Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಅರಣ್ಯ ವಾಸಿಗಳ ಕಿರು ಉತ್ಪನ್ನ ಉದ್ಯಮಕ್ಕೆ ಉತ್ತೇಜನ : ಡಾ.ಕುಮಾರ

    3 days ago

    ಪರಿಶಿಷ್ಟ ಪಂಗಡ/ಅನುಸೂಚಿತ ಪಂಗಡ ಹಾಗೂ ಬುಡಕಟ್ಟು ಹಾಗೂ ಅರಣ್ಯವಾಸಿಗಳು ಪಾರಂಪರಿಕವಾಗಿ ಅರಣ್ಯದಲ್ಲಿ ವಾಸಿಸುತ್ತಿರುವ ಅರಣ್ಯ ವಾಸಿಗಳಿಗೆ ಸ್ವಾವಲಂಬಿಗಳಾಗುವ ದೃಷ್ಟಿಯಿಂದ ಅರಣ್ಯದಲ್ಲಿ ಬೆಳೆಯುವ ಕಿರು ಉತ್ಪನ್ನಗಳನ್ನು ತೆಗೆದು ಜೀವನೋಪಾಯಕ್ಕೆ ಅನುಕೂಲ ಮಾಡಿಕೊಡುವುದು ಉತ್ತಮ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು. ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದ್ಲಿ ಮಂಗಳವಾರ ಅನುಸೂಚಿತ ಪಂಗಡ ಮತ್ತು ಪಾರಂಪರಿಕ ಬುಡಕಟ್ಟು ಜಿಲ್ಲಾ ಸಮಿತಿಯ ಸಭೆ ನಡೆಸಿ ಅವರು ಮಾತನಾಡಿದರು. ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಅರಣ್ಯ ನಿವಾಸಿಗಳ ಜೀವನೋಪಾಯವನ್ನು ಸುಧಾರಿಸುವ ಉದ್ದೇಶದಿಂದ ಅರಣ್ಯ ಕಿರು ಉತ್ಪನ್ನಗಳ […]

    The post ಅರಣ್ಯ ವಾಸಿಗಳ ಕಿರು ಉತ್ಪನ್ನ ಉದ್ಯಮಕ್ಕೆ ಉತ್ತೇಜನ : ಡಾ.ಕುಮಾರ appeared first on nudikarnataka.



    ಪರಿಶಿಷ್ಟ ಪಂಗಡ/ಅನುಸೂಚಿತ ಪಂಗಡ ಹಾಗೂ ಬುಡಕಟ್ಟು ಹಾಗೂ ಅರಣ್ಯವಾಸಿಗಳು ಪಾರಂಪರಿಕವಾಗಿ ಅರಣ್ಯದಲ್ಲಿ ವಾಸಿಸುತ್ತಿರುವ ಅರಣ್ಯ ವಾಸಿಗಳಿಗೆ ಸ್ವಾವಲಂಬಿಗಳಾಗುವ ದೃಷ್ಟಿಯಿಂದ ಅರಣ್ಯದಲ್ಲಿ ಬೆಳೆಯುವ ಕಿರು ಉತ್ಪನ್ನಗಳನ್ನು ತೆಗೆದು ಜೀವನೋಪಾಯಕ್ಕೆ ಅನುಕೂಲ ಮಾಡಿಕೊಡುವುದು ಉತ್ತಮ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

    ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದ್ಲಿ ಮಂಗಳವಾರ ಅನುಸೂಚಿತ ಪಂಗಡ ಮತ್ತು ಪಾರಂಪರಿಕ ಬುಡಕಟ್ಟು ಜಿಲ್ಲಾ ಸಮಿತಿಯ ಸಭೆ ನಡೆಸಿ ಅವರು ಮಾತನಾಡಿದರು.

    ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಅರಣ್ಯ ನಿವಾಸಿಗಳ ಜೀವನೋಪಾಯವನ್ನು ಸುಧಾರಿಸುವ ಉದ್ದೇಶದಿಂದ ಅರಣ್ಯ ಕಿರು ಉತ್ಪನ್ನಗಳ (Minor Forest Produce) ಆಧಾರಿತ ಉದ್ಯಮಗಳಿಗೆ ಸರ್ಕಾರದಿಂದ ಉತ್ತೇಜನ ನೀಡಲಾಗುತ್ತಿದೆ ಎಂದರು.

    ಅರಣ್ಯ ಕಿರು ಉತ್ಪನ್ನಗಳಾದ ಜೇನುತುಪ್ಪ, ಬೆಲ್ಲೆಕಾಯಿ, ಆಮ್ಲೆ, ಸೋಪು ಕಾಯಿ, ಲಕ್ಕಿ, ಔಷಧೀಯ ಸಸ್ಯಗಳು, ಹುಲ್ಲು, ಬಿದಿರು ಮುಂತಾದವುಗಳ ಸಂಗ್ರಹ, ಮೌಲ್ಯವರ್ಧನೆ, ಸಂಸ್ಕರಣೆ ಹಾಗೂ ಮಾರುಕಟ್ಟೆ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಅರಣ್ಯ ನಿವಾಸಿಗಳಿಗೆ ಸ್ಥಿರ ಆದಾಯ ಕಲ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಕ್ರಮದಿಂದ ಅರಣ್ಯ ಸಂಪತ್ತಿನ ಸಂರಕ್ಷಣೆಯ ಜೊತೆಗೆ ಅರಣ್ಯ ನಿವಾಸಿಗಳ ಆರ್ಥಿಕ ಸ್ವಾವಲಂಬನೆ ಹೆಚ್ಚಾಗಲಿದೆ ಹಾಗೂ ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅರಣ್ಯ ನಿವಾಸಿಗಳು ಈ ಯೋಜನೆಯ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ ಎಂದರು.

    ಸುಮಾರು ವರ್ಷಗಳಿಂದ ಅರಣ್ಯದ ಮೇಲೆ ಅವಲಂಬಿತರರಾಗಿ ಅರಣ್ಯದ ಪ್ರದೇಶದಲ್ಲಿ ವಾಸಿಸುತ್ತಿರುವ ಅರಣ್ಯ ನಿವಾಸಿಗಳಿಗೆ ಅರಣ್ಯದಲ್ಲೇ ಸಿಗುವ ಕಿರುಉತ್ಪನ್ನಗಳನ್ನು ತೆಗೆಯಲು ನಿಯಮಗಳಲ್ಲಿ ಅವಕಾಶವಿರುವ ನಿಟ್ಟಿನಲ್ಲಿ ಈ ಬಗ್ಗೆ ಅವಕಾಶ ಮಾಡಿಕೊಡುವಲ್ಲಿ ನಿಯಮಾನುಸಾರ ಕ್ರಮವಹಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಯಿತು.

    ಅನುಸೂಚಿತ ಪಂಗಡ ಮತ್ತು ಪಾರಂಪರಿಕ ಬುಡಕಟ್ಟು ಜನಾಂಗದವರು ಅರಣ್ಯದಲ್ಲಿ ವಾಸಿಸುತ್ತಿರುವ ಮಂದಿಗೆ ಅರಣ್ಯ ಹಕ್ಕು ಪತ್ರ ನೀಡಲು ಕಾಯ್ದೆಯ ನಿಯಮಗಳಲ್ಲಿ ಅವಕಾಶವಿರುವ ರೀತ್ಯಾ ಒಟ್ಟು85 ಮಂದಿಗೆ ಅರಣ್ಯ ಹಕ್ಕು ಪತ್ರ ವಿತರಣೆ ಮಾಡಲು ಜರೂರಾಗಿ ಕ್ರಮ ವಹಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಯಿತು.

    75 ವರ್ಷಗಳಿಂದ ಸಾಕ್ಷ್ಯಗಳು ಮತ್ತು ದಾಖಲೆಗಳು ಇಲ್ಲದೆ ಇರುವ ಪ್ರಕರಣಗಳಲ್ಲಿ ಪುನಃ ಗ್ರಾಮ ಅರಣ್ಯ ಸಮಿತಿ ಮತ್ತು ಉಪವಿಭಾಗದ ಅರಣ್ಯ ಸಮಿತಿಗಳಲ್ಲಿ ಪ್ರಕರಣಗಳನ್ನು ಮರುಪರಿಶೀಲಿಸುವಂತೆ ಸೂಚಿಸಲಾಯಿತು.

    ಪಾರಂಪರಿಕ ಬುಡಕಟ್ಟು ಜನಾಂಗದವರು ಹಾಗೂ ಸೋಲಿಗ ಜನಾಂಗದವರು,  ಇತರೆ ಯಾವುದೇ ಜನಾಂಗದವರು ಅರಣ್ಯ ವಾಸಿಗಳಾಗಿದ್ದಲ್ಲಿ ಅವರಿಗೆ ಅರಣ್ಯದ ಕಿರು ಉತ್ಪನ್ನಗಳನ್ನು ತೆಗೆಯಲು ಅವಕಾಶ ನೀಡಿ ಸ್ವಾವಲಂಬಿಗಳಾಗಿ ಜೀವನ ಸಾಗಿಸುವಲ್ಲಿ ನೆರವು ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು.

    ಸಭೆಯಲ್ಲಿ ಉಪವಿಭಾಗಾಧಿಕಾರಿ ಶಿವಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶ್ರೀನಿವಾಸ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

    The post ಅರಣ್ಯ ವಾಸಿಗಳ ಕಿರು ಉತ್ಪನ್ನ ಉದ್ಯಮಕ್ಕೆ ಉತ್ತೇಜನ : ಡಾ.ಕುಮಾರ appeared first on nudikarnataka.

    Click here to Read More
    Previous Article
    ಮಾಜಿ ಸಂಸದೆಯ ಸಹೋದರನ ನಿವೇಶನ ಕಬಳಿಸಿದ ಭೂಗಳ್ಳರು: ಪ್ರಕರಣ ದಾಖಲು
    Next Article
    ನಮ್ಮಲ್ಲಿ ಯಾವುದೇ ಗೊಂದಲಗಳು ಇಲ್ಲ: ಹೈಕಮಾಂಡ್ ತೀರ್ಮಾನ ಅಂತಿಮ- ಸಿಎಂ ಸಿದ್ದರಾಮಯ್ಯ

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment