Filters

Channels
Topics
Other Filters

ದೇವರ ಮಂಟಪಕ್ಕೆ ಜಜ್ಜಿ ಮಗನ ಕೊ*ಲೆ ಮಾಡಿದ ತಂದೆ: ಮೃತದೇಹದ ಪಕ್ಕವೇ ನಿದ್ದೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಗುಜರಾತ್‌ನ ಅಹಮದಾಬಾದ್‌ನಲ್ಲಿ ವ್ಯಕ್ತಿಯೊಬ್ಬ ತನ್ನ ಹತ್ತು ವರ್ಷದ ಮಗುವಿನ ತಲೆ ಕಡಿದು ತದನಂತರ ಮೃತದೇಹದ ಪಕ್ಕದಲ್ಲಿಯೇ ಮಲಗಿದ್ದಾನೆ. ಹತ್ತು ವರ್ಷದ ಮಗ ಕರಣ್‌ನನ್ನು ಮನೆಯಲ್ಲಿದ್ದ ದೇವರ ಪೀಠಕ್ಕೆ ನರಬಲಿ ನೀಡಿದ್ದಾರೆ. ಮಗನ ಹಣೆಯನ್ನು ಪೀಠಕ್ಕೆ ಜಜ್ಜಿ ಕೊಲೆ ಮಾಡಿ ನಂತರ ಅವನ ಪಕ್ಕದಲ್ಲಿಯೇ ಮಲಗಿ ರಾತ್ರಿ ಕಳೆದಿದ್ದಾನೆ. ಆರೋಪಿ ನರೇಶ್‌ ಪಾಟೀಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ನರೇಶ್‌ ಮನೆಯಲ್ಲಿ ಮಗನ ಜೊತೆ ವಾಸವಿದ್ದ. ಪತಿ ಜೊತೆ ಜಗಳ ಮಾಡಿಕೊಂಡಿದ್ದ ಭಾರತೀಬೆನ್‌ ಮಗನನ್ನು ಬಿಟ್ಟು ತವರುಮನೆ […] The post ದೇವರ ಮಂಟಪಕ್ಕೆ ಜಜ್ಜಿ ಮಗನ ಕೊ*ಲೆ ಮಾಡಿದ ತಂದೆ: ಮೃತದೇಹದ ಪಕ್ಕವೇ ನಿದ್ದೆ! appeared first on ONLINE.

ಐಪಿಎಲ್ ಮಿನಿ ಹರಾಜಿಗೂ ಮುನ್ನ ದೊಡ್ಡ ಟ್ವಿಸ್ಟ್: ‘ಬೈ-ಬ್ಯಾಕ್’ ತಂತ್ರ ರೂಪಿಸಿದ CSK ಪಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಂಬರುವ ಐಪಿಎಲ್ ಮಿನಿ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ (CSK) ಫ್ರಾಂಚೈಸಿ ಅತ್ಯಂತ ಮಹತ್ವದ ಹಾಗೂ ಚಾಣಾಕ್ಷ ನಿರ್ಧಾರವೊಂದಕ್ಕೆ ಮುಂದಾಗಿದೆ. ಕಳೆದ ಹರಾಜಿನಲ್ಲಿ ಭಾರೀ ಮೊತ್ತ ನೀಡಿ ತಂಡಕ್ಕೆ ಸೇರಿಸಿಕೊಂಡಿದ್ದ ಯುವ ಆಲ್‌ರೌಂಡರ್ ಪ್ರಶಾಂತ್ ವೀರ್ ಅವರನ್ನು ಬಿಡುಗಡೆ ಮಾಡಲು ಮ್ಯಾನೇಜ್‌ಮೆಂಟ್ ನಿರ್ಧರಿಸಿದೆ. ಐಪಿಎಲ್ 2026ರ ಸೀಸನ್‌ಗಾಗಿ ಅಬುಧಾಬಿಯಲ್ಲಿ ನಡೆದಿದ್ದ ಹರಾಜಿನಲ್ಲಿ ಸಿಎಸ್‌ಕೆ ಫ್ರಾಂಚೈಸಿಯು ಪ್ರಶಾಂತ್ ವೀರ್ ಅವರನ್ನು ಬರೋಬ್ಬರಿ 14.20 ಕೋಟಿಗೆ ಖರೀದಿಸಿತ್ತು. ಈ ಮೂಲಕ ಅವರು ಐಪಿಎಲ್ ಇತಿಹಾಸದಲ್ಲೇ […] The post ಐಪಿಎಲ್ ಮಿನಿ ಹರಾಜಿಗೂ ಮುನ್ನ ದೊಡ್ಡ ಟ್ವಿಸ್ಟ್: ‘ಬೈ-ಬ್ಯಾಕ್’ ತಂತ್ರ ರೂಪಿಸಿದ CSK ಪಡೆ appeared first on ONLINE.

ಪೂರ್ಣಚಂದ್ರ ತೇಜಸ್ವಿ ಕಾದಂಬರಿ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ

ಸುದ್ದಿದಿನ,ದಾವಣಗೆರೆ: ಕನ್ನಡ ಸಾಹಿತ್ಯದಲ್ಲಿ ಹೊಸ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಉದ್ದೇಶದಿಂದ ದೇವನಗರಿ ಸುದ್ದಿದಿನ ಕನ್ನಡ ದಿನಪತ್ರಿಕೆ, ಏಕಾಂತಗಿರಿ ಟ್ರಸ್ಟ್, ದಾವಣಗೆರೆ ಹಾಗೂ ಶ್ಯಾಮ್ ಪ್ರಕಾಶನ, ನವಿಲೇಹಾಳು ವತಿಯಿಂದ ‘ಪೂರ್ಣಚಂದ್ರ ತೇಜಸ್ವಿ ಕಾದಂಬರಿ ಪ್ರಶಸ್ತಿ–2026’ ಘೋಷಿಸಲಾಗಿದ್ದು, ಅರ್ಹ ಬರಹಗಾರರಿಂದ ಕಾದಂಬರಿ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಚಿಂತನೆ, ಸೃಜನಶೀಲತೆ ಹಾಗೂ ವಿಭಿನ್ನ ಕಥನ ಸಾಧ್ಯತೆಗಳನ್ನು ಹೊಂದಿರುವ ಕಾದಂಬರಿಕಾರರನ್ನು ಪರಿಚಯಿಸುವ ಆಶಯದೊಂದಿಗೆ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಇದುವರೆಗೆ ಯಾವುದೇ ಕಾದಂಬರಿಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸದ ಬರಹಗಾರರಿಗೆ ತಮ್ಮ […]

ಮೈಸೂರು ವಿಜ್ಞಾನ ಕೇಂದ್ರಕ್ಕೆ ಶೀಘ್ರ ಅನುಮೋದನೆ ನೀಡಿ- ಕೇಂದ್ರ ಸಚಿವರಿಗೆ ಸಂಸದ ಯದುವೀರ್ ಮನವಿ

ಮೈಸೂರು, ನವೆಂಬರ್ 2, 2026 (www.justkannada.in): ಮೈಸೂರು–ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಪತ್ರ ಬರೆದು, ಮೈಸೂರಿನಲ್ಲಿ ಪ್ರಸ್ತಾಪಿತವಾಗಿರುವ ವಿಜ್ಞಾನ ಕೇಂದ್ರಕ್ಕೆ (ವರ್ಗ-II, ಮಾದರಿ-B) ವಿಜ್ಞಾನ ಸಂಸ್ಕೃತಿ ಉತ್ತೇಜನ ಯೋಜನೆ (SPoCS) ಅಡಿಯಲ್ಲಿ ಶೀಘ್ರ ಅನುಮೋದನೆ ನೀಡುವಂತೆ ಮನವಿ ಮಾಡಿದ್ದಾರೆ. ಸಂಸದರ ಪ್ರಯತ್ನ ಮತ್ತು ಸೂಚನೆಯ ಮೇರೆಗೆ, ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ […]

ಶಿವಮೊಗ್ಗ: ಪೊಲೀಸರ ಮೇಲೆ ಹಲ್ಲೆ ನಡೆಸಿ ನಿಮ್ಮನ್ನು ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ ಆಸಾಮಿ? ಆಮೇಲೆ ಏನಾಯ್ತು

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಸಾರ್ವಜನಿಕ ಪ್ರದೇಶದಲ್ಲಿ ಕೊಲೆ ಮಾಡ್ತೀನಿ ಎಂದು ರಾಡ್​ ಹಿಡಿದುಕೊಂಡು ಹಾವಳಿ ಮಾಡ್ತಿದ್ದ ವ್ಯಕ್ತಿಯನ್ನು ಪ್ರಶ್ನಿಸಲು ತೆರಳಿದ್ದ ವೇಳೆ ಆತ ಪೊಲೀಸರ ... ಕ್ಲಿಕ್ ಮಾಡಿ

ಕೃತಕ ಬುದ್ಧಿಮತ್ತೆ ಮಾನವನಿಗೆ ಪರ್ಯಾಯವಲ್ಲ : ಡಾ.ಶಿವರಾಜ್‌ ಕಬ್ಬೂರ್‌

​ದಾವಣಗೆರೆ : ಕೃತಕ ಬುದ್ಧಿಮತ್ತೆಯನ್ನು  ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತಮ್ಮ ಸೇವಕನನ್ನಾಗಿ ಬಳಸಿಕೊಳ್ಳಬೇಕೆ ವಿನಾ, ಅದಕ್ಕೆ ಸಂಪೂರ್ಣವಾಗಿ ಶರಣಾಗಬಾರದು ಎಂದು ವಿನ್ನರ್ಸ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಡಾ. ಶಿವರಾಜ್ ಕಬ್ಬೂರು ಪ್ರತಿಪಾದಿಸಿದರು. ​ನಗರದ ವಿನ್ನರ್ಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಕೃತಕ ಬುದ್ಧಿಮತ್ತೆ  ಶಿಕ್ಷಣಕ್ಕೆ ಪೂರಕವೇ ಅಥವಾ ಮಾರಕವೇ?’ ವಿಷಯ ಕುರಿತು ಏರ್ಪಡಿಸಿದ್ದ ಜಿಲ್ಲಾಮಟ್ಟದ ಪಿಯು ಕಾಲೇಜು ವಿದ್ಯಾರ್ಥಿಗಳ ಚರ್ಚಾ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು. ​ಎಐ ತಂತ್ರಜ್ಞಾನವು ಮಾನವನಿಗೆ ಹಾಗೂ ಶಿಕ್ಷಕರಿಗೆ ಎಂದಿಗೂ ಪರ್ಯಾಯವಾಗಲು ಸಾಧ್ಯವಿಲ್ಲ. ತಂತ್ರಜ್ಞಾನದ [...]

‘ಪ್ರಿಯಾಂಕ್ ಖರ್ಗೆ ಬಳಿ ಟ್ರೇಲರ್ ಇರಬಹುದು, ಅಸಲಿ ಪಿಕ್ಚರ್ ನಮ್ಮ ಬಳಿ ಇದೆ’: ಹೆಚ್‌ಡಿಕೆ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿರುವ ‘ಸ್ಟಿಂಗ್ ಆಪರೇಷನ್’ ಪ್ರಕರಣದಲ್ಲಿ ತಮ್ಮ ಹೆಸರು ತಳಕು ಹಾಕಲು ಯತ್ನಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನ ಜೆ.ಪಿ. ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಪ್ರಕರಣದ ತನಿಖೆಯ ದಿಕ್ಕು, ಪೊಲೀಸರ ಹೇಳಿಕೆಗಳು, ರಿತೇಶ್ ಪಾಂಡೆ ಬಂಧನ ಹಾಗೂ ಸ್ಟಿಂಗ್ ಆಪರೇಷನ್‌ನ ಹಿಂದಿನ ವ್ಯಕ್ತಿಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದರು. ಮಾಜಿ ಸಚಿವರಾದ ಸಾ.ರಾ. ಮಹೇಶ್, ವೆಂಕಟ್ ರಾವ್ ನಾಡಗೌಡ […] Source

ಹೋಂಡಾ ಕಂಪನಿ ಇಲ್ಲೇ ಇದೆ, ಮುಂದೆಯೂ ಇರುತ್ತದೆ- ಸಚಿವ ಎಂ.ಬಿ ಪಾಟೀಲ್

ಬೆಂಗಳೂರು,ನವೆಂಬರ್,2,2026 (www.justkannada.in):  ಹೋಂಡಾ ಮೋಟಾರ್ಸ್ ಕಂಪನಿಯು ರಾಜ್ಯವನ್ನು ತೊರೆದು ಬೇರೆಲ್ಲೊ ಹೋಗುತ್ತಿದ್ದಾರೆ ಎನ್ನುವ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆ ಕಪೋಲಕಲ್ಪಿತ ಮತ್ತು ರಾಜಕೀಯ ದುರುದ್ದೇಶದಿಂದ ಕೂಡಿದೆ. ಇಂತಹ ಸಂವೇದನಾರಹಿತ ಹೇಳಿಕೆಗಳು ಕರ್ನಾಟಕದ ಕೈಗಾರಿಕಾ ಬೆಳವಣಿಗೆಗೆ ಮಾರಕವಾಗಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀlf ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಕುಮಾರಸ್ವಾಮಿ ಅವರ ಆರೋಪಕ್ಕೆ ಸಂಬಂಧಿಸಿದಂತೆ   ವಿವರವಾಗಿ ಪ್ರತ್ಯುತ್ತರ ನೀಡಿದ ಸಚಿವ ಎಂ.ಬಿ ಪಾಟೀಲ್, ಕೋಲಾರ ಜಿಲ್ಲೆಯ ನರಸಾಪುರದಲ್ಲಿ 135 […]

Skin Care | ಚರ್ಮದ ಆರೋಗ್ಯ ಕಾಪಾಡಲು ರಾತ್ರಿ ವೇಳೆ ಈ ಬ್ಯೂಟಿ ರೂಲ್ಸ್ ಫಾಲೋ ಮಾಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಮದ ಆರೈಕೆಯ ಬಗ್ಗೆ ನೂರಾರು ಟ್ರೆಂಡ್‌ಗಳು ವೈರಲ್ ಆಗುತ್ತಿವೆ. ಅದರಲ್ಲಿಯೂ ರಾತ್ರಿಯ ವೇಳೆ ಮುಖವನ್ನು ಎರಡು ಬಾರಿ ಸ್ವಚ್ಛಗೊಳಿಸುವ ‘ಡಬಲ್ ಕ್ಲೆನ್ಸಿಂಗ್’ ಪದ್ಧತಿ ಸಖತ್ ಸೌಂಡ್ ಮಾಡುತ್ತಿದೆ. ಮುಖಕ್ಕೆ ಮೇಕಪ್ ಹಾಕಿರಲಿ ಅಥವಾ ಬಿಡಲಿ, ಪ್ರತಿಯೊಬ್ಬರೂ ಪ್ರತಿದಿನ ರಾತ್ರಿ ಕಡ್ಡಾಯವಾಗಿ ಡಬಲ್ ಕ್ಲೆನ್ಸಿಂಗ್ ಮಾಡಬೇಕು ಎಂಬ ವಾದಗಳು ಕೇಳಿಬರುತ್ತಿವೆ. ಆದರೆ, ಇದು ನಿಜಕ್ಕೂ ಎಲ್ಲರ ಚರ್ಮಕ್ಕೂ ಒಳ್ಳೆಯದೇ? ಡಬಲ್ ಕ್ಲೆನ್ಸಿಂಗ್ ಎಂದರೆ ಮೊದಲು ಎಣ್ಣೆ […] The post Skin Care | ಚರ್ಮದ ಆರೋಗ್ಯ ಕಾಪಾಡಲು ರಾತ್ರಿ ವೇಳೆ ಈ ಬ್ಯೂಟಿ ರೂಲ್ಸ್ ಫಾಲೋ ಮಾಡಿ appeared first on ONLINE.

ಪ್ರಜ್ವಲ್ ಪೆನ್ ಡ್ರೈವ್ ಅನ್ನು ಹಂಚಿದ್ದು ನಾನಲ್ಲ: ಡಿಕೆಶಿಯಿಂದ ಷಡ್ಯಂತ್ರ- ಕೇಂದ್ರ ಸಚಿವ HDK

ಬೆಂಗಳೂರು,ನವೆಂಬರ್,2,2026 (www.justkannada.in): ಪ್ರಜ್ವಲ್ ಪೆನ್ ಡ್ರೈವ್ ಹಂಚಿದ್ದು ನಾನಲ್ಲ ಪ್ರಜ್ವಲ್ ಕಾರು ಚಾಲಕ ಹಂಚಿದ್ದು.  ಪ್ರಜ್ವಲ್ ಕಾರು ಚಾಲಕನನ್ನು ಮನೆಗೆಕರೆಸಿಕೊಂಡು ಡಿಕೆ ಶಿವಕುಮಾರ್ ಷಡ್ಯಂತ್ರ ನಡೆಸಿದ್ದರು ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಇಂದು ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ,  ಪ್ರಜ್ವಲ್ ಪೆನ್ ಡ್ರೈವ್ ಅನ್ನು ನಾನೇ ಹಂಚಿದ್ದು ಅಂತಾ ಆರೋಪಿಸಿದ್ದಾರೆ. ನಾನು ಇಂತಹ ಹಿನ್ನೆಲೆಯಿಂದ ಬಂದವನು ಅಲ್ಲ. ಹೆಣ್ಣು ಮಕ್ಕಳಿಗೆ ಗೌರವ ಕೊಡುವುದನ್ನ […]

ಶಿವಮೊಗ್ಗ: ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ತಕ್ಷಣವೇ ರಾಜಿನಾಮೆ ಕೊಟ್ಟು ಕಾಂಗ್ರೆಸ್ ಪಕ್ಷ ಸೇರಿಕೊಳ್ಳಲಿ : ಎಸ್​ ಎನ್​ ಚನ್ನಬಸಪ್ಪ ವಾಗ್ದಾಳಿ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಬಗ್ಗೆ ದನಿ ಎತ್ತಿದ್ದ ಕುಮಾರಸ್ವಾಮಿ ವಿರುದ್ಧವೇ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ನೀಡಿರು ಹೇಳಿಕೆಗಳು ಸರಿಯಲ್ಲ. ... ಕ್ಲಿಕ್ ಮಾಡಿ

ಬೆಲೆ ಏರಿಕೆ: ನವದಂಪತಿಗಳಿಗೆ ಹಾಲು, ಮೊಸರು ಉಡುಗೊರೆ ನೀಡಿ ವಿನೂತನ ಜಾಗೃತಿ

ಮೈಸೂರು,ನವೆಂಬರ್,2,2026 (www.justkannada.in):  ರಾಜ್ಯದಲ್ಲಿ ಹಾಲು ಹಾಗೂ ಮೊಸರಿನ ದರ ಏರಿಕೆಯಿಂದ ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳ ಮೇಲೆ ಆರ್ಥಿಕ ಹೊರೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ಗಮನ ಸೆಳೆಯುವ ಉದ್ದೇಶದಿಂದ ಪ್ರಜ್ಞಾವಂತ ನಾಗರಿಕ ವೇದಿಕೆಯ ಅಧ್ಯಕ್ಷ ಕಡಕೋಳ ಜಗದೀಶ್ ಅವರು ನೂತನ ವಧು-ವರರಿಗೆ ಹಾಲು ಮತ್ತು ಮೊಸರನ್ನು ಉಡುಗೊರೆಯಾಗಿ ನೀಡಿ ಶುಭಾಶಯ ಕೋರಿದರು. ಕಡಕೋಳದ ಶ್ರೀ ಕಾಳಿಬೀರೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಕಡಕೋಳ ನಿವಾಸಿ ಮಂಜು ಹಾಗೂ ಅನನ್ಯ ಅವರ ವಿವಾಹ ಸಮಾರಂಭದಲ್ಲಿ ಈ ವಿನೂತನ ಜಾಗೃತಿ […]

ಭಾರತ ಪ್ರವಾಸಕ್ಕೂ ಮುನ್ನ ಕಿವೀಸ್‌ಗೆ ಬಿಗ್ ಶಾಕ್: ಇಬ್ಬರು ಸ್ಟಾರ್ ಆಟಗಾರರು ಔಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ತಂಡದ ವಿರುದ್ಧ ನಡೆಯಲಿರುವ ಮುಂಬರುವ ರೋಚಕ 5 ಪಂದ್ಯಗಳ ಏಕದಿನ ಸರಣಿಗೂ ಮುನ್ನ ನ್ಯೂಝಿಲೆಂಡ್ ಕ್ರಿಕೆಟ್ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಇಬ್ಬರು ಪ್ರಮುಖ ಮತ್ತು ಮ್ಯಾಚ್ ವಿನ್ನರ್ ಆಟಗಾರರಾದ ಮಾರ್ಕ್ ಚಾಪ್‌ಮನ್ ಹಾಗೂ ಯುವ ಆಲ್ ರೌಂಡರ್ ರಚಿನ್ ರವೀಂದ್ರ ಅವರು ಗಾಯದ ಸಮಸ್ಯೆಯಿಂದಾಗಿ ಇಡೀ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಇದು ಕಿವೀಸ್ ಪಡೆಗೆ ತೀವ್ರ ನಿರಾಸೆಯನ್ನುಂಟು ಮಾಡಿದೆ. ನ್ಯೂಝಿಲೆಂಡ್ ಕ್ರಿಕೆಟ್ ಮಂಡಳಿಯ ಮೂಲಗಳ ಪ್ರಕಾರ, ತಂಡದ ಭರವಸೆಯ ಮಧ್ಯಮ […] The post ಭಾರತ ಪ್ರವಾಸಕ್ಕೂ ಮುನ್ನ ಕಿವೀಸ್‌ಗೆ ಬಿಗ್ ಶಾಕ್: ಇಬ್ಬರು ಸ್ಟಾರ್ ಆಟಗಾರರು ಔಟ್ appeared first on ONLINE.

ಶಿವಮೊಗ್ಗ : ದೇಶದ ಜನರಿಗೆ ಸತ್ಯವನ್ನು ತಿಳಿಸಬೇಕೆಂಬ ದೃಷ್ಟಿಯಿಂದ ಬೃಹತ್​ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ : ಎಸ್​ ಎನ್​ ಚನ್ನಬಸಪ್ಪ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗದ ಎಸ್.ಐ.ಆರ್. ಪ್ರಕ್ರಿಯೆಯನ್ನು ವಿರೋಧಿಸುವ ಮೂಲಕ ದೇಶದಲ್ಲಿ ಗಲಿಬಿಲಿಗೊಳಿಸಲು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಜನರಿಗೆ ಸತ್ಯವನ್ನು ... ಕ್ಲಿಕ್ ಮಾಡಿ

ಸಿಸಿಟಿವಿ ಕಣ್ಣಿದ್ದರೂ ತಪ್ಪಲಿಲ್ಲ ಅನಾಹುತ: ಮಕ್ಕಳ ಸುರಕ್ಷತೆಗೆ ಶಾಲೆಯಲ್ಲೇ ಇಲ್ಲವೇ ಗ್ಯಾರಂಟಿ?

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿದ್ಯೆ ಕಲಿಯುವ, ನಲಿವಿನಿಂದ ಆಟವಾಡುವ ವಯಸ್ಸಿನಲ್ಲಿಯೇ ಮಗುವೊಂದು ಅಮಾನವೀಯ ಕೃತ್ಯ ಎಸಗಿರುವುದು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಕೇವಲ 8 ವರ್ಷದ ಬಾಲಕನೊಬ್ಬ 6 ವರ್ಷದ ಬಾಲಕಿಯನ್ನು ಉಪಾಯದಿಂದ ಖಾಲಿ ತರಗತಿಗೆ ಕರೆದೊಯ್ದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಪ್ರತಿಯೊಬ್ಬ ಪೋಷಕರ ಎದೆಯಲ್ಲಿ ನಡುಕ ಹುಟ್ಟಿಸಿದೆ. ಪ್ರಸ್ತುತ ಆ ಬಾಲಕಿ ಸಾವುಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾಳೆ. ಶಾಲೆಯಲ್ಲೇ ನರಕ ಕಂಡ ಕಂದಮ್ಮ “ನಿನ್ನ ತಂದೆ ಮಹಡಿಯ ಮೇಲೆ ನಿನಗಾಗಿ ಕಾಯುತ್ತಿದ್ದಾರೆ” ಎಂದು ಆ ಬಾಲಕ […] The post ಸಿಸಿಟಿವಿ ಕಣ್ಣಿದ್ದರೂ ತಪ್ಪಲಿಲ್ಲ ಅನಾಹುತ: ಮಕ್ಕಳ ಸುರಕ್ಷತೆಗೆ ಶಾಲೆಯಲ್ಲೇ ಇಲ್ಲವೇ ಗ್ಯಾರಂಟಿ? appeared first on ONLINE.