ಮಂಡ್ಯ ತಾಲ್ಲೂಕಿನ ಕಚ್ಚಿಗೆರೆ ದಲಿತ ಮಹಿಳೆ ರಜನಿ ಎಂಬುವರ ಮೇಲಿನ ದೌರ್ಜನ್ಯ ಪ್ರಕರಣದ ಆರೋಪಿಗಳನ್ನು ಈ ಕೂಡಲೇ ಬಂಧಿಸಬೇಕು ಹಾಗೂ ದಲಿತರ ಮಾನ, ಪ್ರಾಣ, ಆಸ್ತಿ ರಕ್ಷಣೆ ಮಾಡುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಮಂಡ್ಯ ನಗರದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆಯಿಂದ ಮೆರವಣಿಗೆ ಹೊರಟ ನೂರಾರು ಕಾರ್ಯಕರ್ತರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಛೇರಿಗೆ ನುಗ್ಗಲು ಯತ್ನಿಸಿದರು, ಈ […]
The post ದಲಿತ ಮಹಿಳೆ ಮೇಲೆ ದೌರ್ಜನ್ಯ ಪ್ರಕರಣ : ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಎಸ್ಪಿ ಕಚೇರಿಗೆ ಮುತ್ತಿಗೆ appeared first on nudikarnataka.
ಮಂಡ್ಯ ತಾಲ್ಲೂಕಿನ ಕಚ್ಚಿಗೆರೆ ದಲಿತ ಮಹಿಳೆ ರಜನಿ ಎಂಬುವರ ಮೇಲಿನ ದೌರ್ಜನ್ಯ ಪ್ರಕರಣದ ಆರೋಪಿಗಳನ್ನು ಈ ಕೂಡಲೇ ಬಂಧಿಸಬೇಕು ಹಾಗೂ ದಲಿತರ ಮಾನ, ಪ್ರಾಣ, ಆಸ್ತಿ ರಕ್ಷಣೆ ಮಾಡುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಮಂಡ್ಯ ನಗರದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆಯಿಂದ ಮೆರವಣಿಗೆ ಹೊರಟ ನೂರಾರು ಕಾರ್ಯಕರ್ತರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಛೇರಿಗೆ ನುಗ್ಗಲು ಯತ್ನಿಸಿದರು, ಈ ಸಂದರ್ಭದಲ್ಲಿ ಪೊಲೀಸರು ತಡೆದು ಮುತ್ತಿಗೆ ಯತ್ನವನ್ನು ವಿಫಲಗೊಳಿಸಿದರು. ಬಳಿಕ ಕಚೇರಿ ಗೇಟ್ ಬಳಿಯೇ ಕುಳಿತು ಧರಣಿ ನಡೆಸಿ ಅಪರ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಆನಂತರ ಜಿಲ್ಲಾಧಿಕಾರಿಗಳ ಕಛೇರಿ ತೆರಳಿ ಕೆಲಕಾಲ ಧರಣಿ ನಡೆಸಿ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷರಾದ ವೆಂಕಟಗಿರಿಯಯ್ಯ ಮಾತನಾಡಿ, ಮಂಡ್ಯ ತಾಲ್ಲೂಕು ತುಂಬಕೆರೆ ಗ್ರಾಮದ ಸರ್ವೆ.ನಂ12/6ರಲ್ಲಿನ 05 ಗುಂಟೆ ಸ್ವಂತ ಜಮೀನು ಮತ್ತು 12/5ರ 08 ಖರಾಬ್ ಭೂಮಿಯಲ್ಲಿ 20 ತೆಂಗಿನ ಮರ ಬೆಳಸಿಕೊಂಡು ಸ್ವಾಧೀನನುಭವದಲ್ಲಿರುವ ಕಚ್ಚಿಗೆರೆ ದಲಿತ ಮಹಿಳೆ ರಜನಿ ಯವರ ಭೂಮಿಯನ್ನು ಕಂದಾಯ ಮತ್ತು ಸರ್ವೆ ಇಲಾಖಾಧಿಕಾರಿಗಳು ನಿಮಾನುಸಾರ ಕ್ರಮವಹಿಸದೆ ಭೂ ವಿವಾದಕ್ಕೆ ಆಸ್ಪದ ಮಾಡಿ, ದಲಿತ ಮಹಿಳೆ ರಜನಿ ಯವರ ಮೇಲೆ ನಿರಂತರ ದೌರ್ಜನ್ಯಕ್ಕೆ ಕಾರಣವಾಗಿದ್ದಾರೆ. ಆದರಿಂದ ಇಂತಹ ಅಧಿಕಾರಿಗಳ ಮೇಲೆ ಕಾನೂನು ಕ್ರಮಹಿಸಬೇಕು ಎಂದು ಒತ್ತಾಯಿಸಿದರು.
ಈ ಭೂ ವಿವಾದವನ್ನೇ ನೆಪ ಮಾಡಿ, ಕಚ್ಚಿಗೆರೆ ಗ್ರಾಮ ಸರ್ವೆ ನಂ.11ರಲ್ಲಿನ 0.15 ಗುಂಟೆ ಸ್ವಂತ ಭೂಮಿಯಲ್ಲಿದ ಭತ್ತದ ಬೆಳೆಯನ್ನು ತರಲು ಹಾಲಿ ಇರುವ ಬಂಡಿದಾರಿಯನ್ನು ಬಿಡದೆ ದಾರಿಗೆ ಅಡ್ಡಲಾಗಿ ಸೌದೆ ಬಡಗುಗಳಾಕಿ ಭತ್ತದ ಗಾಡಿ ಹೋಗಲು ಬಿಡದೆ ದಿನಾಂಕ: 03-01-2026ರಂದು ಬೆಳಿಗ್ಗೆ 9ರಿಂದ ಸಂಜೆ 5ಗಂಟೆವರೆಗೆ ಅಡ್ಡಿಪಡಿಸಿ ದಲಿತ ಮಹಿಳೆ ರಜನಿಯವರನ್ನು ಬಹಿರಂಗ ಜಾತಿ ನಿಂದನೆ, ದೈಹಿಕ ಹಲ್ಲೆ, ಕೊಲೆ ಬೆದರಿಕೆ, ಲೈಂಗಿಕ ದೌರ್ಜನ್ಯ ನಡೆಸಿ, ರಾಕ್ಷಸರಂತೆ ನಡೆದುಕೊಂಡು ಆಸ್ಪತ್ರೆಗೆ ದಾಖಲಾಗುವಂತೆ ಮಾಡಿರುವ ಆರೋಪಿಗಳನ್ನು ಬಂಧಿಸದಿರುವ ಪೋಲೀಸರ ಕ್ರಮ ಸರಿಯಲ್ಲ ಎಂದು ಖಂಡಿಸಿದ ಅವರು ದೂರು ದಾಖಲಿಸಿ ಕೈಕಟ್ಟಿ ಕುಳಿತರೆ ಸಾಲದು, ಅಪರಾಧ ಸಂಖ್ಯೆ: 0004/2026, ದಿ: 04-01-2026ರ ಪ್ರಕರಣದ ಆರೋಪಿಗಳಾದ ಶರತ್, ಬೆಟ್ಟೆಗೌಡ, ಸಿದ್ದಣ್ಣ, ಶಿವಣ್ಣ, ಸ್ವರೂಪ್ ಇವರುಗಳನ್ನು ಈ ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ಇದೇ ಭೂ ವಿವಾದವನ್ನೇ ನೆಪ ಮಾಡಿ ಇದೇ ದಲಿತ ಮಹಿಳೆ ರಜನಿ ಮೇಲೆ ಈ ಹಿಂದೆಯೂ ಮರಣಾಂತಿಕ ದೌರ್ಜನ್ಯ ಮಾಡಿದ ಬಗ್ಗೆ ದೌರ್ಜನ್ಯ ಪ್ರಕರಣ ದಾಖಲಾಗಿದ್ದರೂ ಮತ್ತೆ ಕಾನೂನಿನ ಭಯವಿಲ್ಲದೆ ಅಮಾಯಕ ದಲಿತ ಮಹಿಳೆ ಮೇಲೆ ದ್ವೇಷದಿಂದ ಮತ್ತೆ ಮತ್ತೆ ದೌರ್ಜನ್ಯ ನಡೆಸುತ್ತಿದ್ದರೂ ನಿರ್ಲಕ್ಷ್ಯವಹಿಸುತ್ತಿರುವ ಪೋಲೀಸ್ ಅಧಿಕಾರಿಗಳ ಮೇಲೆಯೂ ದೌರ್ಜನ್ಯ ಕಾಯ್ದೆಯ ಕಲಂ4 ರಂತೆ ಕ್ರಮವಹಿಸಬೇಕು.
ದೌರ್ಜನ್ಯಕ್ಕೆ ತುತ್ತಾದ ಸಂತ್ರಸ್ಥ ಕಚ್ಚಿಗೆರೆ ದಲಿತ ಮಹಿಳೆ ರಜನಿಯವರು ಜೀವ ಭಯದಲ್ಲಿರುವ ಕಾರಣ ಸೂಕ್ತ ಮತ್ತು ಸಮರ್ಪಕ ಪೋಲೀಸ್ ರಕ್ಷಣೆ ನೀಡಬೇಕೆಂದರು.
ಅಲ್ಲದೇ ಜಿಲ್ಲೆಯಲ್ಲಿನ ದಲಿತರ ಭೂ ವಿವಾದ ಸೇರಿದಂತೆ ಎಲ್ಲಾ ಗಂಭೀರ ಸಮಸ್ಯೆಗಳಿಗೆ ಜಿಲ್ಲಾ ಆಡಳಿತ ಸ್ಪಂದನೆ ಮಾಡಬೇಕು, ದಲಿತರ ಮಾನ, ಪ್ರಾಣ, ಆಸ್ತಿ ಸಂರಕ್ಷಣೆಗೆ ಜಿಲ್ಲಾಧಿಕಾರಿಗಳು ಗಂಭೀರ ಕ್ರಮವಹಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವಿಭಾಗೀಯ ಸಂಚಾಲಕರಾದ ಅನಿಲ್ ಕೆರಗೋಡು, ಜಿಲ್ಲಾಧ್ಯಕ್ಷರು ಆನಂದ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಸುಶ್ಮಿತಾ, ಶರಾವತಿ ಅಶ್ವಥ್, ಮುತ್ತುರಾಜ್ ಮತ್ತಿತರರು ಇದ್ದರು.
The post ದಲಿತ ಮಹಿಳೆ ಮೇಲೆ ದೌರ್ಜನ್ಯ ಪ್ರಕರಣ : ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಎಸ್ಪಿ ಕಚೇರಿಗೆ ಮುತ್ತಿಗೆ appeared first on nudikarnataka.
Previous Article
10 ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಲಿದೆ-ಸಿಎಂ ಸಿದ್ದರಾಮಯ್ಯ
Next Article
ವಿದ್ಯುತ್ ಚಾಲಿತ ಯಮಾಹಾ ಇಸಿ-06 ಬೈಕ್ ಹಸ್ತಾಂತರಿಸಿದ ಸಚಿವ ಎಂ.ಬಿ ಪಾಟೀಲ್