ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಮೆರಿಕದ ಪಡೆಗಳು ಬಂಧಿಸಿದ ಬೆನ್ನಲ್ಲೇ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮನ್ನು ತಾವು ‘ವೆನೆಜುವೆಲಾದ ಹಂಗಾಮಿ ಅಧ್ಯಕ್ಷ’ ಎಂದು ಘೋಷಿಸಿಕೊಂಡಿದ್ದಾರೆ. ಭಾನುವಾರ (ಜ.11) ತಮ್ಮ ಸಾಮಾಜಿಕ ಜಾಲತಾಣವಾದ ‘ಟ್ರುತ್ ಸೋಷಿಯಲ್’ನಲ್ಲಿ (Truth Social) ಈ ಬಗ್ಗೆ ಅವರು ಅಧಿಕೃತ ಪೋಸ್ಟ್ ಹಂಚಿಕೊಂಡಿದ್ದಾರೆ. ಅಮೆರಿಕದ 45ನೇ ಮತ್ತು 47ನೇ ಅಧ್ಯಕ್ಷರಾಗಿರುವ ಟ್ರಂಪ್, ತಮ್ಮ ಭಾವಚಿತ್ರದೊಂದಿಗೆ ‘ವೆನೆಜುವೆಲಾ ಹಂಗಾಮಿ ಅಧ್ಯಕ್ಷ – ಜನವರಿ 2026 ರಿಂದ ಅಧಿಕಾರರೂಢ’ ಎಂದು ನಮೂದಿಸಿಕೊಂಡಿದ್ದಾರೆ. ಈ […]
The post ನಾನೇ ವೆನೆಜುವೆಲಾ ಹಂಗಾಮಿ ಅಧ್ಯಕ್ಷ : ಟ್ರಂಪ್ ಘೋಷಣೆ appeared first on nudikarnataka.
ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಮೆರಿಕದ ಪಡೆಗಳು ಬಂಧಿಸಿದ ಬೆನ್ನಲ್ಲೇ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮನ್ನು ತಾವು ‘ವೆನೆಜುವೆಲಾದ ಹಂಗಾಮಿ ಅಧ್ಯಕ್ಷ’ ಎಂದು ಘೋಷಿಸಿಕೊಂಡಿದ್ದಾರೆ. ಭಾನುವಾರ (ಜ.11) ತಮ್ಮ ಸಾಮಾಜಿಕ ಜಾಲತಾಣವಾದ ‘ಟ್ರುತ್ ಸೋಷಿಯಲ್’ನಲ್ಲಿ (Truth Social) ಈ ಬಗ್ಗೆ ಅವರು ಅಧಿಕೃತ ಪೋಸ್ಟ್ ಹಂಚಿಕೊಂಡಿದ್ದಾರೆ.
ಅಮೆರಿಕದ 45ನೇ ಮತ್ತು 47ನೇ ಅಧ್ಯಕ್ಷರಾಗಿರುವ ಟ್ರಂಪ್, ತಮ್ಮ ಭಾವಚಿತ್ರದೊಂದಿಗೆ ‘ವೆನೆಜುವೆಲಾ ಹಂಗಾಮಿ ಅಧ್ಯಕ್ಷ – ಜನವರಿ 2026 ರಿಂದ ಅಧಿಕಾರರೂಢ’ ಎಂದು ನಮೂದಿಸಿಕೊಂಡಿದ್ದಾರೆ. ಈ ನಡೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಕುತೂಹಲ ಮತ್ತು ಚರ್ಚೆಗೆ ಗ್ರಾಸವಾಗಿದೆ.
ಹಿನ್ನೆಲೆ ಏನು?
ಕಳೆದ ಜನವರಿ 3, 2026ರಂದು ಅಮೆರಿಕದ ಪಡೆಗಳು ರಾತ್ರೋರಾತ್ರಿ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ವಶಕ್ಕೆ ಪಡೆದು, ದೇಶದಿಂದ ಹೊರಗೆ ಕರೆದೊಯ್ದಿದ್ದವು. ತೈಲ ಸಂಪನ್ಮೂಲದಿಂದ ಶ್ರೀಮಂತವಾಗಿರುವ ದಕ್ಷಿಣ ಅಮೆರಿಕದ ರಾಷ್ಟ್ರವಾದ ವೆನೆಜುವೆಲಾದ ಮೇಲೆ ಕಳೆದ ಕೆಲವು ತಿಂಗಳುಗಳಿಂದ ಅಮೆರಿಕ ತೀವ್ರ ಒತ್ತಡ ಹೇರಿತ್ತು. ಇದರ ಮುಂದುವರಿದ ಭಾಗವಾಗಿ ವೈಮಾನಿಕ ದಾಳಿಗಳ ಮೂಲಕ ಈ ಕಾರ್ಯಾಚರಣೆ ನಡೆದಿತ್ತು.
ಅಮೆರಿಕದ ವಾದವೇನು?
ಮಡುರೊ ಬಂಧನದ ನಂತರ ಫ್ಲೋರಿಡಾದ ತಮ್ಮ ‘ಮಾರ್-ಎ-ಲಾಗೊ’ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಟ್ರಂಪ್, “ವೆನೆಜುವೆಲಾದಲ್ಲಿ ಅಮೆರಿಕದ ಉಪಸ್ಥಿತಿ ಈಗಾಗಲೇ ಇದೆ. ಸುರಕ್ಷಿತ ಮತ್ತು ನ್ಯಾಯಯುತ ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆಯುವವರೆಗೂ ಅಮೆರಿಕ ಸರ್ಕಾರವೇ ವೆನೆಜುವೆಲಾದ ಆಡಳಿತವನ್ನು ನಡೆಸಲಿದೆ,” ಎಂದು ಹೇಳಿದ್ದರು.
ಅಲ್ಲದೆ, ವೆನೆಜುವೆಲಾದಲ್ಲಿರುವ ವಿಫುಲ ತೈಲ ಸಂಪನ್ಮೂಲಗಳನ್ನು ಬಳಸಿಕೊಂಡು, ಅದನ್ನು ಇತರ ದೇಶಗಳಿಗೆ ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡುವ ಇಂಗಿತವನ್ನೂ ಟ್ರಂಪ್ ವ್ಯಕ್ತಪಡಿಸಿದ್ದರು. ಈ ಕಾರ್ಯಾಚರಣೆಯನ್ನು ಅವರು “ಅಮೆರಿಕದ ಸಾಮರ್ಥ್ಯ ಮತ್ತು ಆತ್ಮವಿಶ್ವಾಸದ ಪ್ರಬಲ ಪ್ರದರ್ಶನ” ಎಂದು ಬಣ್ಣಿಸಿದ್ದರು.
ವೆನೆಜುವೆಲಾ ಸುಪ್ರೀಂ ಕೋರ್ಟ್ ಆದೇಶವೇನು?
ಟ್ರಂಪ್ ಅವರ ಈ ಘೋಷಣೆಯ ನಡುವೆಯೇ, ವೆನೆಜುವೆಲಾದ ಸಾಂವಿಧಾನಿಕ ಬಿಕ್ಕಟ್ಟು ತೀವ್ರಗೊಂಡಿದೆ. ಜನವರಿ 3 ರಂದು ವೆನೆಜುವೆಲಾ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ಆದೇಶವೊಂದನ್ನು ಹೊರಡಿಸಿದ್ದು, ಮಡುರೊ ಅವರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷೆ ಡೆಲ್ಸಿ ರಾಡ್ರಿಗಸ್ ಅವರು ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದೆ.
”ರಾಷ್ಟ್ರದ ಸಮಗ್ರ ರಕ್ಷಣೆ ಮತ್ತು ಆಡಳಿತಾತ್ಮಕ ನಿರಂತರತೆಯನ್ನು ಕಾಯ್ದುಕೊಳ್ಳಲು ಡೆಲ್ಸಿ ರಾಡ್ರಿಗಸ್ ಅವರು ಬೊಲಿವೇರಿಯನ್ ರಿಪಬ್ಲಿಕ್ ಆಫ್ ವೆನೆಜುವೆಲಾದ ಅಧ್ಯಕ್ಷರ ಕಚೇರಿಯ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ,” ಎಂದು ಕೋರ್ಟ್ ಹೇಳಿದೆ. ಇತ್ತ ಹಂಗಾಮಿ ನಾಯಕಿ ರಾಡ್ರಿಗಸ್ ಅವರು, ಮದುರೊ ಅವರೇ ದೇಶದ ಕಾನೂನುಬದ್ಧ ನಾಯಕ ಎಂದು ಪ್ರತಿಪಾದಿಸಿದ್ದು, ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಅಮೆರಿಕವನ್ನು ಒತ್ತಾಯಿಸಿದ್ದಾರೆ.
ವೆನೆಜುವೆಲಾದಲ್ಲಿ ಒಂದೆಡೆ ಅಮೆರಿಕದ ಅಧ್ಯಕ್ಷರು ತಾವೇ ಹಂಗಾಮಿ ಅಧ್ಯಕ್ಷ ಎಂದು ಘೋಷಿಸಿಕೊಂಡಿದ್ದರೆ, ಇನ್ನೊಂದೆಡೆ ಸ್ಥಳೀಯ ಸುಪ್ರೀಂ ಕೋರ್ಟ್ ಅಲ್ಲಿನ ಉಪಾಧ್ಯಕ್ಷರಿಗೆ ಅಧಿಕಾರ ನೀಡಿದೆ. ಈ ಬೆಳವಣಿಗೆಯಿಂದಾಗಿ ವೆನೆಜುವೆಲಾದ ರಾಜಕೀಯ ಭವಿಷ್ಯ ಅನಿಶ್ಚಿತತೆಯತ್ತ ಸಾಗಿದೆ.
The post ನಾನೇ ವೆನೆಜುವೆಲಾ ಹಂಗಾಮಿ ಅಧ್ಯಕ್ಷ : ಟ್ರಂಪ್ ಘೋಷಣೆ appeared first on nudikarnataka.
Previous Article
ಇಸ್ರೋಗೆ ಮತ್ತೊಂದು ಮೈಲಿಗಲ್ಲು: ನಭಕ್ಕೆ ಹಾರಿದ PSLV-C62 ರಾಕೆಟ್
Next Article
ಬಿಜೆಪಿ ನಾಯಕರು ಮಾಡಲು ಹೊರಟಿರುವುದು ಅಕ್ರಮ ಪಾದಯಾತ್ರೆ- ಸಚಿವ ಎಂ.ಬಿ ಪಾಟೀಲ್