Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಶಿವಮೊಗ್ಗ: ಚಿಕಿತ್ಸೆ ಫಲಿಸದೆ ಕೇಂದ್ರ ಕಾರಾಗೃಹದ ಸಜಾ ಬಂಧಿ ಸಾವು

    1 hour ago

    ಶಿವಮೊಗ್ಗ: ಅನಾರೋಗ್ಯದಿಂದ ಬಳಲುತ್ತಿದ್ದ ಶಿವಮೊಗ್ಗ ಕೇಂದ್ರ ಕಾರಾಗೃಹದ ಹಿರಿಯ ಸಜಾ ಬಂಧಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರನ್ನು ಬಸವ (78) ಎಂದು ಗುರುತಿಸಲಾಗಿದೆ.  ಶಿವಮೊಗ್ಗ ಡಿ,ಸಿ ಹೆಸರಿಂದ ನಿಮ್ಗೆ ಮೆಸೇಜ್‌ ಬರ್ತಿದಿಯಾ, ಹಾಗಾದ್ರೆ ಈ ಸುದ್ದಿ ಓದಿ ಮೃತ ಬಸವ ಅವರು 2018ರಲ್ಲಿ ಉಡುಪಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ದಾಖಲಾದ ಪ್ರಕರಣವೊಂದರಲ್ಲಿ 10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಶಿಕ್ಷೆಯ ಆರಂಭದಲ್ಲಿ ಉಡುಪಿ ಕಾರಾಗೃಹದಲ್ಲಿದ್ದ ಇವರನ್ನು, 2019ರಲ್ಲಿ ಶಿವಮೊಗ್ಗ ಜಿಲ್ಲಾ […]

    ಶಿವಮೊಗ್ಗ: ಅನಾರೋಗ್ಯದಿಂದ ಬಳಲುತ್ತಿದ್ದ ಶಿವಮೊಗ್ಗ ಕೇಂದ್ರ ಕಾರಾಗೃಹದ ಹಿರಿಯ ಸಜಾ ಬಂಧಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರನ್ನು ಬಸವ (78) ಎಂದು ಗುರುತಿಸಲಾಗಿದೆ. 

    Hospitalized Inmate Dies in Shivamogga
    Hospitalized Inmate Dies in Shivamogga

    ಶಿವಮೊಗ್ಗ ಡಿ,ಸಿ ಹೆಸರಿಂದ ನಿಮ್ಗೆ ಮೆಸೇಜ್‌ ಬರ್ತಿದಿಯಾ, ಹಾಗಾದ್ರೆ ಈ ಸುದ್ದಿ ಓದಿ

    ಮೃತ ಬಸವ ಅವರು 2018ರಲ್ಲಿ ಉಡುಪಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ದಾಖಲಾದ ಪ್ರಕರಣವೊಂದರಲ್ಲಿ 10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಶಿಕ್ಷೆಯ ಆರಂಭದಲ್ಲಿ ಉಡುಪಿ ಕಾರಾಗೃಹದಲ್ಲಿದ್ದ ಇವರನ್ನು, 2019ರಲ್ಲಿ ಶಿವಮೊಗ್ಗ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು. 

    ವಯೋಸಹಜ ಕಾಯಿಲೆಗಳ ಜೊತೆಗೆ ಮಧುಮೇಹ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದ ಇವರಿಗೆ ಕಾರಾಗೃಹದ ವೈದ್ಯಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ನಿರಂತರ ಚಿಕಿತ್ಸೆ ನೀಡಲಾಗುತ್ತಿತ್ತು. ಹಲವು ಬಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆರೋಗ್ಯದ ಸ್ಥಿತಿ ಗಂಭೀರಗೊಂಡಾಗ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೂ ಕಳುಹಿಸಿಕೊಡಲಾಗಿತ್ತು. 

    ಆದರೆ, ಕಳೆದ ಎರಡು ದಿನಗಳ ಹಿಂದೆ ಆರೋಗ್ಯ ಸ್ಥಿತಿ ಮತ್ತೆ ಹದಗೆಟ್ಟ ಹಿನ್ನೆಲೆಯಲ್ಲಿ ಜನವರಿ 12ರ ರಾತ್ರಿ 10:20ಕ್ಕೆ ತುರ್ತಾಗಿ ಶಿವಮೊಗ್ಗದ ಮೆಗ್ಗಾನ್ ಬೋಧನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿತ್ತಾದರೂ, ಇಂದು (ಜ. 14) ಮುಂಜಾನೆ 3:12ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿರುವುದಾಗಿ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

    Hospitalized Inmate Dies in Shivamogga

     

    Click here to Read More
    Previous Article
    ಬೆಜ್ಜವಳ್ಳಿಯಲ್ಲಿ ಮಕರ ಸಂಕ್ರಾಂತಿ ಸಂಭ್ರಮ: ಇರುಮುಡಿ ಹೊತ್ತು ಸಾಗಿದ ಶಿವಣ್ಣ
    Next Article
    ಆರ್​​ಸಿಬಿ ಪಂದ್ಯಗಳು ಬೆಂಗಳೂರಿನಿಂದ ಔಟ್?  ಡಿ ಎಸ್​ ಅರುಣ್​ ಏನಂದ್ರು..

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment