Filters

Channels
Topics
Other Filters

ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಭೀತಿ: ಕರ್ನಾಟಕದಲ್ಲೂ ಮಳೆಯ ಎಚ್ಚರಿಕೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ವಾಯುಭಾರ ಕುಸಿತ ತೀವ್ರಗೊಳ್ಳುವ ಸಾಧ್ಯತೆಯಿದ್ದು, ಆಂಧ್ರಪ್ರದೇಶ ಮತ್ತು ದಕ್ಷಿಣ ಒಡಿಶಾ ಕರಾವಳಿ ಭಾಗಗಳಲ್ಲಿ ಭಾರಿ ಮಳೆಯ ಆತಂಕ ಎದುರಾಗಿದೆ. ಹವಾಮಾನ ವ್ಯವಸ್ಥೆಯು ಮತ್ತಷ್ಟು ಬಲಗೊಂಡು ಅಕ್ಟೋಬರ್ 28ರ ವೇಳೆಗೆ ಕರಾವಳಿ ಭಾಗದತ್ತ ಸಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಇದರ ಪರಿಣಾಮವಾಗಿ ಬಿರುಗಾಳಿ, ಭಾರಿ ಮಳೆ ಹಾಗೂ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆಯಿದೆ. ಮೀನುಗಾರರಿಗೆ ಎಚ್ಚರಿಕೆ; ವಿಪತ್ತು ನಿರ್ವಹಣಾ ತಂಡಗಳು ಸನ್ನದ್ಧ  ಚಂಡಮಾರುತದ ಹಿನ್ನೆಲೆಯಲ್ಲಿ ಅಕ್ಟೋಬರ್ 27ರಿಂದ […] Source

Competitive Exams: 45 ದಿನದಲ್ಲಿ SSC, RRB, ಬ್ಯಾಂಕಿಂಗ್‌ ಪರೀಕ್ಷೆ ಗೆಲ್ಲಿ, ಸರ್ಕಾರವೇ ನೀಡಲಿದೆ ಉಚಿತ ತರಬೇತಿ; ಇಲ್ಲಿ ನೋಂದಾಯಿಸಿ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಬ್ಯಾಂಕಿಂಗ್, ಎಸ್‌ಎಸ್‌ಸಿ ಮತ್ತು ಆರ್‌ಆರ್‌ಬಿ ನೇಮಕಾತಿ ಪರೀಕ್ಷೆಗಳಿಗೆ 45 ದಿನಗಳ ತರಬೇತಿ ನೀಡಲಿದೆ. ನೋಂದಣಿಗೆ ಅಕ್ಟೋಬರ್ 31, 2026 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ 0821-2515944 ಸಂಖ್ಯೆಯನ್ನು ಸಂಪರ್ಕಿಸಬಹುದು.

ಜನವರಿಯಲ್ಲಿ ಜಿಪಂ, ತಾಪಂ ಚುನಾವಣೆ ಸಾಧ್ಯತೆ: ಈಶ್ವರ ಖಂಡ್ರೆ

ಬೆಂಗಳೂರು: ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ (ಜಿಪಂ) ಮತ್ತು ತಾಲೂಕು ಪಂಚಾಯಿತಿ (ತಾಪಂ) ಚುನಾವಣೆ ನಡೆಸುವ ಸಿದ್ಧತೆಗಳು ಚುರುಕುಗೊಂಡಿವೆ. ಡಿಸೆಂಬರ್ ಎರಡನೇ ವಾರದಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ಸಾಧ್ಯತೆಯಿದ್ದು, ಜನವರಿ ಮೊದಲ ಅಥವಾ ಎರಡನೇ ವಾರದಲ್ಲಿ ಚುನಾವಣೆ ನಡೆಯಬಹುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ಈಗಾಗಲೇ ಕ್ಷೇತ್ರ ಪುನರ್‌ವಿಂಗಡಣೆ ಹಾಗೂ […] Source

ಚಾಮರಾಜನಗರಕ್ಕೆ ಬಂದ್ರೆ ಅಧಿಕಾರ ಕಳೆದುಕೊಳ್ಳುತ್ತಾರೆಂಬ ಅಪನಂಬಿಕೆ ಬೇಡ: ಸಿಎಂ ಡಿ.ಕೆ ಶಿವಕುಮಾರ್

ಚಾಮರಾಜನಗರ, ಅಕ್ಟೋಬರ್,25,2026 (www.justkannada.in): ಚಾಮರಾಜನಗರಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಅಪನಂಬಿಕೆ ಬೇಡ. ನಾವು ಪರಿಶುದ್ಧವಾಗಿ ಪ್ರಾರ್ಥನೆ, ನಂಬಿಕೆಯಿಂದ ನಡೆಯುವುದು ಮುಖ್ಯ. ನಾವು ಯಾವುದೇ ತಪ್ಪು ಮಾಡದೇ ದೇವರ ಬಳಿ ಒಳ್ಳೆಯದನ್ನೇ ಪ್ರಾರ್ಥಿಸುತ್ತೇವೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದರು. ಚಾಮರಾಜನಗರದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. “ಸಿದ್ದರಾಮಯ್ಯ ಅವರು ಎಂಟು ವರ್ಷಗಳ ಕಾಲ ಅಧಿಕಾರದಲ್ಲಿ ಇದ್ದಾಗ ಚಾಮರಾಜನಗರಕ್ಕೆ ಭೇಟಿ ನೀಡುತ್ತಿದ್ದರು. ಅವರು ಉತ್ತಮ ಆಡಳಿತವನ್ನೂ ನಡೆಸಿದ್ದಾರೆ. […]

ಅರ್ಧವಾರ್ಷಿಕ ಪರೀಕ್ಷೆ ಮುಗಿದರೂ ಮಕ್ಕಳಿಗಿಲ್ಲ ಶೂ, ಸಾಕ್ಸ್: ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಶೈಕ್ಷಣಿಕ ವರ್ಷದ ಅರ್ಧವಾರ್ಷಿಕ ಪರೀಕ್ಷೆಗಳು ಮುಗಿದಿದ್ದರೂ ಇನ್ನು ಅನೇಕ ಕಡೆಗಳಲ್ಲಿ ಶೂ, ಸಾಕ್ಸ್ ವಿತರಿಸದ ಸರ್ಕಾರದ ನಡೆಯನ್ನು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರವಾಗಿ ಖಂಡಿಸಿದ್ದಾರೆ. ಬಡವರ ಹೆಸರಿನಲ್ಲಿ ರಾಜಕಾರಣ ಮಾಡುವ ಕಾಂಗ್ರೆಸ್ ಸರ್ಕಾರಕ್ಕೆ ಶಾಲಾ ಮಕ್ಕಳ ಕನಿಷ್ಠ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ. ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ಬೆಂಗಳೂರಿನ ಸರ್ಕಾರಿ ಶಾಲೆಗಳ ಸುಮಾರು 22,210ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳಿಗೆ […] The post ಅರ್ಧವಾರ್ಷಿಕ ಪರೀಕ್ಷೆ ಮುಗಿದರೂ ಮಕ್ಕಳಿಗಿಲ್ಲ ಶೂ, ಸಾಕ್ಸ್: ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ appeared first on ONLINE.

ರೋಸ್ಮರಿ ಎಣ್ಣೆ vs ಹರಳೆಣ್ಣೆ: ಕೂದಲು ಸೊಂಪಾಗಿ ಬೆಳೆಯಲು ಯಾವ ಎಣ್ಣೆ ಹಚ್ಚಬೇಕು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೂದಲು ಉದುರುವುದು ಇಂದಿನ ದಿನಗಳಲ್ಲಿ ಪ್ರತಿಯೊಬ್ಬರನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ. ಇದಕ್ಕೆ ಪರಿಹಾರವಾಗಿ ನೈಸರ್ಗಿಕ ತೈಲಗಳಾದ ರೋಸ್ಮರಿ ಎಣ್ಣೆ ಮತ್ತು ಹರಳೆಣ್ಣೆ ಮುಂಚೂಣಿಯಲ್ಲಿವೆ. ಆದರೆ ಇವೆರಡರಲ್ಲಿ ಯಾವುದು ನಿಜಕ್ಕೂ ಉತ್ತಮ ಎಂಬ ಗೊಂದಲ ಅನೇಕರಲ್ಲಿದೆ. ರೋಸ್ಮರಿ ಎಣ್ಣೆಯ ವಿಶೇಷತೆಗಳು ರೋಸ್ಮೆರಿ ಎಣ್ಣೆಯು ಅತ್ಯಂತ ಹಗುರವಾದ ಸಸ್ಯಜನ್ಯ ತೈಲವಾಗಿದೆ. ಇದು ನೆತ್ತಿಯ ಭಾಗದಲ್ಲಿ ರಕ್ತನಾಳಗಳ ಚಲನೆಯನ್ನು ಚುರುಕುಗೊಳಿಸುತ್ತದೆ. ಇದರಿಂದ ಕೂದಲು ಬೇರಿನಿಂದ ಬಲಗೊಳ್ಳುತ್ತದೆ ಹಾಗೂ ಹೊಸ ಕೂದಲು ಹುಟ್ಟಿಕೊಳ್ಳಲು ಇದು ಪ್ರಮುಖ ಪಾತ್ರ ವಹಿಸುತ್ತದೆ. […] The post ರೋಸ್ಮರಿ ಎಣ್ಣೆ vs ಹರಳೆಣ್ಣೆ: ಕೂದಲು ಸೊಂಪಾಗಿ ಬೆಳೆಯಲು ಯಾವ ಎಣ್ಣೆ ಹಚ್ಚಬೇಕು? appeared first on ONLINE.

KPSC ಹಗರಣ: ಸತ್ಯ ಹೊರಬರಲೆಂದು ಐಎಎಸ್ ಅಧಿಕಾರಿ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ- ಸಿಎಂ ಡಿಕೆಶಿ

ಬೆಂಗಳೂರು,ಅಕ್ಟೋಬರ್,25,2026 (www.justkannada.in): ಕೆಪಿಎಸ್‌ಸಿ  ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದ್ದು ಈ ಕುರಿತು ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಮಾತನಾಡಿರುವ ಸಿಎಂ ಡಿಕೆ ಶಿವಕುಮಾರ್, ಆನೇಕ ಸತ್ಯ ವಿಚಾರಗಳೆಲ್ಲಾ ಹೊರ ಬಂದಿದೆ. ಸಿಐಡಿ ಮತ್ತು ಪೊಲೀಸರು ತನಿಖೆ ಮಾಡಿದ್ದಾರೆ.  ಸತ್ಯ ಹೊರ ಬರಬೇಕೆಂಬುದು ಮುಖ್ಯ ವಿಚಾರ .ಹೀಗಾಗಿ  ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದೇನೆ ಎಂದರು. ಇಡೀ […]

ಶ್ರೀರಾಮದೇವರ ಬೆಟ್ಟದಲ್ಲಿ ಮದ್ಯವ್ಯಸನಿಗಳ ಹಾವಳಿ: ಸಾರ್ವಜನಿಕರಿಂದ ತೀವ್ರ ಆಕ್ರೋಶ, ಕ್ರಮಕ್ಕೆ ಆಗ್ರಹ

ಎಸ್. ರುದ್ರೇಶ್ವರ ಹೊಸದಿಗಂತ ವರದಿ ರಾಮನಗರ:  ಬೆಂಗಳೂರು ದಕ್ಷಿಣ ಜಿಲ್ಲೆಯ ಪವಿತ್ರ ಧಾರ್ಮಿಕ ತಾಣ ಹಾಗೂ ರಣಹದ್ದುಗಳ ರಕ್ಷಿತಾರಣ್ಯ ಎನಿಸಿರುವ ಶ್ರೀರಾಮದೇವರ ಬೆಟ್ಟ ಅರಣ್ಯ ಪ್ರದೇಶದ ಕುಡುಕರ ಅಡ್ಡೆಯಾಗಿ ಪರಿಣಮಿಸಿದೆ. ಬೆಟ್ಟದ ಮೇಲೆ ಇಂತಹ ಚಟುವಟಿಕೆಗಳಿಗೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸಂರಕ್ಷಿತ ಅರಣ್ಯ ಪ್ರದೇಶವಾಗಿರುವ ರಾಮದೇವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಮಾನವ ಚಟುವಟಿಕೆಗಳಿಗೆ ಸಾಕಷ್ಟು ನಿರ್ಬಂಧವಿದೆ. ಆದರೂ,ಕೆಲ ಮಂದಿ ಗುಂಪು ಗುಂಪಾಗಿ ಬಂದು ಮದ್ಯದ ಪಾರ್ಟಿ ನಡೆಸಲು ಅವಕಾಶ ಮಾಡಿಕೊಟ್ಟವರು ಯಾರು […] The post ಶ್ರೀರಾಮದೇವರ ಬೆಟ್ಟದಲ್ಲಿ ಮದ್ಯವ್ಯಸನಿಗಳ ಹಾವಳಿ: ಸಾರ್ವಜನಿಕರಿಂದ ತೀವ್ರ ಆಕ್ರೋಶ, ಕ್ರಮಕ್ಕೆ ಆಗ್ರಹ appeared first on ONLINE.

ಆರ್‌ಸಿಬಿ ಸಾಧನೆಗೆ ಧೋನಿ ಸಲಾಂ: ಬದ್ಧ ಎದುರಾಳಿಯ ಸ್ಥಿರತೆಯನ್ನು ಕೊಂಡಾಡಿದ ಕ್ರಿಕೆಟ್ ದಿಗ್ಗಜ

ಹೊಸದಿಗಂತ ಡಿಜಿಟಲ್ ಡೆಸ್ಕ್: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸತತ ಹಾಗೂ ಅತ್ಯುತ್ತಮ ಪ್ರದರ್ಶನವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬದ್ಧ ಎದುರಾಳಿ ಆರ್‌ಸಿಬಿ ತಂಡದ ಯಶಸ್ಸನ್ನು ಮನಃಪೂರ್ವಕವಾಗಿ ಒಪ್ಪಿಕೊಂಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸಿಎಸ್‌ಕೆ ತಂಡವು ಎದುರಿಸುತ್ತಿರುವ ಹಿನ್ನಡೆಯನ್ನು ಧೋನಿ ಯಾವುದೇ ಮುಚ್ಚುಮರೆಯಿಲ್ಲದೆ ಒಪ್ಪಿಕೊಂಡಿದ್ದಾರೆ. “ಕಳೆದ ಎರಡು ವರ್ಷಗಳಿಂದ ನಾವು ಸಂಕಷ್ಟ ಎದುರಿಸುತ್ತಿದ್ದೇವೆ, ಇದು ನಿಜ. ಈ ಸತ್ಯದಿಂದ […] The post ಆರ್‌ಸಿಬಿ ಸಾಧನೆಗೆ ಧೋನಿ ಸಲಾಂ: ಬದ್ಧ ಎದುರಾಳಿಯ ಸ್ಥಿರತೆಯನ್ನು ಕೊಂಡಾಡಿದ ಕ್ರಿಕೆಟ್ ದಿಗ್ಗಜ appeared first on ONLINE.

ಕಬ್ಬುಬೆಳೆಗಾರರ ವಿಚಾರದಲ್ಲಿ ಸಿಎಂ ಡಿಕೆಶಿ ಕಪಟ ನಾಟಕ- ಬಿವೈ ವಿಜಯೇಂದ್ರ ಟೀಕೆ

ಬೆಂಗಳೂರು,ಅ‍ಕ್ಟೋಬರ್,25,2026 (www.justkannada.in):  ಬೆಳಗಾವಿಯಲ್ಲಿ ಕಬ್ಬುಬೆಳಗಾರರ ಜೊತೆ ಸಿಎಂ ಡಿಕೆ ಶಿವಕುಮಾರ್ ಸಭೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟೀಕಿಸಿದ್ದಾರೆ. ಈ ಕುರಿತು ಮಾತನಾಡಿದ ಬಿವೈ ವಿಜಯೇಂದ್ರ, ಕಬ್ಬುಬೆಳೆಗಾರರ ವಿಚಾರದಲ್ಲಿ ಡಿಕೆ ಶಿವಕುಮಾರ್ ಕಪಟ ನಾಟಕ ಮಾಡುತ್ತಿದ್ದಾರೆ.  ದೆಹಲಿಯಲ್ಲಿ ಇದೆಲ್ಲ ಕೇಂದ್ರದ ಜವಾಬ್ದಾರಿ ಅಂತಾ ನಾಟಕ ಆಡಿದರು.  ಕಬ್ಬು ಬೆಳೆಗಾರರು ಸಕ್ಕರೆ ಕಾರ್ಖಾನೆಗಳಿಂದ ರಾಜ್ಯಕ್ಕೆ ಹೆಚ್ಚು ತೆರಿಗೆ ಬರುತ್ತಿದೆ.   ಬೇರೆ ಬೇರೆ ರಾಜ್ಯಗಳು ಕಬ್ಬುಬೆಳೆಗಾರರಿಗೆ ಎಸ್ ಎಪಿ ಕೊಟ್ಟಿವೆ. ರಾಜ್ಯ ಸರ್ಕಾರ ಸಹ ಕಬ್ಬು ಬೆಳೆಗಾರರಿಗೆ […]

ಸ್ಟಿಂಗ್ ವಿಚಾರದಲ್ಲಿ ಹೈಕಮಾಂಡ್ ಮಧ್ಯಪ್ರವೇಶ ಅಗತ್ಯ ಇದೆಯಾ?  ಡಿಸಿಎಂ ಪರಮೇಶ್ವರ್

ಬೆಂಗಳೂರು,ಅಕ್ಟೋಬರ್,25,2026 (www.justkannda.in): ಸ್ಟಿಂಗ್ ಆಪರೇಷನ್ ಪ್ರಕರಣ ವಿಚಾರದಲ್ಲಿ ಹೈಕಮಾಂಡ್ ಮಧ್ಯಪ್ರವೇಶ ಅಗತ್ಯ ಇದೆಯಾ?  ಸ್ಟಿಂಗ್ ವಿಚಾರದಲ್ಲಿ ಹೈಕಮಾಂಡ್  ಅನ್ನು ಏಕೆ ಎಳೆದು ತರಬೇಕು ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಪರಮೇಶ್ವರ್,  ಸರ್ಕಾರ ಹಾಗೂ ಪಕ್ಷಕ್ಕೆ ಡ್ಯಾಮೇಜ್ ಬಗ್ಗೆ ಚರ್ಚಿಸಬೇಕು.  ಸಿಎಂ ಡಿಕೆ ಶಿವಕುಮಾರ್ , ಕೆಪಿಸಿಸಿ ಅಧ್ಯಕ್ಷ  ಹರಿಪ್ರಸಾದ್ ಚರ್ಚಿಸಬೇಕು. ಸ್ಥಳೀಯವಾಗಿ ಡ್ಯಾಮೇಜ್ ಕಂಟ್ರೋಲ್ ಬಗ್ಗೆ ಚರ್ಚೆ ಮಾಡಲಿ. ಎಲ್ಲದಕ್ಕೂ ಹೈಕಮಾಂಡ್ ಅಂತಾ ಹೋಗೋದು ಸರಿಯಲ್ಲ ಎಂದು ಸಲಹೆ ನೀಡಿದರು. […]

ಮುಂದಿನ 2 ದಿನಗಳಲ್ಲಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ!

ಕರ್ನಾಟಕದಾದ್ಯಂತ ಹವಾಮಾನದಲ್ಲಿ ವೈಪರಿತ್ಯ ಕಂಡುಬರುತ್ತಿದ್ದು, ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮಳೆಯ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ. ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣದಿಂದ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದರೆ, ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಒಣ ಹವಾಮಾನ ಇರಲಿದೆ ಎಂದು ನೀಡಿರುವ ಹವಾಮಾನ ಮಾಹಿತಿಯಲ್ಲಿ ತಿಳಿಸಲಾಗಿದೆ. ಮುಂಗಾರು ಮತ್ತು ಹಿಂಗಾರು ಮಾರುತಗಳ ಪ್ರಭಾವದಿಂದ ರಾಜ್ಯದ ವಿವಿಧ ಭಾಗಗಳಲ್ಲಿ ವಾತಾವರಣ ಬದಲಾಗುತ್ತಿದೆ. ಮುಂದಿನ ಎರಡು ದಿನಗಳಲ್ಲಿ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.  ಕರಾವಳಿ ಕರ್ನಾಟಕದಲ್ಲಿ […] Source

ಏಷ್ಯನ್ ಪ್ಯಾರಾ ಗೇಮ್ಸ್ 2026: 114 ಪದಕಗಳೊಂದಿಗೆ ಭಾರತದ ಐತಿಹಾಸಿಕ ಸಾಧನೆ; ಪ್ರಧಾನಿ ಮೋದಿ ಶ್ಲಾಘನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಜಪಾನ್‌ನ ಐಚಿ-ನಗೋಯಾದಲ್ಲಿ ಮುಕ್ತಾಯಗೊಂಡ 2026ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತದ ಪ್ಯಾರಾ-ಅಥ್ಲೀಟ್‌ಗಳು ದಾಖಲೆಯ 114 ಪದಕಗಳನ್ನು ಗೆದ್ದು ಜಗತ್ತಿನಲ್ಲೇ ಹೊಸ ಇತಿಹಾಸ ಬರೆದಿದ್ದಾರೆ. ಕ್ರೀಡಾಕೂಟದ ಇತಿಹಾಸದಲ್ಲೇ ಇದು ಭಾರತದ ಅತ್ಯುತ್ತಮ ಪ್ರದರ್ಶನವಾಗಿದ್ದು, ಒಟ್ಟು 30 ಚಿನ್ನ, 35 ಬೆಳ್ಳಿ ಮತ್ತು 49 ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದೆ. ಭಾರತೀಯ ಕ್ರೀಡಾಪಟುಗಳ ಈ ಅಪ್ರತಿಮ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಸಂದ “ಅದ್ಭುತ ಹೆಮ್ಮೆಯ ಮತ್ತು ಸಂತಸದ ಕ್ಷಣ” ಎಂದು ಕೊಂಡಾಡಿದ್ದಾರೆ. ಸಣ್ಣ […] The post ಏಷ್ಯನ್ ಪ್ಯಾರಾ ಗೇಮ್ಸ್ 2026: 114 ಪದಕಗಳೊಂದಿಗೆ ಭಾರತದ ಐತಿಹಾಸಿಕ ಸಾಧನೆ; ಪ್ರಧಾನಿ ಮೋದಿ ಶ್ಲಾಘನೆ appeared first on ONLINE.

ಸಾಧ್ಯವಿಲ್ಲದ್ದನ್ನು ಸಾಧಿಸಿ ತೋರಿಸಿದ ಭಾರತ: ಟಿ20 ಕ್ರಿಕೆಟ್‌ನಲ್ಲಿ ಹೊಸ ವಿಶ್ವ ದಾಖಲೆಯ ಹೆಜ್ಜೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕ್ರಿಕೆಟ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ವಿಶ್ವ ದಾಖಲೆಯನ್ನು ಟೀಮ್ ಇಂಡಿಯಾ ನಿರ್ಮಿಸಿದೆ. ಯಾವುದೇ ತಂಡಕ್ಕೆ ಇದುವರೆಗೆ ಸಾಧ್ಯವಾಗದ ಈ ಐತಿಹಾಸಿಕ ವರ್ಲ್ಡ್ ರೆಕಾರ್ಡ್ ಅನ್ನು ಭಾರತೀಯ ಕ್ರಿಕೆಟ್ ತಂಡ ತನ್ನದಾಗಿಸಿಕೊಂಡಿದೆ. ನ್ಯೂಜಿಲೆಂಡ್ ವಿರುದ್ಧ ನಡೆದ 2ನೇ ಟಿ20 ಪಂದ್ಯದಲ್ಲಿ ಭರ್ಜರಿ ಹಾಗೂ ರೋಚಕ ಗೆಲುವು ಸಾಧಿಸುವ ಮೂಲಕ ಟೀಮ್ ಇಂಡಿಯಾ ಈ ಕೀರ್ತಿಗೆ ಭಾಜನವಾಗಿದೆ. ಈ ವಿಶೇಷ ಗೆಲುವಿನ ಮುಖಾಂತರ ಟಿ20 ಕ್ರಿಕೆಟ್ ಇತಿಹಾಸದಲ್ಲಿ 200 ಗೆಲುವುಗಳನ್ನು ದಾಖಲಿಸಿದ ವಿಶ್ವದ ಮೊದಲ ಹಾಗೂ […] The post ಸಾಧ್ಯವಿಲ್ಲದ್ದನ್ನು ಸಾಧಿಸಿ ತೋರಿಸಿದ ಭಾರತ: ಟಿ20 ಕ್ರಿಕೆಟ್‌ನಲ್ಲಿ ಹೊಸ ವಿಶ್ವ ದಾಖಲೆಯ ಹೆಜ್ಜೆ appeared first on ONLINE.

Daily Horoscope: ಹರ್ಷ ಯೋಗದಿಂದ ಈ ರಾಶಿಯವರಿಗೆ ಧನಲಾಭ; ಕೆಲಸದಲ್ಲಿ ಯಶಸ್ಸು, ಸಂತೋಷ ಸಮೃದ್ದಿಯ ದಿನ

Daily Horoscope: ಹರ್ಷ ಯೋಗದಿಂದ ಈ ರಾಶಿಯವರಿಗೆ ಧನಲಾಭ ; ಕೆಲಸದಲ್ಲಿ ಯಶಸ್ಸು, ಸಂತೋಷ ಸಮೃದ್ದಿಯ ದಿನ Today Rashi Bhavishya October 25 signs along with lucky number, lucky colour, career, love, money and health forecasts