Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಸಿದ್ದರಾಮ ಶಿವಯೋಗಿಗಳು ಕಲ್ಯಾಣಕ್ರಾಂತಿಯ ಇತಿಹಾಸದ ಅಗ್ರಜರು : ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

    1 day ago

    ದಾವಣಗೆರೆ.15: ವಚನ ಚಳವಳಿಯ ಸಾವಿರದ ಧಾರೆಗಳಲ್ಲಿ ಅಸಂಖ್ಯ ಶರಣರು ಭಾಗವಹಿಸಿದ್ದು ಅದನ್ನು ಇನ್ನಿಲ್ಲದಂತೆ ಮುನ್ನಡೆಸಿದ್ದು ಸಿದ್ಧರಾಮೇಶ್ವರರು. ಕನ್ನಡ ಬದುಕಿಗೆ ಒಂದು ಜಂಗಮ ಗುಣವನ್ನು ತಂದುಕೊಂಡದ್ದು ಸಿದ್ಧರಾಮೇಶ್ವರರು ಹಾಗೂ ಸಮಾಕಾವೃಲೀನ ಶರಣರು. ಸಿದ್ದರಾಮ ಶಿವಯೋಗಿಗಳು ಕಲ್ಯಾಣಕ್ರಾಂತಿಯ ಇತಿಹಾಸದ ಅಗ್ರಜರು ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು. ದಾವಣಗೆರೆ ನಗರದ ವೆಂಕಭೋವಿ ಕಾಲೋನಿಯ ಸಿದ್ಧರಾಮೇಶ್ವರ ಮಹಾಮಠ ಭೋವಿ ಗುರುಪೀಠದಲ್ಲಿ ಜರುಗಿದ ಸಿದ್ಧರಾಮೇಶ್ವರ ಜಯಂತ್ಯೋತ್ಸವದ ಸಾನ್ನಿಧ್ಯವಹಿಸಿ ಮಾತನಾಡಿದರು. ಈ ಶರಣ ಚಳವಳಿಯ ಅಧ್ವರ್ಯುಶಕ್ತಿಯಾಗಿ ಶರಣ ಸಿದ್ಧರಾಮೇಶ್ವರರು […]

    ದಾವಣಗೆರೆ.15: ವಚನ ಚಳವಳಿಯ ಸಾವಿರದ ಧಾರೆಗಳಲ್ಲಿ ಅಸಂಖ್ಯ ಶರಣರು ಭಾಗವಹಿಸಿದ್ದು ಅದನ್ನು ಇನ್ನಿಲ್ಲದಂತೆ ಮುನ್ನಡೆಸಿದ್ದು ಸಿದ್ಧರಾಮೇಶ್ವರರು. ಕನ್ನಡ ಬದುಕಿಗೆ ಒಂದು ಜಂಗಮ ಗುಣವನ್ನು ತಂದುಕೊಂಡದ್ದು ಸಿದ್ಧರಾಮೇಶ್ವರರು ಹಾಗೂ ಸಮಾಕಾವೃಲೀನ ಶರಣರು. ಸಿದ್ದರಾಮ ಶಿವಯೋಗಿಗಳು ಕಲ್ಯಾಣಕ್ರಾಂತಿಯ ಇತಿಹಾಸದ ಅಗ್ರಜರು ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
    ದಾವಣಗೆರೆ ನಗರದ ವೆಂಕಭೋವಿ ಕಾಲೋನಿಯ ಸಿದ್ಧರಾಮೇಶ್ವರ ಮಹಾಮಠ ಭೋವಿ ಗುರುಪೀಠದಲ್ಲಿ ಜರುಗಿದ ಸಿದ್ಧರಾಮೇಶ್ವರ ಜಯಂತ್ಯೋತ್ಸವದ ಸಾನ್ನಿಧ್ಯವಹಿಸಿ ಮಾತನಾಡಿದರು.
    ಈ ಶರಣ ಚಳವಳಿಯ ಅಧ್ವರ್ಯುಶಕ್ತಿಯಾಗಿ ಶರಣ ಸಿದ್ಧರಾಮೇಶ್ವರರು ಬರುತ್ತಾರೆ. ಸೊನ್ನಲಾಪುರದಲ್ಲಿ ಕಾಯಕಯೋಗಿಯಾಗಿದ್ದ ಸಿದ್ಧರಾಮರು ಅಲ್ಲಮಪ್ರಭುಗಳ ಕಾರಣದಿಂದಾಗಿ ಶಿವಯೋಗಿಯಾಗಿ ಬೆಳೆದದ್ದು, ಕಲ್ಯಾಣದತ್ತ ಪ್ರಯಾಣಿಸಿದ್ದು ಶರಣರ ಅನುಭವ ಮಂಟಪದಲ್ಲಿ ಸಂವಾದಿಸಿದ್ದು ಶರಣ ಚಳವಳಿಯ ಮಹತ್ವದ ಭಾಗವೇ ಸರಿ.
    ಸಿದ್ಧರಾಮರು ಮೂಲತಃ ನಾಥಪಂಥಕ್ಕೆ ಸೇರಿದ್ದು ಶ್ರೀಶೈಲದ ಮಲ್ಲಿನಾಥನ ನಾಥಪಂಥ ಕೇಂದ್ರಕ್ಕೆ ಹೋಗಿಬಂದದ್ದು, ಅದಾದ ತರುವಾಯದಲ್ಲಿ ಕಲ್ಯಾಣಕ್ಕೆ ಬಂದು ಶರಣ ಚಳವಳಿಯಲ್ಲಿ ಭಾಗವಹಿಸಿದ್ದು ಇದು ಸಿದ್ಧರಾಮರ ಬದುಕಿನ ಮಹಾಯಾನವೇ ಆಗಿದೆ. ಈ ಬದುಕಿನ ಯಾನದಲ್ಲಿ ಅಲ್ಲಮಪ್ರಭುಗಳ ಪಾತ್ರದ ಜೊತೆಗೆ ಬಸವಣ್ಣ, ಚನ್ನಬಸವಣ್ಣ, ಅಕ್ಕಮಹಾದೇವಿ ಮೊದಲಾದ ಹಲವು ಶಿವಶರಣರ ಪ್ರಭಾವೀ ಪಾತ್ರವೂ ಇರುವುದನ್ನು ಮರೆಯುವಂತಿಲ್ಲ. ವಚನಧರ್ಮಕ್ಕೆ ಸಿದ್ಧರಾಮರ ಕೊಡುಗೆ ಅಪಾರವಾದುದು.
    ಸಿದ್ಧರಾಮರು ತೋರುಗದ್ದುಗೆಗಳು ಅವರ ಬದುಕಿನ ಯಾನದ ಪ್ರತೀಕಗಳಾಗಿ ಕರ್ನಾಟಕದಾದ್ಯಂತ ಇಂದಿಗೂ ಇವೆ. ಮಹಾರಾಷ್ಟ್ರದಲ್ಲೂ ಇವೆ. ಈ ತೋರುಗದ್ದುಗೆಗಳಲ್ಲಿ ಸಿದ್ಧರಾಮರೇ ಪೂಜೆಗೊಳ್ಳುತ್ತಿ ದ್ದಾರೆ.  ಕ್ಷೇತ್ರಾಧ್ಯಯನ ಮಾಡಿದಂತೆ ಹೊರಹೊಮ್ಮಿದ ಸತ್ಯವೆಂದರೆ ಅವೆಲ್ಲ ಶರಣ ಸಿದ್ದರಾಮರು ಶರಣಧರ್ಮವನ್ನು ಪ್ರಸಾರ ಮಾಡಿದಾಗ ಲಿಂಗದೀಕ್ಷೆಯ ಮುಖೇನ ಶಿವಶರಣರನ್ನೆ ಸಂಘಟಿಸಿದ ಬೆಳೆಸಿದ ತಾಣಗಳೆಂಬುದು ಗೊತ್ತಾಗುವ ಸತ್ಯ. ಅದರಲ್ಲೂ ದಕ್ಷಿಣ ಕರ್ನಾಟಕಕ್ಕೆ ಶರಣಧರ್ಮವನ್ನು ಪ್ರಸಾರ ಮಾಡಿದ್ದರಲ್ಲಿ ಸಿದ್ಧರಾಮರ ಪಾತ್ರ ದೊಡ್ಡದು. ಆದ್ದರಿಂದಲೇ ಅದರ ಕುರುಹಾಗಿ ಇಂದಿಗೂ ಕರ್ನಾಟಕ ಮಹಾರಾಷ್ಟ್ರಗಳಲ್ಲಿ 72ಕ್ಕೂ ಹೆಚ್ಚು ತೋರುಗದ್ದುಗೆಗಳಿವೆ. ಇಂದು ಅವೆಲ್ಲ ಸಿದ್ಧರಾಮೇಶ್ವರ ದೇವಾಲಯಗಳಾಗಿವೆ ಎಂದು ತಿಳಿಸಿದರು.
    ದಾವಣಗೆರೆ ಜಿಲ್ಲಾ ಭೋವಿ ಅಭಿವೃದ್ಧಿ ಸಮಾಜದ ಜಿಲ್ಲಾಧ್ಯಕ್ಷ ಹೆಚ್ ಜಯಣ್ಣ, ಗೌರವಾಧ್ಯಕ್ಷ ಬಿ.ಟಿ.ಸಿದ್ಧಪ್ಪ, ಕಾರ್ಯಧ್ಯಕ್ಷ ಗೋಪಾಲ, ಯುವಾಧ್ಯಕ್ಷ ನಾಗರಾಜ, ಜಿ.ಪಂ ಮಾಜಿ ಸದಸ್ಯ ವೀರಭದ್ರಪ್ಪ, ನಿವೃತ್ತ ಇಂಜಿನಿಯರ್ ವೆಂಕಟೇಶ್, ಕರಾಟೆ ತಿಮ್ಮೇಶ, ಲಕ್ಷ್ಮಣ, ಮೂರ್ತ್ಯಪ್ಪ, ಚಂದ್ರಪ್ಪ, ಕರಿಯಪ್ಪ ವಕೀಲರು, ಗಣೇಶ, ಬಸವರಾಜ, ದೊರೆರಾಜು ಹಾಗೂ ಇನ್ನಿತರರು ಉಪಸ್ಥಿತಿಯಿದ್ದರು.
    job news dinamaana ads
    Click here to Read More
    Previous Article
    Crime news|ವಿವಿಧ ಕಡೆ ಕಳ್ಳತನ:ತಂದೆ – ಮಕ್ಕಳ ಬಂಧನ
    Next Article
    ಅಡಿಕೆ ಧಾರಣೆ | 15 ಜನವರಿ | ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್‌

    Related ತಾಜಾ ಸುದ್ದಿ Updates:

    Are you sure? You want to delete this comment..! Remove Cancel

    Comments (0)

      Leave a comment