Filters

Channels
Topics
Other Filters

Job Opportunity: ಸೈನಿಕ ಶಾಲೆಯಲ್ಲಿ ಬೃಹತ್ ಉದ್ಯೋಗಾವಕಾಶ, ಲಕ್ಷ ರೂ. ವರೆಗೆ ವೇತನವಿರುವ ಈ ಹುದ್ದೆಗಳಿಗೆ ಇಂದೇ ಅರ್ಜಿ ಹಾಕಿ!

ಬೆಳಗಾವಿ ಜಿಲ್ಲೆಯ ಸಂಗೊಳ್ಳಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಯಲ್ಲಿ ಒಟ್ಟು 20 ಗುತ್ತಿಗೆ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ನವೆಂಬರ್ 2, 2026 ಕೊನೆಯ ದಿನ.

ಕಿತ್ತೂರು ಉತ್ಸವದ ಹೊಸ್ತಿಲಲ್ಲೇ ಚನ್ನಮ್ಮಾಜಿಯ ಪ್ರತಿಮೆಗೆ ಹಾನಿ: ದುರಸ್ತಿಗೆ ಅಧಿಕಾರಿಗಳ ಕ್ರಮ

ಹೊಸದಿಗಂತ ವರದಿ ಬೆಳಗಾವಿ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಅಶ್ವಾರೂಢ ಪ್ರತಿಮೆಯ ಖಡ್ಗ ಹಿಡಿದ ಬಲಗೈ ಮುರಿದು ಬಿದ್ದಿದ್ದು, ಪ್ರತಿಮೆಗೆ ಹಾನಿಯಾಗಿದೆ. ಕಿತ್ತೂರು ಉತ್ಸವದ ಸಂಭ್ರಮಕ್ಕೆ ಸಿದ್ಧತೆಗಳು ನಡೆಯುತ್ತಿರುವ ಹೊತ್ತಿನಲ್ಲೇ ಐತಿಹಾಸಿಕ ಮಹತ್ವ ಹೊಂದಿರುವ ರಾಣಿ ಚನ್ನಮ್ಮಾಜಿಯ ಪ್ರತಿಮೆಗೆ ಹಾನಿಯಾಗಿರುವುದು ಸಾರ್ವಜನಿಕರಲ್ಲಿ ವಿಷಾದ ಮೂಡಿಸಿದೆ. ಸುಮಾರು 25 ವರ್ಷಗಳ ಹಿಂದೆ ಸ್ಥಾಪಿಸಲಾಗಿರುವ ಈ ಪ್ರತಿಮೆ ನಿರಂತರ ಬಿಸಿಲು ಹಾಗೂ ಮಳೆಯಿಂದ ದುರ್ಬಲಗೊಂಡಿರಬಹುದು ಎಂದು ಶಂಕಿಸಲಾಗಿದೆ. ಆದರೆ, ಪ್ರತಿಮೆಯ ಕೈ ಮುರಿದು ಬೀಳಲು ನಿಖರ […] The post ಕಿತ್ತೂರು ಉತ್ಸವದ ಹೊಸ್ತಿಲಲ್ಲೇ ಚನ್ನಮ್ಮಾಜಿಯ ಪ್ರತಿಮೆಗೆ ಹಾನಿ: ದುರಸ್ತಿಗೆ ಅಧಿಕಾರಿಗಳ ಕ್ರಮ appeared first on ONLINE.

ಕೂಡುಮಂಗಳೂರಿನಲ್ಲಿ ಭೀಕರ ಬೈಕ್ ಅಪಘಾತ: 70 ವರ್ಷದ ವೃದ್ಧೆ ಸಾ*ವು

ಹೊಸದಿಗಂತ ವರದಿ ಕುಶಾಲನಗರ: ಎರಡು ಬೈಕ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ 70 ವರ್ಷದ ವೃದ್ಧೆ ಮೃತಪಟ್ಟ ಘಟನೆ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ನಡೆದಿದೆ. ಮೃತರನ್ನು ನಾಗಮ್ಮ (70) ಎಂದು ಗುರುತಿಸಲಾಗಿದೆ. ಮೂಲತಃ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಣಗಾಲು ಸಮೀಪದ ಮೂದಗನಹಳ್ಳಿ ಗ್ರಾಮದವರಾದ ನಾಗಮ್ಮ, ಮೊಮ್ಮಗನೊಂದಿಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದನ್ನೂ ಓದಿ: ಡಿಕ್ಕಿಯ ರಭಸಕ್ಕೆ ನಾಗಮ್ಮ ರಸ್ತೆಗೆ ಬಿದ್ದಿದ್ದು, ಅವರ ತಲೆಗೆ […] The post ಕೂಡುಮಂಗಳೂರಿನಲ್ಲಿ ಭೀಕರ ಬೈಕ್ ಅಪಘಾತ: 70 ವರ್ಷದ ವೃದ್ಧೆ ಸಾ*ವು appeared first on ONLINE.

UPSC Current Affairs Quiz – 19 October 2026 | Daily Prelims Quiz

  The Current Affairs Quiz is a daily quiz based on the DAILY CURRENT AFFAIRS AND PIB SUMMARY from the previous day, as posted on our website. It covers all relevant news sources and is designed to test your knowledge of current events. Solving these questions will help you retain both concepts and facts relevant … Continue reading "UPSC Current Affairs Quiz – 19 October 2026 | Daily Prelims Quiz" The post UPSC Current Affairs Quiz – 19 October 2026 | Daily Prelims Quiz appeared first on INSIGHTS IAS - Simplifying UPSC IAS Exam Preparation.

ಬನವಾಸಿಯಲ್ಲಿ ಭೀಕರ ರಸ್ತೆ ಅಪಘಾತ: ಓಮಿನಿಗೆ ಸ್ಕೂಟರ್ ಡಿಕ್ಕಿ; ಓರ್ವನ ದಾರುಣ ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್: ಓಮಿನಿ ಮತ್ತು ಸ್ಕೂಟಿ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟಿಯ ಹಿಂಬದಿ ಸವಾರ ಮೃತಪಟ್ಟ ಘಟನೆ ಸೋಮವಾರ ಬನವಾಸಿಯ ಕೆನರಾ ಬ್ಯಾಂಕ್ ಎದುರು ನಡೆದಿದೆ. ಶಿರಸಿ ತಾಲೂಕಿನ ತಿಗಣಿ ಗ್ರಾಮದ ಶಂಕರ ಮಲ್ಲಪ್ಪ ಗೌಡ (55) ಮೃತಪಟ್ಟವರು. ಇವರು ಕೃಷಿ ಕೆಲಸ ಮಾಡಿಕೊಂಡಿದ್ದರು. ಅಕ್ಟೋಬರ್ 19ರಂದು ಬೆಳಗ್ಗೆ 10 ಗಂಟೆಗೆ ತಿಗಣಿಯಿಂದ ಬನವಾಸಿಯ ಕೆನರಾ ಬ್ಯಾಂಕ್ಗೆ ತೆರಳಲು ಚಂದ್ರಶೇಖರ ವೀರಭದ್ರಪ್ಪ ಗೌಡ (58) ಅವರು ತಮ್ಮ ಡಿಯೋ ಸ್ಕೂಟಿಯಲ್ಲಿ ಶಂಕರ ಅವರನ್ನು ಹಿಂಬದಿ ಸವಾರರಾಗಿ […] The post ಬನವಾಸಿಯಲ್ಲಿ ಭೀಕರ ರಸ್ತೆ ಅಪಘಾತ: ಓಮಿನಿಗೆ ಸ್ಕೂಟರ್ ಡಿಕ್ಕಿ; ಓರ್ವನ ದಾರುಣ ಸಾ*ವು appeared first on ONLINE.

ಬೋಳಿಯಾರ್ ಬಳಿ ಭೀಕರ ಅಪಘಾತ: ಪಿಕಪ್ ಧಾವಂತಕ್ಕೆ ಸ್ಕೂಟರ್ ಸವಾರ ಬ*ಲಿ, ಡಿಕ್ಕಿಯ ರಭಸಕ್ಕೆ ನೆಲಕ್ಕುರುಳಿದ ವಿದ್ಯುತ್ ಕಂಬ

ಹೊಸದಿಗಂತ ವರದಿ ಮಂಗಳೂರು: ಇಲ್ಲಿನ ಕೊಣಾಜೆ ಠಾಣಾ ವ್ಯಾಪ್ತಿಯ ಬೋಳಿಯಾರ್ ಸಮೀಪದ ಕುರ್ನಾಡು ಪೆಟ್ರೋಲ್ ಪಂಪ್ ಬಳಿ ಸ್ಕೂಟರ್ ಗೆ ಹಿಂಬದಿಯಿಂದ ಬಂದ ಪಿಕಪ್ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆ ಸೋಮವಾರ ಸಂಜೆ ಸಂಭವಿಸಿದೆ. ಘಟನೆಯಲ್ಲಿ‌ ಸಹ ಸವಾರ ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಮೃತಪಟ್ಟ ಯುವಕನನ್ನು ಕಿನ್ಯ ಅರೆಬಿನಗರದ ಮಹಮ್ಮದ್ ಅಫ್ರಾಝ್ ( 22) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಬೋಳಿಯಾರ್ […] The post ಬೋಳಿಯಾರ್ ಬಳಿ ಭೀಕರ ಅಪಘಾತ: ಪಿಕಪ್ ಧಾವಂತಕ್ಕೆ ಸ್ಕೂಟರ್ ಸವಾರ ಬ*ಲಿ, ಡಿಕ್ಕಿಯ ರಭಸಕ್ಕೆ ನೆಲಕ್ಕುರುಳಿದ ವಿದ್ಯುತ್ ಕಂಬ appeared first on ONLINE.

ಪೇಂಟರ್ ಜೊತೆ ಸ್ನೇಹ, ಪತಿಯ ಹ*ತ್ಯೆಗೆ ಸಂಚು: ಅಪಘಾತದ ನಾಟಕ ಬಯಲು ಮಾಡಿದ ಪೊಲೀಸರು

ಹೊಸದಿಗಂತ ವರದಿ ವಿಜಯಪುರ: ಹೊಸ ಮನೆಗೆ ಪೇಂಟಿಂಗ್ ಮಾಡಲು ಬಂದ ಯುವಕನ ಸ್ನೇಹ ಬೆಳಸಿ, ಪತ್ನಿಯೇ ಪತಿಯನ್ನು ಹತ್ಯೆ ಮಾಡಿಸಿರುವ ಪ್ರಕಣಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ರಸ್ತೆ ಅಪಘಾತ ಎಂದು ದಾಖಲಾಗಿದ್ದ ಪ್ರಕರಣ ಸದ್ಯ ಕೊಲೆ ಎಂಬುದು ಬೆಳಕಿಗೆ ಬಂದಿದ್ದು, ತನ್ನ ಪತಿಯನ್ನೇ ಹತ್ಯೆ ಮಾಡಲು ಪತ್ನಿಯೇ ಸಂಚು ರೂಪಿಸಿದ ಪ್ರಸಂಗ ನಡೆದಿದೆ. ನಗರದ ಆನಂದ ರಾವುತಪ್ಪ […] The post ಪೇಂಟರ್ ಜೊತೆ ಸ್ನೇಹ, ಪತಿಯ ಹ*ತ್ಯೆಗೆ ಸಂಚು: ಅಪಘಾತದ ನಾಟಕ ಬಯಲು ಮಾಡಿದ ಪೊಲೀಸರು appeared first on ONLINE.

ದಾವಣಗೆರೆಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಸಿಎಂ ಭೇಟಿ: ಸಚಿವ ಕೆ.ಎಸ್.ಬಸವಂತಪ್ಪ ಭರವಸೆ

ದಾವಣಗೆರೆ : ಮಧ್ಯ ಕರ್ನಾಟಕದ ಪ್ರಮುಖ ಕೇಂದ್ರವಾಗಿರುವ ದಾವಣಗೆರೆಯಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಬೇಕೆಂಬ ವಕೀಲರು ಹಾಗೂ ಸಾರ್ವಜನಿಕರ ಬಹುದಿನಗಳ ಬೇಡಿಕೆಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಬಸವಂತಪ್ಪ ತಿಳಿಸಿದರು. ಸೋಮವಾರ ಸಂಜೆ ನಗರದ ಖಾಸಗಿ ಹೋಟೆಲ್ ನಲ್ಲಿ ಹೈಕೋರ್ಟ್ ಪೀಠ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಎಂ. ಹನುಮಂತಪ್ಪ ಅವರ ನೇತೃತ್ವದ ವಕೀಲರ ನಿಯೋಗವು ಸಚಿವ ಕೆ.ಎಸ್.ಬಸವಂತಪ್ಪ ಅವರನ್ನು ಭೇಟಿ ಮಾಡಿ ಚರ್ಚೆ [...]

ನವರಾತ್ರ ನಮಸ್ಯಾ | ಕೋಲಿನಿಂದಲ್ಲ, ಬುದ್ಧಿಯ ಬದಲಾವಣೆಯಿಂದಲೇ ದಂಡನೆ; ದೇವರ ಅನುಗ್ರಹದ ರಹಸ್ಯ ಬಿಚ್ಚಿಟ್ಟ ರಾಘವೇಶ್ವರ ಶ್ರೀ

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇವತೆಗಳು ಜೀವಿಗಳನ್ನು ಕೋಲಿನಿಂದ ದಂಡಿಸುವುದಿಲ್ಲ; ಬದಲಾಗಿ ಒಳ್ಳೆಯ ಬುದ್ಧಿಯನ್ನು ಅನುಗ್ರಹಿಸುವ ಮೂಲಕ ಉದ್ಧಾರ ಮಾಡುತ್ತಾರೆ. ಶಿಕ್ಷೆ ನೀಡಬೇಕಾದಾಗ ಬುದ್ಧಿಯನ್ನು ಕೆಡಿಸುವ ಮೂಲಕ ಜೀವಿ ತೊಂದರೆಗೆ ಒಳಗಾಗುವಂತೆ ಮಾಡುತ್ತಾರೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು. ಶ್ರೀಗಳು ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಶಾಖೆಯಲ್ಲಿ ನಡೆಯುತ್ತಿರುವ ‘ನವರಾತ್ರ ನಮಸ್ಯಾ’ ಕಾರ್ಯಕ್ರಮದಲ್ಲಿ ಸೋಮವಾರ ಲಲಿತೋಪಾಖ್ಯಾನದ ಕುರಿತು ಪ್ರವಚನ ಅನುಗ್ರಹಿಸಿದರು. ನಮ್ಮ ಏಳಿಗೆ ಮತ್ತು ಪತನದ ಲಕ್ಷಣಗಳು ನಮ್ಮ ಬುದ್ಧಿಯಲ್ಲೇ […] The post ನವರಾತ್ರ ನಮಸ್ಯಾ | ಕೋಲಿನಿಂದಲ್ಲ, ಬುದ್ಧಿಯ ಬದಲಾವಣೆಯಿಂದಲೇ ದಂಡನೆ; ದೇವರ ಅನುಗ್ರಹದ ರಹಸ್ಯ ಬಿಚ್ಚಿಟ್ಟ ರಾಘವೇಶ್ವರ ಶ್ರೀ appeared first on ONLINE.

ಸ್ಟಿಂಗ್ ಆಪರೇಷನ್: ತನಿಖೆಯಿಂದ ಹಿಂಜರಿಯುವ ಪೊಲೀಸರನ್ನ ವಜಾಮಾಡಿ- ಮಾಜಿ ಸಚಿವ ಹೆಚ್ ಕೆ ಪಾಟೀಲ್

ಗದಗ, ಅಕ್ಟೋಬರ್,19,2026 (www.justkannada.in):  ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಸ್ಟಿಂಗ್ ಆಪರೇಷನ್  ಸಂಬಂಧ ತನಿಖೆಯಿಂದ ಹಿಂಜರಿಯುವ ಪೊಲೀಸರನ್ನ ವಜಾಮಾಡಬೇಕು ಎಂದು ಮಾಜಿ ಸಚಿವ ಹೆಚ್ ಕೆ ಪಾಟೀಲ್ ತಿಳಿಸಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್ ಕೆ ಪಾಟೀಲ್, ಸ್ಟಿಂಗ್ ಅಪರೆಷನ್ ಅನ್ನೋದು ಅಸಹ್ಯಕರ ಶಬ್ದವಾಗಿದೆ. ಹೆಚ್ ಕೆ ಪಾಟೀಲ್  ಜನರಲ್ಲಿ ಕೀಳು ಅಭಿರುಚಿ ಉಂಟು ಮಾಡುವಂತಹ ಶಬ್ದವಾಗಿದೆ. ಸತ್ಯಾಸತ್ಯತೆ ಬಗ್ಗೆ ತನಿಖೆಯಾಗಲಿ. ಕೆಲವು ನಾಯಕರ ಚಾರಿತ್ರಿಕ ತೆಜೋವಧೆ ಮಾಡುತ್ತಿದ್ದಾರೆ ಇದರಿಂದ ಸಮಾಜಕ್ಕೆ ಏನು ಲಾಭ ಇಲ್ಲ […]

ದಸರಾ ಹಬ್ಬದ ವಿಡಿಯೋ ಮಾಡಿ, ಬಹುಮಾನ ಗೆಲ್ಲಿ: ರೀಲ್ಸ್ ಪ್ರಿಯರಿಗೆ ಸರ್ಕಾರದ ಭರ್ಜರಿ ಆಫರ್

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮವನ್ನು ಸಾಮಾಜಿಕ ಜಾಲತಾಣಗಳಲ್ಲಿ ಮತ್ತಷ್ಟು ಜನಪ್ರಿಯಗೊಳಿಸಲು ರಾಜ್ಯ ಸರ್ಕಾರ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಹೌದು! ದಸರಾ ಉತ್ಸವದ ಸೊಬಗು, ಜಂಬೂ ಸವಾರಿ, ಕಣ್ಮನ ಸೆಳೆಯುವ ವಿದ್ಯುತ್ ದೀಪಾಲಂಕಾರ ಹಾಗೂ ಆಹಾರ ಮೇಳದ ವಿಶೇಷ ಕ್ಷಣಗಳನ್ನು ಸೆರೆಹಿಡಿದು ರೀಲ್ಸ್ ಮಾಡುವವರಿಗೆ ಆಕರ್ಷಕ ಬಹುಮಾನ ನೀಡುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ. ಈ ಮೂಲಕ ಯುವಜನರು ದಸರಾ ಸಂಭ್ರಮದಲ್ಲಿ ಸೃಜನಾತ್ಮಕವಾಗಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, […] The post ದಸರಾ ಹಬ್ಬದ ವಿಡಿಯೋ ಮಾಡಿ, ಬಹುಮಾನ ಗೆಲ್ಲಿ: ರೀಲ್ಸ್ ಪ್ರಿಯರಿಗೆ ಸರ್ಕಾರದ ಭರ್ಜರಿ ಆಫರ್ appeared first on ONLINE.

ದಾವಣಗೆರೆ ವಿಶ್ವವಿದ್ಯಾನಿಲಯ|ಸಮಾಜಮುಖಿ ವೃತ್ತಿ ಕೌಶಲ್ಯ ಅಗತ್ಯ: ಪ್ರೊ.ಗೋಪಿನಾಥ

ದಾವಣಗೆರೆ : ಪ್ರಸ್ತುತ ಮಾರುಕಟ್ಟೆಯ ಬೇಡಿಕೆ, ವೃತ್ತಿಗೆ ಅಗತ್ಯವಿರುವ ಕೌಶಲ್ಯಗಳನ್ನು ರೂಢಿಸಿಕೊಂಡು,ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳುವ ಮೂಲಕ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳುವುದೇ ನಿಜವಾದ ಸಾಧನೆಯಾಗಿದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯ ಜೈವಿಕ ತಂತ್ರಜ್ಞಾನ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಎಸ್.ಎಂ. ಗೋಪಿನಾಥ್ ಸಲಹೆ ನೀಡಿದರು. ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪರಿಸರ ವಿಜ್ಞಾನ ಅಧ್ಯಯನ ವಿಭಾಗದ ಹಳೆಯ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ತಾಪಮಾನ ಏರಿಕೆ, ಪರಿಸರ ನಾಶ ಹಾಗೂ ಹವಾಮಾನ ವೈಪರೀತ್ಯಗಳ ನಿವಾರಣೆಗೆ ಪರ್ಯಾಯ ಪರಿಹಾರಗಳತ್ತ ಆದ್ಯತೆ ನೀಡುವುದು ಮುಖ್ಯ. ಈ ನಿಟ್ಟಿನಲ್ಲಿ ಹಳೇ ವಿದ್ಯಾರ್ಥಿಗಳು ತಮ್ಮ ವೃತ್ತಿಯಲ್ಲಿ ಶೋಧ ನಡೆಸಬೇಕು ಎಂದು ಹೇಳಿದರು. ವಿದ್ಯಾರ್ಥಿಗಳಲ್ಲಿ ಜ್ಞಾನಶಕ್ತಿ,ಬೌದ್ಧಿಕ ಮಟ್ಟ ಒಂದೇ ಮಟ್ಟದಲ್ಲಿರುತ್ತದೆ.ಆದರೆ,ಅದನ್ನು ಹೇಗೆ ಬಳಸಿಕೊಳ್ಳುಲಾಗುತ್ತದೆ ಎಂಬುದರ ಮೇಲೆ ಅವರ ಸಾಮರ್ಥ್ಯ ವನ್ನು ಗುರುತಿಸಲಾಗುತ್ತದೆ. ಜಾಗತಿಕ ಮಟ್ಟದ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡು ಮುನ್ನಡೆಯಲು [...]