Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಧಾರ್ಮಿಕ ಆಚರಣೆಗಳಿಂದ ಧರ್ಮದ ಉಳಿವು ಸಾಧ್ಯ: ಓಂಕಾರ ಶಿವಾಚಾರ್ಯ ಸ್ವಾಮೀಜಿ

    3 days ago

    ದಾವಣಗೆರೆ: ಸನಾತನ ಧರ್ಮದಲ್ಲಿ ಪೂಜೆ ಪುನಸ್ಕಾರ ಎನ್ನುವುದು ಧರ್ಮದ ಸಾರಾಂಶವನ್ನು ಸಾರುವುದಕ್ಕಾಗಿ, ಇಂತಹ ಧಾರ್ಮಿಕ ಆಚರಣೆಗಳಿಂದ ಧರ್ಮದ ಉಳಿವು ಸಾಧ್ಯ ಎಂದು ಆವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮಿಗಳು ಹೇಳಿದರು. ನಗರದ ಅಂಬಾಭವಾನಿ ಕಲ್ಯಾಣ ಮಂಟಪದಲ್ಲಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗ್ರಾಮ ಸುಭೀಕ್ಷಿಗಾಗಿ ಸಾಮೂಹಿಕ ಸತ್ಯ ನಾರಾಯಣ ಸ್ವಾಮಿ  ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಸಂಸ್ಕಾರ ಬಹು ಮುಖ್ಯವಾದದ್ದು ಸಂಸ್ಕಾರದ ಆಧಾರದ ಮೇಲೆ ಮನುಷ್ಯನ ವ್ಯಕ್ತಿತ್ವ ನಿರ್ಧಾರವಾಗಿರುತ್ತದೆ, ಧರ್ಮಸ್ಥಳ […]

    ದಾವಣಗೆರೆ: ಸನಾತನ ಧರ್ಮದಲ್ಲಿ ಪೂಜೆ ಪುನಸ್ಕಾರ ಎನ್ನುವುದು ಧರ್ಮದ ಸಾರಾಂಶವನ್ನು ಸಾರುವುದಕ್ಕಾಗಿ, ಇಂತಹ ಧಾರ್ಮಿಕ ಆಚರಣೆಗಳಿಂದ ಧರ್ಮದ ಉಳಿವು ಸಾಧ್ಯ ಎಂದು ಆವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
     
    ನಗರದ ಅಂಬಾಭವಾನಿ ಕಲ್ಯಾಣ ಮಂಟಪದಲ್ಲಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗ್ರಾಮ ಸುಭೀಕ್ಷಿಗಾಗಿ ಸಾಮೂಹಿಕ ಸತ್ಯ ನಾರಾಯಣ ಸ್ವಾಮಿ  ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಸಂಸ್ಕಾರ ಬಹು ಮುಖ್ಯವಾದದ್ದು ಸಂಸ್ಕಾರದ ಆಧಾರದ ಮೇಲೆ ಮನುಷ್ಯನ ವ್ಯಕ್ತಿತ್ವ ನಿರ್ಧಾರವಾಗಿರುತ್ತದೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ನಡೆಸುವ ಧಾರ್ಮಿಕ ಕಾರ್ಯಕ್ರಮಗಳು ಜನರಲ್ಲಿ ಧಾರ್ಮಿಕತೆಯನ್ನು ಸಾರಲು ಸಹಾಯಕವಾಗುತ್ತವೆ, ಸತ್ಯ ನಾರಾಯಣಸ್ವಾಮಿ ಪೂಜೆ ಮಾಡುವುದರಿಂದ  ಸಂಕಷ್ಟಗಳೆಲ್ಲಾ ಪರಿಹಾರವಾಗಿ ಸುಖ ಸಂತೋಷದ ಕಡೆ ಜೀವನ ನಡೆಸುವಂತ ಶಕ್ತಿಯನ್ನು ಸ್ವಾಮಿ ಸತ್ಯ ನಾರಾಯಣ  ಕರುಣಿಸಲಿ ಎಂದು ಹೇಳಿದರು.
    seem1 dinamaana ads
     
    ಸಂಸ್ಥೆಯ ನಿರ್ದೇಶಕರಾದ ಲಕ್ಷ್ಮಣ್ ಎಂ ಮಾತನಾಡಿ, ಆಧುನಿಕತೆ ಹೆಚ್ಚಾದಂತೆ ಆಧುನಿಕ ಉಪಕರಣಗಳು ಹೆಚ್ಚಾಗುತ್ತಾ ಬಂದಿದೆ ಅದರಂತೆ ಎಷ್ಟು ಸುಲಭವಾಗಿ ಕೆಲಸ ಕಾರ್ಯಗಳು ಆಗುತ್ತದೆಯೋ ಅಷ್ಟು ಬೇಗ ಮನುಷ್ಯನ ಆಯಸ್ಸು ಕಡಿಮೆಯಾಗ್ತಾ ಬಂತು,ಆಧುನಿಕರಣ ಅವಶ್ಯಕತೆ ಆದರೆ ಮೂಲ ಆದರ್ಶಗಳನ್ನು ಮರೆಯಬಾರದು,ಸಮಯ ಎನ್ನುವುದು ಮನುಷ್ಯನ ಜೀವನದಲ್ಲಿ ಬಹು ಮುಖ್ಯವಾದದ್ದು ಸಮಯಕ್ಕೆ ಬೆಲೆಕೊಡುವುದು ಮನುಷ್ಯನ ಗೌರವಕ್ಕೆ ಒಂದೊಳ್ಳೆ ಸ್ಥಾನ ಸಿಗಲು ಸಾಧ್ಯ,ಅಗತ್ಯಕ್ಕಿಂತ ಯಾವುದೇ ಮನುಷನಲ್ಲಿ ಇದ್ದರೆ ಅದು ವಿಷವಾಗಿ ಕಾಣಿಸುತ್ತೆ,ಸಂಸ್ಕೃತಿ ಸಂಸ್ಕಾರ ಮಾನವೀಯತೆ ಮನುಷ್ಯನಿಗೆ ಬಹು ಅವಶ್ಯಕ ಅಂತಹ ಕಾರ್ಯಗಳನನ್ನು ಉಳಿಸಲು ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯು ಇಂತಹ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿದೆ ಎಂದರು.
     
     
    ಪತ್ರಕರ್ತ ಮಧುನಾಗರಾಜ್ ಕುಂದುವಾಡ ಮಾತನಾಡಿ, ಕೇವಲ ಆರ್ಥಿಕ ಸಹಕಾರವಷ್ಟೇ ಅಲ್ಲದೆ ಧಾರ್ಮಿಕ ಕಾರ್ಯಕ್ರಮಗಳಿಂದ ಧರ್ಮದ ಸಂರಕ್ಷಣೆ ಮಾಡಲಾಗುತ್ತಿದೆ, ಇಂದಿನ ಯುವ ಪೀಳಿಗೆಗೆ ಆದರ್ಶಗಳನ್ನ ಮಾದರಿಯಾಗಿ ನೀಡುವಂತಹ ಕೆಲಸ ಕಾರ್ಯಗಳನ್ನು ನಡೆಸುತ್ತಿರುವ ಧರ್ಮಸ್ಥಳ ಸಂಸ್ಥೆ ಹಾಗೂ ಧರ್ಮಧಿಕಾರಿಯವರ ನಡೆ ನಮಗೆಲ್ಲಾ ಮಾದರಿ ಎಂದು ತಿಳಿಸಿದರು.
     
    ಕಾರ್ಯಕ್ರಮದಲ್ಲಿ ಸಮಿತಿಯ ಕುಸುಮ ಶ್ರೇಷ್ಟಿ, ಯೋಜನಾಧಿಕಾರಿ ಶ್ರೀನಿವಾಸ್ ಬಿ ಎಂ,ಪೂಜಾ ಸಮಿತಿ ಅಧ್ಯಕ್ಷೆ ಕಮಲಾ,ಮಹಾನಗರ ಪಾಲಿಕೆ ಸದಸ್ಯರುಗಳಾದ ರೇಖಾ ಸುರೇಶ್, ಶಿವನಳ್ಳಿ ರಮೇಶ್, ಅಜಯ್,  ಮೇಲ್ವಿಚಾರಕ ಗುಣಾಕರ್,ಜನ ಜಾಗೃತಿ ಸದಸ್ಯರಾದ ಅಣಬೆರು ಮಂಜಣ್ಣ, ಹರೀಶ್,ಚೇತನಾ ಶಿವಕುಮಾರ್,ಕ ರಾ ರೈತ ಸಂಘ ಅಧ್ಯಕ್ಷ ವಿಶ್ವನಾಥ್,ಕೃಷಿ ಅಧಿಕಾರಿ ಪ್ರವೀಣ್,ಪೂಜಾ ಸಮಿತಿಯ ಪದಾಧಿಕಾರಿಗಳು,ಸೇವಾಪ್ರತಿನಿಧಿಗಳು, ಸದಸ್ಯರು ಉಪಸ್ಥಿತರಿದ್ದರು.
    job news dinamaana ads
    Click here to Read More
    Previous Article
    ಆರೋಗ್ಯ ತಪಾಸಣೆ ಶಿಬಿರ:ನಿಟುವಳ್ಳಿ ಪ್ರವೀಣ್ ಕುಮಾರ್ ರಿಂದ ಉಚಿತ ಔಷಧಿ ವಿತರಣೆ
    Next Article
    ಜ.13, 14ರಂದು ಜಿಲ್ಲಾ ಮಟ್ಟದ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆ : ವೀರೇಶ ಎಸ್.ಒಡೇನಪುರ

    Related ತಾಜಾ ಸುದ್ದಿ Updates:

    Are you sure? You want to delete this comment..! Remove Cancel

    Comments (0)

      Leave a comment