ಜೀವನದಲ್ಲಿ ಗುರಿ ಏನೇ ಇರಲಿ. ಅದನ್ನು ಪಡೆಯಲು ಶಿಸ್ತು ಇರಬೇಕು ಎಂದು ವಿದ್ಯಾರ್ಥಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಜೆ. ಶೋಭಾರಾಣಿ ಸಲಹೆ ನೀಡಿದರು. ಮಂಡ್ಯ ನಗರದ ಹೊರವಲಯದ ಜ್ಞಾನ ಸಾಗರ ಕ್ಯಾಂಪಸ್‌ನಲ್ಲಿರುವ ಮಾಂಡವ್ಯ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಬುಧವಾರ ನಡೆದ ೨೦೨೫-೨೬ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರಂಭ ಹಾಗೂ ಕಿರಿಯ ವಿದ್ಯಾರ್ಥಿಗಳಿಂದ ಹಿರಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹುಟ್ಟುತ್ತಲೇ ಯಾರೂ ದಡ್ಡರಲ್ಲ, ಬುದ್ಧಿವಂತರೂ ಅಲ್ಲ. ಶ್ರದ್ಧೆ ಮತ್ತು […]
The post ಜೀವನದ ಗುರಿ ಸಾಧಿಸಲು ವಿದ್ಯಾರ್ಥಿಗಳಿಗೆ ಶಿಸ್ತು ಮುಖ್ಯ : ಎಸ್ಪಿ ಶೋಭಾರಾಣಿ appeared first on nudikarnataka.
ಜೀವನದಲ್ಲಿ ಗುರಿ ಏನೇ ಇರಲಿ. ಅದನ್ನು ಪಡೆಯಲು ಶಿಸ್ತು ಇರಬೇಕು ಎಂದು ವಿದ್ಯಾರ್ಥಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಜೆ. ಶೋಭಾರಾಣಿ ಸಲಹೆ ನೀಡಿದರು.
ಮಂಡ್ಯ ನಗರದ ಹೊರವಲಯದ ಜ್ಞಾನ ಸಾಗರ ಕ್ಯಾಂಪಸ್‌ನಲ್ಲಿರುವ ಮಾಂಡವ್ಯ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಬುಧವಾರ ನಡೆದ ೨೦೨೫-೨೬ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರಂಭ ಹಾಗೂ ಕಿರಿಯ ವಿದ್ಯಾರ್ಥಿಗಳಿಂದ ಹಿರಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹುಟ್ಟುತ್ತಲೇ ಯಾರೂ ದಡ್ಡರಲ್ಲ, ಬುದ್ಧಿವಂತರೂ ಅಲ್ಲ. ಶ್ರದ್ಧೆ ಮತ್ತು ಗುರಿ ಇಟ್ಟುಕೊಳ್ಳಬೇಕು ಎಂದು ಹೇಳಿದರು.
ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಅದನ್ನು ಸಾಧಿಸುವ ಛಲ ಇರಬೇಕು. ನಮ್ಮ ಜೀವನವು ‘ಫಿನೆಕ್ಸ್’ ಪಕ್ಷಿಯಂತಿರಬೇಕು. ಸೋತರೂ ಮತ್ತೆ ಮತ್ತೆ ಎದ್ದು ಬರಬೇಕು. ಕಷ್ಟ ಮತ್ತು ಇಷ್ಟಪಟ್ಟು ವಿದ್ಯಾಭ್ಯಾಸ ಮಾಡಿದರೆ ಮುಂದೆ ಬರಬಹುದು. ಇಲ್ಲದಿದ್ದರೆ ನಿಮ್ಮ ಜೀವನ ನಶಿಸಲಿದೆ ಎಂದು ಎಚ್ಚರಿಕೆ ನೀಡಿದರು.
ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟರೆ ಕುದುರೆ ಮೇಲೆ ಹೋಗಬಹುದು. ಅದುಬಿಟ್ಟು ವಿದ್ಯಾರ್ಥಿ ದಿಸೆಯಲ್ಲೇ ಕುದುರೆ ಏರಲು ಹೋದರೆ ಮುಂದೆ ಕತ್ತೆ ರೀತಿ ದುಡಿಯಬೇಕಾಗುತ್ತದೆ. ಆದ್ದರಿಂದ ಕಷ್ಟಪಟ್ಟು ಮತ್ತು ಇಷ್ಟಪಟ್ಟು ವ್ಯಾಸಂಗ ಮಾಡಿ ನಿಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಹೇಳಿದರು.
ಅನುತ್ತೀರ್ಣರಾದರೆ ಮನೋರೋಗಕ್ಕೊಳಗಾಗುವುದು ಅಥವಾ ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ದಾರಿಯಲ್ಲ. ಅನುತ್ತೀರ್ಣರಾದರೆ ಛಲ ಮತ್ತು ಸ್ಫೂರ್ತಿ ಪಡೆಯಬೇಕು. ತಂದೆ-ತಾಯಿಗಳು ಮಕ್ಕಳಿಗೆ ಸ್ಫೂರ್ತಿ ತುಂಬಬೇಕು. ನಾನೂ ಸಹ ಎಸ್‌ಎಸ್‌ಎಲ್‌ಸಿಯಲ್ಲಿ ಅನುತ್ತೀರ್ಣನಾಗಿದ್ದೆ, ನಂತರ ಉತ್ತೀರ್ಣನಾಗಿ ವಿಜ್ಞಾನ ವಿಷಯ ತೆಗೆದುಕೊಂಡಾಗ ಹಲವರು ಹೀಯಾಳಿಸಿದರು. ಪ್ರತಿಷ್ಠಿತ ಸಂಸ್ಥೆಯೊAದು ನನ್ನನ್ನು ಸೇರಿಸಿಕೊಳ್ಳಲೇ ಇಲ್ಲ. ಆಗ ನಾನು ಛಲ ಬೆಳೆಸಿಕೊಂಡು ನನ್ನ ಜೀವನಶೈಲಿಯನ್ನೇ ಬದಲಾಯಿಸಿಕೊಂಡು ಸಾಧನೆ ಮಾಡಿ ಅಧಿಕಾರಿಯಾಗಿ ನನಗೆ ಸೀಟು ಕೊಡಲು ನಿರಾಕರಿಸಿದ ಸಂಸ್ಥೆಗೇ ಅತಿಥಿಯಾಗಿ ಹೋದೆ ಎಂದು ಉದಾಹರಿಸಿದರು.
ಜ್ಞಾನದಿಂದ ಇಡೀ ದೇಶಕ್ಕೆ ಬೆಳಕಾಗಿ
ಎಸ್‌ಬಿಇಟಿ ಕಾರ್ಯದರ್ಶಿ ಡಾ. ಮೀರಾ ಶಿವಲಿಂಗಯ್ಯ ಅವರು ಮಾತನಾಡಿ, ಕವಿ ಡಿವಿಜಿ ಅವರು ಹೇಳಿದಂತೆ ‘ಜ್ಞಾನ ಎನ್ನುವ ಸೂರ್ಯ ನಿಮ್ಮ ಮನಸ್ಸಿಗೆ ಹೋದಾಗ ಕತ್ತಲೆ ಸರಿಯುತ್ತದೆ’. ಸೂರ್ಯನ ಬೆಳಕು ನಿತ್ಯ ನೂತನವಾಗಿರುವಂತೆ ನಿಮ್ಮ ಜ್ಞಾನದಿಂದ ಇಡೀ ದೇಶಕ್ಕೆ ಬೆಳಕು ನೀಡುವವರಾಗಬೇಕೆಂದು ಸಲಹೆ ನೀಡಿದರು.
‘ನೋಡಿ ತಿಳಿ, ಮಾಡಿ ಕಲಿಯಬೇಕು’. ನಿಮ್ಮಲ್ಲಿ ಉತ್ಸಾಹ ನಿರಂತರವಾಗಿರಬೇಕು. ಗುರಿ ಇದ್ದರೆ ಏನನ್ನಾದರೂ ಸಾಧಿಸಬಹುದು. ಗುರಿ ಇಲ್ಲದಿದ್ದರೆ ಸಾಧನೆ ಸಾಧ್ಯವಿಲ್ಲ. ಗುರಿ ಮತ್ತು ಶ್ರದ್ಧೆ ಇದ್ದರೆ ನೂರು ಜನರನ್ನೂ ದಾಟಿ ಮುಂದೆ ಹೋಗಬಹುದು ಎಂದರು.
ಸ್ವಾಮಿ ವಿವೇಕಾನಂದರು ಯುವಶಕ್ತಿಗೆ ಪ್ರಾಮುಖ್ಯತೆ ನೀಡಿದ್ದರು. ಅವರು ೩೦೦ ಮಂದಿ ಯುವಕರನ್ನು ಕೊಟ್ಟರೆ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡುವುದಾಗಿ ಹೇಳಿದ್ದರು. ಇದರಿಂದಲೇ ಅವರು ಹುಟ್ಟಿದ ದಿನ ಜ.೧೨ರಂದು ರಾಷ್ಟ್ರೀಯ ಯುವ ದಿನ’ ಎಂದು ಆಚರಿಸಲಾಗುತ್ತಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಭಯಪಡಬಾರದು, ಗುರಿ ಇಟ್ಟುಕೊಂಡು ಧೈರ್ಯವಾಗಿ ಮುಂದೆ ಸಾಗಿದರೆ ಸಾಧನೆ ಮಾಡಬಹುದು. ಆದ್ದರಿಂದ ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಇಟ್ಟುಕೊಂಡು ಮುನ್ನಡೆಯಬೇಕು. ನಿಮ್ಮ ತಂದೆ-ತಾಯಿಗಳು ಕಂಡಿರುವ ಕನಸನ್ನು ನನಸು ಮಾಡಬೇಕೆಂದು ಸಲಹೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್‌ಬಿಇಟಿ ಅಧ್ಯಕ್ಷ ಡಾ. ಬಿ.ಶಿವಲಿಂಗಯ್ಯ ಅವರು ಮಾತನಾಡಿ, ಜೀವನದಲ್ಲಿ ಅಸಾಧ್ಯವಾದದ್ದು ಯಾವುದೂ ಇಲ್ಲ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಎಷ್ಟೋ ಮಂದಿ ಅನುತ್ತೀರ್ಣರಾಗಿ, ಮುಂದೆ ಛಲ ಮತ್ತು ಗುರಿ ಇಟ್ಟುಕೊಂಡು ಸಾಧನೆ ಮಾಡಿ ಸಾಧಕರೆನಿಸಿಕೊಂಡಿದ್ದಾರೆ ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಜೂಡೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದು ರಾಷ್ಟçಮಟ್ಟಕ್ಕೆ ಆಯ್ಕೆಯಾಗಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಬಿ.ಯು. ಉನ್ನತಿ, ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯ ೧೨೫ ಕೆ.ಜಿ. ವಿಭಾಗದಲ್ಲಿ ಬೆಳ್ಳಿಯ ಪದಕ ಪಡೆದಿರುವ ಪ್ರಥಮ ಪಿಯುಸಿ ವಿದ್ಯಾರ್ಥಿ ನಿಖಿಲ್ ವರ್ಧನ್ ಹಾಗೂ ರಾಜ್ಯ ಮಟ್ಟದ ಫೆನ್ಸಿಂಗ್ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಪಡೆದಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿ ಎಂ.ವಿ. ಯಶವಂತಗೌಡ ಅವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ಶೋಭಾರಾಣಿ ಹಾಗೂ ಗಣ್ಯರು ಸನ್ಮಾನಿಸಿದರು.
ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಎಚ್.ಎಂ.ಶ್ರೀನಿವಾಸು, ಶೈಕ್ಷಣಿಕ ಪಾಲುದಾರರಾದ ಚೇತನ್ ಕೃಷ್ಣ, ಎಂ.ಆರ್. ಮಂಜು ಮುತ್ತೇಗೆರೆ, ಮಂಜುನಾಥ್, ಮುಜಾಹಿದ್ದಿನ್ ಉಪಸ್ಥಿತರಿದ್ದರು.
The post ಜೀವನದ ಗುರಿ ಸಾಧಿಸಲು ವಿದ್ಯಾರ್ಥಿಗಳಿಗೆ ಶಿಸ್ತು ಮುಖ್ಯ : ಎಸ್ಪಿ ಶೋಭಾರಾಣಿ appeared first on nudikarnataka.
Previous Article
ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯಲು ತೀರ್ಮಾನ: ತುರ್ತು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ
Next Article
ಒಕ್ಕಲಿಗವೇ ವಿಶ್ವಮಾನವ ಸನಾತನ ಧರ್ಮ ; ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ ಹುಟ್ಟಿದ್ದು ಆನಂತರ…..