Filters

Channels
Topics
Other Filters

ರಾಜ್ಯದಲ್ಲಿ ಮತ್ತೆ ಮಳೆಯ ಅಬ್ಬರ: ಬೆಂಗಳೂರು ಸೇರಿ 15 ಜಿಲ್ಲೆಗಳಿಗೆ ಗುಡುಗು ಸಹಿತ ಮಳೆ

ಬೆಂಗಳೂರು, ಮಾ.19: ರಾಜ್ಯದಲ್ಲಿ ಬೇಸಿಗೆಯ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದ್ದರೂ, ಇಂದಿನ ಹವಾಮಾನದಲ್ಲಿ ಮಳೆ ಬೀಳುವ ಸಾಧ್ಯತೆ ಇದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಮತ್ತು ಮೇಲ್ಮೈ ಸುಳಿಗಾಳಿಯ ಪರಿಣಾಮವಾಗಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಆಲಿಕಲ್ಲು ಮಳೆ ಸುರಿದ ಹಿನ್ನೆಲೆ, ಇಂದು ಕೂಡ ಮೋಡ ಕವಿದ ವಾತಾವರಣ ಮುಂದುವರಿಯಲಿದೆ. ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಗುಡುಗು ಸಹಿತ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಪಿಸಿಒಡಿ/ಪಿಸಿಓಎಸ್ ಅನ್ನು ನಿವಾರಿಸಲು ಈ ಯೋಗಾಸನ ಮಾಡಿ

CHITRADURGA NEWS | 19 MARCH 2026 ಇತ್ತೀಚಿನ ದಿನಗಳಲ್ಲಿ, ಪ್ರತಿಯೊಬ್ಬರೂ ಅದರಲ್ಲೂ ವಿಶೇಷವಾಗಿ ಮಹಿಳೆಯರು ತಮ್ಮ ಅನಾರೋಗ್ಯದಿಂದ ತೊಂದರೆಗೊಳಗಾಗಿದ್ದಾರೆ. ಹೆಚ್ಚಿನ ಮಹಿಳೆಯರು ಪಿಸಿಒಡಿ ಮತ್ತು ಪಿಸಿಓಎಸ್ ನಿಂದ ಬಳಲುತ್ತಿದ್ದಾರೆ. ಇದರಿಂದ ಹಲವರಲ್ಲಿ ಬಂಜೆತನದ ಸಮಸ್ಯೆ ಕಾಡುತ್ತಿದೆ. ಹಾಗಾಗಿ ಅನೇಕರು ಇದಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಔಷಧಿಗಳನ್ನು ಸೇವಿಸುವ ಬದಲು ಅದನ್ನು ಯೋಗಾಭ್ಯಾಸಗಳ ಮೂಲಕ ಪರಿಹರಿಸಿಕೊಳ್ಳಬಹುದು. ಹಾಗಾಗಿ ಪಿಸಿಒಡಿ/ಪಿಸಿಓಎಸ್ ಅನ್ನು ನಿವಾರಿಸಲು ಯಾವ ಯೋಗವನ್ನು ಅಭ್ಯಾಸ ಮಾಡಬೇಕು ಎಂಬುದನ್ನು ತಿಳಿಯಿರಿ. ಬಡ್ಡಾ ಕೊನಾಸನ  ನೀವು ಇದನ್ನು ಚಿಟ್ಟೆ […] ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ವೃದ್ಧಾಪ್ಯದ ನೆಮ್ಮದಿಗೆ ಚಾಣಕ್ಯ ನೀತಿ: ಯುವಜನತೆಗೆ ಇಲ್ಲಿದೆ ಮಹತ್ವದ ಪಾಠ

ಚಾಣಕ್ಯ ನೀತಿ: ಜೀವನದ ಪ್ರತಿ ಹಂತವೂ ಒಂದೊಂದು ಪಾಠ. ಆದರೆ, ಯೌವನದ ಅಮಲಿನಲ್ಲಿ ನಾವು ಮಾಡುವ ಸಣ್ಣ ತಪ್ಪುಗಳು ವೃದ್ಧಾಪ್ಯದ ಹಾದಿಯನ್ನು ಮುಳ್ಳಿನ ಹಾಸಿಗೆಯನ್ನಾಗಿ ಮಾಡಬಲ್ಲವು. ಮೌರ್ಯ ಸಾಮ್ರಾಜ್ಯದ ಸ್ಥಾಪಕ, ಮಹಾನ್ ರಾಜತಾಂತ್ರಿಕ ಆಚಾರ್ಯ ಚಾಣಕ್ಯರು ತಮ್ಮ ‘ಚಾಣಕ್ಯ ನೀತಿ’ಯಲ್ಲಿ ಯುವಜನತೆಗೆ ... Read more ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಗುರುವಾರದ ರಾಶಿ ಭವಿಷ್ಯ 19 ಮಾರ್ಚ್ 2026

ಈ ರಾಶಿಯವರ ಆಸ್ತಿ ಸಮಸ್ಯೆ ಬಗೆಹರಿಯಲಿದೆ, ಈ ರಾಶಿಯ ದಂಪತಿಗಳ ಉಲ್ಲಾಸಭರಿತ ಸಂಸಾರ, ಈ ರಾಶಿಯವರ ಮದುವೆ ಯೋಗ, ಗುರುವಾರದ ರಾಶಿ ಭವಿಷ್ಯ 19 ಮಾರ್ಚ್ 2026 ಸೂರ್ಯೋದಯ – 6:24 ಬೆ. ಸೂರ್ಯಾಸ್ತ – 6:23 ಸಂಜೆ. ಶಾಲಿವಾಹನ ಶಕೆ -1947 ಸಂವತ್-2081 ಶ್ರೀ ಪರಾಭವ ನಾಮ ಸಂವತ್ಸರ ನಾಮ ಸಂವತ್ಸರ, ಉತ್ತರ ಅಯಣ, ಕೃಷ್ಣ ಪಕ್ಷ, ಪಾಲ್ಗುಣ ಮಾಸ, ಶಿಶಿರ್ ಋತು, ತಿಥಿ – ಅಮಾವಾಸ್ಯೆ 6:53 ಬೆ.ವರೆಗೆ ನಂತರ ಪಾಡ್ಯ ನಕ್ಷತ್ರ – […] The post ಗುರುವಾರದ ರಾಶಿ ಭವಿಷ್ಯ 19 ಮಾರ್ಚ್ 2026 first appeared on Dvgsuddi Kannada | online news portal | Kannada news online. ಜ್ಯೋತಿಷ್ಯ ವಿಷಯಗಳು ದಿನನಿತ್ಯದ ಜೀವನದ ನಿರ್ಧಾರಗಳಲ್ಲಿ ಹಲವರಿಗೆ ಮಾರ್ಗದರ್ಶನ ನೀಡುತ್ತವೆ.

ಮೆಟ್ಟಿಲು ಹತ್ತುವಾಗ ಉಸಿರು ಗಟ್ಟಿದಂತೆ ಆಗುತ್ತಿದೆಯೇ ? ಇದು ಹೃದಯದ ಸಮಸ್ಯೆಯ ಎಚ್ಚರಿಕೆ ಇರಬಹುದು

ಬೆಂಗಳೂರು: ಇಂದಿನ ವೇಗದ ಜೀವನಶೈಲಿಯಲ್ಲಿ ದೈಹಿಕ ಶ್ರಮ ಕಡಿಮೆಯಾಗುತ್ತಿದೆ. ಹೀಗಿರುವಾಗ ಸಣ್ಣಪುಟ್ಟ ಕೆಲಸಗಳಿಗೂ ನಾವು ಸುಸ್ತಾಗುವುದು ಸಾಮಾನ್ಯ ಎಂದು ಭಾವಿಸುತ್ತೇವೆ. ಅದರಲ್ಲೂ ಮೆಟ್ಟಿಲು ಹತ್ತುವಾಗ ಉಸಿರಾಟದ ವೇಗ ಹೆಚ್ಚುವುದು ಅಥವಾ ಆಯಾಸವಾಗುವುದು ಸಹಜ ಎಂದು ಅನೇಕರು ನಿರ್ಲಕ್ಷಿಸುತ್ತಾರೆ. ಆದರೆ, ಹೃದ್ರೋಗ ತಜ್ಞರ ಪ್ರಕಾರ, ಮೆಟ್ಟಿಲು ಹತ್ತುವುದು ಕೇವಲ ಒಂದು ದೈಹಿಕ ಚಟುವಟಿಕೆಯಲ್ಲ, ಇದು ನಿಮ್ಮ ಹೃದಯದ ಆರೋಗ್ಯವನ್ನು ಅಳೆಯುವ ಒಂದು ‘ನೈಸರ್ಗಿಕ ಸ್ಟ್ರೆಸ್ ಟೆಸ್ಟ್’ (Natural Stress Test). ನಾವು ಮೆಟ್ಟಿಲು ಹತ್ತಲು ಪ್ರಾರಂಭಿಸಿದಾಗ ದೇಹದ ದೊಡ್ಡ […] Source ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

ಬೆಂಗಳೂರಿನಲ್ಲಿ ಆಲಿಕಲ್ಲು ಸಹಿತ ಮಳೆ: 20ಕ್ಕೂ ಹೆಚ್ಚು ವಿಮಾನಗಳು ಬೇರೆಡೆಗೆ ಡೈವರ್ಟ್

ಬೆಂಗಳೂರು: ರಾಜಧಾನಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸತತ ಎರಡನೇ ದಿನವೂ ಮಳೆರಾಯ ಅಬ್ಬರಿಸಿದ್ದಾನೆ. ಮಾರ್ಚ್ 17ರಂದು ಆರಂಭವಾದ ವರ್ಷದ ಮೊದಲ ಮಳೆ ಇಂದು (ಮಾರ್ಚ್ 18) ಮತ್ತಷ್ಟು ತೀವ್ರಗೊಂಡಿದ್ದು, ವಿಶೇಷವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸುತ್ತಮುತ್ತ ಭೀಕರ ಆಲಿಕಲ್ಲು ಮಳೆ ಸುರಿದಿದೆ. ಈ ಅನಿರೀಕ್ಷಿತ ಹವಾಮಾನ ವೈಪರೀತ್ಯದಿಂದಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಕಾರ್ಯಾಚರಣೆಗೆ ತೀವ್ರ ಅಡ್ಡಿ ಉಂಟಾಗಿದ್ದು, ಪ್ರಯಾಣಿಕರು ಹೈರಾಣಾಗಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸಂಕಷ್ಟ ಬುಧವಾರ ಸಂಜೆ 5 ಗಂಟೆಯ ನಂತರ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಒಣ ಕೆಮ್ಮಿನಿಂದ ರಾತ್ರಿ ನಿದ್ದೆ ಬರುತ್ತಿಲ್ಲವೇ ? ಈ 5 ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ

ಬೆಂಗಳೂರು: ದೇಶದ ಹಲವು ಭಾಗಗಳಲ್ಲಿ ಸದ್ಯ ಹವಾಮಾನದಲ್ಲಿ ತೀವ್ರ ಏರಿಳಿತಗಳು ಕಂಡುಬರುತ್ತಿವೆ. ಬೆಳಿಗ್ಗೆ ಸುಡುವ ಬಿಸಿಲು, ಸಂಜೆಯಾಗುತ್ತಿದ್ದಂತೆ ತಂಪಾದ ಗಾಳಿ ಹಾಗೂ ಅಲ್ಲಲ್ಲಿ ಬೀಳುತ್ತಿರುವ ಅಕಾಲಿಕ ಮಳೆಯಿಂದಾಗಿ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಈ ಬದಲಾಗುತ್ತಿರುವ ವಾತಾವರಣಕ್ಕೆ ದೇಹವು ಒಗ್ಗಿಕೊಳ್ಳುವ ಮೊದಲೇ ಅನೇಕರಲ್ಲಿ ಒಣ ಕೆಮ್ಮಿನ (Dry Cough) ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಧೂಳು, ಹೊಗೆ ಮತ್ತು ಹೆಚ್ಚುತ್ತಿರುವ ವಾಯು ಮಾಲಿನ್ಯವು ಈ ಸಮಸ್ಯೆಯನ್ನು ಇನ್ನಷ್ಟು ಹಚ್ಚಾಗಿಸುತ್ತಿದೆ. ಒಣ ಕೆಮ್ಮು ಉಂಟಾಗಲು ಪ್ರಮುಖ ಕಾರಣಗಳೇನು ? […] Source ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

ಎಲ್ಲಾ ರೀತಿಯ ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳನ್ನ ಬ್ಯಾನ್‌ ಮಾಡಿದ ಕೇಂದ್ರ: ಜಾಹೀರಾತು ನೀಡಿದ್ರೂ ಜೈಲು ಗ್ಯಾರಂಟಿ

ನವದೆಹಲಿ: ದೇಶದಲ್ಲಿ ಹಣದ ಆಮಿಷ ಒಡ್ಡುವ ಆನ್‌ಲೈನ್ ಗೇಮಿಂಗ್‌ ಜಾಲಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಈಗ ಬೃಹತ್ ಹೆಜ್ಜೆ ಇಟ್ಟಿದೆ. ‘ಆನ್‌ಲೈನ್ ಗೇಮಿಂಗ್ ಉತ್ತೇಜನ ಮತ್ತು ನಿಯಂತ್ರಣ ಕಾಯ್ದೆ 2025’ ಅನ್ನು ಜಾರಿಗೆ ತರುವ ಮೂಲಕ, ಎಲ್ಲಾ ರೀತಿಯ ಆನ್‌ಲೈನ್ ಹಣದ ಆಟಗಳನ್ನು (Online Real Money Games) ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಬಗ್ಗೆ ಕೇಂದ್ರ ಸಚಿವ ಡಾ. ಎಲ್. ಮುರುಗನ್ ಅವರು ಲೋಕಸಭೆಯಲ್ಲಿ ಮಾಹಿತಿ ನೋಡಿದ್ದಾರೆ. ಏನಿದು ಹೊಸ ಕಾಯ್ದೆ? ಭಾರತದಲ್ಲಿ ಸುರಕ್ಷಿತ ಮತ್ತು […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಯುಗಾದಿ ಹಬ್ಬಕ್ಕೆ ಊರಿಗೆ ಹೊರಟವರಿಗೆ ಶಾಕ್: ಖಾಸಗಿ ಬಸ್ ದರ ಬರೋಬ್ಬರಿ 5 ಪಟ್ಟು ಏರಿಕೆ

ಬೆಂಗಳೂರು: ಯುಗಾದಿ ಹಾಗೂ ರಂಜಾನ್ ಹಬ್ಬಗಳ ಸರಣಿ ರಜೆ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಲಕ್ಷಾಂತರ ಜನ ತಮ್ಮ ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ. ಇದರಿಂದಾಗಿ ನಗರದ ಪ್ರಮುಖ ಬಸ್ ನಿಲ್ದಾಣಗಳು, ವಿಶೇಷವಾಗಿ ಮೆಜೆಸ್ಟಿಕ್ (KSRTC), ಸ್ಯಾಟಲೈಟ್ ಹಾಗೂ ಕೆಂಗೇರಿ ನಿಲ್ದಾಣಗಳಲ್ಲಿ ಜನಸಾಗರವೇ ಹರಿದುಬಂದಿದೆ. ಆದರೆ, ಇದೇ ಸಂದರ್ಭವನ್ನು ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್ ಮಾಲೀಕರು ಟಿಕೆಟ್ ದರವನ್ನು ಗಗನಕ್ಕೇರಿಸಿದ್ದು, ಪ್ರಯಾಣಿಕರು ಕಂಗೆಟ್ಟಿದ್ದಾರೆ. ಹಬ್ಬದ ಸಂಭ್ರಮಕ್ಕಾಗಿ ಊರಿಗೆ ತೆರಳಲು ರೈಲು ಹಾಗೂ ಬಸ್ ನಿಲ್ದಾಣಗಳಲ್ಲಿ ಜನವೋ ಜನ. […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

SSLC ಪರೀಕ್ಷೆ | ಕನ್ನಡ ವಿಷಯದಲ್ಲಿ 480 ವಿದ್ಯಾರ್ಥಿಗಳು ಗೈರು

CHITRADURGA NEWS | 18 March 2026 ಚಿತ್ರದುರ್ಗ: ಜಿಲ್ಲೆಯಲ್ಲಿ ಮಾರ್ಚ್ 18ರಂದು ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆ-1ರ ಪ್ರಥಮ ಭಾಷೆ ವಿಷಯದ ಪರೀಕ್ಷೆಗೆ 480 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಇದನ್ನೂ ಓದಿ: ರೈತರಿಗೆ ಯುಗಾದಿ ಹಬ್ಬದ ಭರ್ಜರಿ ಬೋನಸ್‌ | ಬೇಸಿಗೆಯಲ್ಲೇ ಸುರಿದ ಮಳೆ ಪ್ರಥಮ ಭಾಷೆ ವಿಷಯದ ಪರೀಕ್ಷೆಗೆ 23049 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ 22569 ವಿದ್ಯಾರ್ಥಿಗಳು ಹಾಜರಾಗಿ, 480 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಜಿಲ್ಲೆಯ 84 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು ಎಂದು ಶಾಲಾ ಶಿಕ್ಷಣ […] ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಸಿಸಿಐನಲ್ಲಿ ಸ್ಕ್ವಾಷ್ ಕಲಿಗಳ ಕಾದಾಟ: ಮೊದಲ ದಿನವೇ JSW ಇಂಡಿಯನ್ ಓಪನ್‌ನಲ್ಲಿ ಭಾರತೀಯರ ಪಾರುಪತ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಂಬೈನ ಪ್ರತಿಷ್ಠಿತ ಸಿಸಿಐ (CCI) ಕ್ರೀಡಾಂಗಣದಲ್ಲಿ ‘ಜೆಎಸ್‌ಡಬ್ಲ್ಯೂ ಇಂಡಿಯನ್ ಓಪನ್ 2026’ ಸ್ಕ್ವಾಷ್ ಪಂದ್ಯಾವಳಿಯು ವಿದ್ಯುಕ್ತವಾಗಿ ಚಾಲನೆಗೊಂಡಿದ್ದು, ಮೊದಲ ದಿನವೇ ಕ್ರೀಡಾಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಿತು. ದಿನದ ಅತ್ಯಂತ ಆಕರ್ಷಕ ಪಂದ್ಯದಲ್ಲಿ ಭಾರತದ ಓಂ ಸೆಮ್ವಾಲ್ ಮತ್ತು ಮೆಕ್ಸಿಕೋದ ಸೆಬಾಸ್ಟಿಯನ್ ಸಲಾಜರ್ ಪರಸ್ಪರ ಕಾದಾಡಿದರು. ಐದು ಗೇಮ್‌ಗಳವರೆಗೆ ನಡೆದ ಈ ದೀರ್ಘ ಹಾಗೂ ಸುದೀರ್ಘ ಹೋರಾಟದಲ್ಲಿ ಉಭಯ ಆಟಗಾರರು ಸಮಬಲದ ಪೈಪೋಟಿ ನೀಡಿದರು. ಆದರೆ ಅಂತಿಮ ಕ್ಷಣದಲ್ಲಿ ಅಮೋಘ ಸಂಯಮ ಪ್ರದರ್ಶಿಸಿದ ಸೆಮ್ವಾಲ್ […] The post ಸಿಸಿಐನಲ್ಲಿ ಸ್ಕ್ವಾಷ್ ಕಲಿಗಳ ಕಾದಾಟ: ಮೊದಲ ದಿನವೇ JSW ಇಂಡಿಯನ್ ಓಪನ್‌ನಲ್ಲಿ ಭಾರತೀಯರ ಪಾರುಪತ್ಯ! appeared first on HOSA DIGANTHA. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.

ಜೀವನವೇ ಬೇಡವೆಂದವರಿಗೆ ಬದುಕುವ ಭರವಸೆ ನೀಡಿದ 112 ಸಿಬ್ಬಂದಿ: ಇದು ಮಾನವೀಯತೆಯ ಕಥೆ

ತೀರ್ಥಹಳ್ಳಿ: ತುರ್ತು ಸಂದರ್ಭಗಳಲ್ಲಿ 112 ಸಿಬ್ಬಂದಿಗಳು ಅಂದರೆ ಹಾಗೇನೇ… ಯಾವುದೇ ಸಣ್ಣಪುಟ್ಟ ವಿಚಾರಗಳಿದ್ದರೂ ... Read more ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ʼಸರ್ಸೆ ನಿನ್ನ ಸೆರಗ ಸರ್ಸೆʼ ವಿವಾದ: ಕೆಡಿ ನಿರ್ದೇಶಕ ಪ್ರೇಮ್‌ ಸ್ಪಷ್ಟನೆ

ಬೆಂಗಳೂರು: ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದ ‘ಸರ್ಸೆ ಸೆರಗ’ ಹಾಡು ರಾಷ್ಟ್ರಮಟ್ಟದಲ್ಲಿ ಸೃಷ್ಟಿಸಿರುವ ವಿವಾದಕ್ಕೆ ಕೊನೆಗೂ ನಿರ್ದೇಶಕ ಜೋಗಿ ಪ್ರೇಮ್ ಪ್ರತಿಕ್ರಿಯಿಸಿದ್ದಾರೆ. ಕೇಂದ್ರ ಸರ್ಕಾರ ಹಾಡನ್ನು ನಿಷೇಧಿಸಿರುವುದು ಮತ್ತು ನಟಿ ನೋರಾ ಫತೇಹಿ ತಮ್ಮ ವಿರುದ್ಧ ಗಂಭೀರ ಆರೋಪ ಮಾಡಿರುವ ಬೆನ್ನಲ್ಲೇ, ಪ್ರೇಮ್ ಇನ್‌ಸ್ಟಾಗ್ರಾಮ್ ವಿಡಿಯೋ ಮೂಲಕ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ನನ್ನ ದೃಷ್ಟಿಕೋನವೇ ಬೇರೆ ಇತ್ತು ಹಾಡಿನ ಸಾಹಿತ್ಯ ಅಶ್ಲೀಲತೆಯಿಂದ ಕೂಡಿದೆ ಎಂಬ ಟೀಕೆಗಳಿಗೆ ಉತ್ತರಿಸಿದ ಪ್ರೇಮ್, ನಾನು ಈ ಹಾಡನ್ನು ಬರೆಯುವಾಗ ಬೇರೆಯದೇ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಮಂಡ್ಯ | ಎಲೆಚಾಕನಹಳ್ಳಿ ಬಳಿ ವಸತಿ ಬಡಾವಣೆ ಅಭಿವೃದ್ಧಿ ; ಜೂನ್ ಅಂತ್ಯದೊಳಗೆ ನಿವೇಶನ ಹಂಚಿಕೆ

ಕರ್ನಾಟಕ ಗೃಹ ಮಂಡಳಿಯಿಂದ ಮಂಡ್ಯ ತಾಲ್ಲೂಕಿನ ಎಲೆಚಾಕನಹಳ್ಳಿ ಗ್ರಾಮದಲ್ಲಿ ರೂ. 213.43 ಕೋಟಿ ಯೋಜನಾ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ವಸತಿ ಬಡಾವಣೆಯಲ್ಲಿ ಸಾರ್ವಜನಿಕರಿಗೆ 2026ರ ಜೂನ್ ಅಂತ್ಯದೊಳಗೆ ಇ-ಲಾಟರಿ ಮೂಲಕ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು ಎಂದು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಿ.ಜೆಡ್. ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ. ಶಾಸಕ ಮಧು ಜಿ.ಮಾದೇಗೌಡ ಅವರು ವಿಧಾನ ಪರಿಷತ್ತಿನಲ್ಲಿ ಬುಧವಾರ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ಸದರಿ ಬಡಾವಣೆಯಲ್ಲಿ ವಿವಿಧ ವರ್ಗಗಳ 2072 ನಿವೇಶನಗಳು, […] The post ಮಂಡ್ಯ | ಎಲೆಚಾಕನಹಳ್ಳಿ ಬಳಿ ವಸತಿ ಬಡಾವಣೆ ಅಭಿವೃದ್ಧಿ ; ಜೂನ್ ಅಂತ್ಯದೊಳಗೆ ನಿವೇಶನ ಹಂಚಿಕೆ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

UPSC | ಕರ್ನಾಟಕದ ಯುವಕ ಪಡೆದ ರ್‍ಯಾಂಕನ್ನು ತನ್ನದೆಂದು ಹೇಳಿಕೊಂಡು ಬಿಟ್ಟಿ ಸನ್ಮಾನ ಪಡೆದ ಬಿಹಾರದ ಯುವಕ !

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಾಗರಿಕ ಸೇವಾ ಪರೀಕ್ಷೆ (ಸಿಎಸ್‌ಇ) 2025 ರಲ್ಲಿ ಅಖಿಲ ಭಾರತ ರ‍್ಯಾಂಕ್ (ಎಐಆರ್) 440 ಗಳಿಸಿದ್ದೇನೆ ಎಂದು ಸುಳ್ಳು ಹೇಳಿಕೊಂಡ ಕೆಲವು ದಿನಗಳ ನಂತರ, ಬಿಹಾರದ ಶೇಖ್‌ಪುರ ಜಿಲ್ಲೆಯ ರಂಜಿತ್ ಯಾದವ್ ಎಂಬ ಯುವಕನನ್ನು ಬಂಧಿಸಲಾಗಿದೆ. ರಂಜಿತ್ ಯಾದವ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿಲ್ಲ ಎಂದು ಅಲ್ಲಿನ ಜಿಲ್ಲಾಧಿಕಾರಿಗಳು ದಾಖಲೆ ಪರಿಶೀಲನೆಯ ಮೂಲಕ ದೃಢಪಡಿಸಿದ ನಂತರ ಮಂಗಳವಾರ (ಮಾರ್ಚ್ 17) ಅವರನ್ನು ವಶಕ್ಕೆ ಪಡೆಯಲಾಗಿದೆ. ವಾಸ್ತವವಾಗಿ ರಂಜಿತ್ ಯಾದವ್ ಹೇಳಿಕೊಂಡ ರ‍್ಯಾಂಕ್ AIR 440 […] The post UPSC | ಕರ್ನಾಟಕದ ಯುವಕ ಪಡೆದ ರ್‍ಯಾಂಕನ್ನು ತನ್ನದೆಂದು ಹೇಳಿಕೊಂಡು ಬಿಟ್ಟಿ ಸನ್ಮಾನ ಪಡೆದ ಬಿಹಾರದ ಯುವಕ ! appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.