Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಚಾಮುಂಡಿಬೆಟ್ಟದಲ್ಲಿ ಅಭಿವೃದ್ಧಿ ಕಾಮಗಾರಿ: ಹೈಕೋರ್ಟ್‌  ನೋಟಿಸ್‌ ಜಾರಿ.

    1 day ago

      ಬೆಂಗಳೂರು, ಜ.೧೫,೨೦೨೬ : ಮೈಸೂರಿನ ಐತಿಹಾಸಿಕ ಚಾಮುಂಡೇಶ್ವರಿ ಬೆಟ್ಟದಲ್ಲಿನಿರ್ಮಾಣ ಕಾಮಗಾರಿ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಬುಧವಾರ ನೋಟಿಸ್‌ ಜಾರಿಗೊಳಿಸಿದೆ. ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಹೈಕೋರ್ಟ್‌ ಈ ನೋಟಿಸ್‌ ಜಾರಿಮಾಡಿದೆ. ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆಯ ಸಿಂಧುತ್ವ ಪ್ರಶ್ನಿಸಿ ರಾಜಮನೆತನದ ಪ್ರಮೋದಾದೇವಿ ಒಡೆಯರ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ವಿಚಾರಣೆ ನಡೆಸಿತು. ಈ ವೇಳೆ  ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಾಯಿ ದೀಪಕ್‌, ‘‘ದೇವಾಲಯದ […]

    The post ಚಾಮುಂಡಿಬೆಟ್ಟದಲ್ಲಿ ಅಭಿವೃದ್ಧಿ ಕಾಮಗಾರಿ: ಹೈಕೋರ್ಟ್‌  ನೋಟಿಸ್‌ ಜಾರಿ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.



     

    ಬೆಂಗಳೂರು, ಜ.೧೫,೨೦೨೬ : ಮೈಸೂರಿನ ಐತಿಹಾಸಿಕ ಚಾಮುಂಡೇಶ್ವರಿ ಬೆಟ್ಟದಲ್ಲಿನಿರ್ಮಾಣ ಕಾಮಗಾರಿ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಬುಧವಾರ ನೋಟಿಸ್‌ ಜಾರಿಗೊಳಿಸಿದೆ.

    ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಹೈಕೋರ್ಟ್‌ ಈ ನೋಟಿಸ್‌ ಜಾರಿಮಾಡಿದೆ.

    ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆಯ ಸಿಂಧುತ್ವ ಪ್ರಶ್ನಿಸಿ ರಾಜಮನೆತನದ ಪ್ರಮೋದಾದೇವಿ ಒಡೆಯರ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ವಿಚಾರಣೆ ನಡೆಸಿತು.

    ಈ ವೇಳೆ  ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಾಯಿ ದೀಪಕ್‌, ‘‘ದೇವಾಲಯದ ಆಸ್ತಿ ಮಾಲಿಕತ್ವ ವಿವಾದ ವಿಭಾಗೀಯ ಪೀಠದ ಮುಂದೆ ಬಾಕಿ ಇದೆ. ಆದರೆ ಅದರ ನಡುವೆಯೇ ಸರಕಾರ ಶಾಸನದ ಮೂಲಕ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವನ್ನು ಅಸ್ಥಿತ್ವಕ್ಕೆ ತಂದಿದೆ. ಆ ಪ್ರಾಧಿಕಾರ ಅರ್ಜಿದಾರರಿಗೆ ಸಭೆಯ ನೋಟಿಸ್‌ಗಳನ್ನು ನೀಡುತ್ತಿಲ್ಲ. ಜತೆಗೆ ದೇವಾಲಯದ ಆವರಣದಲ್ಲಿಶಾಶ್ವತ ನಿರ್ಮಾಣ ಕಾಮಗಾರಿ ಮಾಡಲಾಗುತ್ತಿದೆ”  ಎಂದರು.

    ಅದಕ್ಕೆ ರಾಜ್ಯ ಸರಕಾರದ ಪರ ಉತ್ತರಿಸಿದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ದೇವದಾಸ್‌, ಕೇಂದ್ರ ಸರಕಾರದ ಪ್ರಸಾದ್‌ ಯೋಜನೆಯಡಿ ಚಾಮುಂಡಿ ಬೆಟ್ಟದಲ್ಲಿಕಾಮಗಾರಿ ಕೈಗೊಳ್ಳಲಾಗುತ್ತಿದೆ. ದೇವಾಲಯದ ಆವರಣದಲ್ಲಿಯಾವುದೇ ಶಾಶ್ವತ ಕಾಮಗಾರಿ ನಡೆಸುವುದಿಲ್ಲ. ಬದಲಿಗೆ ಭಕ್ತರಿಗೆ ತಂಗುದಾಣ ಮಾತ್ರ ನಿರ್ಮಿಸುತ್ತಿದ್ದೇವೆ ಎಂದು ವಿವರಿಸಿದರು.

    ಎಎಜಿ ಹೇಳಿಕೆಯನ್ನು ದಾಖಲಿಸಿದ ನ್ಯಾಯಾಲಯ, ಕೇಂದ್ರ ಸರಕಾರದ ಯೋಜನೆಯಡಿ ಯಾವ ಕಾಮಗಾರಿಗಳಿಗೆ ಅವಕಾಶವಿದೆ ಎಂಬುದನ್ನು ತಿಳಿಸುವಂತೆ ಸೂಚನೆ ನೀಡಿ ವಿಚಾರಣೆಯನ್ನು ಫೆ.13ಕ್ಕೆ ಮುಂದೂಡಿತು.

    ಪ್ರಮೋದಾದೇವಿ ಒಡೆಯರ್‌ ಅವರು, ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆ ಸಂವಿಧಾನದ ಕಲಂ 14,19,21,25 ಮತ್ತು 26ರ ಉಲಂಘನೆಯಾಗಿದೆ. ಸರಕಾರದ ನಿರ್ಧಾರ ಏಕಪಕ್ಷೀಯ ಮತ್ತು ತಾರಮತ್ಯದಿಂದ ಕೂಡಿದೆ. ಹಾಗಾಗಿ ಅದನ್ನು ರದ್ದುಗೊಳಿಸಬೇಕು ಎಂದು ನ್ಯಾಯಾಲಯವನ್ನು ಕೋರಿದ್ದಾರೆ.

    key words: Development work, Chamundi Hills, High Court, issues notice, Justice M. Naga Prasanna, Pramoda Devi Wodeyar, the royal family

    SUMMARY:

    Development work on Chamundi Hills: High Court issues notice.

    The High Court on Wednesday issued a notice regarding the construction work on the historic Chamundeshwari hill in Mysore. The High Court has issued this notice to the Chamundeshwari Area Development Authority, the Central and State governments. A single-judge bench headed by Justice M. Nagaprasanna heard a petition filed by Pramoda Devi Wodeyar of the royal family, challenging the validity of the formation of the Chamundeshwari Area Development Authority.

    The post ಚಾಮುಂಡಿಬೆಟ್ಟದಲ್ಲಿ ಅಭಿವೃದ್ಧಿ ಕಾಮಗಾರಿ: ಹೈಕೋರ್ಟ್‌  ನೋಟಿಸ್‌ ಜಾರಿ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

    Click here to Read More
    Previous Article
    ಕಾರವಾರದಲ್ಲಿ ಯುವತಿ ಆತ್ಮಹತ್ಯೆ; ಜೆಡಿಎಸ್ ನಾಯಕಿ ಮಗನ ಕಿರುಕುಳವೇ ಕಾರಣ, ಕುಟುಂಬದ ಆರೋಪ.
    Next Article
    ಭದ್ರಾ ಜಲಾಶಯ ವಿಶ್ವೇಶ್ವರ ನಿಗಮದ ವ್ಯಾಪ್ತಿಗೆ ಒಳಪಡಿಸಿ | ಹೋರಾಟ ಸಮಿತಿ

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment