ಕಿರಣ್ ಕುಮಾರ್ ಮಂಡ್ಯ ಜಿಲ್ಲೆಯು ಸಕ್ಕರೆಯ ನಾಡೆಂದು ಪ್ರಸಿದ್ಧವಾಗಿದ್ದು, ಇತಿಹಾಸ ಮತ್ತು ಸಂಸ್ಕೃತಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಈ ಜಿಲ್ಲೆಗೆ ಸಂಬಂಧಿಸಿದ ಎಪಿಗ್ರಾಪಿಯ ಕರ್ನಾಟಕ ಸಂಪುಟ ಆರು ಮತ್ತು ಏಳರಲ್ಲಿ 1065 ದಾಖಲಾಗಿವೆ. ಅದರಲ್ಲಿ ಹೊಸದಾಗಿ ಕೃಷ್ಣರಾಜಪೇಟೆ ತಾಲೂಕು 50 ಶಾಸನಗಳು ನಾಗಮಂಗಲ ತಾಲೂಕು 11 ಶಾಸನಗಳು, ಮಂಡ್ಯ ತಾಲೂಕು 5 ಶಾಸನಗಳು, ಮದ್ದೂರು ತಾಲೂಕು 03 ಶಾಸನಗಳು, ನನ್ನ ಸಂಶೋಧನೆಯಲ್ಲಿ ಒಟ್ಟು ಇದರಲ್ಲಿ 31 ಶಾಸನಗಳು ದಾಖಲಾಗಿವೆ. ಕಿರಣ್ ಕುಮಾರ್ ಆರ್, ಸಹಾಯಕ ಪ್ರಾಧ್ಯಾಪಕನಾಗಿ […]
The post ಮಂಡ್ಯ ಜಿಲ್ಲೆಯಲ್ಲಿ ಪ್ರಾಚೀನ ಕಾಲದ ವೀರಗಲ್ಲು ಶಾಸನ ಪತ್ತೆ appeared first on nudikarnataka.
ಕಿರಣ್ ಕುಮಾರ್
ಮಂಡ್ಯ ಜಿಲ್ಲೆಯು ಸಕ್ಕರೆಯ ನಾಡೆಂದು ಪ್ರಸಿದ್ಧವಾಗಿದ್ದು, ಇತಿಹಾಸ ಮತ್ತು ಸಂಸ್ಕೃತಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಈ ಜಿಲ್ಲೆಗೆ ಸಂಬಂಧಿಸಿದ ಎಪಿಗ್ರಾಪಿಯ ಕರ್ನಾಟಕ ಸಂಪುಟ ಆರು ಮತ್ತು ಏಳರಲ್ಲಿ 1065 ದಾಖಲಾಗಿವೆ. ಅದರಲ್ಲಿ ಹೊಸದಾಗಿ ಕೃಷ್ಣರಾಜಪೇಟೆ ತಾಲೂಕು 50 ಶಾಸನಗಳು ನಾಗಮಂಗಲ ತಾಲೂಕು 11 ಶಾಸನಗಳು, ಮಂಡ್ಯ ತಾಲೂಕು 5 ಶಾಸನಗಳು, ಮದ್ದೂರು ತಾಲೂಕು 03 ಶಾಸನಗಳು, ನನ್ನ ಸಂಶೋಧನೆಯಲ್ಲಿ ಒಟ್ಟು ಇದರಲ್ಲಿ 31 ಶಾಸನಗಳು ದಾಖಲಾಗಿವೆ.
ಕಿರಣ್ ಕುಮಾರ್ ಆರ್, ಸಹಾಯಕ ಪ್ರಾಧ್ಯಾಪಕನಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೆ ಆರ್ ಪೇಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಮಂಡ್ಯ ಜಿಲ್ಲೆಯ ಸ್ಮಾರಕ ಶಿಲ್ಪಗಳು ಎಂಬ ಪ್ರಬಂಧ ವಿಷಯಕ್ಕೆ ಸಂಬಂಧಿಸಿದಂತೆ, ಸಂಶೋಧನಾ ವಿದ್ಯಾರ್ಥಿಯಾಗಿ ಮೈಸೂರು ವಿಶ್ವವಿದ್ಯಾನಿಲಯದ ಅಡಿಯಲ್ಲಿ ಡಾ. ಸಿ.ಇ ಲೋಕೇಶ್ ಪ್ರಾಧ್ಯಾಪಕರು ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗ ಮಹಾರಾಜ ಕಾಲೇಜು ಇವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸುತ್ತಿದ್ದೇನೆ. ಸ್ಮಾರಕ ಶಿಲ್ಪಗಳಿಗೆ ಸಂಬಂಧಿಸಿದಂತೆ ಅಪ್ರಕಟಿತ ವೀರಗಲ್ಲು ಶಾಸನಗಳು ಮಂಡ್ಯ ಜಿಲ್ಲೆಯಲ್ಲಿ ಒಟ್ಟು ಗಂಗರ ಕಾಲದ 13 ಶಾಸನಗಳು, ಹೊಯ್ಸಳರ 13 ಶಾಸನಗಳು ವಿಜಯನಗರ ಕಾಲದ 2 ಶಾಸನಗಳು, ನೊಳಂಬರ -1, ಚೋಳರ 2 ಶಾಸನಗಳು ( ಇತರೆ ಶಾಸನಗಳು ಹೊರತುಪಡಿಸಿ ) ಪತ್ತೆಯಾಗಿವೆ.
ಕೃಷ್ಣರಾಜಪೇಟೆಯಲ್ಲಿ ಕುಂದೂರು ಬಡಾವಣೆ, ರಾಮಚಂದ್ರಣ್ಣ ಅವರ ಹೊಲದಲ್ಲಿ ಈ ವೀರಗಲ್ಲು ಶಾಸನವು ಪುಬ್ಬಿಗೆಯ ಮಹಾಸಾಮನ್ತನು ಊರಿನ ಮೇಲೆ ದಾಳಿ ಮಾಡಿದಾಗ (ಊರಿನ ಹೆಸರು ಅಸ್ಪಷ್ಟ) ಉತ್ತವಗಾವುಣ್ಡ ಮತ್ತು ಸತ್ತಿಯರಸನು ಹೋರಾಡಿ ವೀರಮರಣ ಹೊಂದಿದ ಮಾಹಿತಿ ನೀಡುತ್ತದೆ. ಕಾಲ: 8ನೇ ಶತಮಾನ, ಬೇಡದ ಹಳ್ಳಿಯ ಗಂಗರ ಸ್ವಸ್ತಿಶ್ರೀ ಸತ್ಯವಾಕ್ಯ ಕೊಂಗುಣಿವರ್ಮ್ಮ ಧರ್ಮ್ಮ ಮಹಾರಾಜ (ಮೇಲ್ಭಾಗದ ಅಕ್ಷರಗಳು ಸವೆದಿವೆ,)ಗಂಗರಾಜನ ಬಿರುದಾವಳಿಗಳನ್ನು ತಿಳಿಸುತ್ತಿದೆ.
(9ನೇ ಶತಮಾನ) ಹಳೆ ನಂದಿಪುರ ಗಂಗರ ಕಾಲದ ತುರುಗೋಳು ಹೋರಾಟದ ಬಗ್ಗೆ ತಿಳಿಸುವ ಶಾಸನ(ಅಕ್ಷರಗಳು ಸವೆದಿವೆ,) ಹೊನ್ನೇನಹಳ್ಳಿ ಹೊಯ್ಸಳರ ವೀರಗಲ್ಲು ಕೆತ್ತಿದ ಅವರ ಹೆಸರು ಜವನೂಜ ಓಯ್ದ ,(12 ನೇಶತಮಾನ) ಕೋಟ ಹಳ್ಳಿ ಯುದ್ಧದ ಬಗ್ಗೆ ತಿಳಿಸುವ ಹೊಯ್ಸಳರ ಕಾಲದ ವೀರಗಲ್ಲು ಶಾಸನ,(12 ನೇಶತಮಾನ) ರಾಜನಹಳ್ಳಿ ಯುದ್ಧದ ಬಗ್ಗೆ ತಿಳಿಸುವ ಹೊಯ್ಸಳರ ಶಾಸನ (ಅಕ್ಷರಗಳು ಸವೆದಿವೆ) ಅಲೇನ ಹಳ್ಳಿ,ಯುದ್ಧದ ಬಗ್ಗೆ ತಿಳಿಸುವ ಹೊಯ್ಸಳರ ಶಾಸನ (ಅಕ್ಷರಗಳು ಸವೆದಿವೆ), ಮಾವಿನಕೆರೆ, ಹೊಯ್ಸಳರ ಕಾಲದ, ಬೋಳಮಾರನಹಳ್ಳಿ ಎರಡು ವಿಜಯನಗರ ಕಾಲದ ಶಾಸನಗಳು ಇತರೆ ಶಾಸನಗಳಾಗಿವೆ.
15-16 ನೇ ಶತಮಾನ, ಶ್ರೀ ರಂಗಪಟ್ಟಣ ಅಲಗೋಡು ತುರುಗೋಳ್ ಶಾಸನ ಹೊಯ್ಸಳರ ಕಾಲದ ಸಿದ್ದೇಶ್ವರ ದೇವಾಲಯದ ಹಿಂಭಾಗ ಇರುವ ಶಾಸನ.(12ನೇಶತಮಾನ) ನಾಗಮಂಗಲದಲ್ಲಿ ಹಿಂದೆ ಪ್ರಕಟಗೊಂಡಿದ್ದ ಶಾಸನ ಹೊರತುಪಡಿಸಿ ಹೊಸದಾಗಿ ಅರೆಕೆರೆ ಹತ್ತಿರ ಇರುವ ದೇವರಾಜಪ್ಪ ಹೊಲದಲ್ಲಿ ಗಂಗರ ಎರೆಯಪ್ಪನ ಆಳ್ವಿಕೆ ಕಾಲದ ತುರುಗೋಳ್ ಶಾಸನ,(10ನೇಶತಮಾನ) ಮೂಡಲ ಮೆಲ್ಲಹಳ್ಳಿ ಗಂಗರ ಕಾಲದ ರುಕ್ಕಮ್ಮನ ಹೊಲದಲ್ಲಿ ತುರುಗೋಳ್ ಶಾಸನ ತುಟಿತಗೊಂಡಿದೆ. ಕೊಣನೂರು ಶಿವ ದೇವಾಲಯದ ಹತ್ತಿರ ಇರುವ ವೀರರ ಗುಡಿಯಲ್ಲಿ ಯುದ್ಧದ ಸನ್ನಿವೇಶ ತಿಳಿಸುವ ಹೊಯ್ಸಳರ ಕಾಲದ ಶಾಸನಗಳು ಕಂಡು ಬಂದಿವೆ.
ಶೆಟ್ಟಿಹಳ್ಳಿ ಗಂಗರ ತುರುಗೋಳ್ ಶಾಸನ ತುಟಿತಗೊಂಡಿದೆ. ಹಳ್ಳದ ಹೊಸಳ್ಳಿ ಹೊಯ್ಸಳ ಕಾಲದ ವೀರಗಲ್ಲು ಶಾಸನ ದೊರಕಿದೆ. ಮದ್ದೂರು ಹೆಬ್ಬೆರಳು ಶಾಸನ ನಳಂಬ ಗಂಗ ಚೋಳರ ಹೋರಾಟ ತಿಳಿಸುವ ಶಾಸನ,.(9ನೇ ಶತಮಾನ) ಹುಲಗನಹಳ್ಳಿ ಚೋಳರ ತಮಿಳು ವೀರಗಲ್ಲು ಶಾಸನ ,(10ನೇಶತಮಾನ) ಚಿಕ್ಕ ಅರಸೀಕೆರೆ ಹುಲಿ ಬೇಟೆ ಶಾಸನ ಕೆಲವೊಂದು ಅಕ್ಷರಗಳು ಮಾತ್ರ ಇವೆ, ಮಣಿಸಿಗೆರೆ ಗಂಗರ ಕಾಲದ ತುರುಗೋಳ್ ಶಾಸನ, ತುಟಿತಗೊಂಡಿದೆ.
ಮಂಡ್ಯ ಯಲೆಯೂರಿನ ವಿಜಯನಗರ ಕಾಲದ 15,16ನೇ ಈ ಶಾಸನವು ವಿಜಯನಗರದ ರಾಜ ಬುಕ್ಕರಾಯನು ಪೃಥ್ವಿರಾಜ್ಯವನ್ನು ಆಳುತ್ತಿದ್ದ ಸಮಯದಲ್ಲಿ ಹದುನಾಡ ಮಹಾಪ್ರಭು ಎಲೆಯೂರ ಚೊಕ್ಕಣ್ಣ, ಮದರಣ್ಣ, ಹೊನ್ನಪ್ಪ, ಬೋದಪಣ್ಣನ ಮಗ ಮಂಚಣ್ಣ ಈ ನಾಲ್ಕು ಜನ ವೀರರು ಚಿಕ್ಕತಮ್ಮ ಎಂಬುವವರ ವಿರುದ್ಧದ ಹೋರಾಟದಲ್ಲಿ ವೀರಮರಣ ಹೊಂದಿದ್ದು ಇವರಿಗೆ ನಾಗದೇವನ ಮಗ ಮಾದೇನಾಯ್ಕನು ವೀರಗಲ್ಲು ಹಾಕಿಸಿರುವ ಮಾಹಿತಿ ನೀಡುತ್ತದೆ. ಇನ್ನೊಂದು ಶಾಸನ ಯೆಲೆಯೂರ ಬೊಮ್ಮಗೌಡನ ಮಗ ಎಕ್ಕರಸಗೌಡನು ವೀರಮರಣ ಹೊಂದಿದ ಮಾಹಿತಿ ಆದರೆ ಯಾವ ಕಾರಣಕ್ಕಾಗಿ ವೀರಮರಣ ಹೊಂದಿದರು ಎಂಬುದನ್ನು ಶಾಸನದಲ್ಲಿ ದಾಖಲಿಸಿಲ್ಲ. ಇದೇ ಊರಿನಲ್ಲಿ ಗಂಗರ ಕಾಲದ ಶಾಸನ ಮಣ್ಣಿನಲ್ಲಿ ತುಟಿತಗೊಂಡಿದ್ದು ಕೆಲವೇ ಕೆಲವು ಅಕ್ಷರಗಳು ಕಾಣುತ್ತಿವೆ.
ಸುಂಡಹಳ್ಳಿ ಗಂಗರ ಕಾಲದ ಈ ಶಾಸನವು ಮಹಾಮಂಡಳೇಶ್ವರ ತ್ರಿಭುವನಮಲ್ಲ ವೀರಬೆಲ್ಲದ ದೇವರ ಅಳ್ವಿಕೆಯ ಸಮಯದಲ್ಲಿ ಶಕವರ್ಷ 1107ನೇ ಅಂದರೆ ಕ್ರಿ ಶ 1185ಲ್ಲಿ ಹೆಣ್ಣನೂರಿನ ಹನೆಯಚಾರಿಯ ಮಗನಾದ ಗಂಗಚಾರಿಯು ವೈರಿಗಳು ಗ್ರಾಮದ ಹಸುಗಳನ್ನು ಕದ್ದೊಯ್ಯುತ್ತಿದ್ದಾಗ ಅವರೊಂದಿಗೆ ಹೋರಾಡಿ ಹಲವರನ್ನು ಸಾಯಿಸಿ ಹಸುಗಳನ್ನು ಮರಳಿ ತಂದು ವೀರಕಲಿಯಾಗಿ ಸ್ವರ್ಗಲೋಕಕ್ಕೆ ಹೋದ ಮಾಹಿತಿ ನೀಡುತ್ತದೆ.
ಪಣಕನಹಳ್ಳಿ ವಿಜಯನಗರ ಕಾಲದ ವೀರಗಲ್ಲು ಶಾಸನ ಯುದ್ಧದ ಮಾಹಿತಿಯನ್ನು ನೀಡುವ 15 16ನೇ ಶತಮಾನದ ಶಾಸನ. ಮಾಡ್ಲಾ ಹೊಯ್ಸಳರ ಕಾಲದ ತುರುಗೋಳ್ ಶಾಸನ ತೂಚಿತಗೊಂಡಿದೆ. ಬೇಬಿ ಗ್ರಾಮ ಬಸವರಾಳು ಹೋಬಳಿಯಲ್ಲಿ ಗಂಗರ ಕಾಲದ 9ನೇ ಶತಮಾನದ ಶಾಸನ ತುಟಿತಗೊಂಡಿದೆ ಅಕ್ಷರಗಳ ಆಧಾರದ ಮೇಲೆ ತಿಳಿಸಬಹುದು ಅದೇ ಗ್ರಾಮದಲ್ಲಿ ಹೊಯ್ಸಳರ ಕಾಲದ ಯುದ್ಧದ ಸನ್ನಿವೇಶ ತಿಳಿಸುವ ಶಾಸನ.
ಕೃಷ್ಣರಾಜಪೇಟೆಯಲ್ಲಿ ಸಾಸಲು ಗ್ರಾಮದಲ್ಲಿ ಗಂಗರ ಕಾಲದ 9-10ನೇ ಶತಮಾನಕ್ಕೆ ಸೇರಿದ ಎರಡು ಶಾಸನಗಳು ದೊರಕಿದ್ದು ಪುರಾತತ್ವ ಇಲಾಖೆಯವರು ದಾಖಲು ಮಾಡಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ವೀರಗಲ್ಲು ಶಾಸನಗಳು ಸುಮಾರು 130ಕ್ಕೂ ಹೆಚ್ಚು ಶಾಸನಗಳು ದೊರಕುತ್ತಿದ್ದು ಸ್ಥಳೀಯ ಇತಿಹಾಸವನ್ನು ತಿಳಿಸುವ ಸ್ಮಾರಕಗಳಿಗೆ ಜೀವ ಬಂದಂತಾಗಿದೆ. ಶಾಸನಗಳು ಸಾಕಷ್ಟು ತುಟಿತಗೊಂಡಿವೆ ಕೆಲವೇ ಕೆಲವು ಅಕ್ಷರಗಳು ಸಿಗುವುದರಿಂದ ಮಾಹಿತಿಯನ್ನು ಸಂಪೂರ್ಣವಾಗಿ ಅರ್ಥೈಸಲು ಸಾಧ್ಯವಾಗುವುದಿಲ್ಲ ಆದರೂ ಲಿಪಿ ಆಧಾರದ ಮೇಲೆ ಯಾವ ಕಾಲಕ್ಕೆ ಸೇರಿದ್ದು ಎಂಬ ಮಾಹಿತಿಯನ್ನು ತಿಳಿಸುವುದರಿಂದ ನಿಖರವಾದ ಕಾಲಮಾನವನ್ನು ಹೇಳಲು ಸಹಕಾರಿಯಾಗಿದೆ.
ಶಾಸನ ಓದಲು ಸಹಕರಿಸಿದ ಶಶಿಕುಮಾರ್ ಸಂಶೋಧನಾ ವಿದ್ಯಾರ್ಥಿ ತುಮಕೂರು ವಿಶ್ವವಿದ್ಯಾಲಯ. ಕ್ಷೇತ್ರ ಕಾರ್ಯದಲ್ಲಿ ಸಹಕರಿಸಿದ ಡಾ.ಸಂತೆಬಾಚಳ್ಳಿ ನಂಜುಂಡಸ್ವಾಮಿ, ಡಾ. ಶಿವರಾಮ್ ಸಹಪ್ರಾಧ್ಯಾಪಕ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹವ್ಯಾಸಿ ಸಂಶೋಧಕರಾದ ಕಲೀಂ ಉಲ್ಲಾ ಹಾಗೂ ಸ್ನೇಹಿತರಾದ ಸತೀಶ್ ಸಹಾಯಕ ಪ್ರಾಧ್ಯಾಪಕ, ಚನ್ನಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಿಗೆ ಧನ್ಯವಾದ ತಿಳಿಸುತ್ತೇನೆ.
The post ಮಂಡ್ಯ ಜಿಲ್ಲೆಯಲ್ಲಿ ಪ್ರಾಚೀನ ಕಾಲದ ವೀರಗಲ್ಲು ಶಾಸನ ಪತ್ತೆ appeared first on nudikarnataka.
Previous Article
ಮಂಡ್ಯ | ಸಣ್ಣ, ಅತಿ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಿ : ಡಾ.ಕುಮಾರ
Next Article
ಸುದೀರ್ಘ ಸಿಎಂ ದಾಖಲೆ: ಅರಸು ಅವರನ್ನ ಸ್ಮರಿಸಿ ಕಾಂಗ್ರೆಸ್ ಗೆ ಕುಟುಕಿದ ಬಿವೈ ವಿಜಯೇಂದ್ರ