Filters

Channels
Topics
Other Filters

ಜಿಮ್‌ಗೆ ಹೋಗುವ ಮುನ್ನ ಪೀನಟ್ ಬಟರ್ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಅಸಲಿ ಮಾಹಿತಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಿಮ್‌ಗೆ ಹೋಗುವವರು ಅಥವಾ ಪ್ರತಿದಿನ ವ್ಯಾಯಾಮ ಮಾಡುವವರು ತಮ್ಮ ಆಹಾರದ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ವರ್ಕ್‌ಔಟ್‌ಗೆ ಮುಂಚೆ ಏನು ತಿನ್ನಬೇಕು ಎಂಬ ಗೊಂದಲ ಅನೇಕರಲ್ಲಿದೆ. ಈ ಪೈಕಿ ಪೀನಟ್ ಬಟರ್ ಅತ್ಯುತ್ತಮ ಆಯ್ಕೆಯಾಗಿದೆ. ಇದು ನಿಮ್ಮ ದೇಹಕ್ಕೆ ಬೇಕಾದ ಚೈತನ್ಯವನ್ನು ನೀಡುವುದರ ಜೊತೆಗೆ ವ್ಯಾಯಾಮದ ಸಮಯದಲ್ಲಿ ಸುಸ್ತಾಗದಂತೆ ನೋಡಿಕೊಳ್ಳುತ್ತದೆ. ಪೀನಟ್ ಬಟರ್ ಅಲ್ಲಿ ಆರೋಗ್ಯಕರ ಕೊಬ್ಬು, ಪ್ರೋಟೀನ್ ಮತ್ತು ನಾರು ಸಮೃದ್ಧವಾಗಿರುತ್ತದೆ. ವರ್ಕ್‌ಔಟ್ ಆರಂಭಿಸುವ 30 ರಿಂದ 45 ನಿಮಿಷಗಳ ಮುಂಚೆ […] The post ಜಿಮ್‌ಗೆ ಹೋಗುವ ಮುನ್ನ ಪೀನಟ್ ಬಟರ್ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಅಸಲಿ ಮಾಹಿತಿ appeared first on ONLINE.

ಸೇಡನ್ ಪಾರ್ಕ್‌ನಲ್ಲಿ ರನ್‌ ಮಳೆ: ನ್ಯೂಜಿಲೆಂಡ್‌ಗೆ ಟೆನ್ಷನ್ ಕೊಟ್ಟ ಯುವ ಭಾರತೀಯ ಪಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಹ್ಯಾಮಿಲ್ಟನ್‌ನ ಸೇಡನ್ ಪಾರ್ಕ್ ಮೈದಾನದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದು, ಕಿವೀಸ್ ತಂಡಕ್ಕೆ ಸವಾಲಿನ ಗುರಿ ನೀಡಿದೆ. ಆರಂಭಿಕ ಆಘಾತದ ಹೊರತಾಗಿಯೂ ಮಧ್ಯಮ ಕ್ರಮದ ಸ್ಫೋಟಕ ಬ್ಯಾಟಿಂಗ್ ಹಾಗೂ ಡೆತ್ ಓವರ್‌ಗಳ ಉತ್ತಮ ಆಟದ ನೆರವಿನಿಂದ ಭಾರತ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 191 ರನ್ ಕಲೆಹಾಕಿದೆ. ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ […] The post ಸೇಡನ್ ಪಾರ್ಕ್‌ನಲ್ಲಿ ರನ್‌ ಮಳೆ: ನ್ಯೂಜಿಲೆಂಡ್‌ಗೆ ಟೆನ್ಷನ್ ಕೊಟ್ಟ ಯುವ ಭಾರತೀಯ ಪಡೆ appeared first on ONLINE.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಭರತೇಶ್ ಎಜುಕೇಶನ್ ಟ್ರಸ್ಟ್ ಮಾಜಿ ಅಧ್ಯಕ್ಷ ಡಾ. ಜಿನದತ್ತ ದೇಸಾಯಿ ನಿಧನ

ಹೊಸದಿಗಂತ ವರದಿ ಬೆಳಗಾವಿ : 2017 ರಲ್ಲಿ ಕರ್ನಾಟಕ ಸರಕಾರ ನೀಡುವ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಭಾಜನರಾದ ಹಾಗೂ ಭರತೇಶ್ ಎಜುಕೇಶನ್ ಟ್ರಸ್ಟ್‌ನ ಮಾಜಿ ಅಧ್ಯಕ್ಷ ಡಾ. ಜಿನದತ್ತ ದೇಸಾಯಿ ನವೆಂಬರ್ 1 ರ ಭಾನುವಾರದಂದು ನಿಧನರಾದರು. ಜಿನದತ್ತ ದೇಸಾಯಿ  ಅವರು ಏಪ್ರಿಲ್ 3, 1933 ರಂದು ಧಾರವಾಡ ಜಿಲ್ಲೆಯ ಅಮ್ಮಿನಭಾವಿಯಲ್ಲಿ ಜನಿಸಿದರು. ಧಾರವಾಡದಲ್ಲಿ ಎಲ್‌ಎಲ್‌ಬಿ ಪದವಿ ಪಡೆದ ನಂತರ, ಅವರು 1962 ರಿಂದ ವಕೀಲರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು, 1966 ರಿಂದ 1991 ರಲ್ಲಿ […] The post ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಭರತೇಶ್ ಎಜುಕೇಶನ್ ಟ್ರಸ್ಟ್ ಮಾಜಿ ಅಧ್ಯಕ್ಷ ಡಾ. ಜಿನದತ್ತ ದೇಸಾಯಿ ನಿಧನ appeared first on ONLINE.

ಸೂರ್ಯಕುಮಾರ್ ದಾಖಲೆ ಧೂಳೀಪಟ: ಟಿ20ಯಲ್ಲಿ ಹೊಸ ಇತಿಹಾಸ ಬರೆದ ಇಶಾನ್ ಕಿಶನ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಕ್ರಿಕೆಟ್‌ ತಂಡದ ಯುವ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭರ್ಜರಿ ಇತಿಹಾಸ ನಿರ್ಮಿಸಿದ್ದಾರೆ. ಟೀಮ್ ಇಂಡಿಯಾದ ಮಾಜಿ ನಾಯಕ ಸೂರ್ಯಕುಮಾರ್ ಯಾದವ್ ಅವರ ಹೆಸರಿನಲ್ಲಿದ್ದ ಬಹುದೊಡ್ಡ ದಾಖಲೆಯೊಂದನ್ನು ಅಳಿಸಿಹಾಕುವ ಮೂಲಕ ಇಶಾನ್ ಹೊಸ ಎತ್ತರಕ್ಕೆ ಏರಿದ್ದಾರೆ. ನ್ಯೂಝಿಲೆಂಡ್ ವಿರುದ್ಧದ ಐದನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಇಶಾನ್ ಕಿಶನ್, ಎದುರಾಳಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಕೇವಲ 28 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು, […] The post ಸೂರ್ಯಕುಮಾರ್ ದಾಖಲೆ ಧೂಳೀಪಟ: ಟಿ20ಯಲ್ಲಿ ಹೊಸ ಇತಿಹಾಸ ಬರೆದ ಇಶಾನ್ ಕಿಶನ್! appeared first on ONLINE.

ರಾಜ್ಯದ ಜನರಿಗೆ ಬಿಗ್ ಶಾಕ್: ನವೆಂಬರ್ 5ರಿಂದಲೇ ಬಸ್ ಟಿಕೆಟ್ ದರ ಏರಿಕೆ ಸಾಧ್ಯತೆ; ಬೈರತಿ ಸುರೇಶ್

ಚಿಕ್ಕಬಳ್ಳಾಪುರ: ರಾಜ್ಯದ ಜನರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ಎದುರಾಗಿದೆ. ಸಾರಿಗೆ ಬಸ್ ಪ್ರಯಾಣ ದರವೂ ಹೆಚ್ಚಳವಾಗುವ ಸುಳಿವು ಸಿಕ್ಕಿದೆ. ನವೆಂಬರ್ 5ರಿಂದಲೇ ರಾಜ್ಯದ ಸಾರಿಗೆ ಬಸ್ ಟಿಕೆಟ್ ದರ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ. ಚಿಕ್ಕಬಳ್ಳಾಪುರ ನಗರದಲ್ಲಿ ಮಾತನಾಡಿದ ಅವರು, ಸಾರಿಗೆ ಬಸ್ ಪ್ರಯಾಣ ದರ ಹೆಚ್ಚಳದ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಬಸ್ ಟಿಕೆಟ್ ದರ ಏರಿಕೆ ಸಂಬಂಧ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟ ಸಭೆಯಲ್ಲಿ […] Source

ರಾಯಚೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಸಾವು: ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

ರಾಯಚೂರು, ನವೆಂಬರ್ 1: ವೈಯಕ್ತಿಕ ವ್ಯವಹಾರದಲ್ಲಿ ಉಂಟಾದ ಭಾರಿ ನಷ್ಟದ ಹಿನ್ನೆಲೆ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಲೆ ಮಾಡಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ರಾಯಚೂರಿನ ಜಲಾಲನಗರದಲ್ಲಿ ಬೆಳಕಿಗೆ ಬಂದಿದೆ. ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಈ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಘಟನೆಯಲ್ಲಿ ದಂಪತಿಯ ಹಿರಿಯ ಮಗ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮೃತರನ್ನು ವಿಷ್ಣು (45), ಅವರ ಪತ್ನಿ ಅರುಣಾ (36), ಮಗ ಶ್ಲೋಕ (10) ಹಾಗೂ ಮಗಳು ಖುಷಿ (7) […] Source

ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಕೇಂದ್ರವೇ ಪರಿಹಾರ ನೀಡಲಿ: ಸಕ್ಕರೆ ಎಂಎಸ್‌ಪಿ ಹೆಚ್ಚಳಕ್ಕೆ ಸತೀಶ್ ಜಾರಕಿಹೊಳಿ ಆಗ್ರಹ

ಹೊಸದಿಗಂತ ವರದಿ ಬೆಳಗಾವಿ:  ಕಬ್ಬು ಬೆಳೆಗಾರರ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಬೇಕಾದರೆ ಕೇಂದ್ರ ಸರ್ಕಾರ ಸಕ್ಕರೆಯ ಕನಿಷ್ಠ ಮಾರಾಟ ಬೆಲೆ (ಎಂಎಸ್‌ಪಿ) ಹೆಚ್ಚಳ ಮಾಡಬೇಕು. ಕೇಂದ್ರ ಸರ್ಕಾರ ಎಂಎಸ್‌ಪಿ ಹೆಚ್ಚಿಸಿದರೆ ಸಕ್ಕರೆ ಕಾರ್ಖಾನೆಗಳ ಮಾಲೀಕರು ರೈತರಿಗೆ ಇನ್ನಷ್ಟು ಹಣ ಪಾವತಿಸಲು ಸಿದ್ಧರಿದ್ದಾರೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ 71ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, […] The post ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಕೇಂದ್ರವೇ ಪರಿಹಾರ ನೀಡಲಿ: ಸಕ್ಕರೆ ಎಂಎಸ್‌ಪಿ ಹೆಚ್ಚಳಕ್ಕೆ ಸತೀಶ್ ಜಾರಕಿಹೊಳಿ ಆಗ್ರಹ appeared first on ONLINE.

ಉಪ್ಪಿನಲ್ಲಿದೆ ಆರೋಗ್ಯದ ಗುಟ್ಟು: ಕರ್ನಾಟಕ ಸೇರಿ 3 ರಾಜ್ಯಗಳ 13 ಲಕ್ಷ ಮಹಿಳೆಯರಿಗೆ ಅಯೋಡಿನ್ ಪಾಠ

ಬೆಂಗಳೂರು: ಅಯೋಡಿನ್ ನಮ್ಮ ದೇಹಕ್ಕೆ ಅಗತ್ಯ ಎಂದು ತಿಳಿದಿರುವುದು ಒಂದು ವಿಚಾರವಾದರೆ, ಸೂಕ್ತ ಪ್ರಮಾಣದ ಅಯೋಡಿನ್ ಇರುವ ಉಪ್ಪನ್ನು ಗುರುತಿಸುವುದು, ಅದನ್ನು ಸರಿಯಾಗಿ ಶೇಖರಿಸಿಡುವುದು ಹಾಗೂ ಅಡುಗೆಯಲ್ಲಿ ಬಳಸುವುದು ಹೇಗೆ ಎಂಬುದು ಮತ್ತೊಂದು ವಿಚಾರ. ಈ ನಿಟ್ಟಿನಲ್ಲಿ ಮಹಿಳೆಯರಿಗೆ ಪ್ರಾಯೋಗಿಕ ಅರಿವು ಮೂಡಿಸುವಲ್ಲಿ ಆಶೀರ್ವಾದ್ ಸ್ಮಾರ್ಟ್ ಇಂಡಿಯಾ ಕಾರ್ಯಕ್ರಮ (ಎಎಸ್‌ಐಪಿ) ಭಾರಿ ಯಶಸ್ಸು ಕಂಡಿದೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದ 32 ಜಿಲ್ಲೆಗಳಲ್ಲಿ ಕಳೆದ ಎರಡು ವರ್ಷಗಳಿಂದ ನಡೆದ ಈ ಬೃಹತ್ ಅಭಿಯಾನದಲ್ಲಿ 13 ಲಕ್ಷಕ್ಕೂ ಹೆಚ್ಚು […] Source

ಅಪ್ರಾಪ್ತ ವಯಸ್ಕ ಬಾಲಿಕಿಯ ಮೇಲೆ ಲೈಂಗಿಕ ದೌರ್ಜನ್ಯ: ಭಿನ್ನಕೋಮಿನ ಯುವಕನ ವಿರುದ್ಧ ಪೋಕ್ಸೋ ಕೇಸ್‌ ದಾಖಲು

ಹೊಸದಿಗಂತ ವರದಿ ಕಲಬುರಗಿ: ಅಪ್ರಾಪ್ತ ವಯಸ್ಕ ಬಾಲಕಿಯೊಬ್ಬಳಿಗೆ ಭಿನ್ನಕೋಮಿನ ಯುವಕನೊಬ್ಬ ಮದುವೆಯಾಗುವುದಾಗಿ ನಂಬಿಸಿ, ಆಕೆಯನ್ನು ಮನೆಯಿಂದ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಜೇವರ್ಗಿ ತಾಲೂಕಿನಲ್ಲಿ ಕೇಳಿಬಂದಿದೆ. ಈ ಸಂಬಂಧ ಇಸ್ಮಾಯಿಲ್ ಎಂಬಾತನ ವಿರುದ್ಧ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಯುಗಾದಿ ಹಬ್ಬದ ಸಂದರ್ಭದಲ್ಲಿ ಬಾಲಕಿಗೆ ಪರಿಚಯವಾಗಿದ್ದ ಆರೋಪಿ, ನಂತರ ಆಕೆಯೊಂದಿಗೆ ನಿರಂತರ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದ ಎನ್ನಲಾಗಿದೆ. ಪ್ರೀತಿಸುವಂತೆ ಹಾಗೂ ಮದುವೆಯಾಗುವುದಾಗಿ ಒತ್ತಾಯಿಸುತ್ತಿದ್ದರೂ, ಬಾಲಕಿ ತನ್ನ ವಯಸ್ಸು ಇನ್ನೂ ಮದುವೆಗೆ ಸೂಕ್ತವಾಗಿಲ್ಲ […] The post ಅಪ್ರಾಪ್ತ ವಯಸ್ಕ ಬಾಲಿಕಿಯ ಮೇಲೆ ಲೈಂಗಿಕ ದೌರ್ಜನ್ಯ: ಭಿನ್ನಕೋಮಿನ ಯುವಕನ ವಿರುದ್ಧ ಪೋಕ್ಸೋ ಕೇಸ್‌ ದಾಖಲು appeared first on ONLINE.

ಕೂದಲ ರಕ್ಷಣೆಗಾಗಿ ಒದ್ದಾಡುತ್ತಿದ್ದೀರಾ? ಮಾಲಿನ್ಯದ ಈ ಅಪಾಯದಿಂದ ಮೊದಲು ಎಚ್ಚೆತ್ತುಕೊಳ್ಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಯುಮಾಲಿನ್ಯವು ಕೇವಲ ನಮ್ಮ ಉಸಿರಾಟದ ಮೇಲಷ್ಟೇ ಅಲ್ಲ, ನಮ್ಮ ಕೇಶರಾಶಿಯ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ. ಪ್ರತಿದಿನ ರಸ್ತೆಯಲ್ಲಿ ಓಡಾಡುವಾಗ ಗಾಳಿಯಲ್ಲಿರುವ ವಿಷಕಾರಿ ಧೂಳು, ಹೊಗೆ ಮತ್ತು ರಾಸಾಯನಿಕಗಳು ನೇರವಾಗಿ ಕೂದಲಿನ ಮೇಲೆ ದಾಳಿ ಮಾಡುತ್ತವೆ. ಇದು ನಮ್ಮ ಕೂದಲಿನ ಅಂದವನ್ನು ಸಂಪೂರ್ಣವಾಗಿ ಹಾಳುಮಾಡುತ್ತದೆ. ನಮ್ಮ ನೆತ್ತಿಯಲ್ಲಿ ಉತ್ಪತ್ತಿಯಾಗುವ ನೈಸರ್ಗಿಕ ಎಣ್ಣೆಯು ಕೂದಲಿಗೆ ತೇವಾಂಶ ಮತ್ತು ಹೊಳಪನ್ನು ನೀಡುತ್ತದೆ. ಆದರೆ, ಗಾಳಿಯಲ್ಲಿ ತೇಲಾಡುವ ಸೂಕ್ಷ್ಮ ಧೂಳಿನ ಕಣಗಳು ಈ […] The post ಕೂದಲ ರಕ್ಷಣೆಗಾಗಿ ಒದ್ದಾಡುತ್ತಿದ್ದೀರಾ? ಮಾಲಿನ್ಯದ ಈ ಅಪಾಯದಿಂದ ಮೊದಲು ಎಚ್ಚೆತ್ತುಕೊಳ್ಳಿ appeared first on ONLINE.

SIR ವಿರುದ್ಧ ದೆಹಲಿಯಲ್ಲಿ INDIA ಒಕ್ಕೂಟದ ಬೃಹತ್ ಪ್ರತಿಭಟನೆ: ಬಿಜೆಪಿಯಿಂದಲೂ ಪ್ರತ್ಯೇಕ ರ‍್ಯಾಲಿ

ನವದೆಹಲಿ, ನವೆಂಬರ್ 1: ದೆಹಲಿಯಲ್ಲಿ ಇಂದು ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ’ (INDIA Bloc) ಮತ್ತು ಆಡಳಿತ ಪಕ್ಷ ಬಿಜೆಪಿ ಪ್ರತ್ಯೇಕ ಮೆರವಣಿಗೆಗಳನ್ನು ನಡೆಸಲಿವೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ವಿರೋಧ ಪಕ್ಷಗಳ INDIA ಒಕ್ಕೂಟ ಬೃಹತ್ ಪ್ರತಿಭಟನೆ ನಡೆಸುತ್ತಿದೆ.. ಮತ್ತೊಂದೆಡೆ, 1984ರ ಸಿಖ್ ವಿರೋಧಿ ಗಲಭೆಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಲು ಬಿಜೆಪಿ ಕೂಡ ಪ್ರತ್ಯೇಕ ಮೆರವಣಿಗೆ ಆಯೋಜಿಸಿದೆ. ಹೀಗಾಗಿ ದೆಹಲಿಯಲ್ಲಿ ಇಂದು ಎರಡು […] Source

5ನೇ ಟಿ20 ಪಂದ್ಯ: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಕಿವೀಸ್, ಭಾರತಕ್ಕೆ ಬ್ಯಾಟಿಂಗ್ ಆಹ್ವಾನ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಹಾಗೂ ನ್ಯೂಝಿಲೆಂಡ್ ನಡುವಿನ ರೋಚಕ ಟಿ20 ಸರಣಿಯ 5ನೇ ಹಾಗೂ ಅಂತಿಮ ಪಂದ್ಯವು ಹ್ಯಾಮಿಲ್ಟನ್‌ನ ಪ್ರಸಿದ್ಧ ಸೆಡನ್ ಪಾರ್ಕ್ ಮೈದಾನದಲ್ಲಿ ಅದ್ಧೂರಿಯಾಗಿ ಆರಂಭಗೊಂಡಿದೆ. ಉಭಯ ತಂಡಗಳ ನಡುವೆ ನಡೆಯುತ್ತಿರುವ ಈ ನಿರ್ಣಾಯಕ ಪಂದ್ಯದಲ್ಲಿ ಅದೃಷ್ಟ ಕಿವೀಸ್ ಪಾಳಯದತ್ತ ಒಲಿದಿದೆ. ಟಾಸ್ ಗೆದ್ದ ನ್ಯೂಝಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ಮೊದಲು ಬೌಲಿಂಗ್ ಮಾಡುವ ರಣತಂತ್ರ ರೂಪಿಸಿದ್ದು, ಟೀಮ್ ಇಂಡಿಯಾವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ್ದಾರೆ. ಈ ಮಹತ್ವದ ಪಂದ್ಯಕ್ಕಾಗಿ ಭಾರತ ತಂಡದ ಆಡುವ ಬಳಗದಲ್ಲಿ […] The post 5ನೇ ಟಿ20 ಪಂದ್ಯ: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಕಿವೀಸ್, ಭಾರತಕ್ಕೆ ಬ್ಯಾಟಿಂಗ್ ಆಹ್ವಾನ appeared first on ONLINE.

ಮುಂಬೈ ಅಂಗಳಕ್ಕೆ ಹಿಟ್​ಮ್ಯಾನ್ ಪುನರಾಗಮನ: ವಿಜಯ್ ಹಝಾರೆ ಟ್ರೋಫಿಯಲ್ಲಿ ರೋಹಿತ್ ಅಬ್ಬರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಟೀಮ್ ಇಂಡಿಯಾದ ಅನುಭವಿ ಹಾಗೂ ದಿಗ್ಗಜ ದಾಂಡಿಗ ರೋಹಿತ್ ಶರ್ಮಾ ಮತ್ತೆ ದೇಶೀಯ ಕ್ರಿಕೆಟ್ ಅಂಗಳದಲ್ಲಿ ಬ್ಯಾಟ್ ಬೀಸಲು ಸಜ್ಜಾಗಿದ್ದಾರೆ. ಮುಂಬರುವ 2026–27ರ ಸಾಲಿನ ವಿಜಯ್ ಹಝಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಮುಂಬೈ ತಂಡದ ಪರ ಆಡಲು ತಮ್ಮ ಲಭ್ಯತೆಯನ್ನು ಅವರು ಮುಂಬೈ ಕ್ರಿಕೆಟ್ ಸಂಸ್ಥೆಗೆ ಅಧಿಕೃತವಾಗಿ ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಈಗಾಗಲೇ ನಿವೃತ್ತಿ ಹೇಳಿರುವ ಹಿಟ್​ಮ್ಯಾನ್, ಸಿಕ್ಕಿರುವ ಬಿಡುವಿನ ಅವಧಿಯನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಲು ಈ ನಿರ್ಧಾರ ಕೈಗೊಂಡಿದ್ದಾರೆ. ಭಾರತ ತಂಡವು […] The post ಮುಂಬೈ ಅಂಗಳಕ್ಕೆ ಹಿಟ್​ಮ್ಯಾನ್ ಪುನರಾಗಮನ: ವಿಜಯ್ ಹಝಾರೆ ಟ್ರೋಫಿಯಲ್ಲಿ ರೋಹಿತ್ ಅಬ್ಬರ appeared first on ONLINE.

ರಾಯಚೂರಿನಲ್ಲಿ ಘೋರ ದುರಂತ: ಸಾಲ ಬಾಧೆಗೆ ಹೆಂಡತಿ, ಇಬ್ಬರು ಮಕ್ಕಳನ್ನು ಕೊಂ*ದು ಪತಿ ಆತ್ಮಹ*ತ್ಯೆ

ಹೊಸದಿಗಂತ ವರದಿ ರಾಯಚೂರು:  ಸಾಲ ಬಾಧೆಯನ್ನು ತಾಳಲಾರದೆ ಹೆಂಡತಿ ಮತ್ತು ಇಬ್ಬರು ಮಕ್ಕಳು ಕೊಂದು ಪತಿ ಆತ್ಮಹತ್ಯೆ ನಾಡಿಕೊಂಡ ಘಟನೆ ರಾಯಚೂರಿನ ಜಲಾಲನಗರದಲ್ಲಿ ಜರುಗಿದೆ.  ಶನಿವಾರ ರಾತ್ರಿ ಹೆಂಡತಿ ಅರುಣಾ(40), ಶ್ಲೋಕ(10), ಖುಷಿ(4) ಯನ್ನು ಕೊಂದು ಪತಿ ವಿಷ್ಣು ರೆಡ್ಡಿ ರೈಲ್ವೆ ಹಳಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಬ್ಬರು ಮಕ್ಕಳು ಹಾಗೂ ಪತ್ನಿಯನ್ನು ಕೊಲೆ ಮಾಡುವ ಪೂರ್ವದಲ್ಲಿ ವಿಷ್ಣು ರಡ್ಡಿ ಹಿರಿಯ ಮಗನನ್ನು ಮನೆಯ ಕೋಣೆ ಒಂದರಲ್ಲಿ ಕೂಡಿ ಹಾಕಿದ್ದಾನೆ. ಮೂವರನ್ನು ಹತ್ಯೆ ಮಾಡಿದ ನಂತರ ಹಿರಿಯ […] The post ರಾಯಚೂರಿನಲ್ಲಿ ಘೋರ ದುರಂತ: ಸಾಲ ಬಾಧೆಗೆ ಹೆಂಡತಿ, ಇಬ್ಬರು ಮಕ್ಕಳನ್ನು ಕೊಂ*ದು ಪತಿ ಆತ್ಮಹ*ತ್ಯೆ appeared first on ONLINE.

71ನೇ ಕನ್ನಡ ರಾಜ್ಯೋತ್ಸವ: ಧ್ವಜಾರೋಹಣ ನೆರವೇರಿಸಿದ ಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರು: ರಾಜ್ಯಾದ್ಯಂತ 71ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆಮಾಡಿದೆ. ಕನ್ನಡ ನಾಡು, ನುಡಿ, ನೆಲ, ಜಲ ಹಾಗೂ ಸಂಸ್ಕೃತಿಯ ಹಿರಿಮೆಯನ್ನು ಸಾರುವ ನವೆಂಬರ್ 1ರ ವಿಶೇಷ ದಿನವನ್ನು ಕನ್ನಡಿಗರು ಹೆಮ್ಮೆಯಿಂದ ಆಚರಿಸುತ್ತಿದ್ದಾರೆ. ಈ ಹಿನ್ನೆಲೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಧ್ವಜಾರೋಹಣ ನೆರವೇರಿಸಿ ಕನ್ನಡಿಗರಿಗೆ ಶುಭಾಶಯ ಕೋರಿದರು. ಇದೇ ವೇಳೆ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳ ಮೇಲೆ ಕನ್ನಡ ಬಾವುಟ ಹಾರಿಸುವುದನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಸಿದ್ಧತೆ […] Source