Filters

Channels
Topics
Other Filters

ರೈತರ ಬೆಳೆ ವಿಮೆ ಪ್ರೀಮಿಯಂ ಹಣ ಬಿಡುಗಡೆ ಮಾಡಿ: ಸಿಎಂ ಡಿ.ಕೆ. ಶಿವಕುಮಾರ್‌ಗೆ ಕೇಂದ್ರ ಸಚಿವ ಜೋಶಿ ಆಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ರಾಜ್ಯದಲ್ಲಿ ತೀವ್ರ ಬರಗಾಲ ಮತ್ತು ಪ್ರಕೃತಿ ವಿಕೋಪದಿಂದ ಕಂಗೆಟ್ಟಿರುವ ಲಕ್ಷಾಂತರ ರೈತರ ನೆರವಿಗೆ ಧಾವಿಸಲು ರಾಜ್ಯ ಸರ್ಕಾರದ ಪಾಲಿನ ಬೆಳೆ ವಿಮೆ ಪ್ರೀಮಿಯಂ ಹಣವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮಹತ್ವದ ಪತ್ರ ಬರೆದಿದ್ದಾರೆ. ಕೇಂದ್ರ ಸರ್ಕಾರ ತನ್ನ ಪಾಲಿನ ಹಣವನ್ನು ಸಕಾಲಕ್ಕೆ ಪಾವತಿಸಿದ್ದರೂ, ರಾಜ್ಯ ಸರ್ಕಾರ ತನ್ನ ಪಾಲಿನ ಮೊತ್ತವನ್ನು ಹಣಕಾಸು ಇಲಾಖೆಯಲ್ಲಿ ಬಾಕಿ ಉಳಿಸಿಕೊಂಡಿರುವುದಕ್ಕೆ ಅವರು ತೀವ್ರ ಕಳವಳ […] The post ರೈತರ ಬೆಳೆ ವಿಮೆ ಪ್ರೀಮಿಯಂ ಹಣ ಬಿಡುಗಡೆ ಮಾಡಿ: ಸಿಎಂ ಡಿ.ಕೆ. ಶಿವಕುಮಾರ್‌ಗೆ ಕೇಂದ್ರ ಸಚಿವ ಜೋಶಿ ಆಗ್ರಹ appeared first on ONLINE.

ಬಿಹಾರದಲ್ಲಿ ಪಟಾಕಿ ಗೋಡೌನ್ ಬ್ಲಾಸ್ಟ್: ನಾಲ್ಕು ಮಂದಿ ಸಾ*ವು, ಮುಂದುವರಿದ ರಕ್ಷಣಾ ಕಾರ್ಯಾಚರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ದೀಪಾವಳಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಶುಕ್ರವಾರ ಇಲ್ಲಿನ ಜನನಿಬಿಡ ಪ್ರದೇಶದಲ್ಲಿರುವ ಪಟಾಕಿ ಉದ್ಯಮಿಯೊಬ್ಬರ ಮನೆಯಲ್ಲಿ ಸಂಭವಿಸಿದ ಸ್ಫೋಟಕ್ಕೆ ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದು, ಮೂವರು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಸ್ಫೋಟದ ತೀವ್ರತೆಗೆ ಇಡೀ ಮನೆ ಕುಸಿದುಬಿದ್ದಿದ್ದು, ಅವಶೇಷಗಳಡಿ ಸಿಲುಕಿರುವವರಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಆದರೆ, ಅವಶೇಷಗಳ ಮಧ್ಯೆ ಪಟಾಕಿಗಳು ಸ್ಫೋಟಗೊಳ್ಳುತ್ತಿರುವುದರಿಂದ ರಕ್ಷಣಾ ಸಿಬ್ಬಂದಿಗೆ ಭಾರೀ ಅಡ್ಡಿಯಾಗಿದೆ. ಮನೆಯಲ್ಲೇ ಇತ್ತು ಅಕ್ರಮ […] The post ಬಿಹಾರದಲ್ಲಿ ಪಟಾಕಿ ಗೋಡೌನ್ ಬ್ಲಾಸ್ಟ್: ನಾಲ್ಕು ಮಂದಿ ಸಾ*ವು, ಮುಂದುವರಿದ ರಕ್ಷಣಾ ಕಾರ್ಯಾಚರಣೆ appeared first on ONLINE.

ಕಿವೀಸ್‌ಗೆ ಸವಾಲು ಹಾಕಲು ಭಾರತ ಸಜ್ಜು: ಪಂದ್ಯ ಯಾವಾಗ? ಎಷ್ಟು ಗಂಟೆಗೆ ಶುರು?

ಹೊಸದಿಗಂತ ಡಿಜಿಟಲ್ ಡೆಸ್ಕ್: ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ಸರಣಿಯಲ್ಲಿ ಮುನ್ನಡೆ ಪಡೆದಿರುವ ಭಾರತ, ಎರಡನೇ ಪಂದ್ಯದಲ್ಲೂ ಗೆಲುವಿನ ಓಟ ಮುಂದುವರಿಸುವ ಗುರಿ ಹೊಂದಿದೆ. ಅಕ್ಟೋಬರ್ 24 ಕ್ರೈಸ್ಟ್‌ಚರ್ಚ್‌ನ ಹೇಗ್ಲಿ ಓವಲ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಮತ್ತೊಂದು ರನ್‌ಗಳ ಹಬ್ಬವನ್ನು ಕ್ರಿಕೆಟ್ ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ಎರಡೂ ತಂಡಗಳ ಬ್ಯಾಟರ್‌ಗಳು ಅಬ್ಬರಿಸಿದ್ದರೂ, ಬೌಲಿಂಗ್ ವಿಭಾಗದ ಪ್ರದರ್ಶನದಲ್ಲಿ ಸುಧಾರಣೆಯ ಅಗತ್ಯವಿತ್ತು. ಬೌಲಿಂಗ್, ಫೀಲ್ಡಿಂಗ್ ಸುಧಾರಣೆಗೆ ಕಿವೀಸ್ ಕಸರತ್ತು ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಬ್ಯಾಟರ್‌ಗಳು […] The post ಕಿವೀಸ್‌ಗೆ ಸವಾಲು ಹಾಕಲು ಭಾರತ ಸಜ್ಜು: ಪಂದ್ಯ ಯಾವಾಗ? ಎಷ್ಟು ಗಂಟೆಗೆ ಶುರು? appeared first on ONLINE.

ಯಲ್ಲಾಪುರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌–ಲಾರಿ ನಡುವೆ ಮುಖಾಮುಖಿ ಡಿಕ್ಕಿ: ಹಲವರಿಗೆ ಗಾಯ

ಹೊಸದಿಗಂತ ವರದಿ ಯಲ್ಲಾಪುರ: ಯಲ್ಲಾಪುರದಿಂದ ಅಂಕೋಲಾ ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಅಂಕೋಲಾದಿಂದ ಹುಬ್ಬಳ್ಳಿ ಕಡೆಗೆ ಸಾಗುತ್ತಿದ್ದ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ಇಡಗುಂದಿ ಹೈಸ್ಕೂಲ್ ಎದುರುಗಡ ಸಂಭವಿಸಿದೆ. ಅಪಘಾತಕ್ಕೀಡಾದ ಬಸ್ಸು ಕುಮಟಾ ಡಿಪೋಗೆ ಸೇರಿದ್ದು, ಕೊಲ್ಲಾಪುರದಿಂದ ಕಾರವಾರಕ್ಕೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ. ಡಿಕ್ಕಿಯ ಪರಿಣಾಮ ಲಾರಿ ಚಾಲಕನಿಗೆ ಹಾಗೂ ಬಸ್‌ನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. The post ಯಲ್ಲಾಪುರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌–ಲಾರಿ ನಡುವೆ ಮುಖಾಮುಖಿ ಡಿಕ್ಕಿ: ಹಲವರಿಗೆ ಗಾಯ appeared first on ONLINE.

ಸುಳ್ಯ ದಸರಾ ಮೆರವಣಿ: ನಾಳೆ ರಾಷ್ಟೀಯ ಹೆದ್ದಾರಿ 275ರಲ್ಲಿ ವಾಹನ ಸಂಚಾರ ವ್ಯವಸ್ಥೆಯಲ್ಲಿ ಮಾರ್ಪಾಡು

ಹೊಸದಿಗಂತ ವರದಿ ಸುಳ್ಯ: ಶಾರದಾ ಮಾತೆಯ ವಿಗ್ರಹ ವಿಸರ್ಜನಾ ಮೆರವಣಿಗೆಯ ಪ್ರಯುಕ್ತ ಶನಿವಾರ ಅಪರಾಹ್ನ 2 ಗಂಟೆಯಿಂದ ಭಾನುವಾರ ಪೂರ್ವಾಹ್ನ 2 ಗಂಟೆಯವರೆಗೆ ಸುಳ್ಯ ಪೇಟೆಯಲ್ಲಿ ಹಾದುಹೋಗುವ ರಾಷ್ಟೀಯ ಹೆದ್ದಾರಿ 275 ರಲ್ಲಿ ಸಂಚರಿಸುವ ಎಲ್ಲಾ ವಿಧದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದ್ದು, ವಾಹನ ಸಂಚಾರಕ್ಕೆ ಬದಲಿ ಮಾರ್ಗ ಸೂಚಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಬದಲಾವಣೆಗೊಳಿಸಲಾದ ಮಾರ್ಗವು ಸುಳ್ಯ ಗಾಂಧಿನಗರ ಕಡೆಯಿಂದ ಜಾಲ್ಸೂರು – ಕುಂಬ್ರ ಮಾರ್ಗವಾಗಿ ಪುತ್ತೂರು ಕಡೆಗೆ ಸಂಚರಿಸುವ ವಾಹನಗಳನ್ನು ಸುಳ್ಯ […] The post ಸುಳ್ಯ ದಸರಾ ಮೆರವಣಿ: ನಾಳೆ ರಾಷ್ಟೀಯ ಹೆದ್ದಾರಿ 275ರಲ್ಲಿ ವಾಹನ ಸಂಚಾರ ವ್ಯವಸ್ಥೆಯಲ್ಲಿ ಮಾರ್ಪಾಡು appeared first on ONLINE.

ಎಫ್4 ಚಾಂಪಿಯನ್‌ಶಿಪ್‌ನಲ್ಲಿ ಯುವ ಚಾಲಕರ ಅಬ್ಬರ; ಸಂಬುದುಲಾ ಮುನ್ನಡೆ, ಮೆಹ್ತಾ ಐತಿಹಾಸಿಕ ದಾಖಲೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಚೆನ್ನೈನ ಮದ್ರಾಸ್ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ನಡೆದ ಇಂಡಿಯನ್ ರೇಸಿಂಗ್ ಫೆಸ್ಟಿವಲ್ 2026ರ ಭಾಗವಾದ ಎಫ್4 ಇಂಡಿಯನ್ ಚಾಂಪಿಯನ್‌ಶಿಪ್‌ನ 3ನೇ ಸುತ್ತಿನಲ್ಲಿ ಗೋವಾ ಏಸಸ್ ಜೆಎ ರೇಸಿಂಗ್‌ನ ಲುವಿವೆ ಸಂಬುದುಲಾ ಅದ್ಭುತ ಜಯಭೇರಿ ಬಾರಿಸಿದ್ದಾರೆ. ಮೂರು ರೇಸ್‌ಗಳ ಪೈಕಿ ಎರಡರಲ್ಲಿ ಗೆಲುವು ಹಾಗೂ ಒಂದರಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ಒಟ್ಟು 138 ಅಂಕಗಳೊಂದಿಗೆ ಅವರು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಇದೇ ವೇಳೆ, ಕೋಲ್ಕತ್ತಾ ರಾಯಲ್ ಟೈಗರ್ಸ್ ತಂಡದ 15 ವರ್ಷದ ಯುವ ಚಾಲಕ ಆರನ್ […] The post ಎಫ್4 ಚಾಂಪಿಯನ್‌ಶಿಪ್‌ನಲ್ಲಿ ಯುವ ಚಾಲಕರ ಅಬ್ಬರ; ಸಂಬುದುಲಾ ಮುನ್ನಡೆ, ಮೆಹ್ತಾ ಐತಿಹಾಸಿಕ ದಾಖಲೆ appeared first on ONLINE.

ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ: ರಾಮನಗರ ಜಿಲ್ಲೆಯಲ್ಲಿ ಶೇ.96.66ರಷ್ಟು ಮತದಾನ

ಹೊಸದಿಗಂತ ವರದಿ ರಾಮನಗರ: ರಾಜ್ಯ ವಿಧಾನಪರಿಷತ್ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ ಮತದಾನ ಅ.23ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ನಡೆದ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯಲ್ಲಿ ಶೇ.96.66 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಜಿಲ್ಲೆಯ 9 ಮತಗಟ್ಟೆಯಲ್ಲಿ ಶಾಂತಿಯುತ ಮತದಾನವಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 1,688 ಪುರುಷ ಮತದಾರರು ಹಾಗೂ 1,505 ಮಹಿಳಾ ಮತದಾರರು ಸೇರಿ ಒಟ್ಟಾರೆ 3,193 ಮತದಾರರಿದ್ದಾರೆ. 1,633 ಪುರುಷ ಹಾಗೂ 1,439 ಮಹಿಳಾ ಮತದಾರರು ಸೇರಿದಂತೆ […] The post ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ: ರಾಮನಗರ ಜಿಲ್ಲೆಯಲ್ಲಿ ಶೇ.96.66ರಷ್ಟು ಮತದಾನ appeared first on ONLINE.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಗೊಂದಲ: ರಾಜ್ಯ ಸರ್ಕಾರದ ವಿರುದ್ಧ ಸಂಸದ ಕಾಗೇರಿ ತೀವ್ರ ವಾಗ್ದಾಳಿ

ಹೊಸದಿಗಂತ ವರದಿ ಶಿರಸಿ: ನದಿ ತಿರುವು ಹಾಗೂ ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಗಳ ವಿಚಾರದಲ್ಲಿ ಜಿಲ್ಲೆಯ ಜನರಿಗೆ ಸ್ಪಷ್ಟತೆ ನೀಡದೆ, ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ನಾಯಕರು ಗೊಂದಲ ಮೂಡಿಸುತ್ತಿದ್ದಾರೆ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ​ಶುಕ್ರವಾರ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ತಮ್ಮ ಮತ ಚಲಾಯಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಮಂಕಾಳ ವೈದ್ಯ ಹಾಗೂ ಶಾಸಕ ಆರ್.ವಿ. ದೇಶಪಾಂಡೆ ಅವರು ಜಿಲ್ಲೆಯ ಜನರ ಹಿತಾಸಕ್ತಿ ಕಾಪಾಡುವಲ್ಲಿ […] The post ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಗೊಂದಲ: ರಾಜ್ಯ ಸರ್ಕಾರದ ವಿರುದ್ಧ ಸಂಸದ ಕಾಗೇರಿ ತೀವ್ರ ವಾಗ್ದಾಳಿ appeared first on ONLINE.

D.Ed. Training: ಪಿಯುಸಿ ಪೂರ್ಣಗೊಳಿಸಿದವರಿಗೆ ಸುವರ್ಣಾವಕಾಶ, ವಿಶೇಷ ಡಿ.ಎಡ್ ತರಬೇತಿಗೆ ತಕ್ಷಣವೇ ಅರ್ಜಿ ಹಾಕಿ!

ಮೈಸೂರಿನ ಅಂಧ ಹಾಗೂ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರದಲ್ಲಿ 2026-27ನೇ ಸಾಲಿನ ವಿಶೇಷ ಡಿ.ಎಡ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪಿಯುಸಿ ಉತ್ತೀರ್ಣರಾದವರು ಅಕ್ಟೋಬರ್ 28ರೊಳಗೆ ಅರ್ಜಿ ಸಲ್ಲಿಸಬಹುದು.

ವೋಟರ್‌ ಲಿಸ್ಟ್‌ನಲ್ಲಿ ನಿಮ್ಮ ಹೆಸರಿದೆಯೇ?: ಅಕ್ಟೋಬರ್‌ 27ಕ್ಕೆ SIR ಫೈನಲ್‌ ಲಿಸ್ಟ್‌ ಪ್ರಕಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕರ್ನಾಟಕದ ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ರಾಜ್ಯದ ಅಂತಿಮ ಮತದಾರರ ಪಟ್ಟಿ ಅಕ್ಟೋಬರ್‌ 27ರಂದು ಪ್ರಕಟವಾಗಲಿದೆ. ಭಾರತೀಯ ಚುನಾವಣಾ ಆಯೋಗ ಜೂನ್‌ 20ರಂದು ಆರಂಭಿಸಿದ್ದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಶುಕ್ರವಾರ ಮುಕ್ತಾಯಗೊಂಡಿದೆ. ಆಕ್ಷೇಪಣೆಗಳ ಪರಿಶೀಲನೆ, ನೋಟಿಸ್‌ಗಳ ವಿಲೇವಾರಿ ಸೇರಿದಂತೆ ಅಗತ್ಯ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಇದೀಗ ಅಂತಿಮ ಪಟ್ಟಿಯ ಪ್ರಕಟಣೆಯತ್ತ ಎಲ್ಲರ ಗಮನ ನೆಟ್ಟಿದೆ. ಕರಡು ಪಟ್ಟಿಯಲ್ಲಿ ಕೋಟ್ಯಂತರ ಮತದಾರರು ಆಗಸ್ಟ್‌ 24ರಂದು ಪ್ರಕಟಗೊಂಡಿದ್ದ ಕರಡು ಮತದಾರರ […] The post ವೋಟರ್‌ ಲಿಸ್ಟ್‌ನಲ್ಲಿ ನಿಮ್ಮ ಹೆಸರಿದೆಯೇ?: ಅಕ್ಟೋಬರ್‌ 27ಕ್ಕೆ SIR ಫೈನಲ್‌ ಲಿಸ್ಟ್‌ ಪ್ರಕಟ appeared first on ONLINE.

Shukra Niti: ಚಾಣಕ್ಯ ನೀತಿಯಲ್ಲ, ಇದು ಶುಕ್ರನೀತಿ! ನವಿಲು, ಆಮೆ ಮತ್ತು ಹಾವಿನಿಂದ ಕಲಿಯಬೇಕಾದ ಗುಣಗಳಿವು!

Shukra Niti: Explore three practical life lessons associated with Shukra Niti through the symbols of a peacock, tortoise and snake: calmness, privacy and personal boundaries. ಶುಕ್ರನೀತಿಗೆ ಸಂಬಂಧಿಸಿದ ನೀತಿಪಾಠಗಳ ಕುರಿತು ತಿಳಿಯಿರಿ. ನವಿಲಿನ ಶಾಂತತೆ, ಆಮೆಯ ಎಚ್ಚರಿಕೆ ಮತ್ತು ಹಾವಿನ ದೃಢತೆಯ ಸಂಕೇತಗಳಿಂದ ಜೀವನದಲ್ಲಿ ಕಲಿಯಬಹುದಾದ 3 ಪ್ರಮುಖ ಪಾಠಗಳು ಇಲ್ಲಿವೆ.

ಪೋಲೆಂಡ್ ಪ್ರಧಾನಿ ಜೊತೆ ಡಿಕೆಶಿ ಮಾತುಕತೆ: 2027ರ ಜಾಗತಿಕ ಹೂಡಿಕೆ ಸಮಾವೇಶಕ್ಕೆ ವಿಶೇಷ ಆಹ್ವಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಕರ್ನಾಟಕದ ಕೈಗಾರಿಕಾ ಕ್ಷೇತ್ರಕ್ಕೆ ಮತ್ತೊಂದು ಬಲ ಸಿಕ್ಕಿದ್ದು, 2027ರ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಸಹಭಾಗಿ ರಾಷ್ಟ್ರವಾಗಿ ಪಾಲ್ಗೊಳ್ಳುವಂತೆ ಪೋಲೆಂಡ್ ದೇಶಕ್ಕೆ ಅಧಿಕೃತ ಆಹ್ವಾನ ನೀಡಲಾಗಿದೆ. ಬೆಂಗಳೂರಿನ ತಾಜ್ ವೆಸ್ಟ್ ಎಂಡ್‌ನಲ್ಲಿ ಶುಕ್ರವಾರ ನಡೆದ ರಾಜತಾಂತ್ರಿಕ ಭೇಟಿಯಲ್ಲಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್ ಅವರಿಗೆ ಈ ಆಹ್ವಾನ ನೀಡಿದರು. ಕೋಲಾರದಲ್ಲಿ ಪೋಲೆಂಡ್ ಸಂಸ್ಥೆಯ ಭಾರೀ ಹೂಡಿಕೆ ಪೋಲೆಂಡ್ ಮೂಲದ ಪ್ರಖ್ಯಾತ ಟಿಜೆಡ್‌ಎಂಒ ಸಂಸ್ಥೆಯು ಕೋಲಾರದ ಕೆಐಎಡಿಬಿ (KIADB) ವೇಮಗಲ್ […] The post ಪೋಲೆಂಡ್ ಪ್ರಧಾನಿ ಜೊತೆ ಡಿಕೆಶಿ ಮಾತುಕತೆ: 2027ರ ಜಾಗತಿಕ ಹೂಡಿಕೆ ಸಮಾವೇಶಕ್ಕೆ ವಿಶೇಷ ಆಹ್ವಾನ appeared first on ONLINE.

ರಾಜ್ಯದ ಘನತೆಗೆ ಧಕ್ಕೆ ತರುವ ವಿಚಾರ ಚರ್ಚೆ: ಬರಗಾಲದ ಬಗ್ಗೆ ಸರ್ಕಾರಕ್ಕೆ ಗಮನವಿಲ್ಲ-ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ  

ಹುಬ್ಬಳ್ಳಿ,ಅಕ್ಟೋಬರ್,23,2026 (www.justkannada.in): ರಾಜ್ಯದ ಸಂಸ್ಕೃತಿ ಘನತೆಗೆ ಧಕ್ಕೆ ತರುವ ವಿಚಾರಗಳ ಬಗ್ಗೆ ಮಾತ್ರ ಚರ್ಚಿಸಲಾಗುತ್ತಿದೆ. ರಾಜ್ಯದಲ್ಲಿ ಆವರಿಸಿರುವ ಬರಗಾಲದ ಬಗ್ಗೆ ಸರ್ಕಾರಕ್ಕೆ ಗಮನವಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕಿಸಿದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯದಲ್ಲಿ ಬರಗಾಲ ಉಂಟಾಗಿದೆ. ಆದರೆ ಇದರ ಬಗ್ಗೆ ಸರ್ಕಾರ ಚರ್ಚಿಸುತ್ತಿಲ್ಲ. ಇಲ್ಲಿವರೆಗೂ ರಾಜ್ಯದಲ್ಲಿ ಬರ ಕಾಮಗಾರಿ ಪರಿಹಾರ ನೀಡಿಲ್ಲ ಎಂದು ಆರೋಪಿಸಿದರು. ಕರ್ನಾಟಕ ರಾಜ್ಯ ದಿವಾಳಿಯತ್ತ ಹೋಗುತ್ತಿದೆ. ದೇಶದಲ್ಲಿ ಅರಾಜಕತೆ ನಿರ್ಮಾಣ ಮಾಡುವ […]

ಸೌದಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು: ರಕ್ಷಣೆಗಾಗಿ ಸರ್ಕಾರಕ್ಕೆ ಮನವಿ

ಚಿಕ್ಕಮಗಳೂರು: ಸೌದಿ ಅರೇಬಿಯಾದಲ್ಲಿ ಉಂಟಾಗಿರುವ ಭದ್ರತಾ ಪರಿಸ್ಥಿತಿ ಹಾಗೂ ವಿಮಾನಗಳ ಹಾರಾಟದಲ್ಲಿನ ವ್ಯತ್ಯಯದಿಂದಾಗಿ ಅಲ್ಲಿಗೆ ತೆರಳಿರುವ ಭಾರತೀಯ ಯಾತ್ರಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ಈ ನಡುವೆ ಸೌದಿಯ ಮೆಕ್ಕಾ ಪ್ರದೇಶದಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಚಿಕ್ಕಮಗಳೂರು ಮೂಲದ ಅಪ್ಸರ್ ಹಿಂದೂಸ್ಥಾನಿ ಮನವಿ ಮಾಡಿದ್ದಾರೆ. ಸೌದಿ ಅರೇಬಿಯಾದಲ್ಲಿ ಸಿಲುಕಿರುವವರಲ್ಲಿ ಮಧ್ಯಮ ವರ್ಗ ಹಾಗೂ ಕೆಲ ಯಾತ್ರಿಕರೂ ಇದ್ದಾರೆ. ವಿಮಾನಗಳ ಹಾರಾಟ ವ್ಯತ್ಯಯದಿಂದಾಗಿ ಅವರು ಪ್ರಯಾಣ ಮುಂದುವರಿಸಲು […] Source

ಶಿಕಾರಿಪುರದಲ್ಲಿ ಕಾರು–ಕ್ಯಾಂಟರ್ ಮುಖಾಮುಖಿ ಡಿಕ್ಕಿ ; ಐವರ ಪೈಕಿ ಮೂವರ ಸ್ಥಿತಿ ಗಂಭೀರ! ಇಬ್ಬರು ಸಾವು!

ಮಲೆನಾಡು ಟುಡೆ ಸುದ್ದಿ / ಜಿಲ್ಲೆಯ ಶಿಕಾರಿಪುರ ತಾಲೂಕಿನ ತರಲಘಟ್ಟ ಕ್ಯಾಂಪ್ ಸಮೀಪ ಜಸ್ಟ್ ಒಂದು ಆಕ್ಸಿಡೆಂಟ್ ಆಗಿರುವ ಬಗ್ಗೆ ವರದಿಯಾಗಿದೆ. ಘಟನೆಯಲ್ಲಿ ಕಾರು ಮತ್ತು ಕ್ಯಾಂಟರ್ ... ಕ್ಲಿಕ್ ಮಾಡಿ