Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ವಿಬಿಜಿ ರಾಮಜಿ ಕಾಯ್ದೆ ಕೂಡಲೇ ರದ್ದುಪಡಿಸಿ:ಆವರಗೆರೆ ರಂಗನಾಥ್

    2 days ago

    ಜಗಳೂರು : ಗ್ರಾಮೀಣ ಭಾಗದ ಕೂಲಿಕಾರ್ಮಿಕರಿಗೆ ಮಾರಕವಾಗುತ್ತಿರುವ ವಿಬಿಜಿ ರಾಮ ಜಿ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರಕಾರ ಕೂಡಲೇ ರದ್ದು ಪಡಿಸಬೇಕು ಎಂದು ಕರ್ನಾಟಕ ರಾಜ್ಯ ಕೃಷಿಕೂಲಿಕಾರ್ಮಿಕರ ಸಂಘದ ಜಿಲ್ಲಾ ಕಾರ್ಯದರ್ಶಿ ಆವರಗೆರೆ ರಂಗನಾಥ್ ಆಗ್ರಹಿಸಿದರು.  ತಾಲ್ಲೂಕಿನ ಪಲ್ಲಾಗಟ್ಟೆ ಗ್ರಾಮದಲ್ಲಿ ಬಿಕೆಎಂಯು ಸಂಯೋಜಿತ ಕರ್ನಾಟಕ ರಾಜ್ಯ ಕೃಷಿ ಕೂಲಿಕಾರ್ಮಿಕರ ಸಂಘಟನೆಯ ತಾಲ್ಲೂಕು ಸಮ್ಮೇಳನದ‌ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಅಸಂಘಟಿತ ಕೃಷಿ ಕೂಲಿಕಾರ್ಮಿಕರಿಗೆ ಭದ್ರತೆಯಿಲ್ಲ.ವರ್ಷದಲ್ಲಿ ಬಹುಪಾಲು ದಿನಗಳಲ್ಲಿ ನಿರುದ್ಯೋಗ ಕಾಡುತ್ತಿದೆ.ಇದರಿಂದ ಕೂಲಿಕೆಲಸವನ್ನೇ ಪ್ರಧಾನವಾಗಿಸಿಕೊಂಡ ಕುಟುಂಬಗಳು ಬೀದಿಗೆ […]

    ಜಗಳೂರು : ಗ್ರಾಮೀಣ ಭಾಗದ ಕೂಲಿಕಾರ್ಮಿಕರಿಗೆ ಮಾರಕವಾಗುತ್ತಿರುವ ವಿಬಿಜಿ ರಾಮ ಜಿ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರಕಾರ ಕೂಡಲೇ ರದ್ದು ಪಡಿಸಬೇಕು ಎಂದು ಕರ್ನಾಟಕ ರಾಜ್ಯ ಕೃಷಿಕೂಲಿಕಾರ್ಮಿಕರ ಸಂಘದ ಜಿಲ್ಲಾ ಕಾರ್ಯದರ್ಶಿ ಆವರಗೆರೆ ರಂಗನಾಥ್ ಆಗ್ರಹಿಸಿದರು.
     
     ತಾಲ್ಲೂಕಿನ ಪಲ್ಲಾಗಟ್ಟೆ ಗ್ರಾಮದಲ್ಲಿ ಬಿಕೆಎಂಯು ಸಂಯೋಜಿತ ಕರ್ನಾಟಕ ರಾಜ್ಯ ಕೃಷಿ ಕೂಲಿಕಾರ್ಮಿಕರ ಸಂಘಟನೆಯ ತಾಲ್ಲೂಕು ಸಮ್ಮೇಳನದ‌ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
     
    ಅಸಂಘಟಿತ ಕೃಷಿ ಕೂಲಿಕಾರ್ಮಿಕರಿಗೆ ಭದ್ರತೆಯಿಲ್ಲ.ವರ್ಷದಲ್ಲಿ ಬಹುಪಾಲು ದಿನಗಳಲ್ಲಿ ನಿರುದ್ಯೋಗ ಕಾಡುತ್ತಿದೆ.ಇದರಿಂದ ಕೂಲಿಕೆಲಸವನ್ನೇ ಪ್ರಧಾನವಾಗಿಸಿಕೊಂಡ ಕುಟುಂಬಗಳು ಬೀದಿಗೆ ಬೀಳುತ್ತಿವೆ.ಸರ್ಕಾರ ಮನರೇಗಾದಡಿ ಕೆಲಸಕೊಡುವ ಭರವಸೆ ನೀಡಿದೆ.ಆದರೆ ಕೇಂದ್ರದಲ್ಲಿನ ಬಿಜೆಪಿ ಆಡಳಿತ ಸರಕಾರ ಮನರೇಗಾ ಕಾಯ್ದೆ ತಿದ್ದುಪಡಿಗೊಳಿಸುವುದಲ್ಲದೆ ಮಹಾತ್ಮಗಾಂಧಿ ಅವರ ಹೆಸರು ಅಳಿಸಿ ಹಾಕಲು ಪಣತೊಟ್ಟಿದ್ದು ಅಭಿವೃದ್ದಿಯಲ್ಲಿಯೂ ರಾಮನ ಜಪಮಾಡುತ್ತಿದೆ. ನರೇಗಾವವನ್ನೇ ಮುಂದುವರೆಸಿ ಪ್ರತಿಯೊಬ್ಬ ಕೂಲಿಕಾರ್ಮಿಕನಿಗೂ 200‌ ದಿನ ಉದ್ಯೋಗ ನೀಡುವ ಜೊತೆಗೆ ದಿನಕ್ಕೆ 700 ರೂಪಾಯಿ ಕೂಲಿಹಣ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
     
    ಸಂಘಟನೆಯ ಜಿಲ್ಲಾ ಸಂಚಾಲಕ ಆವರಗೆರೆ ಎ.ತಿಪ್ಪೇಶ್ ಮಾತನಾಡಿ,ಕೃಷಿ ಬೆಳೆಗಳ ಉತ್ಪಾದನೆಯಲ್ಲಿ ಕೃಷಿ ಕಾರ್ಮಿಕರ ಪಾಲು ದೊಡ್ಡದಿದೆ.ವಯಸ್ಸಾದ ಕೃಷಿ ಕಾರ್ಮಿಕರಿಗೆ ಪಿಂಚಣಿ ಸೌಲಭ್ಯ ನೀಡಬೇಕು.ಜಮೀನುಗಳಲ್ಲಿ ಕೂಲಿಕೆಲಸಮಾಡುವವರನ್ನು ಕಾರ್ಮಿಕರೆಂದು ಪರಿಗಣಿಸಬೇಕು.ಕೃಷಿ ಕೆಲಸ ನಿರತವೇಳೆ ವಿಷಜಂತುಗಳು ಕಚ್ಚಿ ಸಾವನ್ನಪ್ಪಿದ ವೇಳೆ ನೀಡುವ ಪರಿಹಾರವನ್ನು 10‌ಲಕ್ಷ ರೂಪಾಯಿಗೆ ಏರಿಕೆಮಾಡಬೇಕು.ಆಡಳಿತ ಸರಕಾರಗಳು ಕಾರ್ಮಿಕ ವಿರೋಧಿ ಅನುಸರಿಸುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
     
    ಸಿಪಿಐ ತಾಲ್ಲೂಕು ಕಾರ್ಯದರ್ಶಿ ಮಾದಿಹಳ್ಳಿ ಮಂಜುನಾಥ್ ಮಾತನಾಡಿ,ಗ್ರಾಮೀಣ ಭಾಗದ ಕೃಷಿ ಕಾರ್ಮಿಕರ ಹಕ್ಕುಗಳಿಗಾಗಿ ಸಂಘಟಿತ ಹೋರಾಟ ಅನಿವಾರ್ಯವಾಗಿದೆ.ವಿಂಡ್ ಫ್ಯಾನ್ ಕಾರ್ಪೋರೇಟ್ ಕಂಪನಿಗಳು ರೈತರ ಜಮೀನು ಖರೀದಿಸುವ ಮೂಲಕ ರೈತರನ್ನು ಒಕ್ಕಲೆಬ್ಬಿಸುತ್ತಿವೆ.ಇದರಿಂದ ಕೃಷಿ ಚಟುವಟಿಕೆಯನ್ನೇ ಅವಲಂಬಿಸಿರುವ ಕುಟುಂಬಗಳು ಕೆಲಸದಿಂದ ವಂಚಿತರಾಗುತ್ತಿದ್ದಾರೆ.ಆರ್ಥಿಕ ಸಂಕಷ್ಟದಿಂದ ಮಕ್ಕಳು ಉನ್ನತ ಶಿಕ್ಷಣದಿಂದ ವಿಮುಖರಾಗುತ್ತಿದ್ದಾರೆ.ಆಡಳಿತ ಸರಕಾರಗಳು ಕೂಲಿಕಾರ್ಮಿಕರ ಮಕ್ಕಳಿಗೆ ಸರಕಾರಿ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.
     
     
    seem1 dinamaana adsಎನ್ ಎಫ್ ಐ ಡಬ್ಲ್ಯೂ ಮಹಿಳಾ ಸಂಘಟನೆಯ ಗಿಡ್ಡನಕಟ್ಟೆ ಬೊಮ್ಮಕ್ಕ ಮಾತನಾಡಿ,ಕೃಷಿ ಚಟುವಟಿಕೆಯಲ್ಲಿ ಮಹಿಳಾ ಕಾರ್ಮಿಕರು ಹೆಚ್ಚಾಗಿದ್ದು.ಬಿಸಿಲು,ಮಳೆ,ಗಾಳಿ,ಚಳಿಯಲ್ಲಿ ತೋಟ,ಗದ್ದೆ,ಜಮೀನುಗಳಲ್ಲಿ ಕೆಲಸನಿರತವೇಳೆ ತೊಂದರೆಗೀಡಾದರೆ ಯಾರನ್ನು ಕೇಳಬೇಕು.ಕಾರ್ಮಿಕರ ಬಗ್ಗೆ ಸರ್ಕಾರದ ತಾರತಮ್ಯ ನೀತಿ ಸಲ್ಲದು.ಸಂವಿಧಾನಬದ್ದ ಹಕ್ಕುಗಳಿಗಾಗಿ ಕಾರ್ಮಿಕ ಸಂಘಟನೆಗಳಲ್ಲಿ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದರು.
     
    ಇದೇ ವೇಳೆ 17 ಜನರ ತಾಲ್ಲೂಕು ಸಮಿತಿ ಆಯ್ಕೆಮಾಡಲಾಯಿತು.
     
    ಈ ಸಂದರ್ಭದಲ್ಲಿ ಸಿಪಿಐ ತಾಲ್ಲೂಕು ಸಹಕಾರ್ಯದರ್ಶಿ ಗೊಲ್ಲರಹಟ್ಟಿ ತಿಪ್ಪೇಸ್ವಾಮಿ,ಕೃಷಿ ಕೂಲಿಕಾರ್ಮಿಕರ ಸಂಘಟನೆ ನೂತನ ತಾಲ್ಲೂಕು ಅಧ್ಯಕ್ಷ ಪಲ್ಲಾಗಟ್ಟೆ ಬಿ.ನಾಗರಾಜ್,ಕಾರ್ಯದರ್ಶಿ ತುಪ್ಪದಹಳ್ಳಿ ಸುಭಾಷ್,ಉಪಾಧ್ಯಕ್ಷರಾದ ಮಂಜುನಾಥ್ ಸಿದ್ದಯ್ಯನಕೋಟೆ,ರುದ್ರೇಶ್ ತಾರೇಹಳ್ಳಿ,ಸಹಕಾರ್ಯದರ್ಶಿ ರಮಿಜಾ,ಪದಾಧಿಕಾರಿಗಳಾದ ನಾಗರತ್ನಮ್ಮ,ಬಸವಣ್ಯಮ್ಮ,ರಜಿಯಾ,ಮಾರಕ್ಕ,ರತ್ನಮ್ಮ,ಮಹಾದೇವಮ್ಮ,ಚಂದ್ರಪ್ಪ,ಸುರೇಶ್,ವೀರೇಶ್ ಸೇರಿದಂತೆ ಇತರರು ಇದ್ದರು.
    job news dinamaana ads
    Click here to Read More
    Previous Article
    ಶಿಕಾರಿಪುರಕ್ಕೆ ಬಂದು ಡಿಕೆ ಶಿವಕುಮಾರ್ ಸ್ಪರ್ಧೆ ಮಾಡಲಿ-ಬಿವೈ ವಿಜಯೇಂದ್ರ ಸವಾಲು
    Next Article
    ಅನಧಿಕೃತ ಕಟ್ಟಡಗಳ ಸೀಜ್‌ ಮಾಡಲು ಜಿಬಿಎ ನಿರ್ಧಾರ : ಅನಧಿಕೃತ ಕಟ್ಟಡದ ವಿರುದ್ಧ ಮುಂದುವರಿದ ಜಿಬಿಎ ಸಮರ

    Related ತಾಜಾ ಸುದ್ದಿ Updates:

    Are you sure? You want to delete this comment..! Remove Cancel

    Comments (0)

      Leave a comment