Filters

Channels
Topics
Other Filters

ಹೆಲಿಕಾಪ್ಟರ್ ಪತನ: ಬೆಂಗಳೂರು ಮೂಲದ ಐವರು ಸಾವು

ಉತ್ತರಾಖಂಡ, ಅಕ್ಟೋಬರ್, 30,2026 (www.justkannada.in): ಲ್ಯಾಂಡಿಂಗ್ ವೇಳೆ  ಓರ್ವ ಪೈಲೆಟ್ ಸೇರಿ 6 ಮಂದಿ ಪ್ರಯಾಣಿಕರಿದ್ದ ಹೆಲಿಕಾಪ್ಟರ್ ಪತನಗೊಂಡಿರುವ ಘಟನೆ  ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನಡೆದಿದೆ. ಚಾಯ್ ಮತ್ತು ಥಾಯಾಂಗ್ ಗ್ರಾಮಗಳ ಸಮೀಪ ಪರ್ವತ ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ. ಬೆಂಗಳೂರು ಮೂಲದ ಐವರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹೆಲಿಕಾಪ್ಟರ್ ಕ್ಯಾಪ್ಟನ್ ಹಿಮಾಂಶು, ಬೆಂಗಳೂರು ಮೂಲದ ಪ್ರತಾಪ್,  ಅರುಣ್. ಶಂಕರ್ ಗೌಡ,  ಕೆ,ಸುಧೀರ್, ಹೆಚ್ ಎಸ್ ನಟರಾಜ್ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಟ್ರಾನ್ಸ್‌ಭಾರತ್ ಏವಿಯೇಷನ್ ಸಂಸ್ಥೆಗೆ ಸೇರಿದ […]

ನಾನೇ ಸರ್ಕಾರ, ನಾನು ಹೇಳಿದ್ದೇ ಫೈನಲ್‌ : ಹಾಸನದಲ್ಲಿ ಗರಂ ಆದ ಶಿವಲಿಂಗೇಗೌಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಹಾಸನಾಂಬ ಜಾತ್ರೆಯಲ್ಲಿ ನೂರು ರೂಪಾಯಿಗೆ ಎರಡು ಲಡ್ಡುಗಳನ್ನು ಮಾರಾಟ ಮಾಡುತ್ತಿದ್ದವರ ವಿರುದ್ಧ ಸಚಿವ ಕೆ.ಎಂ ಶಿವಲಿಂಗೇಗೌಡ ಗರಂ ಆಗಿದ್ದಾರೆ. ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನಾಂಬೆ ದೇವಿಯ ದರುಶನಕ್ಕಾಗಿ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಇಲ್ಲಿ ಪ್ರಸಾದವಾಗಿ ನೀಡುವ ಲಡ್ಡುವಿನ ದರವನ್ನು ನೂರು ರೂಪಾಯಿಗೆ ಏರಿಕೆ ಮಾಡಲಾಗಿತ್ತು. ಜಿಲ್ಲಾಡಳಿತ ಹಾಗೂ ದೇವಾಲಯದ ಅಧಿಕಾರಿಗಳ ನಿರ್ಧಾರಕ್ಕೆ ಶಿವಲಿಂಗೇಗೌಡ ವಿರೋಧ ವ್ಯಕ್ತಪಡಿಸಿದ್ದು, ಲಡ್ಡು ಬೆಲೆಯನ್ನು 60 ರೂಪಾಯಿಗೆ ಇಳಿಸಿ ಸಾರ್ವಜನಿಕರಿಗೆ ಮಾರಾಟ ಮಾಡುವಂತೆ ಖಡಕ್ ಸೂಚನೆ ನೀಡಿದ್ದಾರೆ. […] The post ನಾನೇ ಸರ್ಕಾರ, ನಾನು ಹೇಳಿದ್ದೇ ಫೈನಲ್‌ : ಹಾಸನದಲ್ಲಿ ಗರಂ ಆದ ಶಿವಲಿಂಗೇಗೌಡ appeared first on ONLINE.

ಟಿ20 ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ: ಭಾರತದ ವಿರುದ್ಧ ನ್ಯೂಜಿಲೆಂಡ್‌ ಬೃಹತ್ ಮೊತ್ತ ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟಿ20 ಸರಣಿಯಲ್ಲಿ ಕಿವೀಸ್ ಆಟಗಾರರು ಪರದಾಡುತ್ತಿದ್ದರೆ, ಸ್ಫೋಟಕ ಬ್ಯಾಟರ್ ಗ್ಲೆನ್ ಫಿಲಿಪ್ಸ್ ಮಾತ್ರ ತಮ್ಮ ಏಕಾಂಗಿಯಾಗಿ ಅಬ್ಬರಿಸಿದ್ದಾರೆ. ಆಕ್ಲೆಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತೀಯ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಫಿಲಿಪ್ಸ್, ಕೇವಲ 46 ಎಸೆತಗಳಲ್ಲಿ ಶತಕ ಪೂರೈಸಿ ಅಕ್ಷರಶಃ ಅಬ್ಬರಿಸಿದರು. ಇದು ಅವರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ವೃತ್ತಿಜೀವನದ ಮೂರನೇ ಶತಕವಾಗಿದೆ. ಪಂದ್ಯದ ಒಂದು ಹಂತದಲ್ಲಿ ಭಾರತದ ಯುವ ಆಲ್‌ರೌಂಡರ್ ನಿತೀಶ್ ರೆಡ್ಡಿ ಎಸೆದ ಒಂದೇ ಓವರ್‌ನಲ್ಲಿ ಫಿಲಿಪ್ಸ್ […] The post ಟಿ20 ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ: ಭಾರತದ ವಿರುದ್ಧ ನ್ಯೂಜಿಲೆಂಡ್‌ ಬೃಹತ್ ಮೊತ್ತ ದಾಖಲು appeared first on ONLINE.

ಸ್ಕೇಟಿಂಗ್ ಸ್ಫರ್ಧೆ | ಮಂಡ್ಯದ ಎಸ್.ಎಲ್.ಶಾರ್ವರಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಮಂಡ್ಯ : ಬೆಳಗಾವಿ ಹೊರವಲಯದ ” ಶಿವಗಂಗಾ ಸ್ಕೇಟಿಂಗ್ ಅಕಾಡೆಮಿಯಲ್ಲಿ ನಡೆದ 14/17 ರ ವಯೋಮಿತಿಯ ಬಾಲಕ/ ಬಾಲಕಿಯರ ರಾಜ್ಯ ಮಟ್ಟದ ಸ್ಕೇಟಿಂಗ್ ಸ್ಫರ್ಧೆಯಲ್ಲಿ ಮಂಡ್ಯನಗರದ ಅನ್ನಪೂರ್ಣೇಶ್ವರಿ ನಗರದ 6 ನೇ ಕ್ರಾಸ್ ನಿವಾಸಿ ಹಾಗೂ ನಗರದ ಸೆಂಟ್ ಥೋಮಸ್ ಹೈಸ್ಕೂಲ್ ನ 10 ನೇ ತರಗತಿಯ ವಿದ್ಯಾರ್ಥಿನಿ ಎಸ್.ಎಲ್.ಶಾರ್ವರಿ ಒಂದು ಚಿನ್ನದ ಪದಕ ಹಾಗೂ ಎರಡು ಬೆಳ್ಳಿ ಪದಕ ಜಯಿಸಿ ಸತತ ನಾಲ್ಕನೇ ಬಾರಿಗೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ಧಾರೆ. ಸ್ಕೂಲ್ ಫೆಡರೇಷನ್ ಆಫ್ ಇಂಡಿಯಾ ಕರ್ನಾಟಕ […] The post ಸ್ಕೇಟಿಂಗ್ ಸ್ಫರ್ಧೆ | ಮಂಡ್ಯದ ಎಸ್.ಎಲ್.ಶಾರ್ವರಿ ರಾಷ್ಟ್ರಮಟ್ಟಕ್ಕೆ ಆಯ್ಕೆ appeared first on nudikarnataka.

ಐವರು IAS ಅಧಿಕಾರಿಗಳ ವರ್ಗಾವಣೆ : ಸರ್ಕಾರ ಆದೇಶ

ಬೆಂಗಳೂರು,ಅಕ್ಟೋಬರ್,30,2026 (www.justkannada.in): ರಾಜ್ಯ ಸರ್ಕಾರವು ಐವರು ಐಎಎಸ್ ಅಧಿಕಾರಿಗಳ ವರ್ಗಾವಣೆ ಹಾಗೂ ಹುದ್ದೆ ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದು ಈ ಮೂಲಕ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿದೆ. ಈ ಕುರಿತು ಇಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR)  ಅಧಿಕೃತ ಆದೇಶ ಹೊರಡಿಸಿದೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತರಾಗಿದ್ದ ಸುರಳ್ಕರ್ ವಿಕಾಸ್ ಕಿಶೋರ್ ಅವರನ್ನು ಹಿಂದುಳಿದ ವರ್ಗಗಳ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ. ಕರ್ನಾಟಕ ಗೃಹ ಮಂಡಳಿಯ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿರುವ ಕೆ.ಎ. ದಯಾನಂದ್ […]

ಮುಖ್ಯಮಂತ್ರಿ ಆಗಮನಕ್ಕೆ ಸಿಂಗಾರಗೊಂಡ ಮಂಡ್ಯ : ನಾಳೆ 1,793 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ

ಮಂಡ್ಯ: ಅ.31ರಂದು ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಮಿಸಲಿರುವ ಹಿನ್ನೆಲೆಯಲ್ಲಿ ಮಂಡ್ಯ ನಗರ ಸಿಂಗಾರಗೊಂಡಿದೆ. ಮಂಡ್ಯ ನಗರದ ಬೆಂಗಳೂರು-ಮೈಸೂರು ರಸ್ತೆಯ ಎರಡೂ ಬದಿಗಳಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸ್ವಾಗತ ಕೋರಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಫ್ಲೆಕ್ಸ್ ಗಳನ್ನು ಹಾಕಿದ್ದಾರೆ.ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗಿದ್ದು,ಆ ರಸ್ತೆಯಲ್ಲೂ ಫ್ಲೆಕ್ಸ್ ಗಳ ಭರಾಟೆ ಹೆಚ್ಚಾಗಿದೆ.ನಗರದ ಹಲವೆಡೆ […] The post ಮುಖ್ಯಮಂತ್ರಿ ಆಗಮನಕ್ಕೆ ಸಿಂಗಾರಗೊಂಡ ಮಂಡ್ಯ : ನಾಳೆ 1,793 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ appeared first on nudikarnataka.

ಭ್ರಷ್ಟಾಚಾರ ನಿರ್ಮೂಲನೆ ಎಲ್ಲರ‌ ಹೊಣೆ: ಉಪ ಲೋಕಾಯುಕ್ತ ಬಿ.ವೀರಪ್ಪ

ಹೊಸದಿಗಂತ ವರದಿ ಬೆಳಗಾವಿ : ಸಮಾಜದಲ್ಲಿ ಭ್ರಷ್ಟಾಚಾರ ಎಂಬ ಭೂತವನ್ನು ನಾವೆಲ್ಲರೂ ಕೂಡಿ ಬೆಳೆಸಿಕೊಂಡು ಬಂದಿದ್ದೇವೆ. ಭ್ರಷ್ಟಾಚಾರವನ್ನು ಬರೀ ಲೋಕಾಯುಕ್ತ ಸಂಸ್ಥೆಯಿಂದ ನಿರ್ಮೂಲನೆ ಮಾಡುವುದು ಸಾಧ್ಯವಿಲ್ಲ ಸಮಾಜದ ಪ್ರತಿಯೊಬ್ಬರೂ ಭ್ರಷ್ಟಾಚಾರ ನಿರ್ಮೂಲನೆಗೆ ಸಂಕಲ್ಪ ಮಾಡಬೇಕು ಎಂದು ಕರ್ನಾಟಕ ಉಪ ಲೋಕಾಯುಕ್ತರಾದ ನ್ಯಾಯನೂರ್ತಿ ಬಿ.ವೀರಪ್ಪ ಕರೆ ನೀಡಿದರು. ಸುವರ್ಣ ವಿಧಾನಸೌಧದ ಸೆಂಟ್ರಲ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಬೆಳಗಾವಿ ಮತ್ತು ಬೈಲಹೊಂಗಲ ಉಪ ವಿಭಾಗಕ್ಕೆ ಸಂಬಂಧಿಸಿದಂತೆ ಬಾಕಿ ಇರುವ ಪ್ರಕರಣಗಳ ವಿಚಾರಣೆ ಹಾಗೂ ವಿಲೇವಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. […] The post ಭ್ರಷ್ಟಾಚಾರ ನಿರ್ಮೂಲನೆ ಎಲ್ಲರ‌ ಹೊಣೆ: ಉಪ ಲೋಕಾಯುಕ್ತ ಬಿ.ವೀರಪ್ಪ appeared first on ONLINE.

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್:  FDA, SDA 5,431 ಹುದ್ದೆಗಳ ಭರ್ತಿಗೆ ಅಧಿಸೂಚನೆ

ಬೆಂಗಳೂರು, ಅಕ್ಟೋಬರ್,30,2026 (www.justkannada.in):  ರಾಜ್ಯ ಸರ್ಕಾರ ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ ನೀಡಿದ್ದು  ಒಟ್ಟು 33 ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 5,431 ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ಸಹಾಯಕ ಸೇರಿ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈ ಅಧಿಸೂಚನೆ ಹೊರಡಿಸಿದ್ದು  ಅಕ್ಟೋಬರ್​ 30 ಇಂದಿನಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಅರಂಭವಾಗಲಿದೆ.  ನವೆಂಬರ್ 25 ಅರ್ಜಿ ಸಲ್ಲಿಕೆಗೆ ಮತ್ತು ನವೆಂಬರ್ 26 ಶುಲ್ಕ ಪಾವತಿಸಲು ಕಡೇ ದಿನವಾಗಿದೆ . ಉಳಿಕ ಮೂಲ ವೃಂದಕ್ಕೆ […]

ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ದ ಪೋಸ್ಟ್ ಕಾರ್ಡ್ ಅಭಿಯಾನ

ಮೈಸೂರು,ಅಕ್ಟೋಬರ್,30,2026 (www.justkannada.in): ಮೈಸೂರು ರಾಜಮನೆತನದ ಬಗ್ಗೆ ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಇಂದು ಮೈಸೂರಿನಲ್ಲಿ ಪೋಸ್ಟ್ ಕಾರ್ಡ್ ಅಭಿಯಾನ ನಡೆಯಿತು. ಸಚಿವ ಯತೀಂದ್ರ  ಸಿದ್ದರಾಮಯ್ಯ ಹೇಳಿಕೆಗೆ ಆಕ್ಷೇಪಿಸಿ ಮೈಸೂರು ವಿವಿ ಮೊಹಲ್ಲಾ ಅಂಚೆ ಕಚೇರಿ ಬಳಿ ಸೇವ್ ಹಿಂದೂ ಟೆಂಪಲ್ಸ್ ಟೀಮ್ ವತಿಯಿಂದ ಪೋಸ್ಟ್ ಕಾರ್ಡ್ ಅಭಿಯಾನ ನಡೆಯಿತು. ಮೈಸೂರು ರಾಜಮನೆತನದ ಕೊಡುಗೆಗಳ ಬಗ್ಗೆ ಪೋಸ್ಟ್ ಕಾರ್ಡ್ ಮೂಲಕ  ಸಚಿವ ಯತೀಂದ್ರ ಸಿದ್ದರಾಮಯ್ಯಗೆ  ತಿಳಿಸಲು ಮುಂದಾದರು. ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ನಿನ್ನೆ […]

ಸತತ 4ನೇ ಟಾಸ್ ಗೆದ್ದ ಶ್ರೇಯಸ್ ಅಯ್ಯರ್: ಕಿವೀಸ್ ಬೇಟೆಗೆ ಸಜ್ಜಾದ ಟೀಂ ಇಂಡಿಯಾ

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಕ್ಲೆಂಡ್‌ನ ಐತಿಹಾಸಿಕ ಈಡನ್ ಪಾರ್ಕ್ ಮೈದಾನದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 4ನೇ ಟಿ20 ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಈಗಾಗಲೇ ಮೊದಲ ಮೂರು ಪಂದ್ಯಗಳನ್ನು ಭರ್ಜರಿಯಾಗಿ ಗೆದ್ದಿರುವ ಟೀಂ ಇಂಡಿಯಾ, 3-0 ಅಂತರದಲ್ಲಿ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಈಗ ಅಂತಿಮ ಹಂತದ ಪಂದ್ಯಗಳಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದು ‘ಕ್ಲೀನ್ ಸ್ವೀಪ್’ ಮಾಡುವ ವಿಶ್ವಾಸದಲ್ಲಿದೆ. ಮತ್ತೊಂದೆಡೆ, ತವರಿನಲ್ಲಿ ಮುಖಭಂಗ ಅನುಭವಿಸಿರುವ ಕಿವೀಸ್ ಪಡೆ, ಮಾನ ಉಳಿಸಿಕೊಳ್ಳಲು ಉಳಿದ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಪಂದ್ಯದ ಟಾಸ್ ಪ್ರಕ್ರಿಯೆ […] The post ಸತತ 4ನೇ ಟಾಸ್ ಗೆದ್ದ ಶ್ರೇಯಸ್ ಅಯ್ಯರ್: ಕಿವೀಸ್ ಬೇಟೆಗೆ ಸಜ್ಜಾದ ಟೀಂ ಇಂಡಿಯಾ appeared first on ONLINE.

ಗೌತಮ್ ಗಂಭೀರ್ ನೆಕ್ಸ್ಟ್ ಟಾರ್ಗೆಟ್ ಐಪಿಎಲ್? ಚಾಂಪಿಯನ್ ಮೆಂಟರ್‌ಗೆ ಬಿಗ್ ಡಿಮ್ಯಾಂಡ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಳೆದ ಕೆಲವು ತಿಂಗಳುಗಳಿಂದ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಭವಿಷ್ಯದ ಕುರಿತು ಸಾಲು ಸಾಲು ಚರ್ಚೆಗಳು ನಡೆಯುತ್ತಲೇ ಇವೆ. 2027ರ ಏಕದಿನ ವಿಶ್ವಕಪ್‌ವರೆಗೆ ಗಂಭೀರ್ ಅವರ ಒಪ್ಪಂದ ಅವಧಿ ಇದೆಯಾದರೂ, ಸಮಯಕ್ಕಿಂತ ಮುಂಚಿತವಾಗಿಯೇ ಅವರನ್ನು ಹುದ್ದೆಯಿಂದ ಕೆಳಗಿಳಿಸಬಹುದು ಎಂಬ ಸುದ್ದಿಗಳು ಆಗಾಗ ಸದ್ದು ಮಾಡುತ್ತಿದ್ದವು. ಆದರೆ ಮಾಜಿ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅಧಿಕಾರದಿಂದ ಹೊರಬಂದ ಬಳಿಕ ಈ ಊಹಾಪೋಹಗಳಿಗೆ ಸದ್ಯಕ್ಕೆ ಬ್ರೇಕ್ ಬಿದ್ದಂತಾಗಿದೆ. ಇದರ ನಡುವೆಯೇ, […] The post ಗೌತಮ್ ಗಂಭೀರ್ ನೆಕ್ಸ್ಟ್ ಟಾರ್ಗೆಟ್ ಐಪಿಎಲ್? ಚಾಂಪಿಯನ್ ಮೆಂಟರ್‌ಗೆ ಬಿಗ್ ಡಿಮ್ಯಾಂಡ್! appeared first on ONLINE.

ನಿಮ್ಮ ಜೀರ್ಣಶಕ್ತಿ ಇನ್ನು ಸೂಪರ್ ಸ್ಟ್ರಾಂಗ್ ಆಗಬೇಕೇ? ಹಾಗಾದರೆ ಈ ಮ್ಯಾಜಿಕ್ ಡ್ರಿಂಕ್ ಟ್ರೈ ಮಾಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಳಗ್ಗೆ ಎದ್ದ ತಕ್ಷಣ ಒಂದು ಗ್ಲಾಸ್ ನೀರು ಕುಡಿಯುವುದು ಒಳ್ಳೆಯದು ಎಂಬುದು ನಮಗೆಲ್ಲರಿಗೂ ಗೊತ್ತೇ ಇದೆ. ಆದರೆ, ಆ ನೀರಿಗೆ ಸ್ವಲ್ಪ ಲವಂಗವನ್ನು ಸೇರಿಸಿದರೆ ಅದರಿಂದ ಸಿಗುವ ಆರೋಗ್ಯ ಪ್ರಯೋಜನಗಳು ಅದ್ಭುತ. ಇತ್ತೀಚಿನ ದಿನಗಳಲ್ಲಿ ಅನೇಕರು ತಮ್ಮ ದಿನವನ್ನು ಲವಂಗ ನೀರಿನೊಂದಿಗೆ ಆರಂಭಿಸುತ್ತಿದ್ದಾರೆ. ಇದು ಹೊಟ್ಟೆಯ ಆರೋಗ್ಯಕ್ಕೆ ಹೇಗೆ ವರದಾನವಾಗಿದೆ ಎಂಬುದನ್ನು ಸರಳವಾಗಿ ತಿಳಿಯೋಣ. ಇದನ್ನು ಮಾಡುವುದು ತುಂಬಾನೇ ಸುಲಭ. ರಾತ್ರಿ ಮಲಗುವ ಮುಂಚೆ ಒಂದು ಗ್ಲಾಸ್ ನೀರಿನಲ್ಲಿ 2 ರಿಂದ 3 […] The post ನಿಮ್ಮ ಜೀರ್ಣಶಕ್ತಿ ಇನ್ನು ಸೂಪರ್ ಸ್ಟ್ರಾಂಗ್ ಆಗಬೇಕೇ? ಹಾಗಾದರೆ ಈ ಮ್ಯಾಜಿಕ್ ಡ್ರಿಂಕ್ ಟ್ರೈ ಮಾಡಿ appeared first on ONLINE.

ರೈತರಿಗೆ ಸಿಹಿಸುದ್ದಿ: ಪಿಎಂ ಕಿಸಾನ್ 24ನೇ ಕಂತಿನ ಹಣ ಇಂದು ಬಿಡುಗಡೆ

ದೇಶದ ಕೋಟ್ಯಂತರ ರೈತರಿಗೆ ಆರ್ಥಿಕ ನೆರವು ನೀಡುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 24ನೇ ಕಂತಿನ ಹಣಕ್ಕಾಗಿ ರೈತರು ಕಾಯುತ್ತಿದ್ದಾರೆ. ಈ ಯೋಜನೆಯಡಿ ಅರ್ಹ ರೈತರಿಗೆ ವರ್ಷಕ್ಕೆ 6,000 ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತದೆ. ಈ ಮೊತ್ತವನ್ನು ಮೂರು ಸಮಾನ ಕಂತುಗಳಲ್ಲಿ ತಲಾ 2,000 ರೂಪಾಯಿಯಂತೆ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಕೇಂದ್ರ ಸರ್ಕಾರ 2019ರಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಆರಂಭಿಸಿತ್ತು. ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಸಣ್ಣಪುಟ್ಟ ವೆಚ್ಚಗಳನ್ನು […] Source

Daily Horoscope Today: ಶಿವಯೋಗದಿಂದ ಈ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ, ಹೊಸ ಅವಕಾಶ, ಧನ ಲಾಭ

Daily Horoscope Today: ಶಿವಯೋಗದಿಂದ ಇಂದು ಈ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ, ಹೊಸ ಅವಕಾಶ, ಧನ ಲಾಭ ಆಗಲಿದೆ. ಇಲ್ಲಿದೆ ನೋಡಿ ಈ ಕುರಿತ ಮಾಹಿತಿ. Today Rashi Bhavishya October 30 signs along with lucky number, lucky colour, career, love, money and health forecasts.

ಹಬ್ಬದ ಹೊತ್ತಲ್ಲೇ ಅಗತ್ಯ ವಸ್ತುಗಳ ದರ ಏರಿಕೆ; ಗ್ರಾಹಕರ ಜೇಬಿಗೆ ಬಿತ್ತು ಕತ್ತರಿ!

ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿದೆ. ನಿನ್ನೆಯಷ್ಟೇ ಹಾಲಿನ ದರ ಏರಿಕೆ ಮಾಡಿರುವುದು ಗ್ರಾಹಕರಿಗೆ ಆರ್ಥಿಕ ಹೊರೆ ತಂದಿದೆ. ಇದರ ಬೆನ್ನಲ್ಲೇ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತರಕಾರಿ ಹಾಗೂ ಹಣ್ಣುಗಳ ಬೆಲೆಯೂ ಗಣನೀಯವಾಗಿ ಏರಿಕೆಯಾಗಿದ್ದು, ಹಬ್ಬದ ಖರೀದಿಗೆ ಹೊರಟಿರುವ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ಈಗಾಗಲೇ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ತರಕಾರಿ, ಹಣ್ಣುಗಳ ದರ ಏರಿಕೆ ಮತ್ತಷ್ಟು ಸಂಕಷ್ಟ ತಂದಿದೆ. ಮಳೆ […] Source