂಚಾಯಿತಿಯ ಕೋಲಕಾರನದೊಡ್ಡಿ ಗ್ರಾಮದಲ್ಲಿ ಫೆಬ್ರವರಿ 05 ಮತ್ತು 06 ರಂದು ನಡೆಯಲಿರುವ ಮಂಡ್ಯ ಜಿಲ್ಲಾ ಮಟ್ಟದ ತಬಲಿಕ್ ಜಮಾತ್ ಧಾರ್ಮಿಕ […]
The post ಎಲ್ಲಾ ಧರ್ಮಗಳ ಸಾರವು ಭಗವಂತನ ಸಾಕ್ಷಾತ್ಕಾರ ಪಡೆಯುವುದೇ ಆಗಿದೆ : ಶಾಸಕ ರವಿಕುಮಾರ್ appeared first on nudikarnataka.
ಹಿಂದೂ ಧರ್ಮದ ಭಗವದ್ಗೀತೆ, ಮುಸ್ಲಿಂ ಧರ್ಮದ ಕುರಾನ್ , ಕ್ರೈಸ್ತ ಧರ್ಮದ ಬೈಬಲ್ ಸೇರಿದಂತೆ ಎಲ್ಲಾ ಧರ್ಮಗಳ ಸಾರವು ಒಂದೇ ಆಗಿದ್ದು ಭಗವಂತನ ಸಾಕ್ಷಾತ್ಕಾರವನ್ನು ಹೊಂದುವುದೇ ಆಗಿದೆ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ, ವಿಶ್ವಕ್ಕೆ ಶಾಂತಿಯ ಸಂದೇಶವನ್ನು ನೀಡುವ ನಮ್ಮ ಭಾರತೀಯ ಸಂಸ್ಕೃತಿಯು ಮಾದರಿಯಾಗಿದೆ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.
ಮಂಡ್ಯ ತಾಲೂಕಿನ ತಗ್ಗಹಳ್ಳಿ ಗ್ರಾಮ ಪಂಚಾಯಿತಿಯ ಕೋಲಕಾರನದೊಡ್ಡಿ ಗ್ರಾಮದಲ್ಲಿ ಫೆಬ್ರವರಿ 05 ಮತ್ತು 06 ರಂದು ನಡೆಯಲಿರುವ ಮಂಡ್ಯ ಜಿಲ್ಲಾ ಮಟ್ಟದ ತಬಲಿಕ್ ಜಮಾತ್ ಧಾರ್ಮಿಕ ಸಭೆಯ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಒಬ್ಬರಿಗೆ ಕೇಡು ಬಯಸಿ ಮತ್ತೊಬ್ಬರಿಗೆ ಒಳ್ಳೆಯದನ್ನು ಬಯಸುವ ಧಾರ್ಮಿಕ ಸಂದೇಶವು ಯಾವುದೇ ಧರ್ಮದಲ್ಲಿಯೂ ಇಲ್ಲ. ಪ್ರವಾದಿ ಮಹಮ್ಮದ್ ಪೈಗಂಬರರ ಆಶಯಗಳು ಹಾಗೂ ಧಾರ್ಮಿಕ ಸಂದೇಶವನ್ನು ನಾಡಿಗೆ ಬಿತ್ತರಿಸುವ ನಿಟ್ಟಿನಲ್ಲಿ ಸಮಾಜದಲ್ಲಿ ವಾಸಿಸುವ ಎಲ್ಲಾ ಧರ್ಮೀಯರನ್ನು ಒಳಗೊಂಡಂತೆ ಇಂದು ಪೂರ್ವಭಾವಿ ಸಭೆಯನ್ನು ನಡೆಸುತ್ತಿರುವುದು ಸ್ವಾಗತಾರ್ಹವಾಗಿದೆ. ಮಾನವ ಧರ್ಮಕ್ಕಿಂತ ಮಿಗಿಲಾದ ಧರ್ಮ ವಿಶ್ವದಲ್ಲಿಯೇ ಯಾವುದೂ ಇಲ್ಲ, ಮಾನವತೆಯ ಸಂದೇಶವನ್ನು ಸಾರುವ ಇಸ್ಲಾಂ ಧರ್ಮವು ಯಾರಿಗೂ ಕೇಡನ್ನು ಬಯಸುವುದಿಲ್ಲ. ಆದ್ದರಿಂದ ನಾಡಿಗೆ ಭಾವೈಕ್ಯತೆಯ ಸಂದೇಶವನ್ನು ಸಾರಲಿರುವ ಈ ಧಾರ್ಮಿಕ ಸಭೆಯು ಹಿರಿಯ ರಾಜಕೀಯ ಮುತ್ಸದ್ದಿ, ರಂಗಕರ್ಮಿ ಕೆ.ವಿ.ಶಂಕರಗೌಡರ ಕರ್ಮಭೂಮಿಯಾಗಿರುವ ಮಂಡ್ಯ ಜಿಲ್ಲೆಯ ಮಂಡ್ಯ ತಾಲೂಕಿನ ಕೋಲಕಾರನ ದೊಡ್ಡಿ ಗ್ರಾಮದ ನೆಲದಲ್ಲಿ ನಡೆಯುತ್ತಿರುವುದು ಇಡೀ ನಾಗರಿಕ ಸಮಾಜವೇ ಮೆಚ್ಚುವ ಸಂಗತಿಯಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಮಾತನಾಡಿ ಭಾರತರತ್ನ ಎಪಿಜೆ ಅಬ್ದುಲ್ ಕಲಾಂ, ಸ್ವಾತಂತ್ರ್ಯ ಹೋರಾಟಗಾರ ಮೌಲಾನಾ ಅಬುಲ್ ಕಲಾಂ ಆಜಾದ್, ಮೈಸೂರು ಸಂಸ್ಥಾನದಲ್ಲಿ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರು ನಾಡಿಗೆ ನೀಡಿರುವ ಕೊಡುಗೆಗಳು ಇಂದಿಗೂ ಚಿರಸ್ಥಾಯಿಯಾಗಿ ಉಳಿದಿವೆ. ನಮ್ಮ ರಾಜ್ಯ ಸೇರಿದಂತೆ ದೇಶದ ಉನ್ನತಿಗೆ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಕೊಡುಗೆ ಅಪಾರವಾಗಿದೆ. ಈ ದಿಕ್ಕಿನಲ್ಲಿ ಮುಸ್ಲಿಂ ಬಾಂಧವರು ಒಂದಾಗಿ ನಡೆಸುತ್ತಿರುವ ಧಾರ್ಮಿಕ ಸಮ್ಮೇಳನವು ರಾಷ್ಟ್ರೀಯ ಭಾವೈಕ್ಯತೆಯನ್ನು ಸಾರುವ ಕಾರ್ಯಕ್ರಮವಾಗಿದ್ದು, ನಾಡಿನ ವಿವಿಧ ಭಾಗಗಳಿಂದ ಆಗಮಿಸುವ ಸಾವಿರಾರು ಮುಸ್ಲಿಂ ಬಾಂಧವರು ಫೆಬ್ರವರಿ 05 ಮತ್ತು 06 ರಂದು ಎರಡು ದಿನಗಳ ಕಾಲ ಒಗ್ಗೂಡಿ ನಡೆಸುವ ಈ ಧಾರ್ಮಿಕ ಸಮ್ಮೇಳನವನ್ನು ನಾಗರೀಕ ಸಮಾಜದ ಎಲ್ಲ ಬಂಧುಗಳು ಸಹಕಾರ ನೀಡುವ ಮೂಲಕ ಯಶಸ್ವಿಗೊಳಿಸಿ ಕೊಡಬೇಕು ಎಂದರು.
ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡ ಬಿ.ಆರ್.ರಾಮಚಂದ್ರ, ಮೈಶುಗರ್ ಸಕ್ಕರೆ ಕಾರ್ಖಾನೆಯ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ ಮಂಡ್ಯ ನಗರಸಭೆ ಮಾಜಿ ಅಧ್ಯಕ್ಷ ನಾಗೇಶ್, ಮುಸ್ಲಿಂ ಧರ್ಮ ಗುರುಗಳಾದ ಮುಸ್ತಿನ್ ರಿಜ್ವಾನ್ ಸಾಬ್, ಮೌಲಾನ ಅಮೀಮನ್ ಹುಸೇನ್, ಕೆಪಿಸಿಸಿ ಸದಸ್ಯರಾದ ಭೂತನ ಹೊಸೂರು ರಾಜು, ಹಿಂದುಳಿದ ವರ್ಗಗಳ ಮಂಡ್ಯ ಜಿಲ್ಲಾ ಉಪಾಧ್ಯಕ್ಷ ಕೆ.ಸಿ.ಚೆನ್ನಬಸವೇಗೌಡ, ತಾ.ಪಂ. ಮಾಜಿ ಸದಸ್ಯ ಕಮ್ಮನಾಯಕನಹಳ್ಳಿ ನಾಗಣ್ಣ, ತಗ್ಗಹಳ್ಳಿ ಎಂ.ಎನ್. ಕೃಷ್ಣ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಬಿ.ಕೃಷ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ಅನಿಲ್ ಕುಮಾರ್, ಹುಚ್ಚೇಗೌಡ, ಚಿಕ್ಕಕುಳ್ಳೇಗೌಡ, ವೆಂಕಟರಾಮಣ್ಣ, ಪೂಜಾರಿ ಮಂಚೇಗೌಡ, ಬೂದಿ ಬಸವರಾಜು, ಸಿದ್ದರಾಜು, ಗ್ಯಾರಂಟಿ ಯೋಜನೆ ಕಾರ್ಯಕ್ರಮಗಳ ಅನುಷ್ಠಾನ ಸಮಿತಿ ಸದಸ್ಯ ರಾಮಚಂದ್ರ, ಕಾಂತರಾಜು, ಹಳುವಾಡಿ ಮಂಚೇಗೌಡ, ಸಾದಿಕ್ ಪಾಷ, ಅಲ್ಲಾಭಕ್ಷ್, ಜಬಿಉಲ್ಲಾಖಾನ್, ರಿಜ್ವಾನ್, ಜಯರಾಮೇಗೌಡ, ಮಲ್ಲೇಗೌಡ, ಮುಸಾವೀರ್ ಖಾನ್, ಕಿಜರ್ ಅಹಮದ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ 500ಕ್ಕೂ ಹೆಚ್ಚು ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.
ಮುಸ್ಲಿಂ ಸಮಾಜದ ಮುಖಂಡರಾದ ಮೊಹಮ್ಮದ್ ಸ್ವಾಗತಿಸಿದರು, ಪುರಸಭೆ ಮಾಜಿ ಸದಸ್ಯ ಕೆ. ಆರ್.ನೀಲಕಂಠ ಕಾರ್ಯಕ್ರಮ ನಡೆಸಿಕೊಟ್ಟರು.
The post ಎಲ್ಲಾ ಧರ್ಮಗಳ ಸಾರವು ಭಗವಂತನ ಸಾಕ್ಷಾತ್ಕಾರ ಪಡೆಯುವುದೇ ಆಗಿದೆ : ಶಾಸಕ ರವಿಕುಮಾರ್ appeared first on nudikarnataka.
Previous Article
ಇಸ್ರೋ ಉಡಾಯಿಸಿದ ಪಿಎಸ್‌ಎಲ್‌ವಿ–ಸಿ 62 ರಾಕೆಟ್ ನಲ್ಲಿ ತಾಂತ್ರಿಕ ದೋಷ !
Next Article
ಜೂನ್ 30ರೊಳಗೆ ‘GBA ಚುನಾವಣೆ’ ಪೂರ್ಣಗೊಳಿಸಿ- ಸುಪ್ರೀಂಕೋರ್ಟ್ ನಿರ್ದೇಶನ