Filters

Channels
Topics
Other Filters

ಎಥೆನಾಲ್ ಇಂಧನ ಬಳಕೆಗೆ ಕೇಂದ್ರದಿಂದ ಗ್ರೀನ್ ಸಿಗ್ನಲ್

ನವದೆಹಲಿ: ವಿದೇಶಿ ಕಚ್ಚಾ ತೈಲದ ಮೇಲಿನ ಭಾರತದ ಅವಲಂಬನೆಯನ್ನು ಕಡಿಮೆ ಮಾಡುವ ಮತ್ತು ವಾಹನಗಳಿಂದ ಉಂಟಾಗುವ ಮಾಲಿನ್ಯವನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಶೇಕಡಾ 20ಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಿತ ಇಂಧನಗಳ ಬಳಕೆಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಮೋಟಾರು ವಾಹನ ನಿಯಮಗಳಿಗೆ ತಿದ್ದುಪಡಿ ತರಲಾಗಿದ್ದು, E85 ಮತ್ತು E100 ಇಂಧನಗಳನ್ನು ಅಧಿಕೃತ ಇಂಧನ ಮಾನದಂಡಗಳ ಪಟ್ಟಿಗೆ ಸೇರಿಸಲಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) 1989ರ ಕೇಂದ್ರ ಮೋಟಾರು […] Source

ಬೇಡ್ತಿ–ವರದಾ ಯೋಜನೆ ಸಂಪೂರ್ಣ ಜವಾಬ್ದಾರಿ ರಾಜ್ಯದ್ದು, ಕೇಂದ್ರದಿಂದ ಕೇವಲ ತಾಂತ್ರಿಕ ಬೆಂಬಲ: ಸಚಿವ ಪಾಟೀಲ್

ಹೊಸದಿಗಂತ ವರದಿ ಕಾರವಾರ:​ ಬೇಡ್ತಿ–ವರದಾ ನದಿ ತಿರುವು ಯೋಜನೆಯ ಸಂಪೂರ್ಣ ಜವಾಬ್ದಾರಿ ರಾಜ್ಯ ಸರ್ಕಾರದ್ದೇ ಆಗಿದ್ದು ಕೇಂದ್ರದ ಪಾತ್ರ ಕೇವಲ ತಾಂತ್ರಿಕ ಬೆಂಬಲಕ್ಕೆ ಸೀಮಿತ ಎಂದು ಕೇಂದ್ರ ಜಲಶಕ್ತಿ ಸಚಿವ ಸಿ. ಆರ್. ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ. ಪ್ರಸ್ತಾವಿತ ಬೇಡ್ತಿ–ಹಿರೇವಡ್ಡಟ್ಟಿ (ಮಾರ್ಪಡಿಸಿದ ಬೇಡ್ತಿ–ವರದಾ) ನದಿ ಜೋಡಣೆ ಯೋಜನೆಯ ವಿರುದ್ಧ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೇಂದ್ರ ಸಚಿವರನ್ನು ಖುದ್ದಾಗಿ ಭೇಟಿಯಾಗಿ ಮಾಹಿತಿ ನೀಡಿ, ತುರ್ತು ಮಧ್ಯಪ್ರವೇಶ ಕೋರಿ ಸಲ್ಲಿಸಿದ್ದ ಪತ್ರಕ್ಕೆ ಸಚಿವರಿಂದ ಲಿಖಿತ ಉತ್ತರ ಬಂದಿದೆ. […] The post ಬೇಡ್ತಿ–ವರದಾ ಯೋಜನೆ ಸಂಪೂರ್ಣ ಜವಾಬ್ದಾರಿ ರಾಜ್ಯದ್ದು, ಕೇಂದ್ರದಿಂದ ಕೇವಲ ತಾಂತ್ರಿಕ ಬೆಂಬಲ: ಸಚಿವ ಪಾಟೀಲ್ appeared first on ONLINE.

ತಮಿಳುನಾಡಿನಲ್ಲಿ ಭಾರಿ ಮಳೆ: ಸಿಡಿಲಿಗೆ 14 ಮಂದಿ ಬಲಿ, ಗಿರಿಧಾಮಗಳಿಗೆ ಪ್ರವಾಸಿಗರ ಪ್ರವೇಶ ನಿಷೇಧ

ಚೆನ್ನೈ, ಅಕ್ಟೋಬರ್ 26: ತಮಿಳುನಾಡಿನಾದ್ಯಂತ ಈಶಾನ್ಯ ಮಾನ್ಸೂನ್ ಅಬ್ಬರ ಮುಂದುವರಿದಿದ್ದು, ಭಾರಿ ಮಳೆ, ಸಿಡಿಲು ಮತ್ತು ಭೂಕುಸಿತದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಗಾಲ ಆರಂಭವಾದಾಗಿನಿಂದ ಸಿಡಿಲು ಬಡಿದು ರಾಜ್ಯದ ವಿವಿಧ ಭಾಗಗಳಲ್ಲಿ 14 ಮಂದಿ ಮೃತಪಟ್ಟಿದ್ದಾರೆ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಊಟಿ, ಕೊಡೈಕೆನಾಲ್ ಮತ್ತು ಯೆರ್ಕಾಡ್‌ನಂತಹ ಪ್ರಮುಖ ಗಿರಿಧಾಮಗಳಿಗೆ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಹಿನ್ನೆಲೆ ರೆಡ್ […] Source

ತಾಲೂಕು ಕೇಂದ್ರಗಳಲ್ಲೂ ಸಿಇಟಿ ಮತ್ತು ನೀಟ್ ತರಬೇತಿ ಕೇಂದ್ರ ಸ್ಥಾಪಿಸಬೇಕು : ಎಸ್.ಸಚ್ಚಿದಾನಂದ

ಮಂಡ್ಯ : ಪ್ರತಿ ತಾಲೂಕು ಕೇಂದ್ರಗಳಲ್ಲೂ ಸರ್ಕಾರ ಸಿಇಟಿ ಮತ್ತು ನೀಟ್ ತರಬೇತಿ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಬಿಜೆಪಿ ಯುವ ಮುಖಂಡ ಇಂಡುವಾಳು ಎಸ್. ಸಚ್ಚಿದಾನಂದ ಆಗ್ರಹಿಸಿದರು. ಶ್ರೀರಂಗಪಟ್ಟಣ ತಾಲೂಕಿನ ಕೂಡಲಕುಪ್ಪೆ ಗ್ರಾಮದ ಸತೀಶ್ ಚಂದ್ರಬಾಬು (ಅಣ್ಣಯ್ಯಪ್ಪ) ಅವರ ಪುತ್ರಿ ಯೋಗ ಎಸ್. ಗೌಡ ಅವರು ಪ್ರಸಕ್ತ ಸಾಲಿನಲ್ಲಿ ನೀಟ್ ಪರೀಕ್ಷೆ ಮೂಲಕ ಎಂಬಿಬಿಎಸ್ ಕೋರ್ಸ್‌ಗೆ ಉಚಿತ ಪ್ರವೇಶ ಪಡೆದಿದ್ದು, ಎನ್. ಶಂಕರೇಗೌಡ ಚಾರಿಟಬಲ್ ಟ್ರಸ್ಟ್‌ ವತಿಯಿಂದ ಲ್ಯಾಪ್‌ಟಾಪ್ ವಿತರಿಸಿ ಅವರು ಮಾತನಾಡಿದರು. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ […] The post ತಾಲೂಕು ಕೇಂದ್ರಗಳಲ್ಲೂ ಸಿಇಟಿ ಮತ್ತು ನೀಟ್ ತರಬೇತಿ ಕೇಂದ್ರ ಸ್ಥಾಪಿಸಬೇಕು : ಎಸ್.ಸಚ್ಚಿದಾನಂದ appeared first on nudikarnataka.

ಇಂದಿನ ಮಲೆನಾಡು ಟುಡೆ ಇ-ಪೇಪರ್: ಸಿಡಿ ಫ್ಯಾಕ್ಟರಿ ವಿವಾದ, ಕಾಟಿ ಸಾವು, ಭೂಮಿ ಹುಣ್ಣಿಮೆ ಸಂಭ್ರಮ ಸೇರಿದಂತೆ ಪ್ರಮುಖ ಸುದ್ದಿಗಳ ಸಂಪೂರ್ಣ ವಿವರ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮಲೆನಾಡು ಟುಡೆ ದಿನಪತ್ರಿಕೆಯ ಇವತ್ತಿನ ಈ ಪತ್ರಿಕೆ ಇಲ್ಲಿದೆ. ಇಂದಿನ ಪ್ರಮುಖ ಸುದ್ದಿಗಳನ್ನು ಗಮನಿಸುವುದಾದರೆ, ರಾಜ್ಯದಲ್ಲಿ ಚರ್ಚೆಯಾಗುತ್ತಿರುವ ಸ್ಟಿಂಗ್ ... ಕ್ಲಿಕ್ ಮಾಡಿ

₹100 ಕೋಟಿ ಹಗರಣ ಕೇಸ್‌: ತಮಿಳುನಾಡಿನ ಮಾಜಿ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಅರೆಸ್ಟ್

ಚೆನ್ನೈ: ಖಾಸಗಿ ಶಾಲೆಗಳಿಗೆ ಅನುಮತಿ ನೀಡುವುದು, ಮಾನ್ಯತೆ ನವೀಕರಿಸುವುದು ಹಾಗೂ ಶಾಲೆಗಳನ್ನು ಮೇಲ್ದರ್ಜೆಗೇರಿಸುವ ಪ್ರಕ್ರಿಯೆಯಲ್ಲಿ ಆರ್ಥಿಕ ಅಕ್ರಮಗಳು ನಡೆದಿವೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಮಾಜಿ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೋಳಿ (Anbil Mahesh Poyyamozhi) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳಿಂದ ‘ಪಾರ್ಟಿ ಫಂಡ್‌’ ಹೆಸರಿನಲ್ಲಿ ₹100 ಕೋಟಿಗೂ ಅಧಿಕ ಹಣ ಸಂಗ್ರಹಿಸಲಾಗಿದೆ ಎಂಬ ಆರೋಪವಿದೆ. ಮದ್ರಾಸ್ ಹೈಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಬೆನ್ನಲ್ಲೇ, ಸೋಮವಾರ (ಅಕ್ಟೋಬರ್ 26) ಚೆನ್ನೈ […] Source

ಅಂಕೋಲಾದಲ್ಲಿ ಸೈಬರ್ ವಂಚಕರ ಕೈಚಳಕ: ಮಹಿಳೆಯ ಬ್ಯಾಂಕ್ ಖಾತೆಯಿಂದ 3 ಲಕ್ಷ ರೂ. ದೋಚಿದ ಖದೀಮರು

ಹೊಸದಿಗಂತ ವರದಿ ಅಂಕೋಲಾ: ಅಂಕೋಲಾ ತಾಲೂಕಿನ ಗಣಪತಿ ಗಲ್ಲಿಯ ಮಹಿಳೆಯೋರ್ವರ ಮೊಬೈಲ್ ಪೋನ್ ಹ್ಯಾಕ್ ಮಾಡಿರುವ ವಂಚಕರು ಅವರ ಬ್ಯಾಂಕ್ ಖಾತೆಯಿಂದ 3 ಲಕ್ಷ ರೂಪಾಯಿಗಳನ್ನು ತಮ್ಮ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದು ಈ ಕುರಿತಂತೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಾಲೂಕಿನ ಗಣಪತಿ ಗಲ್ಲಿಯ ನಿವಾಸಿ ಮಹಿಳೆಯ ಮಗಳು ಅಕ್ಟೋಬರ 21 ರಂದು ಸಾಯಂಕಾಲ ರೈಲ್ವೆ ಆಪ್ ನಲ್ಲಿ ಮಂಗಳೂರಿಗೆ ಹೋಗುವ ರೈಲಿನ ಕುರಿತು ಪರಿಶೀಲನೆ ನಡೆಸುತ್ತಿರುವ ಸಂದರ್ಭದಲ್ಲಿ ತನ್ನ ತಾಯಿಯ ಕೆನರಾ ಬ್ಯಾಂಕ್ […] The post ಅಂಕೋಲಾದಲ್ಲಿ ಸೈಬರ್ ವಂಚಕರ ಕೈಚಳಕ: ಮಹಿಳೆಯ ಬ್ಯಾಂಕ್ ಖಾತೆಯಿಂದ 3 ಲಕ್ಷ ರೂ. ದೋಚಿದ ಖದೀಮರು appeared first on ONLINE.

ಮಕ್ಕಳು ಸುರಕ್ಷಿತರಾದರೆ ದೇಶದ ಭವಿಷ್ಯವೇ ಭದ್ರ : ನ್ಯಾ.ವೇಲಾ ಡಿ.ಕೆ.

ದಾವಣಗೆರೆ : ಪ್ರತಿ ಮಗುವೂ ಸುರಕ್ಷಿತವಾಗಿರಬೇಕು,ಶಿಕ್ಷಣದಿಂದ ವಂಚಿತರಾಗದAತೆ ಮತ್ತು ಸಬಲೀಕರಣಗೊಳ್ಳುವ ಭವಿಷ್ಯಕ್ಕಾಗಿ ನಾವು ಒಟ್ಟಾಗಿ ನಿಲ್ಲ ಬೇಕಿದೆ,ಸುರಕ್ಷಿತ ಬಾಲ್ಯ ಅಭಿಯಾನ ಎಂಬುದು ಮಕ್ಕಳ ಹಕ್ಕುಗಳ ರಕ್ಷಣೆ,ಅವರ ಸುರಕ್ಷತೆ ಮತ್ತು ಸರ್ವತೋಮುಖ ಅಭಿವೃದ್ಧಿಯನ್ನು ಖಾತ್ರಿಪಡಿಸಲು ದೇಶಾದ್ಯಂತ ಹಾಗೂ ಕರ್ನಾಟಕ ರಾಜ್ಯದಲ್ಲಿ ಹಮ್ಮಿಕೊಳ್ಳಲಾಗುವ ಅತ್ಯಂತ ಪ್ರಮುಖ ಜಾಗೃತಿ ಆಂದೋಲನವಾಗಿದೆ ಎಂದು ದಾವಣಗೆರೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ವೇಲಾ ಡಿ.ಕೆ. ಹೇಳಿದರು. ದಾವಣಗೆರೆ ನಗರದ ಬಾಡ ಕ್ರಾಸ್ ಹತ್ತಿರದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯದಲ್ಲಿ ಹಮ್ಮಿಕೊಳ್ಳಲಾದ [...]

ರಾಯಚೂರಿನ ಸ್ಮಶಾನದಲ್ಲಿ ಹೂತ ಮೃತದೇಹಗಳ ಮಾರಾಟ ದಂಧೆ: ಮೂವರು ಅರೆಸ್ಟ್

ರಾಯಚೂರು, ಅಕ್ಟೋಬರ್ 26: ಸ್ಮಶಾನದಲ್ಲಿ ಹೂಳಲಾದ ಮೃತದೇಹಗಳ ಅಕ್ರಮ ಮಾರಾಟಕ್ಕೆ ಸಂಬಂಧಿಸಿದ ಗಂಭೀರ ಆರೋಪಗಳ ಪ್ರಕರಣ ರಾಯಚೂರಿನಲ್ಲಿ ಬೆಳಕಿಗೆ ಬಂದಿದ್ದು, ಇದೀಗ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಈ ಸಂಬಂಧ ನೇತಾಜಿನಗರ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪ್ರಕರಣದಲ್ಲಿ ಖಾಸಗಿ ವೈದ್ಯಕೀಯ ಕಾಲೇಜಿನ ಸಿಬ್ಬಂದಿಯ ಹೆಸರು ಕೇಳಿಬಂದಿರುವ ಹಿನ್ನೆಲೆ, ಕಾಲೇಜಿನ ಪಾತ್ರದ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಮೂವರು ಆರೋಪಿಗಳ ಬಂಧನ ಸ್ಮಶಾನದಲ್ಲಿ ಹೂಳಲಾದ […] Source

Sericulture: ನಂಜನಗೂಡಿನಲ್ಲಿ ರೇಷ್ಮೆ ಕೃಷಿಕರಿಗೆ ಸುವರ್ಣಾವಕಾಶ, ಸರ್ಕಾರದಿಂದ ಸಿಗಲಿದೆ ಜಮೀನು, ಇಂದೇ ಅರ್ಜಿ ಸಲ್ಲಿಸಿ!

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ತಾಂಡವಪುರ ಸರ್ಕಾರಿ ರೇಷ್ಮೆ ಕೃಷಿ ಕ್ಷೇತ್ರದಲ್ಲಿ ಚಾಕಿ ಸಾಕಾಣಿಕಾ ಕೇಂದ್ರ ಸ್ಥಾಪಿಸಲು ರೇಷ್ಮೆ ಇಲಾಖೆ ಅರ್ಜಿ ಆಹ್ವಾನಿಸಿದೆ.

ಮೈಸೂರು ವೈಟ್ ಟ್ಯಾಪಿಂಗ್‌ಗೆ ಸೈಕಲ್ ಟ್ರ್ಯಾಕ್ ಬಲಿ!

₹5 ಕೋಟಿ ವೆಚ್ಚದ ಸೈಕಲ್ ಟ್ರ್ಯಾಕ್ ಈಗ ನಿರುಪಯುಕ್ತ; ಯೋಜನೆಗಳ ಸಮನ್ವಯದ ಕೊರತೆಗೆ ಸಾರ್ವಜನಿಕರ ಹಣ ವ್ಯರ್ಥವಾಗಿದೆಯೇ? ಮೈಸೂರು,ಅ.೨೬,೨೦೨೬ : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳ ನಡುವೆ ಸಾರ್ವಜನಿಕರ ಹಣದ ಸದ್ಬಳಕೆ ಹಾಗೂ ವಿವಿಧ ಇಲಾಖೆಗಳ ನಡುವಿನ ಸಮನ್ವಯದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಆಂದೋಲನ ವೃತ್ತದಿಂದ ದಟ್ಟಗಳ್ಳಿ ವೃತ್ತದವರೆಗೆ ವೈಟ್ ಟ್ಯಾಪಿಂಗ್ ರಸ್ತೆ ಕಾಮಗಾರಿ ಆರಂಭವಾಗಿದ್ದು, ಇದೇ ಮಾರ್ಗದಲ್ಲಿ ಈ ಹಿಂದೆ ನಿರ್ಮಿಸಲಾಗಿದ್ದ ಸೈಕಲ್ ಟ್ರ್ಯಾಕ್ ಇದೀಗ ನಿರುಪಯುಕ್ತವಾಗುವ ಸ್ಥಿತಿ ತಲುಪಿದೆ. ನವರಾತ್ರಿ ಮುಗಿಯುತ್ತಿದ್ದಂತೆಯೇ […]

ಕನ್ನಡಿಗರಿಗೆ ಉದ್ಯೋಗದ ಜೊತೆ ಗುಣಮಟ್ಟದ ಶಿಕ್ಷಣವೂ ಬೇಕು: ಸರ್ಕಾರಕ್ಕೆ ಮೋಹನ್‌ದಾಸ್ ಪೈ ಕಿವಿಮಾತು

ಹೊಸದಿಗಂತ ಡಿಜಿಟಲ್‌ ಡೆಸ್ಕ್: ರಾಜ್ಯದ ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳು ಸಮರ್ಪಕವಾಗಿ ಸಿಗುತ್ತಿಲ್ಲ ಎಂಬ ಚರ್ಚೆ ತೀವ್ರಗೊಂಡಿರುವ ಬೆನ್ನಲ್ಲೇ, ಉದ್ಯಮಿ ಮೋಹನ್‌ದಾಸ್ ಪೈ ಸರ್ಕಾರಕ್ಕೆ ಮಹತ್ವದ ಸಲಹೆ ನೀಡಿದ್ದಾರೆ. ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ದೊರೆಯಬೇಕು ಎಂಬುದು ಸರಿಯಾದ ಬೇಡಿಕೆಯಾದರೂ, ಅದಕ್ಕೆ ಪೂರಕವಾಗಿ ಗುಣಮಟ್ಟದ ಶಿಕ್ಷಣ, ಉದ್ಯೋಗಾಧಾರಿತ ತರಬೇತಿ ಮತ್ತು ಅಗತ್ಯ ಕೌಶಲಗಳನ್ನು ಬೆಳೆಸುವತ್ತ ಸರ್ಕಾರ ಹೆಚ್ಚಿನ ಗಮನ ಹರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಕಲ್ಯಾಣ ಕರ್ನಾಟಕದ ಯುವಕರ ಶಿಕ್ಷಣಕ್ಕೆ ಆದ್ಯತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಉನ್ನತ ಶಿಕ್ಷಣದ […] The post ಕನ್ನಡಿಗರಿಗೆ ಉದ್ಯೋಗದ ಜೊತೆ ಗುಣಮಟ್ಟದ ಶಿಕ್ಷಣವೂ ಬೇಕು: ಸರ್ಕಾರಕ್ಕೆ ಮೋಹನ್‌ದಾಸ್ ಪೈ ಕಿವಿಮಾತು appeared first on ONLINE.

ಸುವರ್ಣ ವಿಧಾನಸೌಧದಲ್ಲೇ ರೈತರ ರಂಪಾಟ: ಕಬ್ಬಿನ ಬೆಲೆ ವಿಚಾರಕ್ಕೆ ಕೈಕೈ ಮಿಲಾಯಿಸಿದ ಎರಡು ಬಣಗಳು

ಹೊಸದಿಗಂತ ವರದಿ ಬೆಳಗಾವಿ: ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆಯಬೇಕಿದ್ದ ಕಬ್ಬು ಬೆಳೆಗಾರರ ಸಭೆ ಆರಂಭಕ್ಕೂ ಮುನ್ನವೇ ರೈತರ ಎರಡು ಬಣಗಳ ನಡುವೆ ಹೊಡೆದಾಟ ನಡೆದ ಘಟನೆ ನಗರದ ಸುವರ್ಣ ವಿಧಾನಸೌಧದಲ್ಲಿ ನಡೆದಿದೆ. ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಚೂನಪ್ಪ ಪೂಜಾರಿ ಬಣಗಳ ರೈತರ ನಡುವೆ ಮೊದಲು ಮಾತಿನ ಚಕಮಕಿ ಆರಂಭವಾಗಿದ್ದು, ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಸಭಾಂಗಣದಲ್ಲಿ ಕುಡಿಯುವ ನೀರು ಮತ್ತು ಚಹಾ ವ್ಯವಸ್ಥೆ ಮಾಡದಿರುವುದೇ ಗಲಾಟೆಗೆ ಆರಂಭಿಕ ಕಾರಣವಾಗಿತ್ತು. ನಂತರ ಕಬ್ಬಿನ ಬೆಲೆ ನಿಗದಿ ವಿಚಾರವಾಗಿ ಎರಡೂ ಬಣಗಳ […] The post ಸುವರ್ಣ ವಿಧಾನಸೌಧದಲ್ಲೇ ರೈತರ ರಂಪಾಟ: ಕಬ್ಬಿನ ಬೆಲೆ ವಿಚಾರಕ್ಕೆ ಕೈಕೈ ಮಿಲಾಯಿಸಿದ ಎರಡು ಬಣಗಳು appeared first on ONLINE.

ನಕಲಿ ಮತದಾನದ ಆರೋಪಕ್ಕೆ ಹಾವೇರಿಯಲ್ಲಿ ಬಿಜೆಪಿ ಆಕ್ರೋಶ: ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ, ಸಚಿವರ ರಾಜೀನಾಮೆಗೆ ಪಟ್ಟು

ಹೊಸದಿಗಂತ ವರದಿ ಹಾವೇರಿ: ಪಶ್ಚಿಮ ಪದವೀಧರ ಕ್ಷೇತ್ರದ ಪರಿಷತ್ ಚುನಾವಣೆಯಲ್ಲಿ ಹಾವೇರಿಯ ಮತಗಟ್ಟೆ ಸಂಖ್ಯೆ 85ರಲ್ಲಿ ನಕಲಿ ಮತದಾನ ನಡೆದಿದೆ ಎಂದು ಆರೋಪಿಸಿದ ಬಿಜೆಪಿ ಕಾರ್ಯಕರ್ತರು ಸೋಮವಾರ ನಗರದಲ್ಲಿ ನಡೆಸಿದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತು. ಸಚಿವ ರುದ್ರಪ್ಪ ಲಮಾಣಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ಅರ್ಧದಲ್ಲೇ ತಡೆದರು. ಇದರಿಂದ ದೇವಗಿರಿ ರಸ್ತೆಯಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತಳ್ಳಾಟ, ನೂಕಾಟ ನಡೆಯಿತು. ಬಳಿಕ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಪಾದಯಾತ್ರೆ ನಡೆಸಿದ ಬಿಜೆಪಿ […] The post ನಕಲಿ ಮತದಾನದ ಆರೋಪಕ್ಕೆ ಹಾವೇರಿಯಲ್ಲಿ ಬಿಜೆಪಿ ಆಕ್ರೋಶ: ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ, ಸಚಿವರ ರಾಜೀನಾಮೆಗೆ ಪಟ್ಟು appeared first on ONLINE.

ಕಬ್ಬು ಬೆಳೆಗಾರರು–ಸಕ್ಕರೆ ಕಾರ್ಖಾನೆಗಳ ನಡುವೆ ಸಂಘರ್ಷ ಬೇಡ: ಸೌಹಾರ್ದಯುತ ಪರಿಹಾರಕ್ಕೆ ಸಿಎಂ ಡಿಕೆಶಿ ಮನವಿ

ಹೊಸದಿಗಂತ ವರದಿ ಬೆಳಗಾವಿ: ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರ ನಡುವಿನ ಸಮಸ್ಯೆಗಳಿಗೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಬೇಕು. ರೈತರನ್ನು ವಿಶ್ವಾಸಕ್ಕೆ ಪಡೆದು, ಎಲ್ಲರೂ ಒಮ್ಮತದ ತೀರ್ಮಾನಕ್ಕೆ ಬರಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದರು. ಸೋಮವಾರ ಬೆಳಗಾವಿಯಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರೈತರು ಮತ್ತು ಕಾರ್ಖಾನೆಗಳ ಹಿತ ಕಾಯುವುದು ಸರ್ಕಾರದ ಜವಾಬ್ದಾರಿಯಾಗಿದೆ. ಕಾರ್ಖಾನೆಗಳಿಲ್ಲದೆ ರೈತರಿಗೆ, ರೈತರಿಲ್ಲದೆ ಕಾರ್ಖಾನೆಗಳಿಗೆ ಅಸ್ತಿತ್ವವಿಲ್ಲ. ಹೀಗಾಗಿ ಎರಡೂ ಕಡೆಯವರ ಹಿತಾಸಕ್ತಿ ಕಾಪಾಡುವುದು ಮುಖ್ಯ ಎಂದರು. […] The post ಕಬ್ಬು ಬೆಳೆಗಾರರು–ಸಕ್ಕರೆ ಕಾರ್ಖಾನೆಗಳ ನಡುವೆ ಸಂಘರ್ಷ ಬೇಡ: ಸೌಹಾರ್ದಯುತ ಪರಿಹಾರಕ್ಕೆ ಸಿಎಂ ಡಿಕೆಶಿ ಮನವಿ appeared first on ONLINE.