ಮೈಸೂರು,ಜನವರಿ,8,2026 (www.justkannada.in): ಮೈಸೂರು ತಾಲ್ಲೂಕು ಕಚೇರಿಗೆ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ದಿಢೀರ್ ಭೇಟಿ ನೀಡಿದರು. ಮೈಸೂರಿನ ಮಿನಿ ತಹಶಿಲ್ದಾರ್ ಕಚೇರಿಯಲ್ಲಿ ಕೆಲಸಗಳಲ್ಲಿ ಲಂಚ , ಭ್ರಷ್ಟಾಚಾರ, ಜನರಿಂದ ಹಣ ಸುಲಿಗೆ ಮಾಡುವ ಆರೋಪ ಮತ್ತು ವಿಧವಾ ವೇತನ, ಪಿಂಚಣಿ, ವೃದ್ಧಾಪ್ಯ ವೇತನ ಅರ್ಜಿ, ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ ಪಡೆಯಲು ಹಣಕ್ಕೆ ಬೇಡಿಕೆ ಇಡುತ್ತಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸಂಸದ ಯದುವೀರ್ ಇಂದು ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. […]
The post ತಾಲ್ಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿದ ಸಂಸದ ಯದುವೀರ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.
ಮೈಸೂರು,ಜನವರಿ,8,2026 (www.justkannada.in): ಮೈಸೂರು ತಾಲ್ಲೂಕು ಕಚೇರಿಗೆ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ದಿಢೀರ್ ಭೇಟಿ ನೀಡಿದರು.
ಮೈಸೂರಿನ ಮಿನಿ ತಹಶಿಲ್ದಾರ್ ಕಚೇರಿಯಲ್ಲಿ ಕೆಲಸಗಳಲ್ಲಿ ಲಂಚ , ಭ್ರಷ್ಟಾಚಾರ, ಜನರಿಂದ ಹಣ ಸುಲಿಗೆ ಮಾಡುವ ಆರೋಪ ಮತ್ತು ವಿಧವಾ ವೇತನ, ಪಿಂಚಣಿ, ವೃದ್ಧಾಪ್ಯ ವೇತನ ಅರ್ಜಿ, ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ ಪಡೆಯಲು ಹಣಕ್ಕೆ ಬೇಡಿಕೆ ಇಡುತ್ತಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸಂಸದ ಯದುವೀರ್ ಇಂದು ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ಮಾತನಾಡಿದ ಸಂಸದ ಯದುವೀರ್, ಅಧಿಕಾರಿಗಳು ಉಡಾಫೆಯಿಂದ ಕೆಲಸ ಮಾಡುವುದು ಬೇಕಾಗಿಲ್ಲ. ರೆವಿನ್ಯು ಇಲಾಖೆಯಲ್ಲಿ ನಡೆಯುತ್ತಿರುವ ಅಕ್ರಮ ಕುರಿತು ಗಮನಕ್ಕೆ ತಂದಿರುವೆ. ಜನಸಾಮಾನ್ಯರ ಕೆಲಸ ಮಾಡಿ ಎಂದು ಸೂಚನೆ ನೀಡಿರುವೆ. ಸ್ಥಳೀಯ ಸಂಸ್ಥೆ ಚುನಾವಣೆ ನಡೆಯದೆ ಇರುವುದು ಅಕ್ರಮ ನಡೆಯಲು ಹೆಚ್ಚು ಕಾರಣ. ಅಭಿವೃದ್ಧಿ ಕೆಲಸ ನಡೆಸಲು ಸಾಕಷ್ಟು ತೊಡಕು ಉಂಟಾಗುತ್ತಿದೆ. ಗ್ರೇಟರ್ ಮೈಸೂರು ಮಾಡುವ ನೆಪದಲ್ಲಿ ಚುನಾವಣೆ ಮಾಡುತ್ತಿಲ್ಲ. ಇತ್ತ ಗ್ರೇಟರ್ ಸಭೆಯೂ ಮಾಡುತ್ತಿಲ್ಲ, ಅತ್ತ ಚುನಾವಣೆಯನ್ನೂ ಕೂಡ ಮಾಡುತ್ತಿಲ್ಲ ಎಂದರು.
ಚಾಮರಾಜ ಕ್ಷೇತ್ರದ ವಿಚಾರದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ್ ಮತ್ತು ಮಾಜಿ ಶಾಸಕ ಎಲ್. ನಾಗೇಂದ್ರ ನಡುವೆ ಕಿತ್ತಾಟ ವಿಚಾರ ಕುರಿತು ಪ್ರತಿಕ್ರಿಯಿಸಿದ ಯದುವೀರ್, ನಮ್ಮ ಪಕ್ಷದಲ್ಲಿ ಸ್ಪಷ್ಟ ಪ್ರಕ್ರಿಯೆ ಇದೆ. ಯಾರು ಅರ್ಹರು ಅವರಿಗೆ ಟಿಕೆಟ್ ಕೊಡುತ್ತಾರೆ. ಯಾರಿಗೆ ಕೊಡುತ್ತಾರೆ ಅಂತ ಈಗಲೇ ಹೇಳಲು ಆಗಲಿಲ್ಲ. ಅಭಿಪ್ರಾಯ ವ್ಯಕ್ತಪಡಿಸಲು ಅವರಿಗೆ ಅರ್ಹತೆ ಇದೆ. ಅವರು ಅವರ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಎಂದರು.
ಎನ್.ಆರ್.ಮೊಹಲ್ಲಾ ಭಾಗದಲ್ಲಿ ಅಕ್ರಮ ಗಾಂಜಾ, ವೀಲಿಂಗ್ ನಡೆಯುತ್ತಿದೆ. ಪೊಲೀಸರ ಎದುರೇ ವೀಲಿಂಗ್ ಮಾಡುವುದು ಸರಿಯಲ್ಲ. ಬಳ್ಳಾರಿ, ಹುಬ್ಬಳ್ಳಿಯ ಗಲಭೆ ಪ್ರಕರಣ, ಮೈಸೂರಿನ ಉದಯಗಿರಿ ಠಾಣೆ ಮೇಲೆ ದಾಳಿ. ಮೈಸೂರು, ಬೆಂಗಳೂರಲ್ಲಿ ಡ್ರಗ್ಸ್ ಫ್ಯಾಕ್ಟರಿ ಹೀಗೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಪೊಲೀಸರ ಮೇಲೆ ಹಲ್ಲೆಯಾದರೆ ಜನಸಾಮಾನ್ಯರ ಗತಿ ಏನು? ಈ ಕುರಿತು ಸದನದಲ್ಲೂ ಕೂಡ ನಾನು ಚರ್ಚೆ ಮಾಡಿದ್ದೇನೆ. ಈ ಕುರಿತು ಸಿಎಂ ಸೇರಿ ಯಾರೂ ಕೂಡ ಚರ್ಚೆ ನಡೆಸುತ್ತಿಲ್ಲ. ಮಹಿಳೆಯ ಮೇಲಿನ ದೌರ್ಜನ್ಯ ಖಂಡಿಸುತ್ತೇನೆ. ಹಲ್ಲೆಗೆ ಒಳಗಾದ ಮಹಿಳೆ ಮೇಲೆಯೇ ಕೇಸ್ ಆಗಿದೆ. ಠಾಣೆಗೆ ಕರೆದುಕೊಂಡು ಹೋಗುವಾಗ ವಿವಸ್ತ್ರಗೊಳಿಸಿದ್ದಾರೆ. ಮಹಿಳೆ ಬಟ್ಟೆ ವಿವಸ್ತ್ರವನ್ನ ಆಕೆ ಮಾಡಿಕೊಂಡಿದ್ದಾಳೆ ಎಂಬ ವಿಷಯ, ಅದರ ಕುರಿತು ಸಮಗ್ರ ತನಿಖೆ ಆಗಲಿ. ಯಾರು ತಪ್ಪು ಮಾಡಿದ್ದಾರೆ ಎಂಬುದು ತಿಳಿಯುತ್ತದೆ ಎಂದು ಸಂಸದ ಯದುವೀರ್ ತಿಳಿಸಿದರು.
ಕಾವೇರಿ, ಕಪಿಲ, ಲಕ್ಷ್ಮಣತೀರ್ಥ ನದಿ ಕಲುಷಿತ ವಿಚಾರ, ನದಿಗಳ ಉಳಿವಿಗೆ ಪ್ರತಿಯೊಬ್ಬರು ಕೂಡ ಶ್ರಮಿಸಬೇಕು ಎಂದು ಯದುವೀರ್ ತಿಳಿಸಿದರು.
Key words: MP Yaduveer, surprise , visit , Mysore, taluk office
The post ತಾಲ್ಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿದ ಸಂಸದ ಯದುವೀರ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.
Previous Article
ಮದ್ದೂರು | ಪೊಲೀಸ್ ಕಾನ್‌ಸ್ಟೆಬಲ್ ಆತ್ಮಹತ್ಯೆ : ಸಹೋದ್ಯೋಗಿ ವಿರುದ್ದ ದೂರು ದಾಖಲು
Next Article
ಮಹಾರಾಷ್ಟ್ರ | ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಅಮಾನತ್ತಾದ 12 ಜನ ಕಾಂಗ್ರೆಸ್ ಕೌನ್ಸಿಲರ್ ಗಳು ಬಿಜೆಪಿಗೆ ಸೇರ್ಪಡೆ