Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಎಲ್ಲಾ ಧರ್ಮಗಳ ದೇವ ಮಂದಿರಗಳ ವಾಸ್ತು ; ಸಹಜ ಸೂರ್ಯ ರಶ್ಮಿಯ ಸ್ಪರ್ಶ…

    6 hours ago

    ವಿವೇಕಾನಂದ ಎಚ್.ಕೆ ಎಲ್ಲಾ ಧರ್ಮಗಳ ದೇವ ಮಂದಿರಗಳ ವಾಸ್ತು….. ಕೃತಕ ಮಕರ ಜ್ಯೋತಿ…. ಸಹಜ ಸೂರ್ಯ ರಶ್ಮಿಯ ಸ್ಪರ್ಶ… ನಂಬಿಕೆ – ವಾಸ್ತವ – ಧರ್ಮ – ವಿಜ್ಞಾನ – ಪ್ರಾಕೃತಿಕ ಸಹಜತೆ – ಮೂಡನಂಬಿಕೆ – ವೈಜ್ಞಾನಿಕ ಪ್ರಜ್ಞೆ – ನಮ್ಮ ಆಯ್ಕೆ – ನಾಗರಿಕತೆಯ ಬೆಳವಣಿಗೆ – ಬದುಕಿನ ಗುಣಮಟ್ಟ………… ದೇವಾಲಯಗಳ ವಾಸ್ತು ವಿನ್ಯಾಸ – ಮಾಧ್ಯಮಗಳು ಮತ್ತು ಅವರ ಕೆಲವು ಜ್ಯೋತಿಷಿಗಳು ಭಕ್ತಿಯ ಹೆಸರಿನಲ್ಲಿ ಬಿತ್ತುವ ಮೌಢ್ಯ – ಪ್ರಕೃತಿಯ ಸಹಜ ನಡವಳಿಕೆ…….. […]

    The post ಎಲ್ಲಾ ಧರ್ಮಗಳ ದೇವ ಮಂದಿರಗಳ ವಾಸ್ತು ; ಸಹಜ ಸೂರ್ಯ ರಶ್ಮಿಯ ಸ್ಪರ್ಶ… appeared first on nudikarnataka.



    ವಿವೇಕಾನಂದ ಎಚ್.ಕೆ

    ಎಲ್ಲಾ ಧರ್ಮಗಳ ದೇವ ಮಂದಿರಗಳ ವಾಸ್ತು…..

    ಕೃತಕ ಮಕರ ಜ್ಯೋತಿ….

    ಸಹಜ ಸೂರ್ಯ ರಶ್ಮಿಯ ಸ್ಪರ್ಶ…

    ನಂಬಿಕೆ – ವಾಸ್ತವ – ಧರ್ಮ – ವಿಜ್ಞಾನ – ಪ್ರಾಕೃತಿಕ ಸಹಜತೆ – ಮೂಡನಂಬಿಕೆ – ವೈಜ್ಞಾನಿಕ ಪ್ರಜ್ಞೆ – ನಮ್ಮ ಆಯ್ಕೆ – ನಾಗರಿಕತೆಯ ಬೆಳವಣಿಗೆ – ಬದುಕಿನ ಗುಣಮಟ್ಟ…………

    ದೇವಾಲಯಗಳ ವಾಸ್ತು ವಿನ್ಯಾಸ – ಮಾಧ್ಯಮಗಳು ಮತ್ತು ಅವರ ಕೆಲವು ಜ್ಯೋತಿಷಿಗಳು ಭಕ್ತಿಯ ಹೆಸರಿನಲ್ಲಿ ಬಿತ್ತುವ ಮೌಢ್ಯ – ಪ್ರಕೃತಿಯ ಸಹಜ ನಡವಳಿಕೆ……..

    ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಸ್ಥಾನದ ಗರ್ಭಗುಡಿಯ ಶಿವಲಿಂಗದ ಮೇಲೆ ಸಂಕ್ರಾಂತಿಯ ದಿನದಂದು ಸಂಜೆ ಸೂರ್ಯ ಕಿರಣಗಳ ಸ್ಪರ್ಶ ಮತ್ತು ಭಾರತೀಯ ದೇವಾಲಯಗಳ ವಾಸ್ತು ವಿನ್ಯಾಸ………

    ಮುಸ್ಲಿಮರ ಮಸೀದಿಗಳು,
    ಕ್ರಿಶ್ಚಿಯನ್ನರ ಚರ್ಚುಗಳು,
    ಸಿಖ್ಖರ ಗುರುದ್ವಾರಗಳು,
    ಜೈನ ಮಂದಿರಗಳು,
    ಬೌದ್ಧ‌ ಸ್ತೂಪಗಳು
    ವಿಶ್ವದ ಎಲ್ಲಾ ಭಾಗಗಳಲ್ಲೂ ಮೇಲ್ನೋಟಕ್ಕೆ ಒಂದೇ ರೀತಿ ಕಾಣುತ್ತವೆ. ವಿಶಾಲತೆ, ಭವ್ಯತೆ, ಪ್ರಾಕೃತಿಕ ಹಿನ್ನೆಲೆಯ ವಿಷಯದಲ್ಲಿ ಒಂದಷ್ಟು ವ್ಯತ್ಯಾಸ ಇರಬಹುದು. ಆಂತರಿಕ ವಿನ್ಯಾಸಕ್ಕೆ ಅನೇಕ ಅರ್ಥಗಳೂ ಇರುತ್ತದೆ…..

    ಆದರೆ ಹಿಂದೂ ದೇವಾಲಯಗಳಲ್ಲಿ ಮಾತ್ರ ‌ಸಾಕಷ್ಟು ವಿಭಿನ್ನತೆ ಮತ್ತು ವಿವಿಧ ರೀತಿಯ ವಾಸ್ತು ವೈವಿಧ್ಯತೆ ಹೊಂದಿವೆ. ಪುರಾಣದ ಕಥೆಗಳು, ಕಾಲ್ಪನಿಕ ಪಾತ್ರಗಳು, ಪ್ರಕೃತಿಯ ಆರಾಧಕರಾದ ಹಿಂದೂ ಜೀವನ ಶೈಲಿಯ ಜನರ ದೇವಾಲಯಗಳು ಬಹುತೇಕ ಪೂರ್ವಾಭಿಮುಖವಾಗಿಯೇ ಇರುತ್ತದೆ. ಬೆಳಗಿನ ಸೂರ್ಯನ ಕಿರಣಗಳು ದೇವರು ಮೂರ್ತಿಯ ಮೇಲೆ ಬೀಳುವಂತೆ ನಿರ್ಮಿಸಲಾಗಿರುತ್ತದೆ.

    ಗರ್ಭಗುಡಿ, ಪ್ರಾಂಗಣ, ಮುಖ ಮಂಟಪ, ಸುತ್ತಮುತ್ತಲಿನ ಪರಿಸರ, ಪ್ರವೇಶ ದ್ವಾರ ಎಲ್ಲವೂ ನಿರ್ಧಿಷ್ಟ ಉದ್ದೇಶವನ್ನು ಹೊಂದಿರುತ್ತದೆ. ಎಂದಿನಂತೆ ಭಾರತೀಯರಲ್ಲಿ ನಂಬಿಕೆಯ ಆಧಾರದ ಮೇಲೆ, ಅನುಭವಗಳಿಂದ ಕಲಿತ ಪಾಠಗಳಿಂದ ಜನರ ಭಕ್ತಿ ಭಾವನೆಗಳಿಗೆ, ಸಂಪ್ರದಾಯಗಳಿಗೆ, ಪವಿತ್ರ ಗ್ರಂಥಗಳಿಗೆ ಪೂರಕವಾಗಿ ದೇವಾಲಯಗಳನ್ನು ನಿರ್ಮಿಸಿದ್ದಾರೆ.

    ಚಿತ್ರಕಲೆ, ಶಿಲ್ಪಕಲೆ, ವಾಸ್ತುಶಿಲ್ಪ, ವೈವಿಧ್ಯತೆ ಮತ್ತು ಇತಿಹಾಸ ಸಾರುವ ಕಲ್ಲುಗಂಬಗಳು, ಕೆಲವು ಕಡೆ ಗೋಪುರಗಳು ಎಲ್ಲವೂ ಪ್ರದೇಶದಿಂದ ಪ್ರದೇಶಕ್ಕೆ ಸಾಕಷ್ಟು ವಿಶೇಷತೆ ಹೊಂದಿವೆ.

    ಆ ರೀತಿಯ ಒಂದು ವಿಶೇಷತೆಯೇ ಗವಿ ಗಂಗಾಧರೇಶ್ವರ ದೇವಾಲಯದ, ಸಂಕ್ರಾಂತಿ ಸಂದರ್ಭದ ಸೂರ್ಯ ರಶ್ಮಿಯ ಶಿವಲಿಂಗದ ಸ್ಪರ್ಶ. ಪ್ರಕೃತಿಯ ಸಹಜ ಕ್ರಿಯೆ. ಸಂಜೆ ಸೂರ್ಯಾಸ್ತದ ಸಮಯದಲ್ಲಿ ಕೆಲವೇ ಸೆಕೆಂಡುಗಳ ಈ ಪ್ರಕ್ರಿಯೆ ಭಕ್ತರಿಗೆ ಒಂದು ದೈವಿಕ ಮಹತ್ವ ಎನಿಸಿದರೆ, ಕೆಲವರಿಗೆ ಕುತೂಹಲಕಾರಿ ಮತ್ತು ಸುಂದರ ದೃಶ್ಯ. ಇದು ಪ್ರತಿ ವರ್ಷವೂ ನಡೆಯುತ್ತದೆ. ಆ ದೇವಸ್ಥಾನದ ವಾಸ್ತು ವಿನ್ಯಾಸ ಒಂದು ಬೆರಗು ಮೂಡಿಸುವುದು ನಿಜ. ಆದರೆ ಅದನ್ನು ವೈಭವೀಕರಿಸಿ ಅತಿ ಮಾನುಷ ಶಕ್ತಿ ಎಂದು ಬಿಂಬಿಸುವುದು ಸರಿಯಲ್ಲ.

    ಶಬರಿಮಲೆಯ ಮಕರ ಜ್ಯೋತಿ ಒಂದು ಕೃತಕ ಸೃಷ್ಟಿ ಎಂದು ಆಡಳಿತ ಮಂಡಳಿ ಈಗಾಗಲೇ ಸುಪ್ರೀಂಕೋರ್ಟ್ ಮುಂದೆ ಒಪ್ಪಿಕೊಂಡಿದೆ. ಆದರೆ ನೋಡಲು ಅದೂ ಸಹ ಒಂದು ರೋಮಾಂಚಕಾರಿ ದೃಶ್ಯ.

    ಪ್ರಾಚೀನ ದೇವಾಲಯಗಳನ್ನು ಹೆಚ್ಚಾಗಿ ಕಾಡು, ಮೇಡು, ಬೆಟ್ಟ, ಗುಡ್ಡಗಳ ಕಠಿಣ ಸ್ಥಳಗಳಲ್ಲಿ ಕಟ್ಟಲಾಗುತ್ತಿತ್ತು. ಬಹುಶಃ ಸುಂದರ ಪ್ರಕೃತಿಯ ಮಡಿಲಲ್ಲಿ ಅದರ ಸೌಂದರ್ಯವನ್ನು ಸಹ ದೇವಸ್ಥಾನದ ಭಾಗವಾಗಿ ಪರಿಗಣಿಸಲಿ ಮತ್ತು ದೇವರ ದರ್ಶನ ಹೆಚ್ಚು ತ್ರಾಸದಾಯಕವಾಗಿದ್ದರೆ ಅದನ್ನು ಪಡೆಯಲು ಹೆಚ್ಚು ಹೆಚ್ಚು ಶ್ರಮಪಡಲಿ, ಅದರ ಮುಖಾಂತರ ಬದುಕಿನ ಸಂಕಷ್ಟಗಳನ್ನು ಎದುರಿಸುವ ಶಕ್ತಿ ಬೆಳೆಸಿಕೊಳ್ಳಲಿ ಹಾಗು ದೇವರ ಭೇಟಿ ಸುಲಭವಲ್ಲ ಎಂದು ಸಾಂಕೇತಿಕವಾಗಿ ನಿರೂಪಿಸುವ ಉದ್ದೇಶವೂ ಇರಬಹುದು. ಇನ್ನೂ ಹಲವು ವ್ಯಾಖ್ಯಾನಗಳು ಇರಬಹುದು ಅಥವಾ ಆಗ ಇಡೀ ಪ್ರದೇಶಗಳೇ ಪ್ರಕೃತಿ ಮಾಯವಾಗಿದ್ದವು.

    ಆದರೆ ಆಧುನಿಕ ಕಾಲದಲ್ಲಿ ಇಸ್ಕಾನ್ ನಂತಹ ಕೆಲವು ಸಂಸ್ಥೆಗಳು ಶ್ರೀಕೃಷ್ಣ ಮತ್ತು ಇತರ ದೇವಾಲಯಗಳನ್ನು ಹೆಚ್ಚು ವೈಭವೋಪೇತವಾಗಿ, ಆಕರ್ಷಕವಾಗಿ, ಮಾರ್ಬಲ್ ಗಳನ್ನು ಬಳಸಿ ಕಟ್ಟಿಸಿದರು. ವಸತಿ ಗೃಹಗಳನ್ನು, ಮದುವೆ ಮಂಟಪಗಳನ್ನು ನಿರ್ಮಿಸಲಾಯಿತು. ಒಂದು ರೀತಿಯ ವ್ಯಾಪಾರೀಕರಣ ಪ್ರಾರಂಭವಾಯಿತು. ಗಣೇಶ, ಆಂಜನೇಯ, ಲಕ್ಷ್ಮೀ ವೆಂಕಟೇಶ್ವರ, ಶ್ರೀರಾಮ, ಶಿರಡಿ ಸಾಯಿಬಾಬಾ, ಮಂತ್ರಾಲಯದ ರಾಘವೇಂದ್ರ, ಶಿವನ ಪ್ರತಿಮೆಗಳು, ಕೆಲವು ಜಾತಿಗಳ ದೇವರುಗಳು, ಮನೆ ದೇವರುಗಳು ಮುಂತಾದ ದೇವಸ್ಥಾನಗಳನ್ನು ಚಿಕ್ಕದಾಗಿ, ಚೊಕ್ಕದಾಗಿ ಎಲ್ಲೆಂದರಲ್ಲಿ ನಿರ್ಮಿಸಲಾಯಿತು. ಭವ್ಯತೆಯ ಜಾಗದಲ್ಲಿ ಮನೆ, ಲಾಡ್ಜಿಂಗ್, ಆಸ್ಪತ್ರೆ, ಶಾಲೆ, ಅರಮನೆ ರೀತಿಯ ಸಾಮಾನ್ಯ ವಿನ್ಯಾಸಗಳ ರೂಪದಲ್ಲಿ ಸಹ ಕಟ್ಟಲಾಯಿತು. ಹಿಂದಿನ ವಾಸ್ತು ವಿನ್ಯಾಸ ಮರೆಯಾಯಿತು. ಜಾಗಕ್ಕೆ, ಅವಕಾಶಕ್ಕೆ, ಹಣಕ್ಕೆ ತಕ್ಕ ದೇವಾಲಯಗಳು ನಿರ್ಮಾಣವಾದವು. ರಾಜಕಾರಣಿಗಳು, ವ್ಯಾಪಾರಿಗಳು, ಉದ್ಯಮಿಗಳು, ಜಮೀನ್ದಾರರರು ಇತ್ತೀಚಿನ ದಿನಗಳಲ್ಲಿ ಇದಕ್ಕಾಗಿ ಹೆಚ್ಚಿನ ಹಣಕಾಸು ನೆರವು ನೀಡುತ್ತಿದ್ದಾರೆ.

    ದೇವಾಲಯಗಳಿಗೆ ರಾಜಾಶ್ರಯದ ಜಾಗದಲ್ಲಿ ಜನಾಶ್ರಯ ದೊರೆತಿದೆ.

    ಉತ್ತರ ಭಾರತಕ್ಕಿಂತ ದಕ್ಷಿಣದ ದೇವಾಲಯಗಳನ್ನು ಹೆಚ್ಚು ಭವ್ಯವಾಗಿ, ವಿಶಾಲವಾಗಿ, ಕಲಾತ್ಮಕವಾಗಿ ಕಲ್ಲಿನಲ್ಲಿ ನಿರ್ಮಿಸಲಾಗಿದೆ.

    ಭಾರತದ ಪ್ರವಾಸೋದ್ಯಮದಲ್ಲಿ ದೇವಾಲಯಗಳದೇ ಅತಿ ಹೆಚ್ಚು ಮಹತ್ವದ ಪಾತ್ರವಾಗಿದೆ.
    ” ದೇವಾಲಯಗಳಿಲ್ಲದ ಭಾರತ ಆತ್ಮವಿಲ್ಲದ ಮನುಷ್ಯನಂತೆ ” ಎಂದು ಒಬ್ಬ ಆಧ್ಯಾತ್ಮಿಕ ಚಿಂತಕರು ಅಭಿಪ್ರಾಯ ಪಟ್ಟಿದ್ದಾರೆ.

    ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ, ಮಾಧ್ಯಮಗಳು ವಿಜೃಂಭಿಸಿದ ಸೂರ್ಯ ಕಿರಣಗಳ ಸ್ಪರ್ಶದ ನೆನಪಲ್ಲಿ ದೇವಾಲಯಗಳ ವಿನ್ಯಾಸದ ಅತ್ಯಂತ ಕನಿಷ್ಠ ಮಾಹಿತಿ ನಿಮ್ಮೊಂದಿಗೆ ಸಂಕ್ಷಿಪ್ತವಾಗಿ ಹಂಚಿಕೊಂಡಿದ್ದೇನೆ.

    ಇದೊಂದು ಆಳವಾದ ಆಧ್ಯಾತ್ಮಿಕ ವಿಷಯ. ಬಡವರ, ಅಸ್ಪೃಶ್ಯರ, ಅನೇಕ ಜಾತಿ ಧರ್ಮಗಳ ನಂಬಿಕೆಯ, ಕಲ್ಪನೆಯ, ಭಾವನಾತ್ಮಕತೆಯ, ಶೋಷಣೆಯ, ಮಾನಸಿಕ ನೆಮ್ಮದಿಯ ಹುಡುಕಾಟದ ದೇವಸ್ಥಾನ ನಿರ್ಮಾಣಗಳು ಮತ್ತು ಅವುಗಳ ವಾಸ್ತು ವಿನ್ಯಾಸ ಅಧ್ಯಯನಕ್ಕಾಗಿ ಸವಾಲಿನ ಮುನ್ನುಡಿಯಂತಿದೆ.

    ಭಾರತದ ಸಾಮಾಜಿಕ, ರಾಜಕೀಯ, ಧಾರ್ಮಿಕ ಜೀವನದ ಅವಿಭಾಜ್ಯ ಅಂಗವಾಗಿ ಬೆಳೆದು ನಿಂತಿರುವ ದೇವಸ್ಥಾನಗಳ ಬಗ್ಗೆ ನಿಮ್ಮ ಗಮನ ಸೆಳೆಯುವ ಒಂದು ಸಣ್ಣ ಪ್ರಯತ್ನ.
    ಏನೇ ಆಗಲಿ ಪ್ರಕೃತಿಯ ಮೂಲದಿಂದ ನಮ್ಮ ಯೋಚನಾ ಶಕ್ತಿ ಬೆಳೆದರೆ ಖಂಡಿತವಾಗಲೂ ನಮ್ಮ ಜೀವನದ ಗುಣಮಟ್ಟ ಅತ್ಯುತ್ತಮವಾಗಿ ಇರುತ್ತದೆ. ಸಹಜತೆಯೇ ತುಂಬಿರುತ್ತದೆ. ಇಲ್ಲದಿದ್ದರೆ ಕೃತಕವಾಗಿ ದೇವರು, ಧರ್ಮ, ಜಾತಿ, ಭಾಷೆ, ಪಂಥ, ನಂಬಿಕೆ, ಭಕ್ತಿ ಇವುಗಳ ಆಧಾರದ ಮೇಲೆ ನಮ್ಮ ಜ್ಞಾನ ಬೆಳೆಸಿಕೊಂಡರೆ ಸದಾ ಕಾಲ ಅತೃಪ್ತಿ, ಅಸಮಾಧಾನ, ದ್ವೇಷ, ಅಸೂಯೆ, ಕೊರಗಿನ ಅಸಹಜ ಜೀವನ ನಮ್ಮದಾಗುತ್ತದೆ. ಸ್ವಲ್ಪ ಯೋಚಿಸಿ ನೋಡಿ….

    ಸಂಕ್ರಾಂತಿ ಹಬ್ಬದ ಶುಭಾಶಯಗಳು…

    ಧನ್ಯವಾದಗಳು…..

    ನಲ್ಬೆಳಗು……..

    ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
    ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
    ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
    ಮನಸ್ಸುಗಳ ಅಂತರಂಗದ ಚಳವಳಿ

    The post ಎಲ್ಲಾ ಧರ್ಮಗಳ ದೇವ ಮಂದಿರಗಳ ವಾಸ್ತು ; ಸಹಜ ಸೂರ್ಯ ರಶ್ಮಿಯ ಸ್ಪರ್ಶ… appeared first on nudikarnataka.

    Click here to Read More
    Previous Article
    ಮಳವಳ್ಳಿ | ಬೆಳಕಿನ ವ್ಯವಸ್ಥೆ ಇಲ್ಲದೆ ರಾತ್ರಿ ವೇಳೆ ಹಾರಾಡಿದ ರಾಷ್ಟ್ರಧ್ವಜ !
    Next Article
    Interesting Facts | ಪ್ರಪಂಚದಲ್ಲಿ ಅತಿ ಹೆಚ್ಚು ಪಿರಮಿಡ್‌ಗಳಿರುವ ದೇಶ ಈಜಿಪ್ಟ್ ಅಲ್ಲ! ಮತ್ತಿನ್ಯಾವುದು?

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment