Filters

Channels
Topics
Other Filters

ಸಚಿವ ಶಿವರಾಜ್ ತಂಗಡಗಿ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

ತುಮಕೂರು: ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಪ್ಪಳದಿಂದ ಬೆಂಗಳೂರಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಇಂದು ರಾತ್ರಿ ಸುಮಾರು 10 ಗಂಟೆಗೆ ಅವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಕಾರು ಚಾಲಕ ಮತ್ತು ಗನ್ ಮ್ಯಾನ್ ಅವರನ್ನು ತುಮಕೂರು ನಗರದ ಬಿ.ಹೆಚ್ ರಸ್ತೆಯಲ್ಲಿರುವ ಸಿದ್ದಗಂಗಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸಚಿವರನ್ನು ಆಸ್ಪತ್ರೆಗೆ ದಾಖಲಿಸಿದ ತಕ್ಷಣ ವೈದ್ಯರು ತುರ್ತು ಚಿಕಿತ್ಸೆ ನೀಡಲು ಆರಂಭಿಸಿದರು. ಅವರ ಹೃದಯ ಸಂಬಂಧಿ ತಪಾಸಣೆ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಲೋಕದ ಆಗುಹೋಗುಗಳ ಬಗ್ಗೆ ಕತಕನಹಳ್ಳಿ ಶ್ರೀಗಳ‌ ಕಾಲಜ್ಞಾನ ಭವಿಷ್ಯ

ವಿಜಯಪುರ, ಮಾರ್ಚ್ 22: ಯುಗಾದಿ ಅಮಾವಾಸ್ಯೆಯ ಹಿನ್ನೆಲೆಯಲ್ಲಿ ವಿಜಯಪುರ ತಾಲೂಕಿನ ಕತಕನಹಳ್ಳಿಯ ಶ್ರೀ ಗುರುಚಕ್ರವರ್ತಿ ಸದಾಶಿವ ಮಠದಲ್ಲಿ ಐದು ದಿನಗಳ ಜಾತ್ರಾ ಮಹೋತ್ಸವ ಭಕ್ತಿಭಾವದಿಂದ ನೆರವೇರಿತು. ಜಾತ್ಯಾತೀತವಾಗಿ ನಡೆಯುವ ಈ ಜಾತ್ರೆಗೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿ ಧಾರ್ಮಿಕ ಸಂಭ್ರಮದಲ್ಲಿ ಪಾಲ್ಗೊಂಡರು. ವಿಶೇಷವಾಗಿ ಜಾತ್ರೆಯ ಕೊನೆಯ ದಿನ ಪೀಠಾಧಿಪತಿಗಳು ನುಡಿಯುವ ಭವಿಷ್ಯವಾಣಿಗೆ ಅಪಾರ ಮಹತ್ವವಿದ್ದು, ಭಕ್ತರಲ್ಲಿ ಅದಕ್ಕೆ ವಿಶೇಷ ನಂಬಿಕೆಯಿದೆ. ಪ್ರತಿ ವರ್ಷವೂ ಯುಗಾದಿ ಸಂದರ್ಭದಲ್ಲಿ ನಡೆಯುವ ಈ ಜಾತ್ರೆಯ ಅಂತಿಮ ದಿನ ಮಠದ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಸಿಲಿಂಡರ್ ಕೊರತೆ: ರಾಜ್ಯದಲ್ಲಿ ಮತ್ತಷ್ಟು ರೆಸ್ಟೋರೆಂಟ್, ಹೋಟೆಲ್‌ಗಳು ಬಂದ್

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಉದ್ಭವಿಸಿರುವ ಯುದ್ಧದ ಪರಿಣಾಮ ಈಗ ರಾಜ್ಯದ ಹೋಟೆಲ್ ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀರಿದೆ. ವಾಣಿಜ್ಯ ಅನಿಲ ಸಿಲಿಂಡರ್‌‌ಗಳ ಪೂರೈಕೆಯಲ್ಲಿ ತೀವ್ರ ಕೊರತೆ ಉಂಟಾಗಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಹೋಟೆಲ್‌ಗಳು ಬಂದ್ ಆಗುವ ಪರಿಸ್ಥಿತಿ ಎದುರಾಗಿದೆ. ಕೇಂದ್ರ ಸರ್ಕಾರ ಕಮರ್ಷಿಯಲ್ ಗ್ಯಾಸ್ ಪೂರೈಕೆ ಭರವಸೆ ನೀಡಿದ್ದರೂ, ಇನ್ನೂ ಪರಿಸ್ಥಿತಿ ಸಾಮಾನ್ಯವಾಗಿಲ್ಲ. ನಗರದ ಮೆಜೆಸ್ಟಿಕ್ ಪ್ರದೇಶದಲ್ಲಿರುವ ಪ್ರಸಿದ್ಧ ಚಿಕನ್ ಕೌಂಟಿ ಫ್ಯಾಮಿಲಿ ರೆಸ್ಟೋರೆಂಟ್ ಗ್ಯಾಸ್ ಕೊರತೆಯಿಂದಾಗಿ ಸಂಪೂರ್ಣವಾಗಿ ಬಂದ್ ಆಗಿದೆ. ಮಾಂಸಹಾರಿ ಹೋಟೆಲ್‌ಗಳು ಹೆಚ್ಚು […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

Job Fair: ನಿರುದ್ಯೋಗಿಗಳಿಗೆ ಬಂಪರ್ ಆಫರ್, ಚಿಕ್ಕಮಗಳೂರಲ್ಲಿ ಬೃಹತ್ ಉದ್ಯೋಗ ಮೇಳ!

ಚಿಕ್ಕಮಗಳೂರಿನಲ್ಲಿ ಮಾರ್ಚ್ 23ರಂದು ಐಡಿಎಸ್‍ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 80ಕ್ಕೂ ಹೆಚ್ಚು ಕಂಪನಿಗಳಿಂದ 5000ಕ್ಕೂ ಅಧಿಕ ಉದ್ಯೋಗ ಅವಕಾಶಗಳೊಂದಿಗೆ ಬೃಹತ್ ಉದ್ಯೋಗ ಮೇಳ ನಡೆಯಲಿದೆ. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಮಂಗಳೂರು ತಲುಪಿದ ಅಕ್ವಾ ಟೈಟಾನ್ ಹಡಗು

ಮಂಗಳೂರು, ಮಾ.22: ರಷ್ಯಾದ ಕಚ್ಚಾ ತೈಲ ಸಾಗಿಸುವ ಹಡಗು ಅಕ್ವಾ ಟೈಟಾನ್ ಮಂಗಳೂರಿಗೆ ತಲುಪಿದೆ.ಅಮೆರಿಕದಿಂದ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್.ಪಿ.ಜಿ) ಸಾಗಿಸುವ ಮತ್ತೊಂದು ಸರಕು ಹಡಗು ಮಂಗಳೂರು ಬಂದರಿಗೆ ಆಗಮಿಸಿದೆ. ಅಮೆರಿಕದ ಟೆಕ್ಸಾಸ್ ರಾಜ್ಯದಿಂದ ಎಲ್.ಪಿ.ಜಿ ಸಾಗಿಸುವ ಪಿಕ್ಸಿಸ್ ಪಯೋನೀರ್ ಸರಕು ಹಡಗು ಬಂದರಿನಲ್ಲಿ ಯಶಸ್ವಿಯಾಗಿ ಬಂದರಿನಲ್ಲಿ ಬಂದಿಳಿದಿದೆ. ಇದಕ್ಕೂ ಮೊದಲು, ಭಾರತೀಯ ಎಲ್.ಪಿ.ಜಿ ಟ್ಯಾಂಕರ್ ‘ನಂದಾ ದೇವಿ’ ಗುಜರಾತ್‌ನ ವಾಡಿನಾರ್ ಬಂದರಿಗೆ ಆಗಮಿಸಿತು, ‘ಶಿವಾಲಿಕ್’ ಮುಂದ್ರಾ ಬಂದರಿನಲ್ಲಿ ಬಂದಿಳಿದ ನಂತರ ಈ ವಾರ ಪಶ್ಚಿಮ ಕರಾವಳಿಯನ್ನು […] The post ಮಂಗಳೂರು ತಲುಪಿದ ಅಕ್ವಾ ಟೈಟಾನ್ ಹಡಗು appeared first on Namma Udupi Bulletin. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಅಗತ್ಯ ಇಂಧನಗಳ ಕೊರತೆಯಿಲ್ಲ, ಪೆಟ್ರೋಲ್ ಮತ್ತು ಡೀಸೆಲ್ ಸಾಕಷ್ಟು ದಾಸ್ತಾನು ಲಭ್ಯವಿದೆ: ಸರ್ಕಾರ

ನವದೆಹಲಿ, ಮಾ.22: ದೇಶಾದ್ಯಂತ ಅಗತ್ಯ ಇಂಧನಗಳ ಕೊರತೆಯಿಲ್ಲ ಎಂದು ಸರ್ಕಾರ ಭರವಸೆ ನೀಡಿದೆ, ತೈಲ ಸಂಸ್ಕರಣಾಗಾರಗಳು ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಸಾಕಷ್ಟು ದಾಸ್ತಾನು ಲಭ್ಯವಿದೆ. ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಯಾವುದೇ ಕೊರತೆ ವರದಿಯಾಗಿಲ್ಲ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಹೇಳಿಕೆಯೊಂದರಲ್ಲಿ, ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ವಿತರಣೆ ಸಾಮಾನ್ಯವಾಗಿಯೇ ಇದೆ ಮತ್ತು ಪ್ಯಾನಿಕ್ ಬುಕಿಂಗ್‌ಗಳು ಕಡಿಮೆಯಾಗಿವೆ ಎಂದು ತಿಳಿಸಿದೆ. ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳು ಸೇರಿದಂತೆ ಪ್ರಮುಖ ವಲಯಗಳಿಗೆ ಆದ್ಯತೆ ನೀಡಿ, […] The post ಅಗತ್ಯ ಇಂಧನಗಳ ಕೊರತೆಯಿಲ್ಲ, ಪೆಟ್ರೋಲ್ ಮತ್ತು ಡೀಸೆಲ್ ಸಾಕಷ್ಟು ದಾಸ್ತಾನು ಲಭ್ಯವಿದೆ: ಸರ್ಕಾರ appeared first on Namma Udupi Bulletin. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ದಾವಣಗೆರೆ ದಕ್ಷಿಣ ಉಪಚುನಾವಣೆ: ‘ಫುಡ್ ಕಿಟ್’ ಹಂಚಿಕೆ ಆರೋಪ; ಶಾಮನೂರು ಕುಟುಂಬದ ವಿರುದ್ಧ ಬಿಜೆಪಿ ಕೆಂಡಾಮಂಡಲ

ದಾವಣಗೆರೆ: ನಗರದ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದ್ದು, ಇದೀಗ ‘ಕಿಟ್ ಪಾಲಿಟಿಕ್ಸ್’ ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮತದಾರರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸುವ ಮೂಲಕ ಶಾಮನೂರು ಶಿವಶಂಕರಪ್ಪ ಅವರ ಕುಟುಂಬ ಚುನಾವಣಾ ... Read more ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ದಾವಣಗೆರೆ ರಾಮ ಜ್ಯೋತಿ ರಥಯಾತ್ರೆ: ಹುತಾತ್ಮ ಯೋಧರ ಮನೆಗೆ ಶ್ರೀನಿವಾಸ್‌ ದಾಸಕರಿಯಪ್ಪ ಭೇಟಿ

ದಾವಣಗೆರೆ: ನಗರದಲ್ಲಿ ಶ್ರದ್ಧಾ ಭಕ್ತಿಯಿಂದ ಸಾಗುತ್ತಿರುವ ರಾಮ ಜ್ಯೋತಿ ರಥಯಾತ್ರೆಯು ಕೇವಲ ಧಾರ್ಮಿಕ ಕಾರ್ಯಕ್ರಮವಾಗಿ ಉಳಿಯದೆ, ದೇಶಪ್ರೇಮದ ಸಂಕೇತವಾಗಿ ಮಾರ್ಪಟ್ಟಿದೆ. ರಥಯಾತ್ರೆಯ ಸಂದರ್ಭದಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್‌ ದಾಸಕರಿಯಪ್ಪ ಅವರು ಹುತಾತ್ಮ ಯೋಧರ ಮನೆಗಳಿಗೆ ಭೇಟಿ ನೀಡಿ, ... Read more ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ದಾವಣಗೆರೆ ಉಪಚುನಾವಣೆ: ಕಾಂಗ್ರೆಸ್ ಟಿಕೆಟ್ ಘೋಷಣೆ ಬೆನ್ನಲ್ಲೇ ಸಮರ್ಥ್ ಶಾಮನೂರು ಮೊದಲ ಪ್ರತಿಕ್ರಿಯೆ

ದಾವಣಗೆರೆ: ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ದಾವಣಗೆರೆ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಾಮನೂರು ಸಮರ್ಥ್ ಅವರ ಹೆಸರು ಅಧಿಕೃತವಾಗಿ ಘೋಷಣೆಯಾಗಿದೆ. ಎಐಸಿಸಿ (AICC) ಕಡೆಯಿಂದ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಸಮರ್ಥ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ತಮ್ಮ ಮುಂದಿನ ನಡೆ ... Read more ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಹೊಸದುರ್ಗ ಬಿಜೆಪಿಯಲ್ಲಿ ಗೊಂದಲ | ತಾಲೂಕು ಅಧ್ಯಕ್ಷರ ವಿರುದ್ಧ ಅಸಮಧಾನ ಬಹಿರಂಗ | ಮಾಜಿ ಅಧ್ಯಕ್ಷ ಗೂಳಿಹಟ್ಟಿ ಜಗದೀಶ್‌ ಅತೃಪ್ತಿ

CHITRADURGA NEWS | 22 MARCH 2026 ಹೊಸದುರ್ಗ: ಹೊಸದುರ್ಗ ತಾಲೂಕು ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಈಗ ಬಹಿರಂಗವಾಗಿದೆ. ತಾಲೂಕು ಅಧ್ಯಕ್ಷರ ಆಯ್ಕೆಯಾದಾಗಿನಿಂದ ಹೊಗೆಯಾಡುತ್ತಿದ್ದ ಅಸಮಧಾನ ಸ್ಪೋಟಗೊಂಡಿದೆ. ತಾಲೂಕು ಅಧ್ಯಕ್ಷರಾಗಿ ಅಣ್ಣಪ್ಪಸ್ವಾಮಿ ಅವರನ್ನು ಜಿಲ್ಲಾ ಘಟಕದವರು ನೇಮಕ ಮಾಡಿದ ದಿನದಿಂದಲೇ ಸಾಮಾಜಿಕ ಮಾಧ್ಯಮಗಳು, ವಾಟ್ಸಪ್‌ನಲ್ಲಿ ಭಾರೀ ಚರ್ಚೆಯಾಗಿತ್ತು. ಈ ಅಸಮಧಾನಕ್ಕೆ ತೇಪೆ ಹಾಕು ಜಿಲ್ಲಾ ಘಟಕದ ಯಾವ ಪದಾಧಿಕಾರಿಗಳೂ ಮುಂದಾಗಿರಲಿಲ್ಲ. ಇದನ್ನೂ ಓದಿ:ಮಾರುಕಟ್ಟೆ ಧಾರಣೆ | ಮಾರ್ಚ್ 18 | ಮೆಕ್ಕೆಜೋಳ ರೇಟ್… ಈಗ […] ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ನವಮಂಗಳೂರು ಬಂದರಿನಲ್ಲಿ ಅಕ್ವಾ ಟೈಟಾನ್ ಹಡಗಿನಿಂದ ಎಂಆರ್‌ಪಿಎಲ್ ಸಂಸ್ಕರಣಾಗಾರಕ್ಕೆ ಕಚ್ಚಾ ತೈಲ ವರ್ಗಾವಣೆ ಆರಂಭ

ಮಂಗಳೂರು, ಮಾ.22: ನವಮಂಗಳೂರು ಬಂದರಿನಲ್ಲಿರುವ ಅಕ್ವಾ ಟೈಟಾನ್ ಹಡಗಿನಿಂದ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಸಂಸ್ಕರಣಾಗಾರಕ್ಕೆ ಕಚ್ಚಾ ತೈಲ ವರ್ಗಾವಣೆ ವೇಗವಾಗಿ ನಡೆಯುತ್ತಿದ್ದು, ಸೋಮವಾರ ಸಂಜೆಯ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ರಷ್ಯಾದಿಂದ ಸುಮಾರು 96,000 ಮೆಟ್ರಿಕ್ ಟನ್ ಕಚ್ಚಾ ತೈಲವನ್ನು ಹೊತ್ತುಕೊಂಡು ಬಂದ ಹಡಗು, ತನ್ನ ಇತ್ತೀಚಿನ ಸರಕಿನೊಂದಿಗೆ ಸಂಸ್ಕರಣಾಗಾರಕ್ಕೆ ಸರಬರಾಜು ಮಾಡುತ್ತಿದೆ. ಏತನ್ಮಧ್ಯೆ, ಭಾನುವಾರ ಮುಂಜಾನೆ ಬಂದರಿಗೆ ಆಗಮಿಸಿದ ಎಲ್‌ಪಿಜಿ ಸರಕು ಸಾಗಣೆ ಹಡಗಿನ ಪೈಕ್ಸಿಸ್ ಪಯೋನೀರ್‌ಗಾಗಿ ಇಳಿಸುವ ಕಾರ್ಯಾಚರಣೆಗಳು ಸಹ ಪ್ರಾರಂಭವಾಗಿವೆ. ಈ […] The post ನವಮಂಗಳೂರು ಬಂದರಿನಲ್ಲಿ ಅಕ್ವಾ ಟೈಟಾನ್ ಹಡಗಿನಿಂದ ಎಂಆರ್‌ಪಿಎಲ್ ಸಂಸ್ಕರಣಾಗಾರಕ್ಕೆ ಕಚ್ಚಾ ತೈಲ ವರ್ಗಾವಣೆ ಆರಂಭ appeared first on Namma Udupi Bulletin. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಪಾಂಡೇಶ್ವರ: ಅಕ್ಷರ ಸಂತ ಹರೇಕಳ ಹಾಜಬ್ಬಗೆ ಯಕ್ಷಮಿತ್ರರಿಂದ ಸನ್ಮಾನ

ಕೋಟ, ಮಾ.22: ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ಯಕ್ಷಮಿತ್ರರು ನಡೆಸಿದ ಸನ್ಮಾನ ಅರ್ಥಪೂರ್ಣ ಎಂದು ಪಾಂಡೇಶ್ವರ ರಕ್ತೇಶ್ವರಿ ದೇಗುಲದ ಧರ್ಮದರ್ಶಿ ಕೆ.ವಿ ರಮೇಶ್ ರಾವ್ ಹೇಳಿದರು. ಶನಿವಾರ ಸಾಸ್ತಾನದ ಪಾಂಡೇಶ್ವರ ಯಡಬೆಟ್ಟು ಯಕ್ಷಮಿತ್ರರು ಆಯೋಜಿಸಿದ ಪಂಚಮ ವರ್ಷದ ಯಕ್ಷಗಾನ ಕಾರ್ಯಕ್ರಮದಲ್ಲಿ ಪದ್ಮಶ್ರೀ ಹರೇಕಳ ಹಾಜಬ್ಬರನ್ನು ಗೌರವಿಸಿ ಅವರು ಮಾತನಾಡಿದರು. ಅಕ್ಷರ ದೇಗುಲವನ್ನು ಕಟ್ಟಿ ಸಮಾಜಕ್ಕೆ ತನ್ನನ್ನು ಸಮರ್ಪಿಸಿಕೊಂಡ ಹಾಜಬ್ಬ ಎನ್ನುವ ನಿಸ್ವಾರ್ಥ ಸೇವಾರ್ಥಿ ತನ್ನ ಸರ್ವಸ್ವವನ್ನೂ ಈ ಸಮಾಜಕ್ಕೆ ಧಾರೆ ಎರೆದಿದ್ದಾರೆ. ಯಕ್ಷಮಿತ್ರರು ಇಂಥ ಸಾಧಕರನ್ನು ಗೌರವಿಸಿರುವುದು […] The post ಪಾಂಡೇಶ್ವರ: ಅಕ್ಷರ ಸಂತ ಹರೇಕಳ ಹಾಜಬ್ಬಗೆ ಯಕ್ಷಮಿತ್ರರಿಂದ ಸನ್ಮಾನ appeared first on Namma Udupi Bulletin. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಸಾಸ್ತಾನ: ಆರೋಗ್ಯ ಶಿಬಿರ

ಕೋಟ, ಮಾ.22: ಆರೋಗ್ಯವಂತ ಸಮಾಜ ನಿರ್ಮಿಸುವಲ್ಲಿ ವೈದ್ಯರ ಸೇವೆ ಬಹುಮುಖ್ಯ. ಅದೇ ರೀತಿ ಆರೋಗ್ಯವಂತ ಸಮಾಜಕ್ಕೆ ಆರೋಗ್ಯ ಶಿಬಿರಗಳು ಅಡಿಗಲ್ಲು ಇದ್ದಂತೆ ಎಂದು ಸಾಸ್ತಾನದ ಸಾಮಾಜಿಕ ಕಾರ್ಯಕರ್ತ ಐರೋಡಿ ವಿಠ್ಠಲ್ ಪೂಜಾರಿ ಹೇಳಿದರು. ಭಾನುವಾರ ಪ್ರಾಥಮಿಕ ಆರೋಗ್ಯ ಕೇಂದ್ರ ಸಾಸ್ತಾನ ಇಲ್ಲಿ ಎ.ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮಂಗಳೂರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಸಾಸ್ತಾನ, ರೋಟರಿ ಕ್ಲಬ್ ಸಾಸ್ತಾನ – ಹಂಗಾರಕಟ್ಟೆ ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರೋಟರಿ […] The post ಸಾಸ್ತಾನ: ಆರೋಗ್ಯ ಶಿಬಿರ appeared first on Namma Udupi Bulletin. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಕಿವೀಸ್ ಕೋಟೆಯಲ್ಲಿ ಹರಿಣಗಳ ಅಬ್ಬರ: ನ್ಯೂಜಿಲೆಂಡ್ ವಿರುದ್ಧ ಆಫ್ರಿಕಾಗೆ 19 ರನ್‌ಗಳ ಜಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಆತಿಥೇಯ ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿಯು ಈಗ ಕುತೂಹಲಕಾರಿ ಘಟ್ಟಕ್ಕೆ ಬಂದು ತಲುಪಿದೆ. ವೆಲ್ಲಿಂಗ್ಟನ್‌ನ ಸ್ಕೈ ಕ್ರೀಡಾಂಗಣದಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು 19 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸರಣಿಯನ್ನು 2-2 ರಿಂದ ಸಮಬಲಗೊಳಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ವಿಯಾನ್ ಮುಲ್ಡರ್ ಮೊದಲ ಓವರ್‌ನಲ್ಲೇ ವಿಕೆಟ್ ಒಪ್ಪಿಸಿದರು. […] The post ಕಿವೀಸ್ ಕೋಟೆಯಲ್ಲಿ ಹರಿಣಗಳ ಅಬ್ಬರ: ನ್ಯೂಜಿಲೆಂಡ್ ವಿರುದ್ಧ ಆಫ್ರಿಕಾಗೆ 19 ರನ್‌ಗಳ ಜಯ appeared first on HOSA DIGANTHA. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.

ಮಣೂರು: ಸ್ವಚ್ಛತಾ ಅಭಿಯಾನ

ಕೋಟ, ಮಾ.22: ಮಣೂರು ಹೇರಂಬ ಮಹಾಗಣಪತಿ ಹಾಗೂ ಮಹಾಲಿಂಗೇಶ್ವರ ಸಾನಿಧ್ಯ ಕಾರಣಿಕ ಕ್ಷೇತ್ರವಾಗಿದ್ದು ಇಲ್ಲಿನ ವಾರ್ಷಿಕ ರಥೋತ್ಸವ ಅರ್ಥಪೂರ್ಣವಾಗಿಸಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರ ಭಾಗವಹಿಸುವಿಕೆ ಬಹುಮುಖ್ಯವಾಗಿದೆ ಎಂದು ಮಣೂರು ಮಹಾಲಿಂಗೇಶ್ವರ ದೇಗುಲದ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ಹೇಳಿದರು. ಭಾನುವಾರ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ 295 ನೇ ವಾರದ ಪರಿಸರ ಸ್ನೇಹಿ ಕಾರ್ಯಕ್ರಮದ ಸಲುವಾಗಿ ಮಣೂರು ದೇಗುಲ ಜಾತ್ರೆಯ ಪ್ರಯುಕ್ತ ಮಣೂರು ಫ್ರೆಂಡ್ಸ್ ಮಣೂರು ಇವರ ಸಂಯೋಜನೆಯೊಂದಿಗೆ […] The post ಮಣೂರು: ಸ್ವಚ್ಛತಾ ಅಭಿಯಾನ appeared first on Namma Udupi Bulletin. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.