ಬಿ.ಟಿ.ವಿಶ್ವನಾಥ್ ಸಂಕ್ರಾಂತಿ ಒಕ್ಕಲಿಗ ಧರ್ಮದ ಜಗದ ಹಬ್ಬ ಒಕ್ಕಲಿಗರು, ದಲಿತರು, ಸಾಬರು ಒಂದೇ ಒಕ್ಕಲು ಒಕ್ಕಲಿಗ ಎಂದರೆ ಕೃಷಿಕ ರೈತ ಎಂದರ್ಥ. ಈ ಭೂಮಿಯ ಮೇಲೆ ಮೊದಲು ಉತ್ತು ಬಿತ್ತು ಬೆಳೆಯುವುದನ್ನು ಕಂಡುಕೊಂಡ ಮೊದಲ ರೈತನೊಂದಿಗೆ ಒಕ್ಕಲಿಗ ಧರ್ಮದ ಉದಯವಾಯಿತು. ಕ್ರಿಸ್ತಪೂರ್ವ ಹತ್ತರಿಂದ ಹನ್ನೆರಡು ಸಾವಿರ ವರ್ಷಗಳ ಹಿಂದೆಯೇ ಒಕ್ಕಲಿಗ ಧರ್ಮದ ಉದಯವಾಯಿತು. ಆ ಸಮಯದಲ್ಲಿ ಜಗತ್ತಿನ ಬೇರಿನ್ನಾವ ಧರ್ಮಗಳೂ ಉದಯಿಸಿರಲಿಲ್ಲ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ ಇತ್ಯಾದಿ ಧರ್ಮಗಳೆಲ್ಲ ನಂತರ ಉದಯಿಸಿದವು.ಇಳೆ ಮಳೆ ಬೆಳೆಗಳೇ ಈ […]
The post ಒಕ್ಕಲಿಗವೇ ವಿಶ್ವಮಾನವ ಸನಾತನ ಧರ್ಮ ; ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ ಹುಟ್ಟಿದ್ದು ಆನಂತರ….. appeared first on nudikarnataka.
ಬಿ.ಟಿ.ವಿಶ್ವನಾಥ್
ಸಂಕ್ರಾಂತಿ ಒಕ್ಕಲಿಗ ಧರ್ಮದ ಜಗದ ಹಬ್ಬ
ಒಕ್ಕಲಿಗರು, ದಲಿತರು, ಸಾಬರು ಒಂದೇ ಒಕ್ಕಲು
ಒಕ್ಕಲಿಗ ಎಂದರೆ ಕೃಷಿಕ ರೈತ ಎಂದರ್ಥ. ಈ ಭೂಮಿಯ ಮೇಲೆ ಮೊದಲು ಉತ್ತು ಬಿತ್ತು ಬೆಳೆಯುವುದನ್ನು ಕಂಡುಕೊಂಡ ಮೊದಲ ರೈತನೊಂದಿಗೆ ಒಕ್ಕಲಿಗ ಧರ್ಮದ ಉದಯವಾಯಿತು. ಕ್ರಿಸ್ತಪೂರ್ವ ಹತ್ತರಿಂದ ಹನ್ನೆರಡು ಸಾವಿರ ವರ್ಷಗಳ ಹಿಂದೆಯೇ ಒಕ್ಕಲಿಗ ಧರ್ಮದ ಉದಯವಾಯಿತು. ಆ ಸಮಯದಲ್ಲಿ ಜಗತ್ತಿನ ಬೇರಿನ್ನಾವ ಧರ್ಮಗಳೂ ಉದಯಿಸಿರಲಿಲ್ಲ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ ಇತ್ಯಾದಿ ಧರ್ಮಗಳೆಲ್ಲ ನಂತರ ಉದಯಿಸಿದವು.ಇಳೆ ಮಳೆ ಬೆಳೆಗಳೇ ಈ ಧರ್ಮದ ದೇವರಾಗಿದ್ದವು. ಅದಕ್ಕೆ ಒಕ್ಕಲಿಗನಿಗೆ ಇಂದಿಗೂ ಸಂಕ್ರಾಂತಿಯೇ ಶ್ರೇಷ್ಠ ಹಬ್ಬ. ಯಾವ ದೇವರು ಧರ್ಮಗುರು ಜಗದ್ಗುರು ಪ್ರವಾದಿಗಳ ಹಂಗಿಲ್ಲದೆ ಹುಟ್ಟಿದ ಧರ್ಮ ಇದು. ಒಕ್ಕಲುತನ ಅಥವಾ ಕೃಷಿಯೊಂದಿಗೆ ಜಗತ್ತಿನ ನಾಗರೀಕತೆಯೂ ಉದಯಿಸಿತು. ಒಕ್ಕಲಿಗ ಧರ್ಮ ಧರ್ಮಾತೀತವೂ ಹೌದು. ಜಾತ್ಯಾತೀತವೂಹೌದು. ಜಗದ ಎಲ್ಲ ಧರ್ಮಗಳೊಳಗೂ ಒಕ್ಕಲಿಗ ಅಥವಾ ರೈತ ಇದ್ದಾನೆ. ಈ ದೇಶದ ಎಲ್ಲ ಜಾತಿಗಳೊಳಗೂ ರೈತರಿದ್ದಾರೆ. ವೇದಗಳು ಹುಟ್ಟುವ ಮುನ್ನ ಒಂದನೇ ಶತಮಾನದ್ದೆನ್ನುವ ಕ್ರೈಸ್ತ, ಐದನೇ ಶತಮಾನದೆನ್ನುವ ಬೌದ್ಧ, 7ನೇ ಶತಮಾನದೆನ್ನುವ ಇಸ್ಲಾಂ, ಹಿಂದೂ ಧರ್ಮ ಮತ್ತು ಇತ್ಯಾದಿ ಧರ್ಮಗಳು ಹುಟ್ಟುವ ಮುನ್ನ ಜಗದ ಆದಿ ಧರ್ಮ ಒಕ್ಕಲಿಗ ಹುಟ್ಟಿಯಾಗಿತ್ತು.
ಸಂಕ್ರಾಂತಿ ಪ್ರಕೃತಿಗೆ ಒಕ್ಕಲಿಗ ಕೃತಜ್ಞತೆ ಅರ್ಪಿಸುವ ಹಬ್ಬ. ಭಾರತದ ಮಟ್ಟಿಗೆ ಹೇಳುವುದಾದರೆ ಒಕ್ಕಲಿಗ ಧರ್ಮ ಜಾತ್ಯಾತೀತ ಧರ್ಮ. ಉತ್ತು ಬಿತ್ತು ಬೆಳೆದು ಕೊಯ್ದು ಒಕ್ಕಣೆ ಮಾಡುವವರೆಗಿನ ಎಲ್ಲ ಕೆಲಸಗಳನ್ನು ಒಕ್ಕಲಿಗನೊಬ್ಬನೇ ಮಾಡಲಾಗುತ್ತಿರಲಿಲ್ಲ. ಅವನ ಕೃಷಿಗೆ ನೇಗಿಲು ಮಾಡಿಕೊಡುವ ಬಡಗಿ, ಅದಕ್ಕೆ ಕಬ್ಬಿಣದ ಗುಳ ಇತ್ಯಾದಿ ಪರಿಕರ ಮಾಡಿಕೊಡುವ ಕಮ್ಮಾರ ಬೆಳೆದ ಧಾನ್ಯಗಳನ್ನು ಸಂಗ್ರಹಿಸುವ ಗುಡಾಣ ಮಾಡಿಕೊಡುತ್ತಿದ್ದ ಕುಂಬಾರ ಆತನ ಎತ್ತುಗಳಿಗೆ ಲಾಳ ಹೊಡೆದು ಕೊಡುತ್ತಿದ್ದ ಸಾಬರು, ರೈತನಿಗೆ ಬಟ್ಟೆ ಹೊಲಿದು ಕೊಡುತ್ತಿದ್ದ ಸಿಂಪಿಗ ಬಟ್ಟೆ ನೇಯ್ದು ಕೊಡುತ್ತಿದ್ದ ಪದ್ಮಶಾಲಿ ಆತನಿಗೆ ಎಕ್ಕಡ ಹೊಲೆದು ಒಲಿದು ಕೊಡುತ್ತಿದ್ದ ಚಮ್ಮಾರ ಬಟ್ಟೆ ಮಡಿ ಮಾಡಿಕೊಡುತ್ತಿದ್ದ ಮಡಿವಾಳ ಚೌರ ಮಾಡಿಕೊಡುತ್ತಿದ್ದ ಕ್ಷೌರಿಕ ಜಾತಿಯವರು ಮತ್ತು ಪ್ರಮುಖವಾಗಿ ಆತನಿಗೆ ಬಿತ್ತನೆ ಕೊಯ್ಲು ಒಕ್ಕಣೆ ಗಳಲ್ಲಿ ಸಹಕರಿಸುತ್ತಿದ್ದ ದಲಿತರು ಎಲ್ಲರೂ ಒಕ್ಕಲಿಗ ಧರ್ಮಕ್ಕೆ ಸೇರಿದವರೇ.
ಕಟ್ಟಡ ಒಂದರ ವಿವಿಧ ಕಾಮಗಾರಿಗಳನ್ನು ಮಾಡಿಕೊಡುವ ವಿವಿಧ ಕಸುಬುದಾರರೆಲ್ಲ ಹೇಗೆ ಕಟ್ಟಡ ಕಾರ್ಮಿಕರೆಂದು ಪರಿಗಣಿಸಲ್ಪಡುವರೋ ಹಾಗೆಯೇ ಕೃಷಿಯಲ್ಲಿ ಸಹಕರಿಸುತ್ತಿದ್ದ ಎಲ್ಲರೂ ಒಕ್ಕಲಿಗ ಧರ್ಮಕ್ಕೆ ಸೇರಬೇಕಲ್ಲವೇ ಹಾಗಾಗಿ ಭಾರತದಲ್ಲಿ ಒಕ್ಕಲಿಗ ಧರ್ಮವೊಂದೇ ಜಾತ್ಯಾತೀತ ಧರ್ಮವಲ್ಲವೇ. ಗೇದುಣ್ಣುವವರ ಬೆವರ ಕದ್ದುಣ್ಣುವ ಜಾತಿಗಳು ಮೇಲಿನ ಪಟ್ಟಿಯಲ್ಲಿಲ್ಲ. ಈ ಬೆವರುಗಳ್ಳರ ಮಾತು ಕೇಳಿ ಒಕ್ಕಲಿಗ ಧರ್ಮದ ಜನ ತಮ್ಮದು ಒಕ್ಕಲಿಗ ಜಾತಿ ಎಂಬ ತಪ್ಪು ತಿಳುವಳಿಕೆಗೆ ಕೆಲಸಕ್ಕೆ ಬಾರದ ದೇವರುಗಳ ಪೂಜೆ ಮಾಡುವ ಮೂರ್ಖತನಕ್ಕೆ ಪಕ್ಕಾಗಿದ್ದಾರೆ. ಒಕ್ಕಲಿಗ ಧರ್ಮದ ಉದಯ ಕ್ರಿಸ್ತಪೂರ್ವ ಹತ್ತರಿಂದ ಹನ್ನೆರಡು ಸಾವಿರ ವರ್ಷಗಳ ಹಿಂದೆ ಅಂದರೆ ನಿಯೋಲಿತಿಕ್ ಅಥವಾ ನವ ಶಿಲಾಯುಗದಲ್ಲೇ ಆರಂಭಗೊಂಡಿತು.
ಮನುಷ್ಯ ಬೇಟೆ ಮತ್ತು ಅಲೆಮಾರಿತನ ಬಿಟ್ಟು ಕೃಷಿಯನ್ನು ಅವಲಂಬಿಸಿದ ಕಾಲಘಟ್ಟ ಅದು. ಫಲವತ್ತಾದ ಮೆಸಪಟೊಮಿಯ ಮತ್ತು ಭಾರತದ ಸಿಂಧೂ ಮುಖಜಭೂಮಿಯಲ್ಲಿ ಕೃಷಿಯನ್ನು ಆರಂಭಿಸುವುದರೊಂದಿಗೆ ಒಕ್ಕಲುತನ ಆರಂಭವಾಯಿತು. ಭೂಮಿ ಬೀಜ ಪ್ರಕೃತಿಯ ಋತುಚಕ್ರಗಳೊಂದಿಗೆ ಸಾಮರಸ್ಯ ಸಾಧಿಸುವುದೇ ಒಕ್ಕಲಿಗನ ದೇವ ಪೂಜೆಯಾಗಿತ್ತು. ಮಾನವತೆಯ ಉಳಿವು ಇತರರಿಗೆ ಬೆಳೆದು ಹಂಚುವ ಮೂಲಕ ಎಲ್ಲರ ಉಳಿವು ಮತ್ತು ಪ್ರಕೃತಿಗೆ ಕೃತಜ್ಞತೆ ಅರ್ಪಿಸುವುದನ್ನು ಒಕ್ಕಲಿಗ ಧರ್ಮ ಇದುವರೆಗೆ ಮಾಡಿಕೊಂಡು ಬಂದಿದೆ. ಇಲ್ಲದ ದೇವರ ತೋರಿಸಿ ಹೆದರಿಸಿ ಬೆವರು ಕದಿಯುವುದನ್ನು ಆ ಧರ್ಮದ ಜನ ಎಂದೂ ಮಾಡಲಿಲ್ಲ. ಇಂದಿಗೂ ಜಗದಲ್ಲ ಧರ್ಮಗಳ ಜಾತಿಗಳ ಜನರ ಅನ್ನದ ಬಟ್ಟಲ ಪೊರೆಯುತ್ತಿರುವವನು ಒಕ್ಕಲಿಗನೆ. ಶ್ರಮ ಬೆವರಿನ ಉಳುಮೆ ಗೇಮೆ ಪ್ರಾರ್ಥನೆಯಾದರೆ ಕೊಯ್ಲು ರೈತನ ಆ ಪ್ರಾರ್ಥನೆಯ ಫಲಶ್ರುತಿ. ಬೇರೆ ಧರ್ಮಗಳಂತೆ ಇಲ್ಲಿ ಪ್ರಕೃತಿ ಮತ್ತು ಕೃಷಿಕನ ನಡುವೆ ಪೂಜಾರಿ ಪಾದ್ರಿ ಮೌಲ್ವಿ ಗಳಂತಹ ಮಧ್ಯವರ್ತಿಗಳಿಲ್ಲ. ರೈತರೇ ಪ್ರಕೃತಿಯ ಪೂಜಾರಿಗಳು.
ಪುರಾತತ್ವ ತಾಣಗಳಾದ ಗೊಬೆಕ್ಲಿ ಟೆಪೆ (Gobeklitepe ಕ್ರಿಸ್ತಪೂರ್ವ 7,500 ಟರ್ಕಿ) ಭಾರತದ ಹರಿಯಾಣದಲ್ಲಿ ಪತ್ತೆಯಾದ ಬಿರ್ಹಾನ(ಕ್ರಿಸ್ತಪೂರ್ವ 7570_8200) ಪ್ರದೇಶದಲ್ಲಿನ ಪುರಾತತ್ವ ತಾಣಗಳಲ್ಲಿ ಜಗದ ಬೇರೆಲ್ಲ ಧರ್ಮಗಳು ಉದಯಿಸುವ ಪೂರ್ವವೇ ಕೃಷಿ ಅಥವಾ ಒಕ್ಕಲುತನ ಉದಯಿಸಿದ್ದು ಕಂಡುಬರುತ್ತದೆ. ಈ ಇಂಡಸ್ ಕಣಿವೆಯಲ್ಲಿ ಪತ್ತೆಯಾದ ನಾಗರಿಕತೆ ತಥಾಕಥಿತ ಮಹಾಭಾರತ ರಾಮಾಯಣದಲ್ಲಿನ ವರ್ಣಿತ ಕಾಲಮಾನಕ್ಕೂ ಸಹಸ್ರಾರು ವರ್ಷ ಹಿಂದಿನದು. ಒಕ್ಕಲಿಗರಿಗೆ ಭೂಮ್ತಾಯಿ ಮಳೆ ಮಾರುತಗಳು ಕೃಷಿ ಉಪಕರಣಗಳು ಬಿತ್ತನೆ ಬೀಜಗಳು ದೇವರಾಗಿದ್ದವೇ ಹೊರತು ಕಲ್ಲು ಮಣ್ಣು, ಮರದ ಮೂರ್ತಿಗಳು ಗುಡಿಗುಂಡಾರಗಳು ದೇವರಾಗಿರಲಿಲ್ಲ. ಯಾವ ಮಠಮಾನ್ಯಗಳಿಗೂ ಅವರು ನಡೆದುಕೊಳ್ಳುತ್ತಿರಲಿಲ್ಲ. ಹಾಗಾಗಿ ಅವರಿಗೆ ಬುದ್ಧ, ಬಸವ, ಅಂಬೇಡ್ಕರರ ಕಾಣ್ಕೆಗಳು ಪ್ರಾಕೃತಿಕವಾಗಿಯೇ ಲಭಿಸಿದ್ದವು. ವಿಶ್ವಮಾನವ ಒಕ್ಕಲಿಗ ಧರ್ಮ ತನ್ನನ್ನು ಜಾತಿ ಒಂದಕ್ಕೆ ಸೀಮಿತಗೊಳಿಸಿಕೊಂಡಿದ್ದು ವರ್ತಮಾನದ ದುರಂತ. ಒಕ್ಕಲಿಗ ಧರ್ಮ ಮತ್ತೆ ಪುನರುತ್ಥಾನಗೊಳ್ಳಬೇಕಾಗಿದೆ .
ವಿಶ್ವದ ತಾಪಮಾನದ ಏರಿಕೆ, ಋತುಗಳ ಏರುಪೇರು ಮಾನವನ ಆಹಾರ ಅಭದ್ರತೆ ಜನಾಂಗ ದ್ವೇಷ ಜಾತಿ ಕಲಹ ಎಲ್ಲವಕ್ಕೂ ಪ್ರಕೃತಿ ಮತ್ತು ಮನುಷ್ಯನ ನಡುವಿನ ಅನುಸಂಧಾನದ ಕಂದರವೇ ಕಾರಣವಾಗಿದೆ. ವಿಶ್ವದಲ್ಲಿ ಕೃಷಿ ಅಥವಾ ಒಕ್ಕಲುತನಕ್ಕೆ ಮತ್ತೆ ಪ್ರಾಧಾನ್ಯತೆ ಪ್ರಾಶಸ್ತ್ಯ ದೊರೆಯುವುದರಲ್ಲಷ್ಟೇ ಈ ಎಲ್ಲಾ ಅಪಧ್ಧಗಳಿಗೆ ಪರಿಹಾರವಿದೆ. ಒಕ್ಕಲಿಗ ಧರ್ಮದ ಪುನರುತ್ಥಾನ ಆ ಕಾರಣ ವಿಶ್ವದ ವರ್ತಮಾನದ ಸಂದರ್ಭದ ತುರ್ತಾಗಿದೆ. ಜಗದೆಲ್ಲ ಧರ್ಮ ಜಾತಿ ವರ್ಗಗಳ ರೈತರು ಒಗ್ಗಟ್ಟಾಗಬೇಕಾಗಿದೆ. ಅನ್ನವಷ್ಟೇ ದೇವರೆಂದು ಅದನ್ನು ಬೆಳೆಯುವವರಿಗೆ ಕೃತಜ್ಞರಾಗಿ ಇರಬೇಕೆಂದು ನಾವು ನಮ್ಮ ಮಕ್ಕಳಿಗೆ ಹೇಳಿ ಕೊಡಬೇಕಾಗಿದೆ.
ಮೊನ್ನೆ ಕುವೆಂಪು ಜನ್ಮದಿನಾಚರಣೆಯ ದಿನ ನಡೆದ ವಿಶ್ವಮಾನವ ಸಮ್ಮೇಳನದಲ್ಲಿ ಈ ವಿಚಾರ ಮಂಡಿಸಲು ನಾನು ಅಲ್ಲಿ ನೆರೆದಿದ್ದ ಗೆಳೆಯರೊಂದಿಗೆ ಚರ್ಚಿಸುತ್ತಿದ್ದಾಗ ಒಕ್ಕಲಿಗರು, ದಲಿತರು, ಸಾಬರು ಇತ್ಯಾದಿ ಜಾತಿಗಳೆಲ್ಲ ಒಂದೇ ಒಕ್ಕಲು ಎನ್ನುವುದಾದರೆ ನಾವು ವಿಶ್ವ ಒಕ್ಕಲಿಗ ಧರ್ಮ ಪುನರುತ್ಥಾನ ಸಭಾ ಪ್ರಾರಂಭಿಸಿಯೇ ಬಿಡೋಣ ಎಂಬ ಉತ್ಸಾಹ ತೋರಿಸಿದರು.
(ಲೇಖಕರು, ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ಮಂಡ್ಯ ಜಿಲ್ಲೆಯ ಅಧ್ಯಕ್ಷರು)
The post ಒಕ್ಕಲಿಗವೇ ವಿಶ್ವಮಾನವ ಸನಾತನ ಧರ್ಮ ; ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ ಹುಟ್ಟಿದ್ದು ಆನಂತರ….. appeared first on nudikarnataka.
Previous Article
ಜೀವನದ ಗುರಿ ಸಾಧಿಸಲು ವಿದ್ಯಾರ್ಥಿಗಳಿಗೆ ಶಿಸ್ತು ಮುಖ್ಯ : ಎಸ್ಪಿ ಶೋಭಾರಾಣಿ
Next Article
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಗಳಿಗೆ ಗ್ರೀನ್ ಸಿಗ್ನಲ್ ಸಾಧ್ಯತೆ : ಪೊಲೀಸ್ ಇಲಾಖೆಯಿಂದ ಅನುಮತಿ ನಿಶ್ಚಿತ