Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    Why So | ತಾಮ್ರದ ಆಭರಣ ಹಾಕಿದ್ರೆ ಚರ್ಮ ಹಸಿರಾಗೋದು ಯಾಕೆ? ಇದರ ಹಿಂದಿದೆ ‘ರಾಸಾಯನಿಕ’ ಕಥೆ!

    5 hours ago

    ತಾಮ್ರದ ಉಂಗುರ, ಕೈ ಖಡ್ಗ ಅಥವಾ ಸರ ಹಾಕಿಕೊಂಡ ಮೇಲೆ ಕೆಲವೇ ಗಂಟೆಗಳಲ್ಲಿ ಚರ್ಮ ಹಸಿರು ಬಣ್ಣಕ್ಕೆ ತಿರುಗಿದ ಅನುಭವ ಹಲವರಿಗೆ ಆಗಿರುತ್ತದೆ. ಕೆಲವರು ಇದನ್ನು ಅಲರ್ಜಿ ಅಥವಾ ನಮಗೆ ಈ ತಾಮ್ರ ಸೂಟ್ ಆಗಲ್ಲ ಎಂದು ಭಾವಿಸುತ್ತಾರೆ. ಆದರೆ ವಾಸ್ತವದಲ್ಲಿ ಇದು ನಮ್ಮ ದೇಹದ ಸಮಸ್ಯೆಯಲ್ಲ, ತಾಮ್ರ ಮತ್ತು ಪರಿಸರದ ನಡುವೆ ನಡೆಯುವ ಒಂದು ಸರಳವಾದ ರಸಾಯನಿಕ ಪ್ರತಿಕ್ರಿಯೆ. ಈ ಹಸಿರು ಬಣ್ಣ ಕಾಣಿಸಿಕೊಂಡರೆ ಭಯಪಡುವ ಅಗತ್ಯವೇ ಇಲ್ಲ. ಅದರ ಹಿಂದಿರುವ ಕಾರಣಗಳನ್ನು ತಿಳಿದರೆ ಗೊಂದಲವೇ […]

    The post Why So | ತಾಮ್ರದ ಆಭರಣ ಹಾಕಿದ್ರೆ ಚರ್ಮ ಹಸಿರಾಗೋದು ಯಾಕೆ? ಇದರ ಹಿಂದಿದೆ ‘ರಾಸಾಯನಿಕ’ ಕಥೆ! appeared first on ONLINE EDITION.



    ತಾಮ್ರದ ಉಂಗುರ, ಕೈ ಖಡ್ಗ ಅಥವಾ ಸರ ಹಾಕಿಕೊಂಡ ಮೇಲೆ ಕೆಲವೇ ಗಂಟೆಗಳಲ್ಲಿ ಚರ್ಮ ಹಸಿರು ಬಣ್ಣಕ್ಕೆ ತಿರುಗಿದ ಅನುಭವ ಹಲವರಿಗೆ ಆಗಿರುತ್ತದೆ. ಕೆಲವರು ಇದನ್ನು ಅಲರ್ಜಿ ಅಥವಾ ನಮಗೆ ಈ ತಾಮ್ರ ಸೂಟ್ ಆಗಲ್ಲ ಎಂದು ಭಾವಿಸುತ್ತಾರೆ. ಆದರೆ ವಾಸ್ತವದಲ್ಲಿ ಇದು ನಮ್ಮ ದೇಹದ ಸಮಸ್ಯೆಯಲ್ಲ, ತಾಮ್ರ ಮತ್ತು ಪರಿಸರದ ನಡುವೆ ನಡೆಯುವ ಒಂದು ಸರಳವಾದ ರಸಾಯನಿಕ ಪ್ರತಿಕ್ರಿಯೆ. ಈ ಹಸಿರು ಬಣ್ಣ ಕಾಣಿಸಿಕೊಂಡರೆ ಭಯಪಡುವ ಅಗತ್ಯವೇ ಇಲ್ಲ. ಅದರ ಹಿಂದಿರುವ ಕಾರಣಗಳನ್ನು ತಿಳಿದರೆ ಗೊಂದಲವೇ ಉಳಿಯುವುದಿಲ್ಲ.

    • ನಮ್ಮ ಚರ್ಮದಿಂದ ಹೊರಬರುವ ಬೆವರಿನಲ್ಲಿ ನೀರು, ಉಪ್ಪು ಹಾಗೂ ಸ್ವಲ್ಪ ಆಮ್ಲೀಯ ಗುಣಗಳಿರುತ್ತವೆ. ತಾಮ್ರ ಈ ಬೆವರಿನ ಸಂಪರ್ಕಕ್ಕೆ ಬಂದಾಗ ರಾಸಾಯನಿಕ ಕ್ರಿಯೆ ನಡೆಯುತ್ತದೆ. ಇದರಿಂದ “ಕಾಪರ್ ಸಾಲ್ಟ್” ಎಂಬ ಸಂಯುಕ್ತ ಉಂಟಾಗಿ ಅದು ಹಸಿರು ಬಣ್ಣದ ಗುರುತುಗಳಾಗಿ ಚರ್ಮದ ಮೇಲೆ ಕಾಣಿಸುತ್ತದೆ ಅಷ್ಟೆ.
    • ತಾಮ್ರ ಗಾಳಿಯಲ್ಲಿರುವ ಆಮ್ಲಜನಕದೊಂದಿಗೆ ಪ್ರತಿಕ್ರಿಯೆ ಮಾಡಿ “ಕಾಪರ್ ಆಕ್ಸೈಡ್” ಅಥವಾ “ಕಾಪರ್ ಕಾರ್ಬೊನೇಟ್” ರೂಪಿಸುತ್ತದೆ. ಇದೇ ಸಂಯುಕ್ತ ಹಸಿರು ಬಣ್ಣಕ್ಕೆ ಕಾರಣವಾಗುತ್ತದೆ. ಇದು ತಾಮ್ರದ ಸಹಜ ಗುಣ, ದೋಷವಲ್ಲ.
    • ದೇಹದ pH ಮಟ್ಟವೂ ಕಾರಣ: ಕೆಲವರ ಚರ್ಮ ಹೆಚ್ಚು ಆಮ್ಲೀಯವಾಗಿರುತ್ತದೆ. ಅಂಥವರಲ್ಲಿ ತಾಮ್ರದ ಪ್ರತಿಕ್ರಿಯೆ ವೇಗವಾಗಿ ನಡೆಯುವುದರಿಂದ ಹಸಿರು ಗುರುತುಗಳು ಹೆಚ್ಚು ಸ್ಪಷ್ಟವಾಗಿ ಕಾಣಿಸಬಹುದು.
    • ಸಾಮಾನ್ಯವಾಗಿ ತಾಮ್ರದಿಂದ ಆಗುವ ಈ ಹಸಿರು ಬಣ್ಣ ಆರೋಗ್ಯಕ್ಕೆ ಅಪಾಯಕಾರಿಯಲ್ಲ. ಇದು ತಾತ್ಕಾಲಿಕವಾಗಿದ್ದು, ನೀರು ಮತ್ತು ಸಾಬೂನಿನಿಂದ ತೊಳೆಯುತ್ತಿದ್ದಂತೆ ಹೋಗಿಬಿಡುತ್ತದೆ.

    ಒಟ್ಟಿನಲ್ಲಿ, ತಾಮ್ರದ ಆಭರಣದಿಂದ ಚರ್ಮ ಹಸಿರು ಬಣ್ಣಕ್ಕೆ ತಿರುಗುವುದು ಅಸ್ವಾಭಾವಿಕವಲ್ಲ. ಇದು ವಿಜ್ಞಾನ ಹೇಳುವ ಸಹಜ ಪ್ರಕ್ರಿಯೆ ಅದರಲ್ಲೇ ತಾಮ್ರದ ನಿಜವಾದ ಸ್ವಭಾವ ಅಡಗಿದೆ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)

    The post Why So | ತಾಮ್ರದ ಆಭರಣ ಹಾಕಿದ್ರೆ ಚರ್ಮ ಹಸಿರಾಗೋದು ಯಾಕೆ? ಇದರ ಹಿಂದಿದೆ ‘ರಾಸಾಯನಿಕ’ ಕಥೆ! appeared first on ONLINE EDITION.

    Click here to Read More
    Previous Article
    11 ತಿಂಗಳಲ್ಲಿ 4.71 ಲಕ್ಷ ಕೋಟಿ ರೂ. ನೈಜ ಹೂಡಿಕೆ- ಸಚಿವ ಎಂ.ಬಿ ಪಾಟೀಲ್
    Next Article
    BDA ಮನೆ–ಸೈಟ್ ಹಂಚಿಕೆ ರೂಲ್ಸ್ ಚೇಂಜ್: 10 ವರ್ಷ ವಾಸದ ನಿಯಮ ಕೈಬಿಟ್ಟ ಪ್ರಾಧಿಕಾರ

    Related ಜೀವನ ಶೈಲಿ Updates:

    Are you sure? You want to delete this comment..! Remove Cancel

    Comments (0)

      Leave a comment