Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಆರ್​​ಸಿಬಿ ಪಂದ್ಯಗಳು ಬೆಂಗಳೂರಿನಿಂದ ಔಟ್?  ಡಿ ಎಸ್​ ಅರುಣ್​ ಏನಂದ್ರು..

    1 hour ago

    RCB Matches Shifting ಶಿವಮೊಗ್ಗ :  ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಆರ್​​ಸಿಬಿ ತಂಡದ 2026ರ ಐಪಿಎಲ್ ಪಂದ್ಯಗಳು ಪುಣೆಗೆ ಸ್ಥಳಾಂತರವಾಗುತ್ತಿರುವ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಕೆಎಸ್​ಇ ಎ ವಲಯ ಸಂಚಾಲಕ ಡಿಎಸ್​ ಅರುಣ್​ ರಾಜ್ಯ ಸರ್ಕಾರದ ಮೇಲೆ ಅಸಮಧಾನಗೊಂಡಿದ್ದು, ಆರಸಿಬಿ ಮ್ಯಾಚ್​ ಸಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯದೇ ಇದ್ದರೆ, ರಾಜ್ಯ ಸರ್ಕಾರವನ್ನು ಖಂಡಿಸುತ್ತೇವೆ ಎಂದು ಎಚ್ಚರಿಗೆ ನೀಡಿದ್ದಾರೆ. ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ […]

    RCB Matches Shifting ಶಿವಮೊಗ್ಗ :  ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಆರ್​​ಸಿಬಿ ತಂಡದ 2026ರ ಐಪಿಎಲ್ ಪಂದ್ಯಗಳು ಪುಣೆಗೆ ಸ್ಥಳಾಂತರವಾಗುತ್ತಿರುವ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಕೆಎಸ್​ಇ ಎ ವಲಯ ಸಂಚಾಲಕ ಡಿಎಸ್​ ಅರುಣ್​ ರಾಜ್ಯ ಸರ್ಕಾರದ ಮೇಲೆ ಅಸಮಧಾನಗೊಂಡಿದ್ದು, ಆರಸಿಬಿ ಮ್ಯಾಚ್​ ಸಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯದೇ ಇದ್ದರೆ, ರಾಜ್ಯ ಸರ್ಕಾರವನ್ನು ಖಂಡಿಸುತ್ತೇವೆ ಎಂದು ಎಚ್ಚರಿಗೆ ನೀಡಿದ್ದಾರೆ.

    RCB Matches Shifting from Bengaluru to Pune
    RCB Matches Shifting from Bengaluru to Pune

    ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್​​ಸಿಬಿ ತಂಡವು ಇದುವರೆಗೆ 101 ಪಂದ್ಯಗಳನ್ನು ಆಡಿದೆ. ಕಳೆದ ಬಾರಿ ಆರ್​​ಸಿಬಿ ಚಾಂಪಿಯನ್ ಆದಾಗ ಅಭಿಮಾನಿಗಳು ಸಂಭ್ರಮಿಸಿದ್ದಕ್ಕಿಂತ ದೊಡ್ಡ ಅನಾಹುತ ಈ ಹಿಂದೆ ಎಂದೂ ಸಂಭವಿಸಿರಲಿಲ್ಲ. ಜೂನ್ 4 ರಂದು ನಡೆದ ಸಂಭ್ರಮಾಚರಣೆಯಲ್ಲಿ 11 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡರೂ, ಸರ್ಕಾರ ಮತ್ತು ಪೊಲೀಸ್ ವ್ಯವಸ್ಥೆಯು ಕೇವಲ ಫೋಟೋ ತೆಗೆಸಿಕೊಳ್ಳಲು ಮುಂದಾದವೇ ಹೊರತು ಸೂಕ್ತ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಿಲ್ಲ ಎಂದು ಆರೋಪಿಸಿದರು.

    ಘಟನೆ ನಡೆದು ಏಳು ತಿಂಗಳು ಕಳೆದರೂ ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ. ಕುನ್ಹಾ ಸಮಿತಿಯ ವರದಿ ಇನ್ನೂ ಬಿಡುಗಡೆಯಾಗಿಲ್ಲ. ಈ ವರದಿಯಲ್ಲಿ ಸರ್ಕಾರದ ನ್ಯೂನತೆಗಳು ಎದ್ದು ಕಾಣುತ್ತಿರುವುದರಿಂದಲೇ ಸರ್ಕಾರ ಇದನ್ನು ಮುಚ್ಚಿಡುತ್ತಿದೆ. ಅಲ್ಲದೆ, ಘಟನೆಗೆ ಸಂಬಂಧಿಸಿದಂತೆ ಎ1 ಆರೋಪಿಯಾಗಿ ಡಿಎನ್‌ಎ ಸಂಸ್ಥೆ, ಎ2 ಆಗಿ ಆರ್​​ಸಿಬಿ ಮತ್ತು ಎ3 ಆಗಿ ಕೆಎಸ್‌ಸಿಎ ಮೇಲೆ ಹೊಣೆ ಹೊರಿಸುವ ಮೂಲಕ ಆರ್​​ಸಿಬಿಯನ್ನು ಸರ್ಕಾರ ನಡುನೀರಿನಲ್ಲಿ ಕೈಬಿಟ್ಟಿದೆ ಎಂದು ಕಿಡಿಕಾರಿದರು.

    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 745 ಅಂತಾರಾಷ್ಟ್ರೀಯ ಪಂದ್ಯಗಳು ಯಶಸ್ವಿಯಾಗಿ ನಡೆದ ಇತಿಹಾಸವಿದೆ. ಆದರೆ, 40 ಸಾವಿರ ಜನ ಸೇರಬೇಕಾದ ಕಡೆ 4 ಲಕ್ಷ ಜನರನ್ನು ಸೇರಿಸಿ ಅನಾಹುತಕ್ಕೆ ಕಾರಣವಾದ ಸರ್ಕಾರ, ಈಗ ಆರ್​​ಸಿಬಿಗೆ ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿದೆ. ಪಂದ್ಯಗಳು ಬೆಂಗಳೂರಿನಿಂದ ಸ್ಥಳಾಂತರವಾದರೆ ಅದು ರಾಜ್ಯದ ಅಬಕಾರಿ ಆದಾಯದ ಮೇಲೂ ದೊಡ್ಡ ಹೊಡೆತ ನೀಡಲಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪಂದ್ಯಗಳನ್ನು ಉಳಿಸಿಕೊಳ್ಳುವ ಬಗ್ಗೆ ಭರವಸೆ ನೀಡಿದ್ದರೂ, ಸಿಎಂ ಸಿದ್ದರಾಮಯ್ಯ ಅವರು ಈ ಬಗ್ಗೆ ಮೌನ ತಾಳಿದ್ದಾರೆ. ಒಂದು ವೇಳೆ ಬೆಂಗಳೂರಿನಿಂದ ಆರ್​​ಸಿಬಿ ಪಂದ್ಯಗಳು ಬೇರೆಡೆಗೆ ಹೋದರೆ ಅದನ್ನು ತೀವ್ರವಾಗಿ ಖಂಡಿಸುವುದಾಗಿ ಅರುಣ್ ಎಚ್ಚರಿಕೆ ನೀಡಿದ್ದಾರೆ.

    RCB Matches Shifting from Bengaluru to Pune

    RCB Matches Shifting from Bengaluru to Pune

     

    Click here to Read More
    Previous Article
    ಶಿವಮೊಗ್ಗ: ಚಿಕಿತ್ಸೆ ಫಲಿಸದೆ ಕೇಂದ್ರ ಕಾರಾಗೃಹದ ಸಜಾ ಬಂಧಿ ಸಾವು
    Next Article
    ಮಕ್ಕಳಿಗೆ ವಿರಾಮ ನೀಡಿ, ಶಾಲೆ ಕೊಠಡಿಯಲ್ಲೆ ಸಾವಿಗೆ ಶರಣಾದ ಶಿಕ್ಷಕ! ಶಿಕಾರಿಪುದಲ್ಲಿ ನಡೆದಿದ್ದು!

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment