ಧಾರವಾಡದಲ್ಲಿ ನೇಣು ಬಿಗಿದು ಸರ್ಕಾರಿ ನೌಕರನ ಆತ್ಮಹ*ತ್ಯೆ: ಸಾವಿನ ಹಿಂದಿನ ಕಾರಣ ನಿಗೂಢ

16 hours ago

7

0

ಹೊಸದಿಗಂತ ವರದಿ ಧಾರವಾಡ: ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಮದಿಹಾಳ ಬಡಾವಣೆಯಲ್ಲಿ ಶನಿವಾರ ನಡೆದಿದೆ. ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಕಲಾರಕೊಪ್ಪ ಗ್ರಾಮದ ನಿವಾಸಿ ರೇವಪ್ಪ ದುರದುಂಡಿ (35) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ಗುರುತಿಸಲಾಗಿದೆ. ಧಾರವಾಡ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ದ್ವಿತೀಯ ದರ್ಜೆಯ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ರೇವಪ್ಪ, ಮದಿಹಾಳದ ಬಡಾವಣೆಯ ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಈ ಕುರಿತು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

The post ಧಾರವಾಡದಲ್ಲಿ ನೇಣು ಬಿಗಿದು ಸರ್ಕಾರಿ ನೌಕರನ ಆತ್ಮಹ*ತ್ಯೆ: ಸಾವಿನ ಹಿಂದಿನ ಕಾರಣ ನಿಗೂಢ appeared first on ONLINE.

Click here to Read More
Previous Article
ಆಗುಂಬೆ ಸಮೀಪದ ಮಲ್ಲಂದೂರಿನಲ್ಲಿ ಕಾಡಾನೆ ಪ್ರತ್ಯಕ್ಷ: ಭತ್ತದ ಬೆಳೆ ನಾಶ, ಗ್ರಾಮಸ್ಥರಲ್ಲಿ ಆತಂಕ
Next Article
ಮನೆಯಲ್ಲಿ ಚಿರತೆಯ10 ಉಗುರುಗಳು ಪತ್ತೆ: ಅರಣ್ಯ ಇಲಾಖೆ ಬಲೆಗೆ ಬಿದ್ದ ವ್ಯಕ್ತಿ

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment