Filters

Channels
Topics
Other Filters

ಅಡಿಕೆ ಧಾರಣೆ | 7 ಏಪ್ರಿಲ್‌ | ಯಾವ ಅಡಿಕೆಗೆ ಎಷ್ಟು ರೇಟ್‌

CHITRADURGA NEWS | 07 AORIL 2026 ಚಿತ್ರದುರ್ಗ: ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಏಪ್ರಿಲ್‌ 7 ರಂದು ನಡೆದ ಅಡಿಕೆ ವಹಿವಾಟು ಕುರಿತ ವಿವರ ಇಲ್ಲಿದೆ. ಇದನ್ನೂ ಓದಿ: ಅಡಿಕೆ ಧಾರಣೆಯಲ್ಲಿ ಕೊಂಚ ಏರಿಕೆ ಚನ್ನಗಿರಿ ಅಡಿಕೆ ಮಾರುಕಟ್ಟೆ ರಾಶಿ                             50099          55500 ತರೀಕೆರೆ ಅಡಿಕೆ ಮಾರುಕಟ್ಟೆ ಇತರೆ                             26500          29000 ಗೊರಬಲು                    10000         10000 ಪುಡಿ                               18000         20000 ಸಿಪ್ಪೆಗೋಟು                11000         14000 ತೀರ್ಥಹಳ್ಳಿ […] ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ರಾಜ್ಯದಲ್ಲಿ 10 ರಿಂದ 18 ವರ್ಷದೊಳಗಿನ ಹುಡುಗಿಯರ ಗರ್ಭಧಾರಣೆ ‘ಲೆಕ್ಕ ಪರಿಶೋಧನೆ’ ಕಡ್ಡಾಯ: ಆರೋಗ್ಯ ಇಲಾಖೆ ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ 10 ರಿಂದ 18 ವರ್ಷ ವಯಸ್ಸಿನ ಹುಡುಗಿಯರ ಗರ್ಭಧಾರಣೆಯ ಲೆಕ್ಕ ಪರಿಶೋಧನೆಯನ್ನು ಕಡ್ಡಾಯಗೊಳಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಬಿ.ಎಸ್. ಹೊರಡಿಸಿದ ಆದೇಶವು ತಕ್ಷಣದಿಂದ ಜಾರಿಗೆ ಬರಲಿದೆ. ಆದೇಶದ ಪ್ರಕಾರ ತಾಯಿಯ ಆರೋಗ್ಯ ಅಪಾಯಗಳು, ಪ್ರತಿಕೂಲ ಹೆರಿಗೆ ಫಲಿತಾಂಶಗಳು, ಶಾಲೆ ಬಿಡುವುದು ಮತ್ತು ಸಾಮಾಜಿಕ ದುರ್ಬಲತೆಯನ್ನು ಗಮನದಲ್ಲಿಟ್ಟುಕೊಂಡು ಹದಿಹರೆಯದ ಗರ್ಭಧಾರಣೆಯನ್ನು ಗಂಭೀರ ಸಾರ್ವಜನಿಕ ಆರೋಗ್ಯ ಮತ್ತು ಸಾಮಾಜಿಕ ಕಾಳಜಿಯಾಗಿ […] The post ರಾಜ್ಯದಲ್ಲಿ 10 ರಿಂದ 18 ವರ್ಷದೊಳಗಿನ ಹುಡುಗಿಯರ ಗರ್ಭಧಾರಣೆ ‘ಲೆಕ್ಕ ಪರಿಶೋಧನೆ’ ಕಡ್ಡಾಯ: ಆರೋಗ್ಯ ಇಲಾಖೆ ಆದೇಶ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪಚುನಾವಣೆ: ಗೌಜಿ ಗದ್ದಲದ ಬಹಿರಂಗ ಪ್ರಚಾರಕ್ಕೆ ಬಿತ್ತು ಅಧಿಕೃತ ತೆರೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಅಧಿಕೃತವಾಗಿ ತೆರೆ ಬಿದ್ದಿದೆ. ನಾಳೆ ಅಭ್ಯರ್ಥಿಗಳು ಮನೆಮನೆಗೆ ತೆರಳಿ ಮತಯಾಚಿಸಲು ಮಾತ್ರ ಅವಕಾಶವಿದ್ದು, ಇದೇ ಏಪ್ರಿಲ್ 9ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಮೇ 4ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ದಾವಣಗೆರೆ ಕ್ಷೇತ್ರದಲ್ಲಿ ಒಟ್ಟು 284 ಮತಗಟ್ಟೆಗಳಿದ್ದು, ಈ ಪೈಕಿ ಪಾಲಿಕೆ ವ್ಯಾಪ್ತಿಯಲ್ಲಿ 234 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 50 ಮತಗಟ್ಟೆಗಳಿವೆ. ಇವುಗಳಲ್ಲಿ 76 ಮತಗಟ್ಟೆಗಳನ್ನು ಅತಿ […] The post ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪಚುನಾವಣೆ: ಗೌಜಿ ಗದ್ದಲದ ಬಹಿರಂಗ ಪ್ರಚಾರಕ್ಕೆ ಬಿತ್ತು ಅಧಿಕೃತ ತೆರೆ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಶಬರಿಮಲೆಗೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ನಿರ್ಬಂಧ ‘ಧಾರ್ಮಿಕ ಸಂಪ್ರದಾಯ’ ಭಾಗ

ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ನಿರ್ಬಂಧವು ಲಿಂಗ ತಾರತಮ್ಯವಲ್ಲ, ಅದು ಧಾರ್ಮಿಕ ಸಂಪ್ರದಾಯ ಮತ್ತು ನಂಬಿಕೆಗೆ ಸಂಬಂಧಿಸಿದ ವಿಷಯ ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ಸ್ಪಷ್ಟಪಡಿಸಿದೆ. 2018ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ಪ್ರವೇಶ ಅನುಮತಿ ನೀಡಿದ ತೀರ್ಪಿನ ವಿರುದ್ಧ ಸಲ್ಲಿಸಲಾಗಿರುವ ಪರಿಶೀಲನಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಮತ್ತೆ ವಿಚಾರಣೆಗೆ ಕೈಗೆತ್ತಿಕೊಳ್ಳುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ತನ್ನ ಅಧಿಕೃತ ನಿಲುವನ್ನು ಲಿಖಿತ ರೂಪದಲ್ಲಿ ಸಲ್ಲಿಸಿದೆ. ಕೇಂದ್ರ ಸರಕಾರದ ವಾದ: ಶಬರಿಮಲೆಯಲ್ಲಿ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಗ್ರಾಪಂಗಳಲ್ಲಿ ಬಾಬು ಜಗಜೀವನರಾಂ ಜಯಂತಿಯಲ್ಲಿ ಲೋಪ : ಕ್ರಮಕ್ಕೆಕದಸಂಸ ಆಗ್ರಹ

ಹರಿಹರ: ತಾಲ್ಲೂಕಿನ 23 ಗ್ರಾಮ ಪಂಚಾಯ್ತಿಗಳಲ್ಲಿ ಏ.5 ರಂದು ದಲಿತ ಸಮುದಾಯದ ಮುಖಂಡ,ಮಾಜಿ ಉಪ ಪ್ರಧಾನಿ, ಹಸಿರು ಕ್ರಾಂತಿಯ ಹರಿಕಾರ ಖ್ಯಾತಿಯ ಡಾ.ಬಾಬು ಜಗಜೀವನರಾಂ ಅವರ ಜಯಂತಿಯನ್ನು ಕಾಟಾಚಾರಕ್ಕೆ ಅಚರಿಸಿದ್ದು ಸಂಬಂಧಿತ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿಸಿದ) ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಆಗ್ರಹಿಸಿದ್ದಾರೆ. ತಾಲ್ಲೂಕಿನ ಹೊಳೆಸಿರಿಗೆರೆ, ಬೆಳ್ಳೂಡಿ ಗ್ರಾಪಂ ಕಚೇರಿಯಲ್ಲಿ ಆಚರಣೆಯ ಸಂದರ್ಭದಲ್ಲಿ ಒಬ್ಬರು ಮಾತ್ರ ಭಾಗವಹಿಸಿದ್ದಾರೆ,ಯಲವಟ್ಟಿ,ಕಡಾರನಾಯಕನಹಳ್ಳಿ, ಕುಣಿಬೆಳೆಕೆರೆ, ನಂದಿಗಾವಿ ಗ್ರಾಪಂ ಕಚೇರಿಯಲ್ಲಿ ಇಬ್ಬರು,ಭಾನುವಳ್ಳಿ, ರಾಜನಹಳ್ಳಿ, ಹನಗವಾಡಿ, […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಲೈಂಗಿಕ ಕಿರುಕುಳ ಆರೋಪ | ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು

ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ವಿರುದ್ಧ ಬೆಂಗಳೂರಿನ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ತಮಗೆ ಸ್ವಾಮೀಜಿ ದೈಹಿಕ, ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಸ್ವಾಮೀಜಿ ಕೂಡ ಮಹಿಳೆ ವಿರುದ್ಧ ಬ್ಲಾಕ್‌ಮೇಲ್‌ ಆರೋಪದ ಮೇಲೆ ಪ್ರತಿದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಮಹಿಳಾ ಆಯೋಗಕ್ಕೆ ಮಹಿಳೆ ನೀಡಿರುವ ದೂರಿನಲ್ಲಿ; “ನನ್ನ ವೈಯಕ್ತಿಕ ಜೀವನದ ಕೆಲವು ಖಾಸಗಿ ವಿಡಿಯೋಗಳು ಸ್ವಾಮೀಜಿ ಬಳಿಯಿವೆ. ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಸ್ವಾಮೀಜಿ […] The post ಲೈಂಗಿಕ ಕಿರುಕುಳ ಆರೋಪ | ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಕಲಾವಿದ ಪಿ.ಆರ್.ತಿಪ್ಪೇಸ್ವಾಮಿ ಪುಣ್ಯಸ್ಮರಣೆ | ಸ್ಮಾರಕದ ಬಳಿ ಪೂಜೆ ಸಲ್ಲಿಕೆ 

CHITRADURGA NEWS | 07 APRIL 2026 ಚಿತ್ರದುರ್ಗ: ದಿವಂಗತ ಕಲಾವಿದ ಪಿ.ಆರ್.ತಿಪ್ಪೇಸ್ವಾಮಿ ಅವರ 26ನೇ ಪುಣ್ಯ ಸ್ಮರಣೆ ಅಂಗವಾಗಿ ಹಿರಿಯೂರು ತಾಲ್ಲೂಕಿನ ಹರ್ತಿಕೋಟೆಯಲ್ಲಿರುವ ಪಿ.ಆರ್.ತಿಪ್ಪೇಸ್ವಾಮಿ ಅವರ ಸ್ಮಾರಕದ ಬಳಿ ಪೂಜೆ ಸಲ್ಲಿಸಲಾಯಿತು. ಇದನ್ನೂ ಓದಿ: ಚಿತ್ರದುರ್ಗ ಮೆಡಿಕಲ್‌ ಕಾಲೇಜು ಕಟ್ಟಡ ವೀಕ್ಷಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ಈ ಸಂದರ್ಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಡಾ.ಮಾನಸ, ರಾಜ್ಯ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ, ಪಿ.ಆರ್.ತಿಪ್ಪೇಸ್ವಾಮಿ ಪ್ರತಿಷ್ಠಾನ ಟ್ರಸ್ಟ್ ಅಧ್ಯಕ್ಷ ರಾಜಶೇಖರ ಕದಂಬ, ಕಾರ್ಯದರ್ಶಿ ಮಹದೇವಶೆಟ್ಟಿ, […] ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಮುಟ್ಟಿನ ಸಮಯದಲ್ಲಿ ಭಾರೀ ರಕ್ತಸ್ರಾವವಾಗಲು ಕಾರಣವೇನು ಗೊತ್ತಾ?

CHITRADURGA NEWS | 07 APRIL 2026 ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ರಕ್ತಸ್ರಾವ ಮತ್ತು ನೋವು ಸಾಮಾನ್ಯವಾಗಿದೆ. ಆದರೆ ರಕ್ತಸ್ರಾವ ಮತ್ತು ನೋವು ಹೆಚ್ಚಾಗಿದ್ದರೆ, ಅದು ಕೆಲವು ಸಮಸ್ಯೆಗಳನ್ನು ಸೂಚಿಸುತ್ತದೆ. ಆದ್ದರಿಂದ, ಮುಟ್ಟಿನ ಸಮಯದಲ್ಲಿ ನೀವು ಪ್ರತಿದಿನ 4 ರಿಂದ 5 ಪ್ಯಾಡ್‌ಗಳನ್ನು ಬದಲಾಯಿಸುವ ಅಗತ್ಯವನ್ನು ಕಂಡುಕೊಂಡರೆ, ಅದನ್ನು ಹಗುರವಾಗಿ ಪರಿಗಣಿಸಬೇಡಿ. ಈ ಪರಿಸ್ಥಿತಿಯಲ್ಲಿ, ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಕೊಳ್ಳುವುದು ಬಹಳ ಮುಖ್ಯ. ಯಾಕೆಂದರೆ ಇಲ್ಲವಾದರೆ ಇದು ನಿಮ್ಮ ಜೀವಕ್ಕೆ ಅಪಾಯವಾಗಬಹುದು. ಹಾಗಾಗಿ ಮುಟ್ಟಿನ ಸಮಯದಲ್ಲಿ ಭಾರೀ […] ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಜೂನಿಯರ್ ತೆಂಡೂಲ್ಕರ್ ಯಾರ್ಕರ್ ಅಬ್ಬರ: ಪಂತ್-ಸಮದ್ ಬೆವರಿಳಿಸಿದ ಅರ್ಜುನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 15ನೇ ಪಂದ್ಯಕ್ಕೆ ಲಕ್ನೋ ಸೂಪರ್ ಜೈಂಟ್ಸ್ ಸಜ್ಜಾಗುತ್ತಿದ್ದು, ಅಭ್ಯಾಸದ ವೇಳೆ ಯುವ ವೇಗಿ ಅರ್ಜುನ್ ತೆಂಡೂಲ್ಕರ್ ಎಲ್ಲರ ಗಮನ ಸೆಳೆದಿದ್ದಾರೆ. ನೆಟ್ಸ್‌ನಲ್ಲಿ ತಮ್ಮ ಬೆಂಕಿಯಂತಹ ಯಾರ್ಕರ್ ದಾಳಿಯ ಮೂಲಕ ತಂಡದ ದಿಗ್ಗಜ ಬ್ಯಾಟರ್‌ಗಳನ್ನೇ ಅರ್ಜುನ್ ಕಂಗಾಲಾಗಿಸಿದ್ದಾರೆ. ಅಭ್ಯಾಸದ ಅವಧಿಯಲ್ಲಿ ಲಕ್ನೋ ನಾಯಕ ರಿಷಬ್ ಪಂತ್ ಅವರಿಗೆ ಸತತವಾಗಿ ನಿಖರ ಯಾರ್ಕರ್ ಎಸೆಯುವ ಮೂಲಕ ಅರ್ಜುನ್ ಬೆವರಿಳಿಸಿದರು. ಪಂತ್ ಅವರ ಲಯವನ್ನು ಪರೀಕ್ಷಿಸುವಂತೆ ದಾಳಿ ನಡೆಸಿದ ಅರ್ಜುನ್ ವಿಶ್ವಾಸದಿಂದ ಬೀಗುತ್ತಿದ್ದಾರೆ. ಕೇವಲ ಪಂತ್ […] The post ಜೂನಿಯರ್ ತೆಂಡೂಲ್ಕರ್ ಯಾರ್ಕರ್ ಅಬ್ಬರ: ಪಂತ್-ಸಮದ್ ಬೆವರಿಳಿಸಿದ ಅರ್ಜುನ್ appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.