ದಾವಣಗೆರೆ ಮಹಾನಗರ ಪಾಲಿಕೆ : ಮೇ ತಿಂಗಳಲ್ಲಿ ನಿಯಮ ಉಲ್ಲಂಘಿಸಿದವರಿಂದ ₹92,900 ದಂಡ ವಸೂಲಿ

4 months ago

46

0

ದಾವಣಗೆರೆ, ಜೂನ್ 03 :  ದಾವಣಗೆರೆ ಮಹಾನಗರ ಪಾಲಿಕೆಯ  ಆರೋಗ್ಯ ಶಾಖೆಯು ನಗರದಾದ್ಯಂತ ಸ್ವಚ್ಚತೆ ಮತ್ತು ಸಾರ್ವಜನಿಕ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ತೀವ್ರ ಕ್ರಮ ಕೈಗೊಂಡಿದೆ. ಮೇ 2026 ರ  ಅವಧಿ ಯಲ್ಲಿ ವಿವಿಧ ನಿಯಮಗಳನ್ನು ಉಲ್ಲಂಘಿಸಿದ ಸಾರ್ವಜನಿಕರು ಮತ್ತು ವ್ಯಾಪಾರಿಗಳಿಂದ ಒಟ್ಟು 223 ಪ್ರಕರಣಗಳನ್ನು ದಾಖಲಿಸಿ, ₹92,900 ಗಳಷ್ಟು ಸ್ಥಳದಲ್ಲೇ ದಂಡ ವಸೂಲಿ ಮಾಡಲಾಗಿದೆ. ಕಸವನ್ನು ಎಲ್ಲೆಂದರಲ್ಲಿ ಎಸೆಯುವುದು, ತ್ಯಾಜ್ಯ ವಿಂಗಡಣೆ ಮಾಡದಿರುವುದು,ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು, ಮಲಮೂತ್ರ ವಿಸರ್ಜನೆ ಮಾಡುವುದು ಹಾಗೂ ಕಟ್ಟಡ ತ್ಯಾಜ್ಯವನ್ನು ಅನಧಿಕೃತವಾಗಿ ಸುರಿಯುವುದು  ಸೇರಿದಂತೆ ಒಟ್ಟು 134 ಪ್ರಕರಣಗಳು ದಾಖಲಾಗಿದ್ದು, ರೂ. 48,400 ದಂಡ ಸಂಗ್ರಹಿಸಲಾಗಿದೆ. ಸರ್ಕಾರದಿಂದ ನಿಷೇಧಿಸಲ್ಪಟ್ಟಿರುವ ಪ್ಲಾಸ್ಟಿಕ್ ವಸ್ತುಗಳ ಸಂಗ್ರಹಣೆ ಹಾಗೂ ಮಾರಾಟಕ್ಕೆ ಸಂಬಂಧಿಸಿದಂತೆ ಒಟ್ಟು 72 ಪ್ರಕರಣಗಳು  ಪತ್ತೆಯಾಗಿ ದ್ದು, ನಿಯಮ ಉಲ್ಲಂಘಿಸಿದವರಿಂದ ರೂ.39,000 ದಂಡ ವಸೂಲಿ ಮಾಡಲಾಗಿದೆ. Read also : ಹರಿಹರ:ರೈಲ್ವೆ ನಿಲ್ದಾಣದ ರಸ್ತೆ ಬಳಿ ಅನಾಮಧೇಯ ವ್ಯಕ್ತಿಯ ಶವ ಪತ್ತೆ, ವಾರಸುದಾರರಿಗಾಗಿ ಪೊಲೀಸರ ಶೋಧ ಕೋಟ್ಪ್ (COTPA – […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
Click here to Read More
Previous Article
ದಾವಣಗೆರೆ|ಜೂ.4 ರಂದು ಬೆ.9 ರಿಂದ ಸಾಯಂಕಾಲ 5 ರವರೆಗೆ ವಿದ್ಯುತ್ ವ್ಯತ್ಯಯ
Next Article
ನೂತನ ಸಿಎಂ ಡಿಕೆ ಶಿವಕುಮಾರ್ ಗೆ ಅಭಿನಂದನೆ ಸಲ್ಲಿಸಿದ ಕೇಂದ್ರ ಸಚಿವ HDK

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment