Filters

Channels
Topics
Other Filters

ಅ,23ರಂದು ಪರಿಷತ್ ಚುನಾವಣೆ: ವಿಶೇಷ ಸಾಂದರ್ಭಿಕ ರಜೆ ಘೋಷಣೆ

ಬೆಂಗಳೂರು, ಅಕ್ಟೋಬರ್,19,2026 (www.justkannada.in): ಕರ್ನಾಟಕ ವಿಧಾನ ಪರಿಷತ್ತಿನ ಚುನಾವಣೆ ಹಿನ್ನೆಲೆಯಲ್ಲಿ ಅಕ್ಟೋಬರ್ 23ರಂದು ಮತದಾರರಿಗೆ ಒಂದು ದಿನದ ಸಾಂದರ್ಭಿಕ ರಜೆ ಘೋಷಣೆ ಮಾಡಲಾಗಿದೆ. ಅಕ್ಟೋಬರ್ 23 ರಂದು ವಿಧಾನ ಪರಿಷತ್ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ದ್ವೈವಾರ್ಷಿಕ ಚುನಾವಣೆ ನಡೆಯಲಿದೆ. ಈ  ಹಿನ್ನೆಲೆಯಲ್ಲಿ ಅರ್ಹ ಮತದಾರರಿಗೆ ಅನುಕೂಲವಾಗುವಂತೆ ರಾಜ್ಯ ಸರ್ಕಾರ ಅ.23 ರ ಶುಕ್ರವಾರ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಿದೆ. ಈ ಬಗ್ಗೆ ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿದೆ. […]

ಮಂಗಳ ಚಂಡಿಕಾ ದೇವಿ ಅಲಂಕಾರ   

19.10.2026 ಸೋಮವಾರ ಮಂಗಳ ಚಂಡಿಕಾ ದೇವಿ ಅಲಂಕಾರ  Read also : ಕೊಂಡಜ್ಜಿ ರಸ್ತೆ ಶ್ರೀ ಬನ್ನಿ ಮಹಾಂಕಾಳಿ ಮತ್ತು ವರದಾಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಅನ್ನ ಸಂತರ್ಪಣೆ

ಫೇಸ್‌ಬುಕ್‌, ಇನ್‌ಸ್ಟಾಗ್ರಾಂನಲ್ಲಿ ರಾಜಕೀಯ ಕಂಟೆಂಟ್‌ಗೆ ಬ್ರೇಕ್‌? ಮೆಟಾಗೆ ಕೇಂದ್ರ ಸರ್ಕಾರ ಸೂಚನೆ

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ವಿಚಾರಗಳು, ಪ್ರತಿಭಟನೆಗಳು ಮತ್ತು ಸಾರ್ವಜನಿಕ ಘಟನೆಗಳಿಗೆ ಸಂಬಂಧಿಸಿದ ಪೋಸ್ಟ್‌ಗಳ ಪ್ರಸರಣದ ಬಗ್ಗೆ ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂನ ಮಾತೃಸಂಸ್ಥೆಯಾದ ಮೆಟಾ ತನ್ನ ಕಂಟೆಂಟ್‌ ಶಿಫಾರಸು ವ್ಯವಸ್ಥೆಯನ್ನು ಪರಿಶೀಲಿಸಿ, ಬಳಕೆದಾರರಿಗೆ ಒಂದೇ ರೀತಿಯ ಅಥವಾ ಸೀಮಿತ ವಿಚಾರಧಾರೆಗಳ ಕಂಟೆಂಟ್‌ ಅತಿಯಾಗಿ ತಲುಪದಂತೆ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರದ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಸೂಚಿಸಿದೆ.  ರಾಜಕೀಯ ಕಂಟೆಂಟ್‌ ಪ್ರಸರಣದ ಮೇಲೆ ನಿಗಾ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂನಲ್ಲಿ […] Source

ಕೊಂಡಜ್ಜಿ ರಸ್ತೆ ಶ್ರೀ ಬನ್ನಿ ಮಹಾಂಕಾಳಿ ಮತ್ತು ವರದಾಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಅನ್ನ ಸಂತರ್ಪಣೆ

ದಾವಣಗೆರೆಯ ಹೊಂಡದ ಸರ್ಕಲ್ ಸಮೀಪದ ಕೊಂಡಜ್ಜಿ ರಸ್ತೆಯಲ್ಲಿರುವ  ಶ್ರೀ ಬನ್ನಿ ಮಹಾಂಕಾಳಿ ಮತ್ತು ವರದಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಅಕ್ಟೋಬರ್  20 ಮಂಗಳವಾರ  ವಿಶೇಷ ಪೂಜೆ, ಅಲಂಕಾರ ಮತ್ತು ಬೆ. 11 ಗಂಟೆಯಿಂದ ಅನ್ನಸಂತರ್ಪಣೆ ನಡೆಯಲಿದೆ. ಅಕ್ಟೋಬರ್ 21 ಬುದುವಾರ ಸಂಜೆ 6 ಗಂಟೆಗೆ ಬನ್ನಿ ಮುಡಿಯುವ  ಕಾರ್ಯಕ್ರಮವಿದ್ದು  ದೇವಸ್ಥಾನಕ್ಕೆ ಹಲವು ದೇವರುಗಳು ಬನ್ನಿ ಮುಡಿಯಲು ಬರಲಿವೆ. Read also : YOGA|ಸುಪ್ತ ಹನುಮಾನಾಸನ:(ಮಲಗಿರುವ ಮಂಕಿ ಭಂಗಿ) ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ದೇವಸ್ಥಾನ ಸಮಿತಿಯವರು ಕೋರಿದ್ದಾರೆ.

Astrology problems: ನಿಮ್ಮ ಜೀವನದಲ್ಲಿ ಒಂದೇ ಸಮಸ್ಯೆಗಳು ಮತ್ತೆ ಮತ್ತೆ ಬರುತ್ತಿವೆಯೇ? ಜ್ಯೋತಿಷ್ಯ ಹೇಳುವ ಕಾರಣ ಮತ್ತು ಪರಿಹಾರ

Astrology problems: Facing the same problems repeatedly? Discover what astrology says about Saturn, Rahu, Ketu, Jupiter and karma, along with traditional remedies and practical ways to overcome recurring challenges. ಹಣಕಾಸು, ಉದ್ಯೋಗ ಮತ್ತು ಸಂಬಂಧಗಳಲ್ಲಿ ಪದೇಪದೆ ಅಡೆತಡೆಗಳು ಎದುರಾಗಲು ಕಾರಣವೇನು? ಜ್ಯೋತಿಷ್ಯದ ನಂಬಿಕೆಗಳು, ಗ್ರಹಗಳ ಪ್ರಭಾವ ಮತ್ತು ಜೀವನದಲ್ಲಿ ಬದಲಾವಣೆ ತರಲು ಸಹಾಯ ಮಾಡುವ ಪ್ರಾಯೋಗಿಕ ಪರಿಹಾರಗಳನ್ನು ತಿಳಿದುಕೊಳ್ಳಿ.

ಮೈಸೂರಿನ ಪಯಣ ಕಾರು ಸಂಗ್ರಹಾಲಯದಲ್ಲಿ ‘ಪಯಣೋತ್ಸವ 2026’ಕ್ಕೆ ಅದ್ದೂರಿ ತೆರೆ: ಸಿಡಿಮದ್ದು, ಸಂಗೀತಕ್ಕೆ ಮಾರುಹೋದ ವೀಕ್ಷಕರು!

ಹೊಸದಿಗಂತ ವರದಿ ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದ್ದ ಪಯಣ ಕಾರು ಸಂಗ್ರಹಾಲಯದ ‘ಪಯಣೋತ್ಸವ 2026’ ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಅಕ್ಟೋಬರ್ 11ರಿಂದ 19ರವರೆಗೆ ನಡೆದ 9 ದಿನಗಳ ಉತ್ಸವದಲ್ಲಿ ಸಂಗೀತ, ಜನಪದ ಕಲೆ, ವಾದ್ಯ ವೈಭವ ಹಾಗೂ ವರ್ಣರಂಜಿತ ಸಿಡಿಮದ್ದು ಪ್ರದರ್ಶನ ವೀಕ್ಷಕರ ಗಮನ ಸೆಳೆದವು. ಮೈಸೂರು ಸಮೀಪದಲ್ಲಿರುವ ಪಯಣ ಕಾರು ಸಂಗ್ರಹಾಲಯದಲ್ಲಿ ನಡೆದ ಉತ್ಸವಕ್ಕೆ ಪ್ರತಿದಿನ ಸಾವಿರಾರು ವೀಕ್ಷಕರು ಭೇಟಿ ನೀಡಿದರು. ಅಪರೂಪದ ವಿಂಟೇಜ್ ಕಾರುಗಳ ವೀಕ್ಷಣೆಯ […] The post ಮೈಸೂರಿನ ಪಯಣ ಕಾರು ಸಂಗ್ರಹಾಲಯದಲ್ಲಿ ‘ಪಯಣೋತ್ಸವ 2026’ಕ್ಕೆ ಅದ್ದೂರಿ ತೆರೆ: ಸಿಡಿಮದ್ದು, ಸಂಗೀತಕ್ಕೆ ಮಾರುಹೋದ ವೀಕ್ಷಕರು! appeared first on ONLINE.

ರಾಜ್ಯ ಕಬ್ಬು ಬೆಳೆಗಾರರ ಬೇಡಿಕೆಗಳಿಗೆ ಸಂಬಂಧಿಸಿದಂತೆ ತುರ್ತು ಮಧ್ಯಪ್ರವೇಶಿಸಿ: ಪ್ರಧಾನಿಗೆ ಸಿಎಂ ಡಿಕೆಶಿ ಮನವಿ

ಬೆಂಗಳೂರು, ಅಕ್ಟೋಬರ್,19,2026 (www.justkannada.in):  “ಸದ್ಯದಲ್ಲೇ ಕಬ್ಬು ಅರೆಯುವ ಋತು ಆರಂಭವಾಗಲಿದ್ದು, ಕರ್ನಾಟಕದ ಕಬ್ಬು ಬೆಳೆಗಾರರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತುರ್ತಾಗಿ ಮಧ್ಯಪ್ರವೇಶಿಸಬೇಕು” ಎಂದು ಸಿಎಂ ಡಿ.ಕೆ ಶಿವಕುಮಾರ್ ಅವರು ಪ್ರಧಾನಮಂತ್ರಿಗಳಿಗೆ ಮನವಿ ಮಾಡಿದ್ದಾರೆ. ಕಬ್ಬು ಬೆಳೆಗಾರರ ಬೇಡಿಕೆ ಸಂಬಂಧ ಸಿಎಂ ಡಿಕೆ ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೋಮವಾರ ಪತ್ರ ಬರೆದು, ಅನೇಕ ವಿಚಾರಗಳ ಬಗ್ಗೆ ಮನವಿ ಮಾಡಿದ್ದಾರೆ. ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು (MSP) ಪರಿಷ್ಕರಿಸಿ “ಸಕ್ಕರೆಯ ಕನಿಷ್ಠ ಮಾರಾಟ ಬೆಲೆ […]

ಆಯುಧ ಪೂಜೆ ಹಿನ್ನೆಲೆ ಹೂವು-ಹಣ್ಣುಗಳ ಬೆಲೆ ಏರಿಕೆ: ಬೆಂಗಳೂರಲ್ಲಿ ಖರೀದಿ ಭರಾಟೆ ಜೋರು!

ಬೆಂಗಳೂರು: ನಾಡಿನಾದ್ಯಂತ ಆಯುಧ ಪೂಜೆ ಮತ್ತು ವಿಜಯದಶಮಿಯ ಸಂಭ್ರಮ ಮನೆಮಾಡಿದೆ. ವಾಹನಗಳು, ಯಂತ್ರೋಪಕರಣಗಳು ಹಾಗೂ ಕೆಲಸಕ್ಕೆ ಬಳಸುವ ಉಪಕರಣಗಳಿಗೆ ಪೂಜೆ ಸಲ್ಲಿಸಲು ಜನರು ಸಿದ್ಧತೆ ನಡೆಸಿದ್ದಾರೆ. ಆದರೆ, ಹಬ್ಬದ ಸಂಭ್ರಮದ ನಡುವೆ ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಬೆಲೆ ಏರಿಕೆ ಗ್ರಾಹಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಬೆಲೆ ಎಷ್ಟೇ ಹೆಚ್ಚಾದರೂ ಸಂಪ್ರದಾಯದಂತೆ ಹಬ್ಬ ಆಚರಿಸಲೇಬೇಕೆಂಬ ಕಾರಣಕ್ಕೆ ಜನರು ಮಾರುಕಟ್ಟೆಗಳಿಗೆ ತೆರಳಿ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಬೆಳ್ಳಂಬೆಳಗ್ಗೆಯೇ ಮಾರುಕಟ್ಟೆಗಳಲ್ಲಿ ಜನಸಾಗರ ಬೆಂಗಳೂರಿನ ಕೆ.ಆರ್. ಮಾರುಕಟ್ಟೆ, ಮಲ್ಲೇಶ್ವರ, ಗಾಂಧಿಬಜಾರ್, […] Source

ಕರ್ನಾಟಕದತ್ತ ಮತ್ತೆ ವರುಣನ ಚಿತ್ತ: ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ ನೀಡಿದ IMD

ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಂಗಾರು ಮಳೆ ಕೈಕೊಟ್ಟು ಬರದ ಆತಂಕ ಎದುರಿಸುತ್ತಿರುವ ಕರ್ನಾಟಕಕ್ಕೆ ಇದೀಗ ಹಿಂಗಾರು ಮಳೆಯ ನಿರೀಕ್ಷೆ ಮೂಡಿದೆ. ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆಯ ಪ್ರಕಾರ, ಬೆಂಗಳೂರು ಸೇರಿದಂತೆ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಅಕ್ಟೋಬರ್ 24ರವರೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಿಗೆ ಅಕ್ಟೋಬರ್ 25ರವರೆಗೆ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದ್ದು, ಈ ಮಳೆ ಉತ್ತರ ಕರ್ನಾಟಕದ ಜಿಲ್ಲೆಗಳಿಗೂ ಕೊಂಚ ನೆಮ್ಮದಿ ನೀಡುವ ನಿರೀಕ್ಷೆಯಿದೆ. ಮುಂಗಾರು ಕೈಕೊಟ್ಟಿದ್ದರಿಂದ […] The post ಕರ್ನಾಟಕದತ್ತ ಮತ್ತೆ ವರುಣನ ಚಿತ್ತ: ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ ನೀಡಿದ IMD appeared first on ONLINE.

ಕಬ್ಬಿನ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಅ.23 ಕ್ಕೆ ಹೆದ್ದಾರಿ ಬಂದ್ : ಬಡಗಲಪುರ ನಾಗೇಂದ್ರ

ಮಂಡ್ಯ: ಕಬ್ಬಿನ ಉತ್ಪಾದನಾ ವೆಚ್ಚ ಅಧಿಕವಾಗಿರುವ ಹಿನ್ನೆಲೆಯಲ್ಲಿ ಟನ್ ಕಬ್ಬಿಗೆ ನ್ಯಾಯಯುತ ಬೆಲೆ ನೀಡಬೇಕು, ಕೇಂದ್ರ ಸರ್ಕಾರ ಎಫ್‌ಆರ್‌ಪಿ ಹಾಗೂ ರಾಜ್ಯ ಸರ್ಕಾರ ಎಸ್‌ಎಪಿ ನಿಗದಿ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅ.23ರಂದು ಹಳೇ ಮೈಸೂರು ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.23ರಂದು ಬೆಳಿಗ್ಗೆ 11 ಗಂಟೆಯಿಂದ ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ ಸೇರಿದಂತೆ ವಿವಿಧ ಜಿಲ್ಲೆಗಳ […] The post ಕಬ್ಬಿನ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಅ.23 ಕ್ಕೆ ಹೆದ್ದಾರಿ ಬಂದ್ : ಬಡಗಲಪುರ ನಾಗೇಂದ್ರ appeared first on nudikarnataka.

ದಸರಾ ಲೈಟಿಂಗ್ಸ್ 10 ದಿನ ವಿಸ್ತರಣೆ ಮಾಡಲು ತೀರ್ಮಾನ- ಸಿಎಂ ಡಿಕೆ ಶಿವಕುಮಾರ್

ಬೆಂಗಳೂರು, ಅಕ್ಟೋಬರ್,19,2026 (www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಲೈಟಿಂಗ್ಸ್ ಅನ್ನು 10 ದಿನಗಳವರೆಗೆ ವಿಸ್ತರಣೆ ಮಾಡಲು ತೀರ್ಮಾನಿಸಿದ್ದೇವೆ ಈ ಬಗ್ಗೆ ಘೋಷಣೆ ಮಾಡುತ್ತೇವೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು. ನಾಡಿನ ಜನತೆಗೆ ದಸರಾ ಹಬ್ಬದ ಶುಭಾಶಯ ತಿಳಿಸಿದ ಸಿಎಂ ಡಿಕೆ ಶಿವಕುಮಾರ್,  ನಾಳೆ ಹಬ್ಬ ಇದೆ. ಎಲ್ಲಾ ಕಡೆ ಸಂಭ್ರಮದಿಂದ ಹಬ್ಬ ಮಾಡುತ್ತಿದ್ದೇವೆ. ಯುವ ದಸರಾ ಕಂಬಳಕ್ಕೆ ನಾನು ಹೋಗಿದ್ದೆ. ಲೈಟಿಂಗ್ಸ್ ನೋಡಲು ಲಕ್ಷಕ್ಕೂ ಹೆಚ್ಚು ಜನ ಬರುತ್ತಿದ್ದಾರೆ. ದಸರಾ ಲೈಟಿಂಗ್ಸ್ 10 ದಿನ […]

ಕಬ್ಬು ಬೆಳೆಗಾರರ ಕಿಚ್ಚು ಶಮನಕ್ಕೆ ಮೋದಿ ಮೊರೆ ಹೋದ ಡಿಕೆಶಿ: 5 ಬೇಡಿಕೆ ಈಡೇರಿಸಲು ಒತ್ತಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಉತ್ತರ ಕರ್ನಾಟಕದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ರೈತರ ಬೇಡಿಕೆಗಳನ್ನು ಈಡೇರಿಸಿ ಕಬ್ಬು ಅರೆಯುವ ಹಂಗಾಮು ಆರಂಭಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಸಕ್ಕರೆ ಬೆಲೆ, ಕಬ್ಬಿನ ನ್ಯಾಯಯುತ ದರ ಹಾಗೂ ಎಥನಾಲ್ ಖರೀದಿ ನೀತಿಗೆ ಸಂಬಂಧಿಸಿದ ಐದು ಪ್ರಮುಖ ಬೇಡಿಕೆಗಳ ಕುರಿತು ಕೇಂದ್ರ ಸರ್ಕಾರ ಶೀಘ್ರ ನಿರ್ಧಾರ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ರೈತರ ಪ್ರತಿಭಟನೆಗೆ ಪರಿಹಾರ […] The post ಕಬ್ಬು ಬೆಳೆಗಾರರ ಕಿಚ್ಚು ಶಮನಕ್ಕೆ ಮೋದಿ ಮೊರೆ ಹೋದ ಡಿಕೆಶಿ: 5 ಬೇಡಿಕೆ ಈಡೇರಿಸಲು ಒತ್ತಾಯ appeared first on ONLINE.

ರಾಮನಗರದಲ್ಲಿ ವೃದ್ಧೆಯ ಚಿನ್ನದ ಸರ ಕದ್ದು ಪರಾರಿಯಾಗಿದ್ದ ದರೋಡೆಕೋರರ ಬಂಧನ

ಹೊಸದಿಗಂತ ವರದಿ ರಾಮನಗರ : ಅಂಗಡಿಯಲ್ಲಿದ್ದ ವೃದ್ಧೆಯಿಂದ ಚಿನ್ನದ ಸರ ಕಸಿದು ಪರಾರಿಯಾಗಿದ್ದ ಇಬ್ಬರು ದರೋಡೆಕೋರರನ್ನು ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಗೋರಿಪಾಳ್ಯದ ವಾಸಿ ತೌಸಿಫ್ ಪಾಷಾ ಮತ್ತು ಪಾದರಾಯನಪುರದ ಮುಬಾರಕ್ ಪಾಷಾ ಬಂಧಿತರು. ಈ ಆರೋಪಿಗಳಿಂದ 12.80 ಲಕ್ಷ ಮೌಲ್ಯದ 105 ಗ್ರಾಂ 2 ಎರಡು ಚಿನ್ನದ ಸರ ವಶ ಪಡಿಹಿಕೊಂಡಿದ್ದಾರೆ. ತೌಸಿಫ್ ಪಾಷಾ ವೃತ್ತಿಯಲ್ಲಿ ಆಟೋ ಚಾಲಕ ಮತ್ತು ಮುಬಾರಕ್ ಪಾಷಾ ಬಟ್ಟೆ ವ್ಯಾಪಾರಿ. ಮುಸುಕುಧಾರಿಗಳಾಗಿ ಕಳೆದ ಅ.12ರಂದು ಬಸವನಪುರದಲ್ಲಿ ಜಯಲಕ್ಷ್ಮಮ್ಮ […] The post ರಾಮನಗರದಲ್ಲಿ ವೃದ್ಧೆಯ ಚಿನ್ನದ ಸರ ಕದ್ದು ಪರಾರಿಯಾಗಿದ್ದ ದರೋಡೆಕೋರರ ಬಂಧನ appeared first on ONLINE.

ಮತ್ತೆ ಮತ್ತೆ ಘಟಿಸುವ ದುರಂತ, ಕಾಲ್ತುಳಿತ ಎಂಬ ಮಾಸ್ ಸಿಂಡ್ರೋಮ್……

ವಿವೇಕಾನಂದ ಎಚ್.ಕೆ ಇತ್ತೀಚಿನ ವರ್ಷಗಳಲ್ಲಿ ಮತ್ತೊಂದು ಸಾಮಾಜಿಕ ಸಾಂಕ್ರಾಮಿಕ ರೋಗ ಪ್ರಾಕೃತಿಕ ವಿಕೋಪದಂತೆ ದಿಢೀರನೆ ತೊಂದರೆ ಕೊಡುತ್ತಿದೆ. ಅದುವೇ ಕಾಲ್ತುಳಿತಗಳು ಎಂಬ ಭಯಂಕರ ದುರ್ಘಟನೆಗಳು….. ಈ ಕಾಲ್ತುಳಿತ ಪ್ರಕರಣಗಳು ಭಾರತಕ್ಕೆ ಹೊಸದೇನು ಅಲ್ಲ. ಆಗಾಗ ನಡೆಯುತ್ತಲೇ ಇರುತ್ತವೆ. ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ತುಂಬಾ ಹೆಚ್ಚು ಹೆಚ್ಚು ಈ ರೀತಿಯ ಘಟನೆಗಳು ನಡೆಯುತ್ತಿವೆ. ಆಗೆಲ್ಲಾ ಸಿನಿಮಾ ಮಂದಿರಗಳಲ್ಲಿ ಸಿನಿಮಾ ಟಿಕೆಟ್ ಪಡೆಯುವ ಕ್ಯೂನಲ್ಲಿ ಕಾಲ್ತುಳಿತಗಳಾಗುತ್ತಿದ್ದವು. ಚುನಾವಣಾ ಸಂದರ್ಭದಲ್ಲಿ ರಾಜಕಾರಣಿಗಳು ಹಂಚುವ ಸೀರೆ, ಪಂಚೆ, ಹಣ ಮುಂತಾದ ಸಮಯದಲ್ಲಿ, […] The post ಮತ್ತೆ ಮತ್ತೆ ಘಟಿಸುವ ದುರಂತ, ಕಾಲ್ತುಳಿತ ಎಂಬ ಮಾಸ್ ಸಿಂಡ್ರೋಮ್…… appeared first on nudikarnataka.

ಸ್ಟಿಂಗ್ ವಿಚಾರದ ಬಗ್ಗೆ ನನಗೆ ಎಬಿಸಿಡಿನೂ ಗೊತ್ತಿಲ್ಲ:ಇದರಿಂದ ದೂರವಿರಲು ಬಯಸುವೆ- ಸಚಿವ ಸತೀಶ್ ಜಾರಕಿಹೊಳಿ

ಗದಗ, ಅಕ್ಟೋಬರ್,19,2026 (www.justkannada.in): ಸ್ಟಿಂಗ್ ವಿಚಾರವಾಗಿ ನನಗೆ ಎಬಿಸಿಡಿ ಗೊತ್ತಿಲ್ಲ.  ಸ್ಟಿಂಗ್ ವಿಚಾರದಿಂದ ದೂರ ಇರಲು ಬಯಸುವೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಪ್ರಕರಣದ ಬಗ್ಗೆ ತನಿಖೆ ಆಗುತ್ತಿದೆ ವರದಿ ಬರಲಿ.  ವರದಿ ಬಳಿಕ ಸರ್ಕಾರ ಸಾರ್ವಜನಿಕವಾಗಿ ತಿಳಿಸುತ್ತದೆ ಎಂದರು. ಕಬ್ಬು ಬೆಳೆಗಾರರ  ಹೋರಾಟ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ಈ ಬಗ್ಗೆ ಬಾಲ್ ಬ್ಯಾಟ್ ಕೇಂದ್ರ ಸರ್ಕಾರದ ಕಡೆ […]