Filters

Channels
Topics
Other Filters

ಮಲೆನಾಡಿನ ರೈಲ್ವೆ ಪ್ರಯಾಣಿಕರಿಗೆ ದಸರಾ-ದೀಪಾವಳಿ ಗಿಫ್ಟ್! ಸಂಸದ ಬಿ.ವೈ.ರಾಘವೇಂದ್ರ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ದಸರಾ ಹಾಗೂ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಮಲೆನಾಡಿನ ವಿವಿಧ ಪ್ರದೇಶಗಳಿಗೆ ತೆರಳುವ ಮತ್ತು ಹಬ್ಬ ಮುಗಿಸಿಕೊಂಡು ಮರಳಿ ... ಕ್ಲಿಕ್ ಮಾಡಿ

ಇದೇ ಅಕ್ಟೋಬರ್​ 27ರಂದು ಮಹಾನಗರ ಪಾಲಿಕೆ ಕಚೇರಿಗೆ ಮುತ್ತಿಗೆ! ಕಾರಣವಿದೆ!

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದ ಗೋವಿಂದಾಪುರ ಹಾಗೂ ಗೋಪಿಶೆಟ್ಟಿಕೊಪ್ಪದಲ್ಲಿ ಆಶ್ರಯ ಯೋಜನೆಯಡಿ ನಿರ್ಮಾಣವಾಗುತ್ತಿರುವ ಮನೆಗಳ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಫಲಾನುಭವಿಗಳಿಗೆ ವಿತರಿಸಬೇಕು ಎಂದು ... ಕ್ಲಿಕ್ ಮಾಡಿ

ಶಿವಮೊಗ್ಗದ ಶ್ರೀ ರಾಮಾಂಜನೇಯ ದೇವಸ್ಥಾನದಲ್ಲಿ ₹20 ಲಕ್ಷ ಮೌಲ್ಯದ ಚಿನ್ನದ ಮುಖವಾಡ ಕಳವು!

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ತಾಲೂಕಿನ ಹೊಸಕೊಪ್ಪ ಗ್ರಾಮದ ಶ್ರೀ ರಾಮಾಂಜನೇಯ ದೇವಸ್ಥಾನದಲ್ಲಿ ದೇವರಿಗೆ ತೊಡಿಸಲಾಗಿದ್ದ ಸುಮಾರು 200 ಗ್ರಾಂ ತೂಕದ, ₹20 ಲಕ್ಷ ... ಕ್ಲಿಕ್ ಮಾಡಿ

ನವೆಂಬರ್ ತಿಂಗಳ ರಾಶಿ ಭವಿಷ್ಯ 2026: ಮೇಷ, ವೃಷಭ, ಮಿಥುನ ರಾಶಿಯವರಿಗೆ ಹೇಗಿರಲಿದೆ ಈ ತಿಂಗಳು?

November 2026 Horoscope: ನವೆಂಬರ್ ತಿಂಗಳ ರಾಶಿ ಭವಿಷ್ಯ 2026: ಮೇಷ, ವೃಷಭ, ಮಿಥುನ ರಾಶಿಯವರಿಗೆ ಹೇಗಿರಲಿದೆ ಈ ತಿಂಗಳು? Find out what the stars may have in store for Aries, Taurus and Gemini this month. Discover the astrological predictions for career growth, business, financial prospects, family relationships, love life and health.

ನಾಡಿನ ಜೀವನಾಡಿಗೆ ವಿಶೇಷ ಪೂಜೆ; ವಿವಿಧ ಮಠಾಧೀಶರ ಸಮ್ಮುಖದಲ್ಲಿ ‘ಕಾವೇರಿ ಆರತಿ’ಗೆ ಸಿಎಂ ಚಾಲನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಮಂಡ್ಯ ಜಿಲ್ಲೆಯ ಪ್ರಸಿದ್ಧ ಕೆಆರ್‌ಎಸ್ ಅಣೆಕಟ್ಟಿನ ಬೃಂದಾವನ ಉದ್ಯಾನವನದಲ್ಲಿ ಶುಕ್ರವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಧರ್ಮಪತ್ನಿ ಉಷಾ ಶಿವಕುಮಾರ್ ಅವರೊಂದಿಗೆ ಕಾವೇರಿ ಮಾತೆಗೆ ಶಾಸ್ತ್ರೋಕ್ತ ಪೂಜೆ ನೆರವೇರಿಸುವ ಮೂಲಕ ‘ಕಾವೇರಿ ಆರತಿ’ ಕಾರ್ಯಕ್ರಮಕ್ಕೆ ಅತ್ಯಂತ ಸಡಗರದಿಂದ ಚಾಲನೆ ನೀಡಿದ್ದಾರೆ. ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸಂತಸ ಹಂಚಿಕೊಂಡಿರುವ ಡಿ.ಕೆ. ಶಿವಕುಮಾರ್ ಅವರು, “ಕಾವೇರಿ ಆರತಿ ಕಾರ್ಯಕ್ರಮವು ನಮ್ಮ ನಾಡಿನ […] The post ನಾಡಿನ ಜೀವನಾಡಿಗೆ ವಿಶೇಷ ಪೂಜೆ; ವಿವಿಧ ಮಠಾಧೀಶರ ಸಮ್ಮುಖದಲ್ಲಿ ‘ಕಾವೇರಿ ಆರತಿ’ಗೆ ಸಿಎಂ ಚಾಲನೆ appeared first on ONLINE.

SSLC-PUC ಪರೀಕ್ಷಾ ಪದ್ಧತಿಯಲ್ಲಿ ಮಹತ್ವದ ಬದಲಾವಣೆ: ಶಿಕ್ಷಣ ಇಲಾಖೆಯ ಸೂಚನೆ ಏನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ರಾಜ್ಯದ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷಾ ಕ್ರಮದಲ್ಲಿ ಶಿಕ್ಷಣ ಇಲಾಖೆಯು ಮಹತ್ವದ ಮಾರ್ಪಾಡು ಮಾಡಿದೆ. ಕಳೆದ ಎರಡು ವರ್ಷಗಳಿಂದ ಜಾರಿಯಲ್ಲಿದ್ದ ಮೂರು ವಾರ್ಷಿಕ ಪರೀಕ್ಷೆಗಳ ನಿಯಮವನ್ನು ಕೈಬಿಡಲಾಗಿದ್ದು, ಪ್ರಸ್ತುತ ಸಾಲಿನಿಂದ ಕೇವಲ ಎರಡು ಪರೀಕ್ಷೆಗಳನ್ನು ಮಾತ್ರ ನಡೆಸಲು ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ. ಕಳೆದ ಬಾರಿಯ ರಿಸಲ್ಟ್ ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ವಿದ್ಯಾರ್ಥಿಗಳು ಈಗಿನಿಂದಲೇ ಗಂಭೀರವಾಗಿ ಓದಿನ ಕಡೆ ಗಮನ ಹರಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬದಲಾವಣೆಗೆ […] The post SSLC-PUC ಪರೀಕ್ಷಾ ಪದ್ಧತಿಯಲ್ಲಿ ಮಹತ್ವದ ಬದಲಾವಣೆ: ಶಿಕ್ಷಣ ಇಲಾಖೆಯ ಸೂಚನೆ ಏನು? appeared first on ONLINE.

Free Training: ಚಿಕ್ಕಮಗಳೂರಿನಲ್ಲಿ ಸ್ವಂತ ಉದ್ಯಮ ಆರಂಭಿಸಲು ಸುವರ್ಣಾವಕಾಶ, 10 ದಿನಗಳ ಉಚಿತ ತರಬೇತಿಗೆ ಅರ್ಜಿ ಆಹ್ವಾನ!

ಚಿಕ್ಕಮಗಳೂರಿನಲ್ಲಿ ಸ್ವಂತ ಉದ್ಯಮ ಆರಂಭಿಸಲು ಆಸಕ್ತಿ ಹೊಂದಿರುವವರಿಗಾಗಿ 10 ದಿನಗಳ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಅಪ್ರಾಪ್ತ ವಯಸ್ಕ ಬಾಲಕಿಯನ್ನು ನಂಬಿಸಿ ಮದುವೆಯಾಗಿದ್ದ ಕಾಮುಕನಿಗೆ 20 ವರ್ಷ ಜೈಲು, 40 ಸಾವಿರ ದಂಡ

ಹೊಸದಿಗಂತ ವರದಿ ದಾವಣಗೆರೆ: ಅಪ್ರಾಪ್ತ ವಯಸ್ಕ ಬಾಲಕಿಯನ್ನು ಪುಸಲಾಯಿಸಿ ಮದುವೆಯಾಗಿ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಅಪರಾಧಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ, 40 ಸಾವಿರ ರೂ. ದಂಡ ವಿಧಿಸಿ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್.ಟಿ.ಎಸ್.ಸಿ-1 ನ್ಯಾಯಾಲಯ ತೀರ್ಪು ನೀಡಿದೆ. ಇಲ್ಲಿನ ಕೆಟಿಜೆ ನಗರದ ಪಿ.ಎಸ್.ಕಾರ್ತಿಕ್(22) ಶಿಕ್ಷೆಗೆ ಗುರಿಯಾದ ಅಪರಾಧಿ. ಅಪ್ರಾಪ್ತ ವಯಸ್ಸಿನ ತಮ್ಮ ಮಗಳು ಕಾಲೇಜಿಗೆ ಹೋದವಳು ಸಂಜೆಯಾದರೂ ವಾಪಸ್ಸಾಗದ ಕಾರಣ ಪೋಷಕರು 2022 ಮಾರ್ಚ್ 10ರಂದು ಮಹಿಳಾ ಪೊಲೀಸ್ ಠಾಣೆಗೆ ದೂರು […] The post ಅಪ್ರಾಪ್ತ ವಯಸ್ಕ ಬಾಲಕಿಯನ್ನು ನಂಬಿಸಿ ಮದುವೆಯಾಗಿದ್ದ ಕಾಮುಕನಿಗೆ 20 ವರ್ಷ ಜೈಲು, 40 ಸಾವಿರ ದಂಡ appeared first on ONLINE.

ದಾವಣಗೆರೆ ಬಾಡಾ ಕ್ರಾಸ್ ಬಳಿ ಭೀಕರ ಅಪಘಾತ: ಸಿಎನ್‌ಜಿ ಲಾರಿಗೆ ಕಾರು ಡಿಕ್ಕಿ, ಓರ್ವ ಬಾಲಕ ಸ್ಥಳದಲ್ಲೇ ಸಾ*ವು

ಹೊಸದಿಗಂತ ವರದಿ ದಾವಣಗೆರೆ: ಬೆಂಗಳೂರು ಕಡೆಯಿಂದ ಬರುತ್ತಿದ್ದ ಸಿ.ಎನ್.ಜಿ ತುಂಬಿದ್ದ ಲಾರಿಗೆ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಓರ್ವ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ಬೆಳಗ್ಗೆ ನಗರದ ಹೊರವಲಯದಲ್ಲಿರುವ ಬಾಡಾ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಇಲ್ಲಿನ ಜೆ.ಹೆಚ್.ಪಟೇಲ್ ನಗರದ ನಿವಾಸಿ ಸೃಜನ್ ಹೆಬ್ಬಾಳು(16 ವರ್ಷ) ಸ್ಥಳದಲ್ಲೇ ಸಾವನ್ನಪ್ಪಿದ ಬಾಲಕ. ಶಕ್ತಿನಗರದ ನಿವಾಸಿಗಳಾದ ರಾಮ್ ತೇಜ್ ರೆಡ್ಡಿ(17 ವರ್ಷ) ಹಾಗೂ ಆದಿತ್ಯ(16 ವರ್ಷ) ಗಂಭೀರವಾಗಿ ಗಾಯಗೊಂಡಿದ್ದಾರೆ. ಒಟ್ಟು […] The post ದಾವಣಗೆರೆ ಬಾಡಾ ಕ್ರಾಸ್ ಬಳಿ ಭೀಕರ ಅಪಘಾತ: ಸಿಎನ್‌ಜಿ ಲಾರಿಗೆ ಕಾರು ಡಿಕ್ಕಿ, ಓರ್ವ ಬಾಲಕ ಸ್ಥಳದಲ್ಲೇ ಸಾ*ವು appeared first on ONLINE.

Karmic relationship: ಕರ್ಮ ಸಂಬಂಧವೇ ಬೇರೆ, ಸೋಲ್‌ಮೇಟ್ ಬಂಧವೇ ಬೇರೆ! ನಿಮ್ಮ ಸಂಬಂಧ ಯಾವುದು ತಿಳಿಯುವುದು ಹೇಗೆ?

What is the difference between a karmic relationship and a soulmate connection? Explore the astrological beliefs surrounding intense attraction, repeated conflicts, emotional peace and mutual respect. ಕೆಲವು ಸಂಬಂಧಗಳು ಜೀವನದಲ್ಲಿ ಪಾಠ ಕಲಿಸುತ್ತವೆ, ಇನ್ನು ಕೆಲವು ನೆಮ್ಮದಿ ಮತ್ತು ಪ್ರೀತಿ ನೀಡುತ್ತವೆ. ಕರ್ಮ ಸಂಬಂಧ, ಸೋಲ್‌ಮೇಟ್ ಬಂಧ ಹಾಗೂ ರಾಹು-ಕೇತು, ಶನಿಯ ಕುರಿತ ಜ್ಯೋತಿಷ್ಯ ನಂಬಿಕೆಗಳ ಮಾಹಿತಿ ಇಲ್ಲಿದೆ.

ನವರಾತ್ರ ನಮಸ್ಯಾ | ಸನಾತನ ಧರ್ಮ ಸ್ತ್ರೀಯರ ವಿರೋಧಿಯಲ್ಲ: ರಾಘವೇಶ್ವರ ಶ್ರೀ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಅನಿರೀಕ್ಷಿತವಾಗಿ ಬರುವ ಸಂಪತ್ತು ಸ್ಥಿರವಲ್ಲ. ಆಕಸ್ಮಿಕವಾಗಿ ಸಂಪತ್ತು ಬಂದಾಗ ವಿವೇಕವು ಕೆಲಸ ಮಾಡುವುದಿಲ್ಲ. ಅನ್ಯಾಯದ ಮಾರ್ಗದಿಂದ ಸಂಪಾದಿಸಿದ ಹಣ ಬಂದಾಗ ಮನಸ್ಸು ಭ್ರಮೆಗೊಳಗಾಗುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು. ಶ್ರೀಗಳು ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಶಾಖೆಯಲ್ಲಿ ನಡೆಯುತ್ತಿರುವ ‘ನವರಾತ್ರ ನಮಸ್ಯಾ’ ಕಾರ್ಯಕ್ರಮದಲ್ಲಿ ಶುಕ್ರವಾರ ಲಲಿತೋಪಾಖ್ಯಾನ ಕುರಿತು ಪ್ರವಚನವನ್ನು ಅನುಗ್ರಹಿಸಿದರು. ಸನಾತನ ಧರ್ಮ ಸ್ತ್ರೀಯರ ವಿರುದ್ಧವಾಗಿಲ್ಲ. ಕೆಲವರು ಅಪವ್ಯಾಖ್ಯಾನ ಮಾಡುವುದಿದೆ, ಆದರೆ ಧರ್ಮಶಾಸ್ತ್ರದಲ್ಲಿ ಸ್ತ್ರೀಯರಿಗೆ […] The post ನವರಾತ್ರ ನಮಸ್ಯಾ | ಸನಾತನ ಧರ್ಮ ಸ್ತ್ರೀಯರ ವಿರೋಧಿಯಲ್ಲ: ರಾಘವೇಶ್ವರ ಶ್ರೀ appeared first on ONLINE.

ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಖ್ಯಾತ ತನಿಖಾ ಶ್ವಾನ ‘ಕ್ವೀಪರ್’ ನಿಧನ

ಹೊಸದಿಗಂತ ವರದಿ ದಾಂಡೇಲಿ: ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಹೆಮ್ಮೆಯ ತನಿಖಾ ಶ್ವಾನ ‘ಕ್ವೀಪರ್’ (ಕ್ರೈಮರ್ ಶ್ವಾನ) ವಯೋಸಹಜ ಕಾರಣದಿಂದ ನಿಧನ ಹೊಂದಿದೆ. ಅರಣ್ಯ ಇಲಾಖೆಯ ವತಿಯಿಂದ ಕಾಳಿ ವನ್ಯಜೀವಿ ವಲಯದಲ್ಲಿ ಗೌರವಯುತ ಅಂತಿಮ ಸಂಸ್ಕಾರವನ್ನು ಶುಕ್ರವಾರ ನೆರವೇರಿಸಲಾಯಿತು. 2016ರ ಜನವರಿ 18 ರಿಂದ ಅಕ್ಟೋಬರ್ 12, 2016 ರವರೆಗೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿರುವ ಬಿ.ಎನ್.ಎಸ್ ಶ್ವಾನ ತರಬೇತಿ ಕೇಂದ್ರದಲ್ಲಿ ವಿಶೇಷ ತರಬೇತಿ ಪಡೆದಿದ್ದ ‘ಕ್ವೀಪರ್’ ಶ್ವಾನವನ್ನು ನಂತರ ಕಾಳಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹಂಚಿಕೆ ಮಾಡಲಾಗಿತ್ತು. 2016 […] The post ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಖ್ಯಾತ ತನಿಖಾ ಶ್ವಾನ ‘ಕ್ವೀಪರ್’ ನಿಧನ appeared first on ONLINE.

ಕಾಲೇಜು ಶಿಕ್ಷಣ ಇಲಾಖೆ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ಲೋಕಾಗೆ ದೂರು

ಸುದ್ದಿದಿನ,ದಾವಣಗೆರೆ:ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ನೀಡಿರುವ ಮುಂಬಡ್ತಿಯ ಸ್ಥಳ ನಿಯುಕ್ತಿಗೆ ಸಂಬAಧಿಸಿದ ಆನ್‌ಲೈನ್ ಕೌನ್ಸಿಲಿಂಗ್‌ನಲ್ಲಿ ಪಾರದರ್ಶಕತೆಯನ್ನು ಉಲ್ಲಂಘಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಅಡಿಯಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಹಿಂದಿನ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ಲೋಕಾಯುಕ್ತಗೆ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ. ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳನ್ನು ಸೇವಾ […]

ಅ.25 ರಂದು ಬೆಳಗಾವಿಯಲ್ಲಿ ರಾಷ್ಟ್ರ ಮಟ್ಟದ ಮ್ಯಾರಥಾನ್: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್

ಹೊಸದಿಗಂತ ವರದಿ ಬೆಳಗಾವಿ: ರಾಜ್ಯ ಸರ್ಕಾರದ 2026-27ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವ “ಸಶಕ್ತ ಕರ್ನಾಟಕ” ಕಾರ್ಯಕ್ರಮದಡಿ ರಾಜ್ಯದ ನಾಲ್ಕು ಪ್ರಮುಖ ಸ್ಥಳಗಳಲ್ಲಿ ರಾಷ್ಟ್ರ ಮಟ್ಟದ ಮ್ಯಾರಥಾನ್ ಆಯೋಜಿಸಲಾಗಿದೆ. ಬೆಳಗಾವಿಯಲ್ಲಿ ಅಕ್ಟೋಬರ್ 25 ರಂದು ರಾಷ್ಟ್ರ ಮಟ್ಟದ ಮ್ಯಾರಥಾನ್ ನಡೆಯಲಿದ್ದು, ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ “ಸಶಕ್ತ ಕರ್ನಾಟಕ” ಕಾರ್ಯಕ್ರಮದಡಿ ಆಯೋಜಿಸಲಾದ ರಾಷ್ಟ್ರ ಮಟ್ಟದ ಮ್ಯಾರಥಾನ್ ಕುರಿತು ಅವರು ಮಾಹಿತಿ ನೀಡಿದರು. ಬೆಳಗಾವಿ, ಹಂಪಿ, ಮುರಡೇಶ್ವರ […] The post ಅ.25 ರಂದು ಬೆಳಗಾವಿಯಲ್ಲಿ ರಾಷ್ಟ್ರ ಮಟ್ಟದ ಮ್ಯಾರಥಾನ್: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ appeared first on ONLINE.

ರಾಜ್ಯದಲ್ಲಿ ಮುಂದುವರಿಯಲಿದೆ ಮಳೆ ಆಟ: ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ವರುಣನ ಆರ್ಭಟ!

ಕರ್ನಾಟಕದಾದ್ಯಂತ ಹವಾಮಾನದಲ್ಲಿ ಬದಲಾವಣೆ ಕಂಡುಬರುತ್ತಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ. ಕೆಲವೆಡೆ ಬಿಸಿಲಿನ ವಾತಾವರಣ ಕಂಡುಬಂದರೆ, ಇನ್ನೂ ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಈಶಾನ್ಯ ಮುಂಗಾರು ಮಳೆ ಮುಂದುವರಿಯಲಿದ್ದು, ಗುಡುಗು-ಮಿಂಚು ಸಹಿತ ಗಾಳಿ ಬೀಸುವ ಜೊತೆಗೆ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆಯ ಪ್ರಕಾರ, ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಅಕ್ಟೋಬರ್ 22ರವರೆಗೆ ಮಳೆ ಮುಂದುವರಿಯುವ […] Source