Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಮಳವಳ್ಳಿ | ಬೆಳಕಿನ ವ್ಯವಸ್ಥೆ ಇಲ್ಲದೆ ರಾತ್ರಿ ವೇಳೆ ಹಾರಾಡಿದ ರಾಷ್ಟ್ರಧ್ವಜ !

    6 hours ago

    ​ಮಳವಳ್ಳಿ ತಾಲೂಕಿನ ಬೆಂಡರವಾಡಿ ಗ್ರಾಮ ಪಂಚಾಯತಿಯಲ್ಲಿ ರಾತ್ರಿಯಾದರೂ ರಾಷ್ಟ್ರಧ್ವಜದ ಮೇಲೆ ಸರಿಯಾದ ಬೆಳಕಿನ ವ್ಯವಸ್ಥೆ ಮಾಡದೆ ನಿರ್ಲಕ್ಷ್ಯ ವಹಿಸಿರುವ ಘಟನೆ ಬೆಳಕಿಗೆ ಬಂದಿದೆ. ಸಂಕ್ರಾಂತಿ ಹಬ್ಬದ ದಿನದಂದು (ಜನವರಿ 15) ರಾತ್ರಿ 7 ಗಂಟೆಯಾದರೂ ಧ್ವಜಸ್ತಂಭದ ಬಳಿ ಕತ್ತಲೆ ಇದ್ದರೂ ಧ್ವಜವನ್ನು ಹಾಗೆಯೇ ಬಿಟ್ಟಿರುವುದು ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ. ​ ಭಾರತದ ಧ್ವಜ ಸಂಹಿತೆಗೆ ಜುಲೈ 20, 2022 ರಂದು ತಿದ್ದುಪಡಿ ತರಲಾಗಿದ್ದು, ಇದರ ಪ್ರಕಾರ ಸಾರ್ವಜನಿಕರು ಅಥವಾ ಸರ್ಕಾರಿ ಕಚೇರಿಗಳು ಹಗಲು ಮತ್ತು ರಾತ್ರಿ (24 […]

    The post ಮಳವಳ್ಳಿ | ಬೆಳಕಿನ ವ್ಯವಸ್ಥೆ ಇಲ್ಲದೆ ರಾತ್ರಿ ವೇಳೆ ಹಾರಾಡಿದ ರಾಷ್ಟ್ರಧ್ವಜ ! appeared first on nudikarnataka.



    ​ಮಳವಳ್ಳಿ ತಾಲೂಕಿನ ಬೆಂಡರವಾಡಿ ಗ್ರಾಮ ಪಂಚಾಯತಿಯಲ್ಲಿ ರಾತ್ರಿಯಾದರೂ ರಾಷ್ಟ್ರಧ್ವಜದ ಮೇಲೆ ಸರಿಯಾದ ಬೆಳಕಿನ ವ್ಯವಸ್ಥೆ ಮಾಡದೆ ನಿರ್ಲಕ್ಷ್ಯ ವಹಿಸಿರುವ ಘಟನೆ ಬೆಳಕಿಗೆ ಬಂದಿದೆ. ಸಂಕ್ರಾಂತಿ ಹಬ್ಬದ ದಿನದಂದು (ಜನವರಿ 15) ರಾತ್ರಿ 7 ಗಂಟೆಯಾದರೂ ಧ್ವಜಸ್ತಂಭದ ಬಳಿ ಕತ್ತಲೆ ಇದ್ದರೂ ಧ್ವಜವನ್ನು ಹಾಗೆಯೇ ಬಿಟ್ಟಿರುವುದು ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.

    ಭಾರತದ ಧ್ವಜ ಸಂಹಿತೆಗೆ ಜುಲೈ 20, 2022 ರಂದು ತಿದ್ದುಪಡಿ ತರಲಾಗಿದ್ದು, ಇದರ ಪ್ರಕಾರ ಸಾರ್ವಜನಿಕರು ಅಥವಾ ಸರ್ಕಾರಿ ಕಚೇರಿಗಳು ಹಗಲು ಮತ್ತು ರಾತ್ರಿ (24 ಗಂಟೆ) ಧ್ವಜವನ್ನು ಹಾರಿಸಲು ಅವಕಾಶವಿದೆ. ಆದರೆ, ರಾತ್ರಿಯಿಡೀ ಧ್ವಜ ಹಾರಿಸುವಾಗ ಧ್ವಜವು ಸ್ಪಷ್ಟವಾಗಿ ಕಾಣುವಂತೆ ಅದರ ಮೇಲೆ ಸಾಕಷ್ಟು ಬೆಳಕಿನ ವ್ಯವಸ್ಥೆ ಇರಬೇಕು ಎಂಬುದು ಕಡ್ಡಾಯ ನಿಯಮವಾಗಿದೆ.

    ಬೆಂಡರವಾಡಿ ಗ್ರಾಮ ಪಂಚಾಯತಿ ಕಚೇರಿಯ ಮೇಲೆ ಹಾರಿಸಲಾಗಿದ್ದ ರಾಷ್ಟ್ರಧ್ವಜವನ್ನು ರಾತ್ರಿ 7 ಗಂಟೆಯಾದರೂ ಇಳಿಸಿರಲಿಲ್ಲ. ಹೊಸ ನಿಯಮದಂತೆ 24 ಗಂಟೆ ಹಾರಿಸಲು ಅವಕಾಶವಿದ್ದರೂ, ಅಲ್ಲಿ ಧ್ವಜದ ಮೇಲೆ ಯಾವುದೇ ಬೆಳಕಿನ ವ್ಯವಸ್ಥೆ ಇರಲಿಲ್ಲ. ಧ್ವಜವು ಕತ್ತಲೆಯಲ್ಲಿರುವುದು ಧ್ವಜ ಸಂಹಿತೆಯ ಉಲ್ಲಂಘನೆಯಾಗುತ್ತದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ​ಈ ದೃಶ್ಯವನ್ನು ವೀಡಿಯೊ ಮಾಡಿರುವ ವ್ಯಕ್ತಿಯೊಬ್ಬರು, “ರಾತ್ರಿಯಾದರೂ ಬಾವುಟ ಇಳಿಸಿಲ್ಲ, ಕನಿಷ್ಠ ಬೆಳಕಿನ ವ್ಯವಸ್ಥೆಯನ್ನೂ ಮಾಡಿಲ್ಲ. ಇದೊಂದು ಅನಾಥಾಲಯದಂತಿದೆ. ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆ,” ಎಂದು ಕಿಡಿಕಾರಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಪಂಚಾಯತಿ ಸಿಬ್ಬಂದಿ ಧ್ವಜವನ್ನು ಇಳಿಸಿದ್ದಾರೆ.

    ​ಧ್ವಜ ಸಂಹಿತೆಯ ಪ್ರಕಾರ ರಾಷ್ಟ್ರಧ್ವಜವನ್ನು ಕತ್ತಲೆಯಲ್ಲಿ ಬಿಡುವುದು ಅಪಮಾನಕ್ಕೆ ಸಮಾನ. ​ಧ್ವಜವು ಹರಿದಿರಬಾರದು ಅಥವಾ ಬಣ್ಣ ಮಾಸಿರಬಾರದು.​ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವುದು ಪ್ರತಿಯೊಬ್ಬ ನಾಗರಿಕನ ಹಾಗೂ ಅಧಿಕಾರಿಯ ಕರ್ತವ್ಯವಾಗಿದೆ. ​ನಿಯಮಗಳ ಅರಿವಿದ್ದರೂ ಸರಿಯಾದ ಬೆಳಕಿನ ವ್ಯವಸ್ಥೆ ಮಾಡದೆ ರಾಷ್ಟ್ರಧ್ವಜವನ್ನು ಕತ್ತಲೆಯಲ್ಲಿ ಬಿಟ್ಟ ಬೆಂಡರವಾಡಿ ಗ್ರಾಮ ಪಂಚಾಯತಿ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    The post ಮಳವಳ್ಳಿ | ಬೆಳಕಿನ ವ್ಯವಸ್ಥೆ ಇಲ್ಲದೆ ರಾತ್ರಿ ವೇಳೆ ಹಾರಾಡಿದ ರಾಷ್ಟ್ರಧ್ವಜ ! appeared first on nudikarnataka.

    Click here to Read More
    Previous Article
    ಚಳಿಗಾಲದಲ್ಲಿ ದೇಹ ಬೆಚ್ಚಗೆ ಮತ್ತು ಆರೋಗ್ಯವಾಗಿರಲು ಈ ಚಹಾ ಕುಡಿಯಿರಿ
    Next Article
    ಎಲ್ಲಾ ಧರ್ಮಗಳ ದೇವ ಮಂದಿರಗಳ ವಾಸ್ತು ; ಸಹಜ ಸೂರ್ಯ ರಶ್ಮಿಯ ಸ್ಪರ್ಶ…

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment